For Quick Alerts
  ALLOW NOTIFICATIONS  
  For Daily Alerts

  Liger Movie Review : ವರ್ಕೌಟ್ ಆಯ್ತಾ ವಿಜಯ್-ಪುರಿ ಜಗನ್ನಾಥ್ ಮ್ಯಾಜಿಕ್?

  By ವಿಗ್ನೇಶ್ ವಿಜಯ್‌
  |

  'ಲೈಗರ್' ಸಿನಿಮಾ ಪಕ್ಕಾ ಆಕ್ಷನ್ ಎಂದು ಪ್ರಚಾರ ಮಾಡಲಾಗಿತ್ತು. ಸಿನಿಮಾದಲ್ಲಿ ಆಕ್ಷನ್ ಜೊತೆಗೆ ಇನ್ನೂ ಕೆಲವು ಅಂಶಗಳು ಇವೆ ಆದರೆ ಯಾವುದೂ ಪ್ರೇಕ್ಷಕನ ಗಮನ ಸೆಳೆಯುವುದಿಲ್ಲ.

  ಯಂಗ್ ಆಂಡ್ ಎನರ್ಜಿಟಿಕ್ ಯುವಕನ ಪಾತ್ರದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದಾರೆ. ನಾಯಕನ ಎನರ್ಜಿಗೆ ಸರಿಯಾದ ಗುರಿ ನೀಡಿ ಆತನ ಎನರ್ಜಿಯೆಲ್ಲ ಬಾಕ್ಸಿಂಗ್‌ ರಿಂಗ್‌ ಮಾತ್ರ ಹೊರಬರುವಂತೆ ಮಾಡುತ್ತಾರೆ ಅವನ ಕೋಚ್. ಆದರೂ ಸಹ ಜೀವನ ಆತನನ್ನು ಆಗಾಗ್ಗೆ ಬಾಕ್ಸಿಂಗ್ ರಿಂಗ್‌ನ ಹೊರಗೂ ಫೈಟ್‌ ಮಾಡುವಂತೆ ಮಾಡುತ್ತಲೇ ಇರುತ್ತದೆ.

  Rating:
  2.5/5

  Recommended Video

  Liger Public Review | ವಿಜಯ್ ದೇವರಕೊಂಡ ಸಿನಿಮಾ ನೋಡಿ ತಲೆಕೆಡಿಸಿಕೊಂಡ ವೀಕ್ಷಕ | Vijay Devarakonda

  ಸಿನಿಮಾದಲ್ಲಿರುವ ಅಮ್ಮ-ಮಗನ ಸಂಬಂಧ ಹೊಸದಾಗಿದೆ. ಬಹಳ ಅಗ್ರೆಶನ್‌ನಿಂದ ಕೂಡಿದ ಆದರೆ ನಿಜ ಎನಿಸುವಂತಹಾ ಸಂಬಂಧ ಅದು. ಆದರೂ ರಮ್ಯಾ ಕೃಷ್ಣ ರೀತಿಯ ಅಮ್ಮನನ್ನು ಯಾರೂ ಬಯಸಲಾರರು. ಅಷ್ಟು ಅಗ್ರೆಸಿವ್ ಆಗಿದೆ ಅವರ ಪಾತ್ರ. ಆ ರೀತಿಯ ಅಮ್ಮನನ್ನು ಹ್ಯಾಂಡಲ್ ಮಾಡುವುದು ಕಷ್ಟ.

  'ಲೈಗರ್' ಸಿನಿಮಾದಲ್ಲಿ ನಾಯಕನನ್ನು ಕಾಡುವುದು ಮೂರು ವಿಷಯಗಳು. ಅಮ್ಮನ ಬಗೆಗೆ ಅವನಿಗಿರುವ ಪ್ರೀತಿ, ಮಾರ್ಷಲ್ ಆರ್ಟ್ಸ್‌ ಬಗ್ಗೆ ಅವನಿಗಿರುವ ಪ್ಯಾಷನ್ ಮತ್ತು ನಾಯಕಿ ಅನನ್ಯಾ ಪಾಂಡೆ. ಆತನದ್ದು ಬಹಳ ಆಸಕ್ತಿಕರ ವ್ಯಕ್ತಿತ್ವ. ಹಠವಾದಿ, ಆತ್ಮವಿಶ್ವಾಸಿ, ಸಿಟ್ಟಿನ ಸ್ವಭಾವದವ ಆದರೆ ನಾಯಕನ ಹೊರತಾಗಿ ಸಿನಿಮಾದಲ್ಲಿ ಇನ್ನೇನಾದರೂ ಇದೆಯಾ ಎಂದು ಹುಡುಕಿದರೆ ಸಿಗುವುದು ಶೂನ್ಯ.

