For Quick Alerts
  ALLOW NOTIFICATIONS  
  For Daily Alerts

  Uri Movie Review: ದೇಶಭಕ್ತಿ ಮತ್ತು ಸೇಡಿನ ಜ್ವಾಲೆ

  |

  2016ರ ಸೆಪ್ಟೆಂಬರ್​ 18ರಂದು ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ನಾಲ್ವರು ಭಯೋತ್ಪಾದಕರು ದಾಳಿ ಮಾಡ್ತಾರೆ. ಈ ವೇಳೆ 19 ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಉತ್ತರ ನೀಡಲು ಭಾರತದ ಯೋಧರು ಸೆಪ್ಟೆಂಬರ್ 28-29ರಂದು ಸರ್ಜಿಕಲ್​ ಸ್ಟ್ರೈಕ್​ ನಡೆಸುತ್ತಾರೆ. ಇದಕ್ಕಾಗಿ ಭಾರತೀಯ ಸೇನೆಯ ಸಿದ್ಧತೆ ಹೇಗಿತ್ತು, ದಾಳಿ ವೇಳೆ ಎದುರಾದ ಕಷ್ಟಗಳೇನು ಎಂಬುದೇ ಉರಿ ಸಿನಿಮಾ.

  ಚಿತ್ರ: ಉರಿ

  ನಿರ್ದೇಶನ: ಆಧಿತ್ಯ ಧಾರ್

  ಕಲಾವಿದರು: ವಿಕ್ಕಿ ಕೌಶಲ್, ಪರೇಶ್ ರಾವಲ್, ಯಾಮಿ ಗೌತಮ್ ಮತ್ತು ಇತರರು

  ಬಿಡುಗಡೆ: ಜನವರಿ 1, 2019

  ವಿಕ್ಕಿ ಕೌಶಲ್ ನಟನೆಯೇ ಉರಿ ಚಿತ್ರದ ಜೀವಾಳ. ಇಡೀ ಸಿನಿಮಾವನ್ನ ಒಬ್ಬರೇ ಸಾಗಿಸಿದ್ದಾರೆ. ಮೇಜರ್ ವಿಹಾನ್ ಸಿಂಗ್ ಪಾತ್ರದಲ್ಲಿ ನಟಿಸಿರುವ ವಿಕ್ಕಿ, ಅಭಿನಯಿಸಿದ್ದಾರೆ ಅನ್ನೋದಕ್ಕಿಂತ ಜೀವಿಸಿದ್ದಾರೆ ಎನ್ನಬಹುದು. ಹಾಗಾಗಿ, ಉರಿ ಚಿತ್ರಕ್ಕೆ ವಿಕ್ಕಿ ಕೌಶಲ್ ಅತಿ ದೊಡ್ಡ ಪ್ಲಸ್ ಪಾಯಿಂಟ್.

  Uri movie review

  ಅಮ್ಮನ ಆರೈಕೆಗಾಗಿ ಕಾಶ್ಮೀರದ ಗಡಿಯಿಂದ ದೆಹಲಿಗೆ ವರ್ಗಾವಣೆ ಪಡೆದುಕೊಳ್ಳುವ ನಾಯಕನಿಗೆ ಮತ್ತೆ ಕಾಶ್ಮೀರದಿಂದ ಬುಲಾವ್ ಬರುತ್ತೆ. ಉರಿ ಸೇನಾ ಮೇಲೆ ಆಗಿದ್ದ ದಾಳಿಗೆ ಪ್ರತಿಯಾಗಿ ಸರ್ಜಿಕಲ್ ಸ್ಟ್ರೈಕ್ ಮಾಡಲು ನಿರ್ಧರಿಸಿ, ಅದರ ನೇತೃತ್ವ ವಿಹಾನ್ ಗೆ ನೀಡಲಾಗುತ್ತೆ.

  ಅಲ್ಲಿಂದ ಅಸಲಿ ಕಥೆ ಆರಂಭವಾಗುತ್ತೆ. ಈ ಸರ್ಜಿಕಲ್ ಸ್ಟ್ರೈಕ್ ಮಾಡಲು ಭಾರತದ ಯೋಧರು ಹೇಗೆ ತಯಾರಾಗ್ತಾರೆ, ಏನು ಕಷ್ಟಗಳನ್ನ ಅನುಭವಿಸ್ತಾರೆ, ಪಾಕ್ ಉಗ್ರರ ಮೇಲೆ ದಾಳಿ ಹೇಗೆ ನಡೆಯುತ್ತೆ ಎಂಬುದು ಸೆಕೆಂಡ್ ಹಾಫ್. ದ್ವಿತೀಯಾರ್ಧ ಭಾರಿ ರೋಚಕವಾಗಿದ್ದು, ಪ್ರೇಕ್ಷಕರನ್ನ ಸೀಟಿನ ತುದಿಯಲ್ಲಿ ಕೂರಿಸುತ್ತೆ.

  Uri movie review

  ಸೈನಿಕರ ಜೀವನ, ಅವರ ಕುಟುಂಬದ ಅಭಿಮಾನಿ, ದೇಶಕ್ಕಾಗಿ ಅವರ ತ್ಯಾಗ, ಸೈನಿಕರನ್ನ ಕಳೆದುಕೊಂಡು ಪತ್ನಿ ಮಕ್ಕಳ ನೋವು ಎಲ್ಲದರ ಮೇಲೆ ಬೆಳಕು ಚೆಲ್ಲಿದೆ. ಈ ದೃಶ್ಯಗಳು ನೋಡ್ತಿದ್ರೆ ಮೈ ರೋಮಾಂಚನವಾಗುತ್ತೆ. ದೇಶಭಕ್ತಿ ಎದ್ದು ನಿಲ್ಲುವಂತೆ ಮಾಡುತ್ತೆ.

  ಇನ್ನು ಸರ್ಜಿಕಲ್​ ಸ್ಟ್ರೈಕ್​ ನಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಧಾನಿ ನರೇಂದ್ರ ಮೋದಿ, ಮಾಜಿ ರಕ್ಷಣಾ ಸಚಿವ ಮನೋಹರ್​ ಪರಿಕ್ಕರ್​ ಅವರನ್ನು ಸೂಚ್ಯವಾಗಿ ತೋರಿಸಲಾಗಿದೆ. ಯಾಮಿ ಗೌತಮ್​, ಪರೇಶ್​ ರಾವಲ್​ ಸೇರಿದಂತೆ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

  Uri movie review

  ನಿರ್ದೇಶಕ ಆಧಿತ್ಯ ಧಾರ್ ತಮ್ಮ ಮೊದಲ ಸಿನಿಮಾದಲ್ಲಿ ಗಮನ ಸೆಳೆಯುತ್ತಾರೆ. ಅಂತಿಮವಾಗಿ ಹೇಳುವುದಾದರೇ ಸರ್ಜಿಕಲ್ ಸ್ಟ್ರೈಕ್ ದೃಶ್ಯಗಳು ನೋಡುಗರಿಗೆ ಥ್ರಿಲ್ ಕೊಡುತ್ತೆ. ಆದ್ರೆ, ಇಂತಹ ಸಿನಿಮಾಗಳು ಈ ಹಿಂದೆ ನೋಡಿರುವವರಿಗೆ ಇದು ಸಾಮಾನ್ಯವಾದ ಒಂದು ಸಿನಿಮಾ. ವಿಶೇಷ ಏನು ಇಲ್ಲ ಎಂದೆನಿಸುತ್ತೆ.

  English summary
  Vicky Kaushal starrer Uri has opened to mixed reviews from the critics and the audience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X