ವಿಮರ್ಶೆ: "ನಾನು" "ನೀನು" ಆಗೋ ಜರ್ನಿನೇ uppi2

By ಬಸು

ಉಪ್ಪಿಟ್ಟು ಚಿತ್ರ ಮೊದಲನೇ ಸಲ ನೋಡಿ ಇದೇನಿದು ಚಿತ್ರಾನ್ನ ಇದ್ದಂಗಿದೆ ಅಂತ ನಿಮಗೆ ಅನ್ನ್ಸಿದ್ರೆ ಇದನ್ನ ಓದಿ. ಅಥವಾ ಇನ್ನೊಂದ್ಸಲ ಹೋಗಿ ಫಿಲಂ ನೋಡ್ಕೊಂಡ್ ಬನ್ನಿ. ಅವಾಗ ಗೊತ್ತಾಗುತ್ತೆ ಉಪೇಂದ್ರ ಯಾಕೆ ಡಿಫರೆಂಟ್ ಅಂತ. ಇದು ನಂಗೆ ಅರ್ಥ ಆಗಿರೋ ಉಪ್ಪಿಟ್ಟು. ನಿಮ್ಮ ಉಪ್ಪಿಟ್ಟು ಬೇರೆ ತರ ಇರಬಹುದು ಆದ್ರೆ ಉಪ್ಪಿಟ್ಟು ತಿಂದು "ನೀನು" "ಖುಶಿ" ಆಗಿದ್ರೆ ಉಪ್ಪಿಟ್ಟು ಮಾಡಿದವನಿಗೆ ಸಮಾಧಾನ.

ಮೊದಲನೆಯದಾಗಿ ಇಡಿ ಸಿನಿಮಾ ನಿಮ್ಮ ಮನದಲ್ಲಿ ನಡಿಯೋ ಒಂದು ಜರ್ನಿ. ಇಲ್ಲಿ "ನಾನು" "ನೀನು" ಆಗೋ ಜರ್ನಿನೇ uppi2 ಫಿಲಂ. "ನಾನು" "ನೀನು" ಆಗಬೇಕು ಅಂದ್ರೆ "ನಾನು"ಗೆ ಸಂಕಲ್ಪ/ಇಚ್ಚೆ ಇರಬೇಕು ಅಲ್ವಾ. ಈ ಚಿತ್ರದಲ್ಲಿ ಬರೋ "Will" ಆ ಇಚ್ಚೆ/ ಸಂಕಲ್ಪ.

Uppi2 Film Review by Oneindia Kannada reader Basu

"ನೀನು" ಜೊತೆ ಒಂದು ಹುಳ (ಟೆನ್ನಿಸ್ ಕೃಷ್ಣ) ಇರುತ್ತೆ. ಹುಳದ ಕೆಲಸ ಏನು ಅಂತ ಗೊತ್ತು ತಾನೇ. ಸುಮ್ನೆ ಸುಮ್ನೆ ಹುಳ ಬಿಡ್ತಿರೋದು.[ಉಪ್ಪಿ 2 Unknown ನೋಡಿ, ಯೋಚ್ನೆ ಮಾಡ್ಬೇಡಿ]

ಇಲ್ಲಿ "ನಾನು" ಜೊತೆ ಇರೋ ಆ 6 ಜನ ಕಾಮ , ಕ್ರೋಧ, ಲೋಭ , ಮೋಹ, ಮದ ಮತ್ತೆ ಮಾತ್ಸರ್ಯ. ಇವರಿಂದಾನೇ "ನಾನು" ಇರೋದ್, ಇವರು ಸಾಯೋ ವರೆಗೂ "ನೀನು" ಆಗೋಕೆ ಆಗಲ್ಲ.

ಚಿತ್ರದ ನಾಯಕಿ "ಲಕ್ಷ್ಮಿ" ಅಂದ್ರೆ ದುಡ್ಡು. ಫಸ್ಟ್ ಹಾಫ್ ಅಲ್ಲಿ "ಲಕ್ಷ್ಮಿ" ಅಂದ್ರೆ ದುಡ್ಡು "ನೀನು" ಅನ್ನೋ ಪ್ರೆಸೆಂಟ್ ಮೈಂಡ್ ನ ಡಿಸ್ಟರ್ಬ್ ಮಾಡೋಕೆ ಪ್ರೀತಿ ಮತ್ತೆ ಫ್ಯಾಮಿಲಿ ಜವಾಬ್ದಾರಿ ಇಂದ ಪ್ರಯತ್ನಿಸ್ತಾಳೆ. ಕ್ಲೈಮಾಕ್ಸ್ ಅಲ್ಲಿ ಸೋತು ಕೊನೆಗೆ "ಲಕ್ಷ್ಮಿ"ನೆ "ಖುಶಿ" ಆಗ್ತಾಳೆ.[ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!]