  ಕತೆ ಏನು?

  ಕತೆ ಏನು?

  ಮಾರ್ಷಲ್ ಆರ್ಟ್ಸ್‌ ಅನ್ನುನ ಕತೆಯಲ್ಲಿ ಅಡಕ ಮಾಡಿರುವುದು ಒಂದು ಹಂತದ ವರೆಗೆ ವರ್ಕೌಟ್ ಆಗಿದೆ. ಆದರೆ ಅದೇ ಸಿನಿಮಾದ ಹೈಲೆಟ್ ಖಂಡಿತ ಅಲ್ಲ. ಆಕ್ಷನ್ ಕೊರಿಯಾಗ್ರಫಿ ಉತ್ತಮವಾಗಿದೆ ಆದರೆ ಅದ್ಭುತವಾಗಿಲ್ಲ. ಲೈಗರ್‌ಗೆ ಸರಿಯಾದ ಸ್ಪರ್ಧೆಯನ್ನು ಸೃಷ್ಟಿಸುವಲ್ಲಿ ನಿರ್ದೇಶಕ ವಿಫಲರಾಗಿದ್ದಾರೆ. ರಿಂಗ್‌ನಲ್ಲೂ ಸ್ಪರ್ಧೆಯಿಲ್ಲ, ರಿಂಗ್‌ನ ಹೊರಗೂ ಸ್ಪರ್ಧೆ ಇಲ್ಲ. ಲೈಗರ್‌ನ ತಾಯಿಯ ಪಾತ್ರ ಭಿನ್ನವಾಗಿದೆ ಆದರೆ ಆಕೆಯ ಅತಿಯಾದ ಅಗ್ರೆಶನ್‌ನಿಂದಾಗಿ ಪ್ರೇಕ್ಷಕರು ಆಕೆಯ ಮೇಲಿನ ಪ್ರೀತಿ ಕಳೆದುಕೊಳ್ಳುತ್ತಾರೆ. ನಾಯಕಿ ಅನನ್ಯಾ ಪಾಂಡೆ ನಟನೆ, ಪಾತ್ರ ಎರಡೂ ಕಿರಿಕಿರಿ ಉಂಟು ಮಾಡುತ್ತದೆ.

  ಶ್ರಮ ಪಟ್ಟಿದ್ದಾರೆ ವಿಜಯ್ ದೇವರಕೊಂಡ

  ಶ್ರಮ ಪಟ್ಟಿದ್ದಾರೆ ವಿಜಯ್ ದೇವರಕೊಂಡ

  ವಿಜಯ್ ದೇವರಕೊಂಡ ತಮ್ಮ ಪಾತ್ರಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆಂಬುದು ತೆರೆಯ ಮೇಲೆ ಕಾಣುತ್ತದೆ. ಅವರ ನಟನೆ ಬಗ್ಗೆ ದೂರುಗಳು ಹೇಳುವಂತಿಲ್ಲ. ಆದರೆ ಇಡೀ ಸಿನಿಮಾವನ್ನು ಒಬ್ಬರೇ ತೆಗೆದುಕೊಂಡು ಹೋಗುವಲ್ಲಿ ಅವರು ವಿಫಲರಾಗಿದ್ದಾರೆ, ಅದಕ್ಕೆ ಕಾರಣ ವಿಜಯ್ ಹೊರತಾಗಿ ಸಿನಿಮಾದಲ್ಲಿ ಇನ್ನೇನೂ ಇಲ್ಲದೇ ಇರುವುದು. ಸಿನಿಮಾ ರಿಚ್ ಆಗಿ ಕಾಣುತ್ತದೆ. ಕಣ್ಣಿಗೆ ಮುದ ನೀಡುವ ದೃಶ್ಯಗಳನ್ನು ಸಂಯೋಜಿಸಲಾಗಿದೆ. ಸಂಗೀತ ಪರ್ವಾಗಿಲ್ಲ ಎನ್ನುವಂತಿದೆ. ಒಂದು ಹಾಡು ಚೆನ್ನಾಗಿದೆ. ಕೆಲವೆಡೆ ಹಿನ್ನೆಲೆ ಸಂಗೀತವೂ ಗಮನ ಸೆಳೆಯುತ್ತದೆ. ಆದರೆ ನೆನಪಿನಲ್ಲಿ ಉಳಿಯುವುದಿಲ್ಲ. ಸಿನಿಮಾ ಎಡಿಟಿಂಗ್ ಚೆನ್ನಾಗಿದೆ. ಕೆಲವೆಡೆ ಎಡಿಟಿಂಗ್‌ನಿಂದಲೇ ಸಿನಿಮಾಕ್ಕೆ ವೇಗ ಒದಗಿಸಲಾಗಿದೆ.

