Upadhyaksha Twitter review: ಚಿಕ್ಕಣ್ಣ ಡ್ಯಾನ್ಸ್, ಕಾಮಿಡಿ ಸೂಪರ್, ಸಿನಿಮಾ ನೋಡಿದವರ ಅಭಿಪ್ರಾಯ
ಚಿಕ್ಕಣ್ಣ ಹೀರೊ ಆಗಿ ನಟಿಸಿರುವ 'ಉಪಾಧ್ಯಕ್ಷ' ಸಿನಿಮಾ ಈ ವಾರ ಬಿಡುಗಡೆಯಾಗಿದೆ. ಗಣರಾಜ್ಯೋತ್ಸವ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬಂದಿದೆ. ಉಮಾಪತಿ ಶ್ರೀನಿವಾಸ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ.
ಇಷ್ಟು ದಿನ ಹಾಸ್ಯನಟರಾಗಿದ್ದ ಚಿಕ್ಕಣ್ಣ ಹೀರೊ ಆಗುತ್ತಾರೆ ಎಂದಾಗ ಕುತೂಹಲ ಇತ್ತು. ಅದಕ್ಕೆ ಈಗ ಬ್ರೇಕ್ ಬಿದ್ದಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. 'ದಿಲ್‌ವಾಲಾ' ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸೂಪರ್ ಹಿಟ್ 'ಅಧ್ಯಕ್ಷ' ಸಿನಿಮಾ ಹಿನ್ನೆಲೆಯಲ್ಲೇ ಹೊಸ ರೀತಿಯಲ್ಲಿ ಈ ಕಥೆಯನ್ನು ತೆರೆಗೆ ತರಲಾಗಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ತಡವಾಗಿತ್ತು. ಆದರೂ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಗಣರಾಜ್ಯೋತ್ಸವದ ರಜೆ ಚಿತ್ರಕ್ಕೆ ಪ್ಲಸ್ ಆಗಿದೆ. ಇನ್ನು ಇತ್ತೀಚೆಗೆ ಕನ್ನಡದಲ್ಲಿ ಸಂಪೂರ್ಣ ಹಾಸ್ಯಮಯ ಸಿನಿಮಾಗಳು ಯಾವುದೇ ಬಂದಿರಲಿಲ್ಲ. ಆ ಕೊರಗನ್ನು 'ಉಪಾಧ್ಯಕ್ಷ' ನೀಗಿಸಿದೆ. ಸಿನಿಮಾ ನೋಡಿದವರು ಅಭಿಪ್ರಾಯ ಏನು? ಮುಂದೆ ಓದಿ.
Upadhyaksha Review ; ಗೆಜ್ಜೆಪುರದಲ್ಲಿ 'ಉಪಾಧ್ಯಕ್ಷ'ನ ಹಾಸ್ಯದ ಹೊನಲು, ನಾಯಕನಾಗಿ ಗೆದ್ದರಾ ಚಿಕ್ಕಣ್ಣ..?
