twitter
    For Quick Alerts
    ALLOW NOTIFICATIONS  
    For Daily Alerts

    ಅಂತರಂಗದ 'ಗೂಗಲ್' ನೋಡಿ ವಿಮರ್ಶಕರು ಏನಂದರು.?

    By Harshitha
    |

    ವಿ.ನಾಗೇಂದ್ರ ಪ್ರಸಾದ್ ನಟಿಸಿ, ನಿರ್ದೇಶನ ಮಾಡಿ, ಸಾಹಿತ್ಯ, ಸಂಗೀತ, ಸಂಭಾಷಣೆ ಒದಗಿಸಿರುವ ಸಿನಿಮಾ 'ಗೂಗಲ್'. ರೆಗ್ಯುಲರ್ ಲವ್ ಸ್ಟೋರಿಗಳನ್ನ ಬಿಟ್ಟು ನೈಜವಾಗಿ ನಡೆದಿರುವ ಘಟನೆಯನ್ನ ಸಿನಿಮಾ ಮಾಡಿದ್ದಾರೆ ವಿ.ನಾಗೇಂದ್ರ ಪ್ರಸಾದ್.

    ಮಧ್ಯಮ ವರ್ಗದ ಕುಟುಂಬದ ಕಥೆ ಇದಾದ್ರಿಂದ 'ಗೂಗಲ್' ಸಿನಿಮಾ ಜನಸಾಮಾನ್ಯರಿಗೆ ಹೆಚ್ಚು ಹತ್ತಿರವಾಗಿದೆ, ಆಪ್ತವಾಗಿದೆ. ಹಾಗೇ, 'ಗೂಗಲ್' ಸಿನಿಮಾ ವಿಮರ್ಶಕರಿಗೂ ಮೆಚ್ಚುಗೆ ಆಯ್ತಾ.?

    ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಗೂಗಲ್' ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ನೋಡಿ...

    ಸುಖದ ಹುಡುಕಾಟಕ್ಕೆ 'ಗೂಗಲ್' ಬಳಕೆ: ವಿಜಯ ಕರ್ನಾಟಕ

    ಸುಖದ ಹುಡುಕಾಟಕ್ಕೆ 'ಗೂಗಲ್' ಬಳಕೆ: ವಿಜಯ ಕರ್ನಾಟಕ

    ಯುವಕ ಯುವತಿಯರನ್ನು ಚಿತ್ರಮಂದಿರದತ್ತ ಸೆಳೆಯಲು ಸಿನಿಮಾ ರಂಗದಲ್ಲಿ ಏನೆಲ್ಲ ಕಸರತ್ತು ನಡೆಯುತ್ತಿವೆ. ಇದರ ಭಾಗವಾಗಿ ಬಹುತೇಕ ನಿರ್ದೇಶಕರು ಯುವ ಪ್ರೇಮಿಗಳ ಲವ್‌ಸ್ಟೋರಿಗಳ ಬೆನ್ನು ಬಿದ್ದಿದ್ದಾರೆ. ಹಾಗಾಗಿ ಮಧ್ಯ ವಯಸ್ಸಿನವರ ಕಥೆಗಳು ಬೆಳ್ಳಿ ತೆರೆಯಿಂದ ಮರೆಯಾಗುತ್ತಿವೆ. ಕುಟುಂಬ ಸಮೇತ ನೋಡುವಂತಹ ಸಿನಿಮಾಗಳ ಸಂಖ್ಯೆ ಇಳಿಮುಖವಾಗುತ್ತಿವೆ. ಈ ಸಂಗತಿಯನ್ನು ಸೂಕ್ಷ್ಮವಾಗಿ ಗಮನಿಸಿರುವ ನಿರ್ದೇಶಕ ನಾಗೇಂದ್ರ ಪ್ರಸಾದ್‌, ಯುವಕರ ಮತ್ತು ಮಧ್ಯ ವಯಸ್ಸಿನವರ ಮನಸ್ಸಿನ ತಮುಲುಗಳನ್ನು ಹದವಾಗಿ ಬೆರೆಸಿಕೊಂಡು ‘ಗೂಗಲ್‌' ಸಿನಿಮಾ ಮಾಡಿದ್ದಾರೆ. ಕೆಲ ನ್ಯೂನ್ಯತೆಗಳ ನಡುವೆಯೂ ಈ ಚಿತ್ರ ಹಲವು ಉತ್ತಮ ಅಂಶಗಳನ್ನು ನೋಡುಗರ ಮನಸ್ಸಿನಲ್ಲಿ ಉಳಿಸುತ್ತದೆ. ಬದುಕಿನ ಕುರಿತಾದ ಪಾಠ ಮಾಡುತ್ತದೆ. ದಾಂಪತ್ಯದಲ್ಲಿ ಸಮರಸದ ಗೀತೆ ಹೇಳಿಸುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾ ಇಷ್ಟವಾಗುತ್ತದೆ - ಶರಣು ಹುಲ್ಲೂರು

