Vidyapati Twitter Review: 'ವಿದ್ಯಾಪತಿ' ಪಜೀತಿ ನೋಡಿದವರು ಕೊಟ್ಟ ಅಂಕ ಎಷ್ಟು?
ಧನಂಜಯ್ ನಿರ್ಮಾಣದ 'ವಿದ್ಯಾಪತಿ' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ಈ ಫನ್ ಎಂಟರ್‌ಟೈನರ್ ಸಿನಿಮಾದಲ್ಲಿ ನಾಗಭೂಷಣ್ ಹಾಗೂ ಮಲೈಕಾ ವಸುಪಾಲ್ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಗರುಡ ರಾಮ್ ವಿಲನ್ ಆಗಿ ಅಬ್ಬರಿಸಿದ್ದರೆ ಅನಕೊಂಡ ಎಂಬ ವಿಶೇಷ ಪಾತ್ರದಲ್ಲಿ ಧನಂಜಯ್ ಸದ್ದು ಮಾಡಿದ್ದಾರೆ.
ಈ ಹಿಂದೆ 'ಇಕ್ಕಟ್' ಸಿನಿಮಾ ನಿರ್ದೇಶನ ಮಾಡಿದ್ದ ಜೋಡಿ ಇಶಾಂ ಮತ್ತು ಹಸೀಂ ಖಾನ್ ಅವರೇ 'ವಿದ್ಯಾಪತಿ' ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. 6-7 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಟೀಸರ್, ಟ್ರೈಲರ್, ಸಾಂಗ್ಸ್ ಅಂತೆಲ್ಲಾ ಬಹಳ ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡಲಾಗಿತ್ತು. ಧನಂಜಯ್ ವಿಭಿನ್ನ ವೀಡಿಯೋಗಳನ್ನು ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸ್ವಾಗತಿಸಿದ್ದರು.

ಐಪಿಎಲ್ ಭರಾಟೆ ನಡುವೆಯೂ 'ವಿದ್ಯಾಪತಿ' ಸಿನಿಮಾ ತೆರೆಗೆ ಬರುವ ಧೈರ್ಯ ಮಾಡಿದೆ. ನಿನ್ನೆ(ಏಪ್ರಿಲ್ 9) ರಾತ್ರಿಯೇ ಪೇಯ್ಡ್ ಪ್ರೀಮಿಯರ್ ಶೋಗಳು ನಡೆದಿದೆ. ಸಿನಿಮಾ ತಾರೆಯರು ಕೂಡ 'ವಿದ್ಯಾಪತಿ' ಪಜೀತಿ ನೋಡಿ ಎಂಜಾಯ್ ಮಾಡಿದ್ದಾರೆ. ಈಗಾಗಲೇ ಸಿನಿಮಾ ನೋಡಿದವರು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬೇಸಿಗೆ ರಜೆಗೆ ಒಂದೊಳ್ಳೆ ಸಿನಿಮಾ ವಿದ್ಯಾಪತಿ. ಒಳ್ಳೆ ನಟನೆ ಹಾಗೂ ತಂತ್ರಜ್ಞರ ಶ್ರಮ ಎದ್ದು ಕಾಣುತ್ತದೆ ಎಂದು ನಿತೇಶ್ ನಿಟ್ಟೂರ್ ಎಂಬುವವರು ಟ್ವೀಟ್ ಮಾಡಿ ತಿಳಿಸಿದ್ದಾರೆ.