Uppi2 Film Review by Oneindia Kannada reader Basu

ಇನ್ನೂ ನಿಮಗೆ ಕನ್ ಫ್ಯೂಶನ್ ಮಾಡಿರೋ ಪೋಲಿಸ್ ಮತ್ತು ರೌಡಿಗಳು. ಚಿತ್ರದಲ್ಲಿ ಬ್ಯಾಂಕ್ ಜನಾರ್ಧನ್, CID ಎಲ್ಲ ನಮ್ಮ ಬುದ್ದಿವಂತಿಕೆ. ಅದು ಯಾವಾಗಲು "ನಾನು" "ನೀನು" ಆಗೋ ಜರ್ನಿ ಬಗ್ಗೆ ಫಾಲೋ ಮಾಡ್ತಾ ನಮ್ಮ ಕೆಟ್ಟ ಅನುಭವಗಳಿಂದ ಅಥವಾ ಬೇರೆಯವರ ಕೆಟ್ಟ ಅನುಭವಗಳಿಂದ ಡಿಸ್ಟರ್ಬ್ ಮಾಡೋದೇ ಇದರ ಕೆಲಸ. ಫಿಲಂ ಅಲ್ಲಿ ಪಾರುಲ್ ಯಾದವ್ ನಮ್ಮ ಬುದ್ದಿವಂತಿಕೆ ಸೃಷ್ಟಿಸಿರೋ ಆ ಡಿಸ್ಟರ್ಬೆನ್ಸ್.

ಇನ್ನು ರೌಡಿಗಳು ಚಿತ್ರದಲ್ಲಿ ಶೋಭರಾಜ್ ಮತ್ತು ಅವರ ಗ್ಯಾಂಗ್ ಅಂದ್ರೆ "ಭಯ". ಇಲ್ಲಿ ಭಯ ಏನು ಅಂದ್ರೆ "ನೀನು" ಇಂದ "ಖುಶಿ"ನ ಕಿತ್ತುಕೊಳ್ಳೋದು. ಇವರಿಗೆ "ಲಕ್ಷ್ಮಿ" ನೇ "ಖುಶಿ" ಅಂದ್ರೆ ನಮ್ಮ ಪಾಸ್ಟ್ ಮೈಂಡ್ ದುಡ್ಡಿದ್ರೆ ಮಾತ್ರ ಖುಶಿ ಆಗಿರಬಹುದು ಅನ್ನೋದನ್ನ ಸೂಚಿಸುತ್ತೆ ಅದಕ್ಕಾಗಿ ಇವರು "ನೀನು" ನ ಬೇರೆ ಬೇರೆ ತರ ಡಿಸ್ಟರ್ಬ್ ಮಾಡ್ತಾನೆ ಇರ್ತಾರೆ.[ಟ್ರೆಂಡ್ ಸೆಟ್ಟರ್ ಉಪೇಂದ್ರ ನಿರ್ದೇಶನದ 'ಉಪ್ಪಿ2' ಆಡಿಯೋ ವಿಮರ್ಶೆ]

Uppi2 Film Review by Oneindia Kannada reader Basu

ಕ್ಲೈಮಾಕ್ಸ್ ಕ್ಕಿಂತ ಸ್ವಲ್ಪ ಮುಂಚೆ ರೌಡಿಗಳು ಭಯದಿಂದ ಪಾಸ್ಟ್ ಬಗ್ಗೆನೇ ಯೋಚನೆ ಮಾಡ್ತಾರೆ. ಪೋಲಿಸ್ ಮತ್ತೆ CID ಫ್ಯೂಚರ್ ಬಗ್ಗೆ ಯೋಚನೆ ಮಾಡ್ತಾರೆ. ಇದರ ನಡುವೆ "ನೀನು" ಯೋಚನೆ ಮಾಡ್ದೆ "ಖುಶಿ" ನ ಪಡ್ಕೊತಾನೆ.

ಕ್ಲೈಮಾಕ್ಸ್ ಅಲ್ಲಿ "ನಾನು" ಮತ್ತೆ ಅವನ 6 ಜನ, ರೌಡಿಗಳು ಅಂದ್ರೆ ಭಯ ಮತ್ತೆ ಪೋಲಿಸ್ ಅಂದ್ರೆ ಬುದ್ದಿವಂತಿಕೆ ಹೋರಾಡಿ ಕೊನೆಗೆ "ನೀನು" ಗೆಲ್ತಾನೆ.

"ನೀನು" ಯೋಚನೆ ಮಾಡ್ದೆ "ಖುಶಿ" ಆಗಿ ಇರ್ತಾನೆ.[ಗಾಂಧಿನಗರದ ಎಲ್ಲಾ 'ರಿಯಲ್' ನಟರ ಕಾಲೆಳೆದ ಉಪೇಂದ್ರ]

ಇದೀಗ ಮತ್ತೊಮ್ಮೆ ಹೋಗಿ ಜಾಗರೂಕತೆಯಿಂದ ಉಪ್ಪಿಟ್ಟು ತಿನ್ನಿ. ಆಗಲೂ ಅರ್ಥ ಆಗ್ಲಿಲ್ಲ ಅಂದ್ರೆ ಪಕ್ಕದ ಮನೇಲಿ 250 ಕೋಟಿ ಮಸಾಲೆ ಹಾಕಿ 5 ಟಾಟಾ ಸುಮೋ ಜಂಪ್ ಮಾಡ್ಸಿ, ಐಟಂ ಡಾನ್ಸ್ ಆಡಿಸಿ, ಒಂದ್ ಫಿಲಂ ಮಾಡಿದರೆ ಅಂತೆ. ಹೋಗಿ ನೋಡ್ಕೊಂಡು ಹಾಗೆ ಇದ್ದು ಬಿಡಿ.

More from Filmibeat

English summary
Uppi2 Film Review by Oneindia Kannada reader Basu. Uppi 2 is all about journey within yourself. Go and watch the movie to realise about You and Your life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X