For Quick Alerts
ALLOW NOTIFICATIONS  
For Daily Alerts

ಐ ಲವ್ ಯೂ ಎಂದ ಉಪ್ಪಿ ಪಾಸ್ ಆದ್ರಾ? ಕನ್ನಡ ಪತ್ರಿಕೆಗಳ ವಿಮರ್ಶೆ ಹೇಗಿದೆ?

|

ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್, ಸೋನು ಗೌಡ ಅಭಿನಯಿಸಿದ್ದ ಐ ಲವ್ ಯೂ ಸಿನಿಮಾ ಜೂನ್ 14 ರಂದು ರಾಜ್ಯಾದ್ಯಂತ ತೆರೆಕಂಡಿದೆ. ಉಪ್ಪಿ ಶೈಲಿಯ ಟಿಪಿಕಲ್ ಸಿನಿಮಾ ಎಂದು ಭಾರಿ ನಿರೀಕ್ಷೆ ಮೂಡಿಸಿದ್ದ ಐ ಲವ್ ಯೂ ಚಿತ್ರ ನೋಡಲು ಉಪ್ಪಿ ಅಭಿಮಾನಿಗಳು ಮುಗಿಬಿದ್ದಿದ್ದರು.

ಆಮೇಲೆ ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ಐ ಲವ್ ಯೂ ಚಿಹ್ನೆ ತೋರಿಸಿ ಮುಂದೆ ಸಾಗಿದರು. ಕೆಲವರ ಮುಖದಲ್ಲಿ ಖುಷಿ ಕಂಡ್ರೆ ಮತ್ತೆ ಕೆಲವರ ಕಣ್ಣಲ್ಲಿ ಆ ಖುಷಿ ಕಾಣಿಸಿಲ್ಲ. ಮೊದಲ ದಿನ ಮೊದಲ ಶೋಗೆ ರಿಯಲ್ ಫ್ಯಾನ್ಸ್ ಜೈಕಾರ ಹಾಕಿ ಸಿನಿಮಾ ಮೆಚ್ಚಿಕೊಂಡರು.

I Love You Review : ಒಂದೇ ಒಂದು ಸಂದೇಶ, ಬಾಕಿ ಏನಿಲ್ಲ ವಿಶೇಷ

ಆದರೆ, ಐ ಲವ್ ಯೂ ಎಂದ ಉಪೇಂದ್ರ ನಿಜಕ್ಕೂ ಪಾಸ್ ಆದ್ರಾ ಎಂಬುದನ್ನ ಕನ್ನಡದ ದಿನ ಪತ್ರಿಕೆಗಳು ತಮ್ಮ ವಿಮರ್ಶೆಯಲ್ಲಿ ಪ್ರಕಟ ಮಾಡಿದೆ. ಹಾಗಿದ್ರೆ, ಆರ್.ಚಂದ್ರು-ಉಪ್ಪಿ ಜೋಡಿಗೆ ಗೆಲುವು ಸಿಕ್ತಾ? ರಚಿತಾ-ಉಪ್ಪಿಯ ಕಾಂಬಿನೇಷನ್ ಹಿಟ್ ಆಯ್ತಾ ಎಂಬ ಪ್ರಶ್ನೆಗಳಿಗೆ ಉತ್ತರ ಮುಂದೆ ಓದಿ....

ಹೊಸ ಫಿಲಾಸಫಿ ಹೇಳುವ ಉಪೇಂದ್ರ

ಹೊಸ ಫಿಲಾಸಫಿ ಹೇಳುವ ಉಪೇಂದ್ರ

''ಇಡೀ ಸಿನಿಮಾವನ್ನು ಕಲರ್‌ಫುಲ್‌ ಆಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಚಂದ್ರು. ಅಂದವಾಗಿ ಪ್ರತಿ ಫ್ರೇಮ್ ಅನ್ನು ಸಿನಿಮಾಟೋಗ್ರಾಫರ್ ಸುಜ್ಞಾನ ಸೆರೆ ಹಿಡಿದಿದ್ದಾರೆ. ಉಪೇಂದ್ರ, ರಚಿತಾ ರಾಮ್‌, ಸೋನು ಗೌಡ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ಉಪೇಂದ್ರ ಗೆಳೆಯನಾಗಿ ನಟಿಸಿರುವ ಪಿ.ಡಿ.ಸತೀಶ್, ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಬ್ರಹ್ಮಾನಂದಂ ಕಚಗುಳಿ ಇಡುತ್ತಾರೆ. ಆಧುನಿಕ ಜಗತ್ತು ಶಿಥಲಗೊಂಡ ಸಂಬಂಧಗಳಿಗೆ ಹೆಚ್ಚು ಮುಖಾಮುಖಿ ಆಗುತ್ತದೆ. ಮೋಹ, ಮಮಕಾರದ ನಡುವೆ ಕಳ್ಳಾಟ ಆಡುತ್ತಿದೆ. ಇಂತಹ ಸಂಬಂಧಕ್ಕೆ ಕೊನೆಯಲ್ಲಿ ಉತ್ತಮ ಸಂದೇಶ ನೀಡಿದ್ದಾರೆ ನಿರ್ದೇಶಕರು. ಹಾಗಾಗಿ ಇದೊಂದು ಕುಟುಂಬ ಸಮೇತ ನೋಡುವಂತಹ ಚಿತ್ರ'' - ವಿಜಯ ಕರ್ನಾಟಕ ವಿಮರ್ಶೆ

