For Quick Alerts
  ALLOW NOTIFICATIONS  
  For Daily Alerts

  'ವಕೀಲ್ ಸಾಬ್' ಟ್ವಿಟ್ಟರ್ ವಿಮರ್ಶೆ: ಪವನ್ ಕಲ್ಯಾಣ್ ಸಿನಿಮಾ ನೋಡಿ ಅಭಿಮಾನಿಗಳು ಹೇಳಿದ್ದೇನು?

  |

  ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಸಿನಿಮಾ ಇಂದು ಅದ್ದೂರಿಯಾಗಿ ತೆರೆಗೆ ಬಂದಿದೆ. ಕೊರೊನಾ ಆತಂಕದ ನಡುವೆಯೂ ವಕೀಲ್ ಸಾಬ್ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಮೂರು ವರ್ಷಗಳ ಬಳಿಕ ಪವನ್ ಕಲ್ಯಾಣ್ ತೆರೆಮೇಲೆ ಬಂದಿದ್ದು, ಅಭಿಮಾನಿಗಳು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ.

  ಇಂದು ಬೆಳ್ಳಂಬೆಳಗ್ಗೆ ವಕೀಲ್ ಸಾಬ್ ಚಿತ್ರಮಂದಿರಗಳಲ್ಲಿ ಪ್ರದರ್ಶನ ಪ್ರಾರಂಭಿಸಿದ್ದು, ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ವಕೀಲ್ ಸಾಬ್ ಹಿಂದಿಯ ಪಿಂಕ್ ಸಿನಿಮಾದ ರಿಮೇಕ್ ಆಗಿದ್ದು, ವೇಣು ಶ್ರೀರಾಮ್ ಆಕ್ಷನ್ ಕಟ್ ಹೇಳಿದ್ದಾರೆ. ಇಂದು ಫಸ್ಟ್ ಶೋ ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ತಿಳಿಸುತ್ತಿದ್ದಾರೆ. ಪವನ್ ಕಲ್ಯಾಣ್ ವಕೀಲ್ ಸಾಬ್ ಬಗ್ಗೆ ಅಭಿಮಾನಿಗಳು ಹೇಳಿದ್ದೇನು? ಎಷ್ಟು ಅಂಕ ನೀಡಿದ್ದಾರೆ? ಇಲ್ಲಿದೆ ಮಾಹಿತಿ...

  ಪವನ್ ಕಲ್ಯಾಣ್ ಅದ್ಭುತ

  ಪವನ್ ಕಲ್ಯಾಣ್ ಅದ್ಭುತ

  'ಪವರ್, ರಾಕ್. ಕೋರ್ಟ್ ದೃಶ್ಯ ಅದ್ಭುತವಾಗಿದೆ. ಆಕ್ಷನ್ ದೃಶ್ಯಗಳು ಮತ್ತೊಂದು ಲೆವಲ್ ನಲ್ಲಿದೆ. ನಿರ್ದೇಶಕ ವೇಣು ಶ್ರೀರಾಮ್ ಅದ್ಭುತವಾಗಿ ಕಥೆ ನಿರೂಪಣೆ ಮಾಡಿದ್ದಾರೆ. ತಮನ್ ಸಂಗೀತ ಮತ್ತಷ್ಟು ಉತ್ತಮವಾಗಿದೆ' ಎಂದಿದ್ದಾರೆ. 3.75 ಅಂಕ ನೀಡಿದ್ದಾರೆ.

  ಫ್ಲ್ಯಾಶ್ ಬ್ಯಾಕ್ ಬೋರಿಂಗ್ ಆಗಿದೆ

  ಫ್ಲ್ಯಾಶ್ ಬ್ಯಾಕ್ ಬೋರಿಂಗ್ ಆಗಿದೆ

  ಚಿತ್ರದ ಪಾಸಿಟಿವ್ ಅಂಶದ ಬಗ್ಗೆ ಹೇಳುವುದಾದರೆ, ಪವನ್ ಕಲ್ಯಾಣ್ ಪವರ್ ಫುಲ್ ಪ್ರದರ್ಶನ, ನಾಯಕಿಯರಾದ ನಿವೇತಾ ಥಾಮಸ್, ಅಂಜಲಿ ಮತ್ತು ಅನನ್ಯಾ ಅಭಿನಯ ಗಮನಸೆಳೆಯುತ್ತೆ. ಸೆಕೆಂಡ್ ಹಾಫ್ ಕೋರ್ಟ್ ಅದ್ಭುತವಾಗಿದೆ. ಚಿತ್ರದ ಬಿಜಿಎಮ್ ಕೂಡ ಅದ್ಭುತವಾಗಿದೆ. ಇನ್ನು ನೆಗೆಟಿವ್, ಮೊದಲ ಭಾಗ ತುಂಬಾ ಎಳೆದಿದ್ದಾರೆ. ಚಿತ್ರದ ಫ್ಲ್ಯಾಶ್ ಬ್ಯಾಕ್ ದೃಶ್ಯ ಬೋರಿಂಗ್ ಆಗಿದೆ.' ಎಂದಿದ್ದಾರೆ. 5ಕ್ಕೆ 2.75 ಅಂಕ ನೀಡಿದ್ದಾರೆ.

  ಪವನ್ ಕಲ್ಯಾಣ್ ಎಂಟ್ರಿ ಬೆಂಕಿ

  ಪವನ್ ಕಲ್ಯಾಣ್ ಎಂಟ್ರಿ ಬೆಂಕಿ

  'ಮೊದಲ ಭಾಗ ಅದ್ಭುತವಾಗಿದೆ. ಫ್ಲ್ಯಾಶ್ ಬ್ಯಾಕ್ ದೃಶ್ಯವನ್ನು ಸ್ವಲ್ಪ ಎಳೆದಿದ್ದಾರೆ. ರಾಜಕೀಯ ಪಂಚ್ ಡೈಲಾಗ್ ಗಳು. ಪವನ್ ಕಲ್ಯಾಣ್ ಎಂಟ್ರಿ ದೃಶ್ಯ ಬೆಂಕಿ' ಎಂದಿದ್ದಾರೆ.

  USAಯಿಂದ ಬಂದ ವಿಮರ್ಶೆ

  USAಯಿಂದ ಬಂದ ವಿಮರ್ಶೆ

  ಯು ಎಸ್ ಎಯಲ್ಲಿ ಸಿನಿಮಾ ವೀಕ್ಷಿಸಿದ ಅಭಿಮಾನಿಗಳು, 'ಯು ಎಸ್ ಎ ಯಲ್ಲಿ ಬ್ಲಾಕ್ ಬಸ್ಟರ್ ಆಗುತ್ತೆ. ಪವನ್ ಕಲ್ಯಾಣ್ ಅಭಿನಯ ಅತ್ಯದ್ಭುತ. ಅಭಿಮಾನಿಗಳಿಗೆ ಭರ್ಜರಿ ಟ್ರೀಟ್' ಎಂದಿದ್ದಾರೆ. 5ಕ್ಕೆ 4.25 ಅಂಕ ನೀಡಿದ್ದಾರೆ.

  English summary
  Vakeel Saab Twitter Review: What netizens say about Pawan Kalyan starrer Vakeel Saab movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X