Varisu Review :ಉತ್ತರಾಧಿಕಾರ.. ತಾಯಿ ವಾತ್ಸಲ್ಯ.. ಚಿರಯುವಕ ವಿಜಯ್.. 'ವಾರಿಸು' ಹೈಲೈಟ್!

By ಮರಿ ಎಸ್

ಕಾಲಿವುಡ್‌ ನಟ ದಳಪತಿ ವಿಜಯ್ ಇದೂವರೆಗೂ ಆ್ಯಕ್ಷನ್ ಸಿನಿಮಾಗಳಲ್ಲಿ ಕಂಡಿದ್ದೇ ಹೆಚ್ಚು.ಆದರೆ, ಇತ್ತೀಚೆಗೆ ಫ್ಯಾಮಿಲಿ ಹಿನ್ನೆಲೆಯುಳ್ಳ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಆಕ್ಷನ್ ಜೊತೆ ಫ್ಯಾಮಿಲಿ ಸೆಂಟಿಮೆಂಟ್‌ ಅನ್ನೂ ತಮ್ಮ ಸಿನಿಮಾದಲ್ಲಿ ತರುತ್ತಿದ್ದಾರೆ.

ತಮಿಳುನಾಡಿನಲ್ಲಿ ಅತೀ ಸಂಭ್ರಮದಲ್ಲಿ ಆಚರಿಸುವ ಹಬ್ಬದಂದು ಫ್ಯಾಮಿಲಿ ಖುಷಿ ಪಡುವ ಸಿನಿಮಾ ಹೊತ್ತು ತಂದಿದ್ದಾರೆ. ತೆಲುಗು ನಿರ್ದೇಶಕ ವಂಶಿ ಇದೇ ಮೊದಲ ಬಾರಿಗೆ ದಳಪತಿ ವಿಜಯ್‌ಗೆ ಆಕ್ಷನ್ ಕಟ್ ಹೇಳಿದ್ದಾರೆ.

ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ದಳಪತಿ ವಿಜಯ್, ರಶ್ಮಿಕಾ ಮಂದಣ್ಣ, ಶರತ್‌ಕುಮಾರ್, ಜಯಸುಧಾ, ಪ್ರಕಾಶ್ ರಾಜ್, ಶ್ರೀಕಾಂತ್, ಶ್ಯಾಮ್, ಯೋಗಿ ಬಾಬು ಹಾಗೂ ಖುಷ್ಬು ಸೇರಿದಂತೆ ಕಾಲಿವುಡ್‌ನ ಹಲವು ಮಂದಿ ನಟರು ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ, ಈ ಸಿನಿಮಾ ಪ್ಲಸ್ ಏನು? ಹಾಗೂ ಮೈನಸ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ..

Rating:
3.5/5
Star Cast: Vijay, Rashmika Mandanna
Director: Vamsi Paidipally

'ಉತ್ತರಾಧಿಕಾರಿ' ಯಾರು?

'ಉತ್ತರಾಧಿಕಾರಿ' ಯಾರು?

ವಂಶಿ ನಿರ್ದೇಶಿಸೋ ಸಿನಿಮಾಗಳೇ ಹಾಗೆ. ಫ್ಯಾಮಿಲಿ ಹಾಗೂ ಮಾಸ್ ಎಲಿಮೆಂಟ್ಸ್‌ ಇದ್ದೇ ಇರುತ್ತೆ. 'ವಾರಿಸು' ಸಿನಿಮಾದಲ್ಲಿತೂ ಇಂತಹದ್ದೇ ಅಂಶಗಳಿವೆ. ಉದ್ಯಮಿಯಾಗಿರುವ ಶರತ್ ಕುಮಾರ್ ಮುಂದೆ ತನ್ನ ಗದ್ದುಗೆ ಯಾರು ವಾರಸುದಾರನಾಗಬೇಕು? ಅಂತ ತೀರ್ಮಾನಿಸುತ್ತಾನೆ. ಇದಕ್ಕಾಗಿ ತನ್ನ ಮೂವರು ಮಕ್ಕಳ ಮಧ್ಯೆ ಕಾಂಪಿಟೇಷನ್‌ ಏರ್ಪಾಡು ಮಾಡುತ್ತಾರೆ. ಆದರೆ, ಈ ಕಾಂಪಿಟೇಷನ್ ವಿಜಯ್‌ಗೆ ಇಷ್ಟವಿರದೆ ಮನೆ ಬಿಟ್ಟು ಹೊರಟು ಹೋಗಿರುತ್ತಾರೆ. ಹೀಗೊಮ್ಮೆ ಸಂಸಾರದಲ್ಲಿ ಸಮಸ್ಯೆಗಳು ಎದುರಾದಾಗ, ಅದನ್ನು ಹೇಗೆ ಪರಿಹರಿಸುತ್ತಾರೆ ಅನ್ನೋದೇ 'ವಾರಿಸು' ಕಥೆ.

