Liger Twitter Review: 'ಲೈಗರ್' ಸಿನಿಮಾ ಟ್ವಿಟ್ಟರ್ ವಿಮರ್ಶೆ: ನಡೆಯದ ವಿಜಯ್ ದೇವರಕೊಂಡ ಮ್ಯಾಜಿಕ್

'ಲೈಗರ್' ಸಿನಿಮಾ ಇಂದು (ಆಗಸ್ಟ್ 25)ಕ್ಕೆ ಬಿಡುಗಡೆ ಆಗಿದ್ದು, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಅರ್ಲಿ ಮಾರ್ನಿಂಗ್ ಶೋಗಳು ಈಗಾಗಲೇ ಮುಗಿದಿದ್ದು, ಸಿನಿಮಾ ನೋಡಿದ ಮಂದಿ ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

'ಲೈಗರ್' ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಸಿನಿಪ್ರಿಯರಿಗೆ ಇತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಆದ ಈ ಸಿನಿಮಾ ಹಿಂದಿ ಭಾಷಿಕ ಪ್ರದೇಶದಲ್ಲಿ ಸೂಪರ್ ಹಿಟ್ ಆಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಸಿನಿಮಾದ ಮೊದಲ ಶೋ ಮುಗಿದ ಬಳಿಕ ಬೇರೆಯದೇ ರೀತಿಯ ವರದಿಗಳು ಹೊರಬರುತ್ತಿದೆ.

ಮೊದಲ ಶೋ ನೋಡಿದ ಹಲವು ಮಂದಿ ಸಿನಿಮಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಕೆಲವು ಅಂಶಗಳ ಬಗ್ಗೆ ಮಾತ್ರವೇ ಹೊಗಳಿರುವ ವೀಕ್ಷಕರು ಒಟ್ಟಾರೆ ಸಿನಿಮಾ ಅಷ್ಟೇನು ಚೆನ್ನಾಗಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಿನಿಮಾದ ಬಗ್ಗೆ ವೀಕ್ಷಕರು ಮಾಡಿರುವ ಟ್ವೀಟ್‌ಗಳು ಇಲ್ಲಿವೆ ನೋಡಿ.

ಸಿನಿಮಾ ವಿಮರ್ಶಕ ಪ್ರಶಾಂತ್ ರಂಗಸ್ವಾಮಿ ಟ್ವೀಟ್ ಮಾಡಿ, ''ವಿಜಯ್ ದೇವರಕೊಂಡ ಅವರ ಎಲ್ಲ ಶ್ರಮ ಕಸದ ಬುಟ್ಟಿ ಸೇರಿದೆ. ನಿರ್ದೇಶಕ ಪುರಿ ಜಗನ್ನಾಥ್ ತೀರ ಕಳಪೆಯಾಗಿ ಸಿನಿಮಾ ಮಾಡಿದ್ದಾರೆ. ಚಿತ್ರಕತೆ ಸಹ ರೆಡಿ ಮಾಡಿಕೊಳ್ಳದೆ ನೇರವಾಗಿ ಶೂಟಿಂಗ್‌ಗೆ ಹೋಗಿಬಿಟ್ಟಿದ್ದಾರೆ ಎನಿಸುತ್ತದೆ. ಕ್ರಿಂಜ್ ಎನಿಸುವಂತಹಾ ಹಲವು ದೃಶ್ಯಗಳು ಸಿನಿಮಾದಲ್ಲಿದೆ. ಅನನ್ಯಾ ಪಾಂಡೆ ನಟನೆ ಬಹಳ ಕೆಟ್ಟದಾಗಿದೆ'' ಎಂದಿದ್ದಾರೆ.