ವೀಕೆಂಡ್ ಸಿನಿಮಾ ನೋಡಿ
ವಿಜಿ ಮಾಣಿ ಎಂಬುವವರು ಟ್ವೀಟ್ ಮಾಡಿ " ಚಿತ್ರಕ್ಕೆ ನನ್ನ ರೇಟಿಂಗ್ 3.75. ಚಿತ್ರದಲ್ಲಿ ಕಾಮಿಡಿ, ಚಿಕ್ಕಣ್ಣ ಹಾಗೂ ರವಿಶಂಕರ್ ಪರ್ಫಾರ್ಮನ್ಸ್, ಶರಣ್ ಕೆಮಿಯೋ, ಕನ್ನಡದ ಖ್ಯಾತ ನಟರ ರೆಫರೆನ್ಸ್, ಚಿಕ್ಕಣ್ಣ ಇಂಟ್ರೋ ಸಾಂಗ್ ತೋರಿಸಿರುವ ರೀತಿ ಚಿತ್ರದ ಪ್ಲಸ್ ಪಾಯಿಂಟ್, ಮೈನಸ್ ಏನಂದ್ರೆ ಸಾಧುಕೋಕಿಲ ಅವರ ದೃಶ್ಯಗಳನ್ನು ಮತ್ತಷ್ಟು ಕತ್ತರಿಸಬಹುತ್ತಿದ್ದು ಎಂದು ಬರೆದಿದ್ದಾರೆ. ಒಳ್ಳೆ ಕಾಮಿಡಿ ಎಂಟರ್‌ಟೈನರ್. ವೀಕೆಂಡ್‌ನಲ್ಲಿ ನೋಡಲು ಸಲಹೆ ಕೊಡುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಸಿನಿಮಾ ಕಾಮಿಡಿ ಚೆನ್ನಾಗಿದೆ
"ಉಪಾಧ್ಯಕ್ಷ ಸಿನಿಮಾ ಸೂಪರ್. ಮುಖ್ಯವಾಗಿ ಕಾಮಿಡಿ. ಒಟ್ಟಾರೆಯಾಗಿ ಅದ್ಭುತ ಸಿನಿಮಾ" ಅಭಿ ಚಕ್ರವರ್ತಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಚಿಕ್ಕಣ್ಣ ಡ್ಯಾನ್ಸ್, ಕಾಮಿಡಿ ಸೂಪರ್
ರವಿರಾಜ್ ಪಾಟೀಲ್ ಎಂಬುವವರು ಟ್ವೀಟ್ ಮಾಡಿ "ಉಪಾಧ್ಯಕ್ಷ ಸಿನಿಮಾ ನೋಡಿದೆ. ಅಧ್ಯಕ್ಷ ಶೇಡ್ಸ್ ಇರುವ ಕಾಮಿಡಿ ಎಂಟರ್‌ಟೈನರ್ ಸಿನಿಮಾ. ಚಿಕ್ಕಣ್ಣ ಡ್ಯಾನ್ಸ್ ಹಾಗೂ ಕಾಮಿಡಿ ಟೈಮಿಂಗ್ ಬಗ್ಗೆ ಹೇಳಲೇ ಬೇಕು. ಮೊದಲ ಪ್ರಯತ್ನದಲ್ಲಿ ನಮ್ಮ ದಾವಣಗೆರೆ ಹುಡುಗಿ ಮಲೈಕಾ ನಟನೆ ಚೆನ್ನಾಗಿದೆ. ನನ್ನ ರೇಟಿಂಗ್ 4/5 ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
'ಉಪಾಧ್ಯಕ್ಷ' ಚಿತ್ರಕ್ಕೆ ರೆಸ್ಪಾನ್ಸ್ ಕೂಡ ಚೆನ್ನಾಗಿದೆ. ಬೆಂಗಳೂರು, ಮೈಸೂರು, ತುಮಕೂರು ಹಾಗೂ ಮಂಗಳೂರಿನಲ್ಲಿ ಬುಕ್ಕಿಂಗ್ ಚೆನ್ನಾಗಿದೆ. ಕನ್ನಡ ಚಿತ್ರರಂಗದ ತಾರೆಯರೆಲ್ಲಾ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. ತ್ರಿವೇಣಿ ಚಿತ್ರಮಂದಿರದಲ್ಲಿ ಪೂಜೆ ಸಲ್ಲಿಸಿ ಸಿನಿಮಾ ಪ್ರದರ್ಶನ ಆರಂಭಿಸಲಾಯಿತು.

ನಟರಾದ ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ಯಶಸ್ ಸೂರ್ಯ, ಪ್ರಜ್ವಲ್ ದೇವರಾಜ್, ವಿನೋದ್ ಪ್ರಭಾಕರ್ ಪ್ರೇಕ್ಷಕರ ಜೊತೆ ಫಸ್ಟ್ ಡೇ ಫಸ್ಟ್ ಶೋ 'ಉಪಾಧ್ಯಕ್ಷ' ಸಿನಿಮಾ ವೀಕ್ಷಿಸಿದರು.


Click it and Unblock the Notifications