ತಪ್ಪದೇ ಸಿನಿಮಾ ನೋಡಿ
ವಿದ್ಯಾಪತಿ ಬಹಳ ಒಳ್ಳೆಯ ಫ್ಯಾಮಿಲಿ ಎಂಟರ್‌ಟೈನರ್. ಮಕ್ಕಳ ಜೊತೆ ತಪ್ಪದೇ ಸಿನಿಮಾ ನೋಡಿ. ಎಲ್ಲಾ ಪಾತ್ರಗಳು ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಎಂದು ಅರ್ಜುನ್ ಅರುಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಒಂದೊಳ್ಳೆ ಸಿನಿಮಾ
ಪಾತ್ರಗಳನ್ನು ಬಹಳ ಬೇಗ, ಚೆನ್ನಾಗಿ ಪರಿಚಯಿಸಿದ್ದಾರೆ. ಇಬ್ಬರ ಸಂಘರ್ಷವನ್ನು ಸುಮಾರು 15 ನಿಮಿಷಗಳಲ್ಲಿ ತ್ವರಿತವಾಗಿ ತೋರಿಸಿರುವುದು ಚೆನ್ನಾಗಿತ್ತು. ಬಳಿಕ ಬರುವ ಸನ್ನಿವೇಶಗಳು ಚುರುಕಗಿ ಮತ್ತು ಮನರಂಜನೆಯಿಂದ ಕೂಡಿದ್ದವು. ಬರವಣಿಗೆ ಬಹಳ ಚೆನ್ನಾಗಿದೆ. ಮೊದಲಾರ್ಧ ಚೆನ್ನಾಗಿ ಮುಕ್ತಾಯವಾಯಿತು. ದ್ವಿತೀಯಾರ್ಧವು ಹಾಸ್ಯಮಯವಾಗಿ ಪ್ರಾರಂಭವಾದರೂ ನಿಧಾನವಾಗಿ ಭಾವನಾತ್ಮಕವಾಗಿ ಬದಲಾಗುತ್ತದೆ. ಬಳಿಕ ಬರುವ ಕೆಲ ಸನ್ನಿವೇಶಗಳು ನಿಮ್ಮ ನಿರೀಕ್ಷೆ ತಲುಪದೇ ಇರಬಹುದು. ಒಟ್ಟಾರೆ ಸಿನಿಮಾ ಚೆನ್ನಾಗಿದೆ. ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಇಂತಹ ಸಿನಿಮಾ ಬೆಂಬಲಿಸಿದ್ದಕ್ಕೆ ಧನಂಜಯ್ ಅವರಿಗೆ ಧನ್ಯವಾದ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಫ್ಯಾಮಿಲಿ ಸ್ಟಾರ್ ನಾಗಭೂಷಣ್
"ಈಗಷ್ಟೇ ಕನ್ನಡ ಚಿತ್ರ ವಿದ್ಯಾಪತಿ ನೋಡಿದೆ. ನಾಗಭೂಷಣ್ ಅದ್ಭುತ ನಟನೆ, ಇಶಾಂ ಮತ್ತು ಹಸೀಂ ಖಾನ್ಉತ್ತಮ ನಿರ್ದೇಶನ, ಮತ್ತು ಅದ್ಭುತವಾದ ನಿರ್ವಹಣೆ. ಕನ್ನಡ ಚಿತ್ರರಂಗಕ್ಕೆ ಶಕ್ತಿ ತುಂಬಬಲ್ಲ ಸಿನಿಮಾ. ಕಂಟೆಂಟ್ ಓರಿಯಂಟೆಡ್ ಸಿನಿಮಾಗಳಿಗೆ ನಾಗಭೂಷಣ್ ಅವರು ಅನಂತನಾಗ್ ಮತ್ತು ರಮೇಶ್ ಅರವಿಂದ್ ಅವರಂತೆ ಕಾಣುತ್ತಾರೆ. ಇಂದಿನಿಂದ ಅವರನ್ನು ಫ್ಯಾಮಿಲಿ ಸ್ಟಾರ್ ಎಂದು ಕರೆಯುತ್ತಾರೆ" ಎಂದು ನವೀನ್ ದ್ವಾರಕನಾಥ್ ಎಂಬುವವರು ಬರೆದುಕೊಂಡಿದ್ದಾರೆ.
ಪೈಸಾ ವಸೂಲ್
ಸುನಯನಾ ಸುರೇಶ್ ಸಿನಿಮಾ ನೋಡಿ ಟ್ವೀಟ್ ಮಾಡಿದ್ದಾರೆ. ಪೈಸಾ ವಸೂಲ್ ಸಿನಿಮಾ. ನಾಗಭೂಷಣೆ ಈಗ ಆಕ್ಷನ್ ಸ್ಟಾರ್. ಗರುಡರಾಮ್ ಇಂಪ್ರೆಸ್ ಮಾಡ್ತಾರೆ. ಧನಂಜಯ್ ಶೋ ಟಾಪರ್. ವಿದ್ಯಾಪತಿ ಸಿನಿಮಾ ಮಿಸ್ ಮಾಡದೇ ನೋಡಿ ಎಂದು ಪೋಸ್ಟ್ ಮಾಡಿದ್ದಾರೆ.
ಮಕ್ಕಳು ನೋಡಬೇಕು
'ವಿದ್ಯಾಪತಿ' ನಿಮ್ಮ ಕುಟುಂಬ ಮತ್ತು ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆದೊಯ್ಯುವ ಚಿತ್ರ. ಜೋಕ್‌ಗಳು, ಹಾಸ್ಯ, ಕರಾಟೆ ಮತ್ತು ಕೌಟುಂಬಿಕ ನಾಟಕವು ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸುವ ಅಂಶಗಳು ಚಿತ್ರದಲ್ಲಿದೆ. ಒಳ್ಳೆಯ ಹಾಸ್ಯ ಮತ್ತು ಪೋಷಕ ಪಾತ್ರವರ್ಗ (ತಾಯಿ ಮತ್ತು ತಂದೆ) ನನಗೆ ಹೆಚ್ಚು ಇಷ್ಟವಾದರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