'ಲೈಗರ್' ಸಿನಿಮಾ ಗಾನ್ ಕೇಸ್'

'ಲೈಗರ್' ಸಿನಿಮಾ ಗಾನ್ ಕೇಸ್'

ಪೀಟರ್ ಎನ್ನುವವರು ಸಹ 'ಲೈಗರ್' ಬಗ್ಗೆ ಟ್ವೀಟ್ ಮಾಡಿದ್ದು, ''ಇದೊಂದು ಗಾನ್ ಕೇಸ್, ಇದು ಪ್ಯಾನ್ ಇಂಡಿಯಾ ಸಿನಿಮಾ ಅಂತೂ ಖಂಡಿತ ಅಲ್ಲ. ವಿಜಯ್ ದೇವರಕೊಂಡ ಹೊರತುಪಡಿಸಿದರೆ ಸಿನಿಮಾದಲ್ಲಿ ಇನ್ನೇನೂ ಚೆನ್ನಾಗಿಲ್ಲ. ಬಹಳ ಕೆಟ್ಟದಾದ ಚಿತ್ರಕತೆ, ಅನನ್ಯಾ ಪಾಂಡೆ ನಟನೆ ದೇವರಿಗೇ ಪ್ರೀತಿ. ಬಹಳಷ್ಟು ಕ್ಲೀಷೆ ಸೀನ್‌ಗಳು ಸಿನಿಮಾದಲ್ಲಿವೆ. ಒಟ್ಟಿನಲ್ಲಿ ಇದೊಂದು ಕೆಟ್ಟ ಸಿನಿಮಾ'' ಎಂದಿದ್ದಾರೆ. ರಿಶಿ ಎಂಬುವರು ಟ್ವೀಟ್ ಮಾಡಿ, ''ಮೊದಲಾರ್ಧ ಪರವಾಗಿಲ್ಲ. ಅಮ್ಮ-ಮಗನ ಕೆಲವು ದೃಶ್ಯಗಳು ಚೆನ್ನಾಗಿವೆ. ಕೆಲವು ಕಾಮಿಡಿ ಸೀನ್‌ಗಳು ಸಹ ಚೆನ್ನಾಗಿವೆ. ವಿಜಯ್‌ ಈ ವರೆಗೆ ನೀಡಿರುವ ಪರ್ಫಾಮೆನ್ಸ್‌ಗಳಲ್ಲಿ ಇದೇ ಬೆಸ್ಟ್. ಪುರಿ ಜಗನ್ನಾಥ್, ಭಿನ್ನವಾಗಿ ಚಿತ್ರಕತೆ ಬರೆದಿದ್ದಾರೆ. ಸೆಕೆಂಡ್ ಆಫ್ ಹೇಗಿರಲಿದೆ ಕಾದು ನೋಡಬೇಕಿದೆ'' ಎಂದಿದ್ದಾರೆ.

''ಕೆಟ್ಟದಾಗಿ ನಟಿಸಿದ್ದಾರೆ ಅನನ್ಯಾ ಪಾಂಡೆ''

''ಕೆಟ್ಟದಾಗಿ ನಟಿಸಿದ್ದಾರೆ ಅನನ್ಯಾ ಪಾಂಡೆ''

ಸಿಕೆ ರಿವ್ಯೂ ಮಾಡಿರುವ ಟ್ವೀಟ್‌ನಲ್ಲಿ ''ವಿಜಯ್ ದೇವರಕೊಂಡ ಬಾಡಿ ಟ್ರಾನ್ಸ್‌ಫರ್ಮೇಶನ್ ಹೊರತುಪಡಿಸಿ ಸಿನಿಮಾದಲ್ಲಿ ಇನ್ನೇನೂ ಚೆನ್ನಾಗಿಲ್ಲ. ಅನನ್ಯಾ ಅತ್ಯಂತ ಕೆಟ್ಟದಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ವಿಲನ್ ಇಲ್ಲ ಹಾಗಾಗಿ ನಿರ್ದೇಶಕ ಪುರಿ ಜಗನ್ನಾಥ್ ಅನ್ನೇ ವಿಲನ್ ಎನ್ನಬಹುದು. ಸಿನಿಮಾದ ಮೊದಲಾರ್ಧವನ್ನು ಹಾಗೋ ಹೀಗೋ ತಡೆದುಕೊಳ್ಳಬಹುದು ಆದರೆ ದ್ವಿತೀಯಾರ್ಧವನ್ನು ತಡೆದುಕೊಳ್ಳಲಾಗದು. ಮೈಕ್ ಟೈಸನ್ ಸೀನ್‌ ಅನ್ನು ಬಲವಂತವಾಗಿ ಎಳೆದು ತಂದಿದ್ದಾರೆ'' ಎಂದು ಬರೆದಿದ್ದಾರೆ.