  ಚಿತ್ರಕತೆಯನ್ನು ಸಡಿಲಬಿಟ್ಟ ಪುರಿ ಜಗನ್ನಾಥ್

  ಚಿತ್ರಕತೆಯನ್ನು ಸಡಿಲಬಿಟ್ಟ ಪುರಿ ಜಗನ್ನಾಥ್

  ವಿಜಯ್ ದೇವರಕೊಂಡ ಸ್ಕ್ರೀನ್ ಪ್ರೆಸೆನ್ಸ್ ಉತ್ತಮವಾಗಿದೆ. 'ಲೈಗರ್‌'ನಲ್ಲಿ ಅವರದ್ದು ಒನ್‌ಮ್ಯಾನ್ ಶೋ. ಕೆಲವು ಆಕ್ಷನ್ ದೃಶ್ಯಗಳು ಚೆನ್ನಾಗಿವೆ. ಇವೆರಡನ್ನು ಬಿಟ್ಟರೆ ಸಿನಿಮಾದಲ್ಲಿ ಹೇಳಿಕೊಳ್ಳುವಂಥಹದ್ದು ಏನೂ ಇಲ್ಲ. ಸಿನಿಮಾದಲ್ಲಿ ಪ್ರತ್ಯೇಕ ವಿಲನ್ ಇಲ್ಲದ ಕಾರಣ ಪುರಿ ಜಗನ್ನಾಥ್ ಅನ್ನೇ ವಿಲನ್ ಎನ್ನಬಹುದು. ಸಿನಿಮಾಕ್ಕೆ ಇನ್ನಷ್ಟು ಟೈಟ್ ಆದ ಚಿತ್ರಕತೆ ಬೇಕಿತ್ತು. ಕ್ಲೀಷೆ ಮಾದರಿಯ ದೃಶ್ಯಗಳಿಂದ ಸಿನಿಮಾವನ್ನು ತುಂಬಿಬಿಟ್ಟಿದ್ದಾರೆ ಪುರಿ. ಕತೆ ಸಹ ತೀರ ಸಾಧಾರಣವಾಗಿದೆ. ಲೈಗರ್ ಪಾತ್ರ ಹೊರತುಪಡಿಸಿ ಎಲ್ಲ ಪಾತ್ರಗಳು ಕಾರ್ಟೂನ್ ಪಾತ್ರಗಳಂತಿವೆ. ವಿಜಯ್ ದೇವರಕೊಂಡ ಅಭಿಮಾನಿಗಳು ಮಾತ್ರ ಸಹಿಸಿಕೊಂಡು ನೋಡಬಹುದಾದ ಸಿನಿಮಾ 'ಲೈಗರ್'

  ಮೈಕ್ ಟೈಸನ್ ಅನ್ನು ಎಳೆದು ತರಲಾಗಿದೆ

  ಮೈಕ್ ಟೈಸನ್ ಅನ್ನು ಎಳೆದು ತರಲಾಗಿದೆ

  'ಲೈಗರ್' ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಸಿನಿಮಾದಲ್ಲಿ ಮೈಕ್ ಟೈಸನ್ ಸಹ ಇದ್ದಾರಾದರೂ, ಬಲವಂತಕ್ಕೆ ಅವರನ್ನು ಎಳೆತಂದಂತಿದೆ. ಸಿನಿಮಾ ಹಿಟ್ ಆಗಲು ಟೈಸನ್ ಅಲ್ಲ ಒಳ್ಳೆಯ ಚಿತ್ರಕತೆ ಬೇಕಿತ್ತು ಎಂಬುದು ಪುರಿ ಜಗನ್ನಾಥ್‌ಗೆ ಹೊಳೆಯದೇ ಹೋಗಿದೆ. ದೊಡ್ಡ ತಾರಾಗಣ, ಹೈ ಬಜೆಟ್ ಇದ್ದರೆ ಸಾಕಾಗುವುದಿಲ್ಲ ಸಿನಿಮಾ ಗೆಲ್ಲಲು ಚಿತ್ರಕತೆ ಮುಖ್ಯ ಎಂಬುದಕ್ಕೆ ಈ ಸಿನಿಮಾ ಉದಾಹರಣೆ.

  English summary
  Vijay Devarakonda starrer, Puri Jaganadh directional Liger movie review in Kannada. Movie is avrage.
  Thursday, August 25, 2022, 13:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X