ತಾಯಿ ಮಮತೆಯೇ ಮುಖ್ಯ

ತಾಯಿ ಮಮತೆಯೇ ಮುಖ್ಯ

ದಳಪತಿ ವಿಜಯ್ ತಂದೆಯ ಉತ್ತರಾಧಿಕಾರಿಯಾಗಲು ಇಷ್ಟವಿರಲ್ಲ. ಈ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದ ವಿಜಯ್ ಏಳು ವರ್ಷಗಳ ಬಳಿಕ ಮರಳಿಬರುತ್ತಾರೆ. ಶರತ್ ಕುಮಾರ್ ಹಾಗೂ ಜಯಸುಧಾ ಅವರ 60ನೇ ವಿವಾಹ ವಾರ್ಷಿಕೋತ್ಸವಕ್ಕೆ ಮರಳಿದಾಗ, ಸಮಸ್ಯೆಯೊಂದು ಸ್ಪೋಟಗೊಳ್ಳುತ್ತೆ. ಅಲ್ಲಿಂದ ಅಸಲಿ ಸಿನಿಮಾ ಶುರುವಾಗುತ್ತೆ.

ಇಲ್ಲಿ ಖಳನಾಯಕರು ಯಾರು?

ಇಲ್ಲಿ ಖಳನಾಯಕರು ಯಾರು?

'ವಾರಿಸು' ಸಿನಿಮಾ ಟ್ರೈಲರ್‌ನಲ್ಲಿ ಪ್ರಕಾಶ್ ರಾಜ್ ಖಳನಾಯಕನಾಗಿ ಬಿಂಬಿಸಲಾಗಿದೆ. ಆದರೆ, ವಿಜಯ್ ಮತ್ತೆ ಮನೆಗೆ ಹಿಂತಿರುಗಿದಾ ಮನೆಯೊಳಗೆ ವಿಲನ್‌ಗಳು ಹುಟ್ಟುಕೊಳ್ಳುತ್ತಾರೆ. ಅಸೂಯೆಯಿಂದ ಶ್ರೀಕಾಂತ್, ಶ್ಯಾಮ್ ವಿಲನ್‌ಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದಳಪತಿ ವಿಜಯ್ ಮನೆಯನ್ನು ಸರಿಪಡಿಸುತ್ತಾರಾ? ಕ್ಲೈಮ್ಯಾಕ್ಸ್‌ನಲ್ಲಿ ಏನಾಗುತ್ತೆ? ಅನ್ನೋದೇ ಇಂಟ್ರೆಸ್ಟಿಂಗ್,