ಉಪ್ಪಿಯ ಬದಲಾದ ಪ್ರೀತಿ ಸಿದ್ಧಾಂತ

ಉಪ್ಪಿಯ ಬದಲಾದ ಪ್ರೀತಿ ಸಿದ್ಧಾಂತ

''ರಾಜ್​ಕುಮಾರ್ ಅಭಿನಯದ ‘ಎರಡು ಕನಸು' ಸಿನಿಮಾದ ಕಥೆಯ ಎಳೆಯನ್ನೇ ಇಟ್ಟುಕೊಂಡು, ಈ ಕಾಲಕ್ಕೆ ಬೇಕಾದ ಮಸಾಲೆಯೊಂದಿಗೆ ಹೊಸ ಬಗೆಯಲ್ಲಿ ಅದನ್ನು ನಿರೂಪಿಸಿದ್ದಾರೆ ನಿರ್ದೇಶಕರು. ಹೇಳಬೇಕಾದ ವಿಷಯಗಳನ್ನಷ್ಟೇ ಅಚ್ಚುಕಟ್ಟಾಗಿ ಹೇಳಿ, ಸಿನಿಮಾ ಅವಧಿಯನ್ನು ಲಂಬಿಸದೆ ಮುಗಿಸಿದ್ದಾರೆ ಎಂಬುದೇ ಸಮಾಧಾನಕರ ಸಂಗತಿ. ಆದರೂ, ಕಾರಣವಿಲ್ಲದೆ ಬರುವ ಸಾಹಸ ಸನ್ನಿವೇಶಗಳು ಕಿರಿಕಿರಿ ಉಂಟು ಮಾಡುತ್ತವೆ. ಮಿಡಲ್ ಕ್ಲಾಸ್ ಕುಟುಂಬದ ಸಂತೋಷ್ ಇದ್ದಕ್ಕಿದ್ದಂತೆಯೇ ಆಗರ್ಭ ಶ್ರೀಮಂತ ಹೇಗಾದ ಎಂಬುದಕ್ಕೆ ಲಾಜಿಕ್ ಇಲ್ಲ. ಇಂಥ ಮಿಸ್ಸಿಂಗ್​ಲಿಂಕ್​ಗಳನ್ನು ಬದಿಗಿರಿಸಿ ನೋಡಿದಾಗ ‘ಐ ಲವ್ ಯೂ' ಖುಷಿ ನೀಡುತ್ತದೆ'' - ವಿಜಯವಾಣಿ ವಿಮರ್ಶೆ

ಈ 5 ವಿಷ್ಯ ತಿಳಿದು 'ಐ ಲವ್ ಯೂ' ನೋಡೋದಕ್ಕೆ ನಿರ್ಧರಿಸಿ.!