''ತೀರಾ ಆವರೇಜ್ ಸಿನಿಮಾ''

''ತೀರಾ ಆವರೇಜ್ ಸಿನಿಮಾ''

''ಒಬ್ಬ ನಿರ್ದೇಶಕ ತನ್ನ ದೊಡ್ಡ ಶಕ್ತಿಯನ್ನು ದೋಷವನ್ನಾಗಿ ಹೇಗೆ ಪರಿವರ್ತಿಸಬಹುದು ಮತ್ತು ಅದು ಕೂಡ ಆತ ಫಾರ್ಮ್‌ನಲ್ಲಿಲ್ಲದೇ ಇರುವಾಗ? ವಿಜಯ್ ದೇವರಕೊಂಡ ಅವರು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದಾರೆ ಆದರೆ ಒಂದು ಅಥವಾ ಎರಡು ಪುರಿ ಜಗನ್ ಅವರ ಮಾರ್ಕ್ ಸೀನ್‌ಗಳನ್ನು ಹೊರತುಪಡಿಸಿ, ಈ ಸಿನಿಮಾ ತೀರಾ ಆವರೇಜ್ ಆಗಿದೆ. ಪುರಿ ಜಗನ್ನಾಥ್ ಫಾರ್ಮ್‌ ಹೋಗಿಬಿಟ್ಟಿದೆ ಎಂಬ ಆತಂಕ ಶುರುವಾಗಿದೆ'' ಎಂದು ಟ್ವೀಟ್ ಮಾಡಿದ್ದಾರೆ ಆಕಾಶ್ವಾಣಿ ಎಂಬ ಟ್ವಿಟ್ಟರ್ ಖಾತೆ.

'ಲೈಗರ್' ಸಿನಿಮಾವನ್ನು ಹಾಳು ಮಾಡಿರುವ ಪುರಿ

'ಲೈಗರ್' ಸಿನಿಮಾವನ್ನು ಹಾಳು ಮಾಡಿರುವ ಪುರಿ

''ಲೈಗರ್ ಸಿನಿಮಾವನ್ನು ಪುರಿ ಜಗನ್ನಾಥ್ ಕೈಯ್ಯಾರೆ ಹಾಳು ಮಾಡಿದ್ದಾರೆ. ಅರ್ಥವೇ ಇಲ್ಲದ ಚಿತ್ರಕತೆ, ಅರ್ಥವೇ ಇಲ್ಲದ ದೃಶ್ಯಗಳು, ತೀರಾ ಕ್ಲೀಷೆ ಎನಿಸುವ ದೃಶ್ಯಗಳು ಸಿನಿಮಾವನ್ನು ಹಾಳುಗೆಡವಿವೆ. ವಿಜಯ್ ದೇವರಕೊಂಡ ಬಾಡಿ ಟ್ರಾನ್ಸ್‌ಫರ್ಮೇಶನ್ ಚೆನ್ನಾಗಿದೆ ಆದರೆ ತೊದಲು ಡೈಲಾಗ್ ಹೇಳುವ ರೀತಿ ಕಿರಿ-ಕಿರಿ ಉಂಟು ಮಾಡುತ್ತದೆ. ಲವ್ ಟ್ರ್ಯಾಕ್ ಬಹಳ ಕೆಟ್ಟದಾಗಿದೆ. ಅಲ್ಲಲ್ಲಿ ಕೆಲವು ದೃಶ್ಯಗಳು ಚೆನ್ನಾಗಿರುವುದು ಬಿಟ್ಟರೆ ಇಡೀ ಸಿನಿಮಾ ಕೆಟ್ಟದಾಗಿದೆ'' ಎಂದು ಟ್ವೀಟ್ ಮಾಡಿದ್ದಾರೆ ವೆಂಕಿ.

More from Filmibeat

English summary
Vijay Devarkonda starrer Liger movie twitter review is here. Many of the people did not liked the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X