    ವಿಮರ್ಶೆ: ಗಂಡನ ಬಿಟ್ಟು ಹೋಗುವ ಹೆಂಡತಿಯ ಅಂತರಂಗದ ಹುಡುಕಾಟವೇ 'ಗೂಗಲ್'ವಿಮರ್ಶೆ: ಗಂಡನ ಬಿಟ್ಟು ಹೋಗುವ ಹೆಂಡತಿಯ ಅಂತರಂಗದ ಹುಡುಕಾಟವೇ 'ಗೂಗಲ್'

    'ಗೂಗಲ್'ನಲ್ಲಿ ಹುಡುಕಿದರೂ ಏನಿಲ್ಲ - ಪ್ರಜಾವಾಣಿ

    'ಗೂಗಲ್'ನಲ್ಲಿ ಹುಡುಕಿದರೂ ಏನಿಲ್ಲ - ಪ್ರಜಾವಾಣಿ

    ಓಡಿಹೋದವರನ್ನು ಅಟ್ಟಿಸಿಕೊಂಡು ಹೋಗುವುದೇ ಈ ಸಿನಿಮಾದ ಕಥೆ. ‘ಓಡಿಹೋಗುವ' ನುಡಿಗಟ್ಟಿಗೆ ನಮ್ಮಲ್ಲಿ ಇರುವ ಸಾಂಪ್ರದಾಯಿಕ- ಬಾಲಿಶ ಅರ್ಥಗಳನ್ನೂ ಬಳಸಿಕೊಂಡೇ ಚಿತ್ರವು ಬೆಳೆಯುತ್ತ ಹೋಗುತ್ತದೆ. ಅಷ್ಟಷ್ಟು ಹೊತ್ತಿಗೊಂದು ಹಾಡು, ಸನ್ನಿವೇಶಕ್ಕೆ ಯಾವ ರೀತಿಯಲ್ಲಿಯೂ ಒಗ್ಗದ ಹಾಸ್ಯ, ಮಧ್ಯೆ ತಲೆಬುಡ ಇಲ್ಲದ ಒಂದೊಂದು ದೃಶ್ಯ ಹೀಗೆ ಒಂದು ಸುಸಂಬದ್ಧ ಸೂತ್ರವೇ ಇಲ್ಲದೇ ಚಿತ್ರ ಓಡುತ್ತಲೇ ಹೋಗುತ್ತದೆ - ಪದ್ಮನಾಭ ಭಟ್

    Googal Movie Review - Times of India

    Googal Movie Review - Times of India

    The film also has a good ensemble cast that add the necessary laughs when required. But there first half seems a little stretched, while the second half pulls it back together. Shubha Poonja deserves a special mention for her performance, especially in the climax, where she has given it her best. Nagendra Prasad seems earnest. One wishes the other two leads were more carefully chosen, as their performances seem rather forced - Sunayana Suresh

    Googal Movie Review - The New Indian Express

    Googal Movie Review - The New Indian Express

    When you work your love and skill, you get a masterpiece. When you single-handedly put in love, skill and money, you get Googal. Inspired by the idea of a search engine that everyone goes to for answers, this film explores what goes on in the minds of its characters. Dr Nagendra Prasad has donned many hats for this movie -- of the director, producer, lead actor, music composer and dialogue, script and lyrics writer - A Sharadhaa

    English summary
    V Nagendra Prasad and Shubha Poonja starrer Kannada Movie 'Googal' has received mixed response from the critics. Here is the collection of 'Googal' reviews by Top News Papers of Karnataka.
    Saturday, February 17, 2018, 9:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X