For Quick Alerts
  ALLOW NOTIFICATIONS  
  For Daily Alerts

  ಟೋಪಿವಾಲ ಹವಾ ಹೇಗಿದೆ ಟ್ವೀಟ್ ರಿಪೋರ್ಟ್

  By Mahesh
  |

  ವಾಲ ವಾಲ ವಾಲ ಟೋಪಿವಾಲ ಹೌದು ಬೆಂಗಳೂರಿನಲ್ಲಿ ಈಗ ಟೋಪಿವಾಲನದ್ದೇ ಸುದ್ದಿ, ನರ್ತಕಿ ಟಾಕೀಸ್ ನ ಹತ್ತಿರ ಬೆಳಗಿನಿಂದಲೇ ಟ್ರಾಫಿಕ್ ಜಾಮ್, ಯಾವ ಕಾಲೇಜು ಹುಡುಗರನ್ನು ಕೇಳಿದರೂ ಉಪ್ಪಿಯದ್ದೇ ಮಾತ್ತು. ಎಫ್ ಎಂ ರೇಡಿಯೋಗಳಲ್ಲೂ ಟೋಪಿವಾಲದ್ದೇ ಸುದ್ದಿ

  'ಬ್ಲೇಡ್' ಶ್ರೀನಿ ನಿರ್ದೇಶನದ ಉಪೇಂದ್ರ ಅಭಿನಯದ ಬಹುನಿರೀಕ್ಷೆಯ ಟೋಪಿವಾಲ ಚಿತ್ರ ಭರ್ಜರಿ ಓಪನಿಂಗ್ ಪಡೆದಿದೆ. ಮುಕುಂದ ಸೇರಿ ಹತ್ತು ಹಲವು ಪರಭಾಷಾ ಚಿತ್ರಮಂದಿರಗಳಲ್ಲೂ ಉಪ್ಪಿ ಹವಾ ಎದ್ದಿದೆ. ಮಲ್ಟಿಫೆಕ್ಸ್ ಗಳು ಸೇರಿದಂತೆ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸೇರಿದಂತೆ ರಾಜ್ಯದಾದ್ಯಂತ ಟೋಪಿವಾಲ ಚಿತ್ರ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ತುಂಬಿದ ಪ್ರದರ್ಶನ ಕಾಣುತ್ತಿದೆ.

  ಚಿತ್ರದ ಟ್ರೈಲರ್ ಕೂಡಾ ಬಿಡದೆ ಕಥೆ ಏನು ಎಂದು ಹೇಳದೆ, ಶಾಂಗ್ರಿಲಾ ಹಾಡಿನ ಗುಂಗಿನಲ್ಲೇ ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿದ್ದ ಉಪ್ಪಿ ಅವರ ಕಥೆ ಈ ಚಿತ್ರದ ಹೈಲೈಟ್. ಉಪೇಂದ್ರ, ಭಾವನ(ಜಾಕಿ), ರಂಗಾಯಣರಘು, ರವಿಶಂಕರ್, ಮೈತ್ರೇಯ, ರಾಕ್‍ಲೈನ್ ಸುಧಾಕರ್, ರಾಜುತಾಳಿಕೋಟೆ, ಬಿರಾದಾರ್ ಮುಂತಾದವರಿದ್ದಾರೆ. ಚಿತ್ರದ ಬಗ್ಗೆ ಗಂಧದ ಗುಡಿ ಹುಡುಗರು ಟ್ವೀಟ್ ಮೂಲಕ ಕೊಟ್ಟಿರುವ ವರದಿ ಮುಖ್ಯಾಂಶ ನಿಮ್ಮ ಮುಂದೆ.. ಇದು ನೇರ ಥೇಟರ್ ನಿಂದ ನಿಮಗಾಗಿ...

  ಸೂಪರ್ ಸ್ಪೀಡ್

  ಸೂಪರ್ ಸ್ಪೀಡ್

  ಮೊದಲರ್ಧ ಸೂಪರ್ ಸ್ಪೀಡ್, ಇಂಟ್ರವಲ್ ಇಷ್ಟು ಬೇಗ ಬರುತ್ತದೆ ಅಂಥ ಯಾರೂ ಊಹಿಸಿರಲ್ಲ. ಚಿತ್ರದಲ್ಲಿನ ಕೆಲವೊಂದು ಸಣ್ಣ ಸಣ್ಣ ಸನ್ನಿವೇಶಗಳು ದೇಶದ ಗಂಭೀರ ಸಮಸ್ಯೆಗಳನ್ನು ಬಿಂಬಿಸುತ್ತವೆ ಎನ್ನುತ್ತಾರೆ ಉಪೇಂದ್ರ.