ವಿಜಯ್ ಯೂತ್

ವಿಜಯ್ ಯೂತ್

ವಿಜಯ್ ಸಿನಿಮಾದುದ್ದಕ್ಕೂ ಚಿರಯೌವ್ವನದ ಹುಡುಗನಾಗಿ ಕಾಣಿಸಿಕೊಳ್ಳುತ್ತಾರೆ. ಡ್ಯಾನ್ಸ್‌ನಲ್ಲಿ, ಸಾಹಸ ದೃಶ್ಯಗಳಲ್ಲಿ, ಕಮಾಂಡರ್‌ ಆಗಿ ಮಿಂಚಿದ್ದಾರೆ. ಇನ್ನೊಂದು ಕಡೆ ತಾಯಿಯ ಮುದ್ದಿನ ಮಗನಾಗಿ, ತಂದೆಯ ಪ್ರೀತಿಯ ಮಗನಾಗಿ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಇದರೊಂದಿಗೆ ರಶ್ಮಿಕಾ ಮಂದಣ್ಣ ಪ್ರೀತಿ, ಫ್ಲ್ಯಾಶ್, ಯೋಗಿ ಬಾಬು ಕಾಮಿಡಿ ಸಿನಿಮಾಗೆ ಮತ್ತಷ್ಟು ಕಿಕ್ ಕೊಡುತ್ತೆ.

ಆಕ್ಷನ್, ಕಾಮಿಡಿ, ಸೆಂಟಿಮೆಂಟ್‌ ಸಮಾಗಮ

ಆಕ್ಷನ್, ಕಾಮಿಡಿ, ಸೆಂಟಿಮೆಂಟ್‌ ಸಮಾಗಮ

'ವಾರಿಸು' ಸಿನಿಮಾವನ್ನು ನಿರ್ದೇಶಕ ವಂಶಿ ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ. ಕೆಲವು ದೃಶ್ಯಗಳು ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡುತ್ತವೆ. ಈ ಸಿನಿಮಾದಲ್ಲಿ ಆಕ್ಷನ್, ಕಾಮಿಡಿ ಮತ್ತು ಸೆಂಟಿಮೆಂಟ್‌ಗಳ ಸಂಪೂರ್ಣ ಪ್ಯಾಕೇಜ್ ಈ ಸಿನಿಮಾದಲ್ಲಿದೆ. ಕಾರ್ತಿಕ್ ಪಳನಿ ಕ್ಯಾಮೆರಾ ವರ್ಕ್ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಬೆರಗುಗೊಳಿಸುತ್ತೆ. ಇನ್ನೊಂದು ಕಡೆ ಥಮನ್ ಮ್ಯೂಸಿಕ್ ಕಿಕ್ ಕೊಟ್ಟಿದೆ. "ರಂಜಿತಮೆ.." ಹಾಗೂ "ತೀ ದಳಪತಿ.." ಎರಡೂ ಹಾಡುಗಳೂ ಕಿಕ್ ಕೊಟ್ಟಿದೆ.

'ವಾರಿಸು' ಸಿನಿಮಾ ಮೈನಸ್ ಏನು?

'ವಾರಿಸು' ಸಿನಿಮಾ ಮೈನಸ್ ಏನು?

'ವಾರಿಸು' ಸಿನಿಮಾ ಮೆಗಾ ಧಾರಾವಾಹಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಸಿನಿಮಾ ಲ್ಯಾಗ್ ಇದೆ ಅಂತ ಟೀಕೆ ಮಾಡುತ್ತಿದ್ದಾರೆ. ಅಲ್ಲದೆ ಸಿನಿಮಾದ ಹಲವೆಡೆ ಹಲವು ಪಾತ್ರಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಎಳೆದು ತರುತ್ತಾರೆ ಇದು ಪ್ರೇಕ್ಷಕರಿಗೆ ಕಿರಿಕಿರಿಯನ್ನು ಉಂಟುಮಾಡುತ್ತೆ. ಸೆಕೆಂಡ್ ಹಾಫ್ ಇದ್ದಷ್ಟು ವೇಗ ಫಸ್ಟ್ ಹಾಫ್‌ ಕೂಡ ಇದ್ದಿದ್ದರೆ, ಇನ್ನೂ ಚೆನ್ನಾಗಿರುತ್ತಿತ್ತು ಅಂತ ಪ್ರೇಕ್ಷಕರಿಗೆ ಅನಿಸುತ್ತೆ.

More from Filmibeat

English summary
'Varisu' Starring Thalapathy Vijay, Is An Action Entertainer Review In Kannada, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X