ಹೊಸ ಸಿಲೇಬಸ್ ‌ನಲ್ಲಿ ಉಪ್ಪಿ ಫಿಲಾಸಫಿ

ಹೊಸ ಸಿಲೇಬಸ್ ‌ನಲ್ಲಿ ಉಪ್ಪಿ ಫಿಲಾಸಫಿ

''ಸಿನಿಮಾ ನೋಡಿ ಹೊರಬಂದಾಗ ನಿಮಗೆ ಟಿಪಿಕಲ್ ಉಪ್ಪಿ ಶೈಲಿಯ ಜೊತೆಗೆ ಚಂದ್ರು ಅವರ ಫೀಲಿಂಗ್ಸ್ ಕಾಡುತ್ತದೆ. ಆ ಮಟ್ಟಕ್ಕೆ ಚಂದ್ರು ಒಂದು ಲವ್‌ಸ್ಟೋರಿಯನ್ನು ವಿಭಿನ್ನವಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಇದನ್ನು ನೀವು ಇವತ್ತಿನ ಟ್ರೆಂಡಿ ಲವ್‌ಸ್ಟೋರಿ ಎಂದು ಕರೆಯಲು ಅಡ್ಡಿಯಿಲ್ಲ. ಚಿತ್ರದ ಮೊದಲರ್ಧ ಉಪೇಂದ್ರ ಅವರಿಗೆ ಮೀಸಲಾದರೆ ದ್ವಿತೀಯಾರ್ಧ ಚಂದ್ರು ಶೈಲಿಗೆ ಮೀಸಲು. ಆಧುನಿಕತೆಯಲ್ಲಿ ಪ್ರೀತಿಯ ಅರ್ಥ ಬದಲಾಗುವ ಜೊತೆಗೆ ನೈಜ ಪ್ರೀತಿಯನ್ನು ಗುರುತಿಸುವ ಮನಸ್ಥಿತಿಯು ಇರೋದಿಲ್ಲ ಎಂಬ ಅಂಶದೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಮೊದಲೇ ಹೇಳಿದಂತೆ ಚಿತ್ರದಲ್ಲಿ ಉಪ್ಪಿ ಶೈಲಿ ಗಾಢವಾಗಿದೆ. ಹಾಗಾಗಿ, ಈ ಚಿತ್ರ ಉಪೇಂದ್ರ ಅಭಿಮಾನಿಗಳಿಗೆ ಸ್ವಲ್ಪ ಹೆಚ್ಚೇ ಇಷ್ಟವಾಗಬಹುದು'' - ಉದಯವಾಣಿ ವಿಮರ್ಶೆ

ಐ ಲವ್ ಯೂ ನಿಜವಾದ ಟ್ರಂಪ್ ಕಾರ್ಡ್

ಐ ಲವ್ ಯೂ ನಿಜವಾದ ಟ್ರಂಪ್ ಕಾರ್ಡ್

''ರಿಯಲ್ ಸ್ಟಾರ್ ಉಪೇಂದ್ರ ಅವರ ಮ್ಯಾನರಿಸಂಗೆ ತಕ್ಕಂತೆಯೇ ಕಥೆ ಹೆಣೆದು, ಸಂಭಾಷಣೆ ಬರೆದು, ನಿರ್ದೇಶನ ಮಾಡಿದ್ದಾರೆ ಆರ್ ಚಂದ್ರು. ಬದುಕು, ಭಾವನೆಗಳ ಜತೆಗೆ ಪ್ರೀತಿಯೆಂಬ ಎರಡಕ್ಷರಗಳಲ್ಲಿ ಅಡಗಿರುವ ಎಲ್ಲವನ್ನೂ ಹದವಾಗಿ ಬೆರೆಸಿ ಪ್ರೇಕ್ಷಕರಿಗೆ, ಅದರಲ್ಲೂ ಹರೆಯದವರಿಗೆ ಇಷ್ಟವಾಗುವಂತೆ ಉಣಬಡಿಸಿದ್ದಾರೆ. ಚಂದ್ರು ಹೃದಯ ಮತ್ತು ಉಪ್ಪಿ ಮೆದುಳು ಸೇರಿದ ಮೇಲೆ ಪ್ರೇಕ್ಷಕರು ಐ ಲವ್ ಯು ಅನ್ನಲೇಬೇಕು-ಎನ್ನುವಂತಿದೆ ಸಿನಿಮಾ'' - ಪ್ರಜಾವಾಣಿ ವಿಮರ್ಶೆ

'ಐ ಲವ್ ಯೂ' ಹಾಡಿನ ಬಗ್ಗೆ ಪ್ರಿಯಾಂಕ ತೀವ್ರ ಬೇಸರ : ಚಂದ್ರು, ರಚಿತಾ ಮಾಡಿದ್ದು ಸರಿಯೇ?!

ಐ ಲವ್ ಯೂ ವಿಮರ್ಶೆ - ಬೆಂಗಳೂರು ಮಿರರ್

ಐ ಲವ್ ಯೂ ವಿಮರ್ಶೆ - ಬೆಂಗಳೂರು ಮಿರರ್

''Upendra looks fitter than ever. Rachita Ram gets a role that goes beyond being a glamour element of a commercial film and she makes the best of it. Sonu has a smaller role in comparison but crucial to the story. Most of the other characters are strictly scene requirements. Bereft of great expectations, I Love You, won't disappoint'' - ಬೆಂಗಳೂರು ಮಿರರ್

English summary
Real star Upendra and Rachita Ram starring 'I Love You' kannada movie released yesterday (june 14th). 'I Love You' has a different love story and it is pakka Uppi style of movie. The movie is directed by R Chandru. here is the critics review of i love you.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more