  ಆರಂಭವೇ ಸೂಪರ್

  ಆರಂಭವೇ ಸೂಪರ್

  ಚಿತ್ರದ ಆರಂಭವೇ ಸೂಪರ್ ಸ್ಟೈಲ್ ನಲ್ಲಿದೆ. ಶಂಕರ್ ನಾಗ್ ಹಿನ್ನೆಲೆ ಧ್ವನಿ ಕೇಳಿ ಬರುತ್ತದೆ. ಟೈಟಲ್ ಕಾರ್ಡ್ ತೋರಿಸುವ ರೀತಿ ಕೂಡಾ ಮಸ್ತಾಗಿದೆ. ಆರಂಭದಲ್ಲಿ ಶುರುವಾಗುವ ಹಾಸ್ಯ ಮುಗಿಯುವುದೇ ಇಲ್ಲ

  ಟೋಪಿ ಟೋಪಿ

  ಟೋಪಿ ಟೋಪಿ

  ಸೂಪರ್ ಚಿತ್ರದ ಡೈಲಾಗ್ ರೀತಿಯಲ್ಲಿ ಉಪೇಂದ್ರ ಡೈಲಾಗ್ ಡೆಲಿವರಿ. ರಂಗಾಯಣ ರಘು ಹಾಸ್ಯ ಕಚಗುಳಿ ಇಡುತ್ತದೆ

  ಟೋಪಿ ಇಲ್ಲದ ಉಪೇಂದ್ರ(ತಲೆ) ಕಾಣಿಸಲ್ಲ. ಟೋಪಿ ಬಳಕೆ ಎಲ್ಲಾ ಸೀನ್ ಗಳನ್ನು ಕಾಣಿಸುತ್ತದೆ.

  ಫುಲ್ ಕಾಮಿಡಿ

  ಫುಲ್ ಕಾಮಿಡಿ

  ಬಿರಾದರ್ ಅವರಿಗೆ ಒಳ್ಳೆ ರೋಲ್ ಇದೆ. ಮಧ್ಯಂತರ ತನಕ ಕಥೆ ಐಡಿಯಾ ಕದ್ದು ಮೇಲಕ್ಕೆ ಬರುವ ವ್ಯಕ್ತಿಗಳನ್ನು ಅಣಕಿಸುವ ಸನ್ನಿವೇಶಗಳಿದೆ. ರಾಜಕೀಯ ವಿಡಂಬನೆ ಉಪೇಂದ್ರ ಡೈಲಾಗ್ ಗಳಲ್ಲಿ ಕಾಮನ್ ಫ್ಯಾಕ್ಟರ್ ಆಗಿದೆ

  ಫುಲ್ ಕಾಮಿಡಿ ಜೊತೆಗೆ ಹೈಟೆಕ್ ಕಳ್ಳತನ. ಪ್ರತಿಯೊಬ್ಬರು ಮತ್ತೊಬ್ಬರನ್ನು ವಂಚಿಸುವುದರಲ್ಲೇ ಆನಂದ ಪಡುತ್ತಿದ್ದಾರೆ. ಟೈಟಲ್ ಟ್ರ್ಯಾಕ್ ಸೂಪರ್

  ಗಿರ್ ಗಿಟ್ಲೆ ಆಡಿಸ್ತಾರೆ

  ಗಿರ್ ಗಿಟ್ಲೆ ಆಡಿಸ್ತಾರೆ

  ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ವಿಭಿನ್ನವಾಗಿ ಫೈಟ್ ಕಂಪೋಸ್ ಮಾಡಿದ್ದಾರೆ. ಪ್ರೇಕ್ಷಕರನ್ನು ಗಿರ್ ಗಿಟ್ಲೆ ಆಡಿಸ್ತಾರೆ

  ಉಪ್ಪಿ ಡೈಲಾಗ್ಸ್ ಸೂಪರ್: ಕರಡಿ ಮೇಲೆ 4-5 ಕೂದಲು ಹೋದ್ರೆ ನಂದೇನು ಹೋಯ್ತು.. ಭಾವನಾ ಜೊತೆ ಉಪ್ಪಿ ಜೋಡಿ ಮಸ್ತ್ . ಮಧ್ಯಂತರ ತನಕ 5ಕ್ಕೆ 3.5 ಮಾರ್ಕ್ಸ್

  ಫೈನಲ್ ಆಗಿ ನೊಡ್ಬಹುದು

  ಫೈನಲ್ ಆಗಿ ನೊಡ್ಬಹುದು

  ಮಧ್ಯಂತರ ನಂತರ ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿದೆ. ultra motion ಕೆಮರಾ ಬಳಸಲಾಗಿದೆ.
  ಭಾವನಾ ಜೊತೆಗೆ ಉಪ್ಪಿ ಸಹಾಯಕಿ ಪಾತ್ರದಲ್ಲಿರುವ ಮೈತ್ರೆಯಿ ಕೂಡಾ ಮುದ್ದಾಗಿ ಕಾಣುತ್ತಾಳೆ
  Ocean 11, Italian Job ಸೇರಿದಂತೆ ಹಲವು ಚಿತ್ರಗಳಲ್ಲಿ ಸಿಗುವ ಕಳ್ಳರ ಕೂಟದ ಥ್ರಿಲ್ ಈ ಚಿತ್ರದಲ್ಲಿದೆ. ಆದರೆ, ಕಥೆ ಕದ್ದಿದ್ದಲ್ಲ. ಚಿತ್ರ ಒಮ್ಮೆ ಖಂಡಿತಾ ನೋಡಬಹುದು

  English summary
  Upendra starrer Topiwala got grand Opening in many theaters and Multiplexes in Bangalore. Movie has political satire and full length comedy punch. Acting wise Biradar has very good role followed by Rangayana Raghu tweets Gandhada gudi forum

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X