twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: 'ಚಿನ್ನಾರಿಮುತ್ತ'ನಿಗೆ ಅದೃಷ್ಟ ತಂದು ಕೊಟ್ಟ 'ಕಿಸ್ಮತ್'

    |

    'ಟೈಂ ಎನ್ನುವುದು ಎರಡು ಥರ. ಒಂದು ಒಳ್ಳೆ ಟೈಂ, ಇನ್ನೊಂದು ಕೆಟ್ಟ ಟೈಂ. ಒಳ್ಳೆ ಟೈಂ ಬಂದ್ರೆ ಆಳು ಅರಸನಾಗ್ತಾನೆ. ಅದೇ ಕೆಟ್ಟ ಟೈಂ ಬಂದ್ರೆ....? ಏನಾಗುತ್ತೆ ಎನ್ನುವುದನ್ನ ನೈಜತೆಗೆ ಹತ್ತಿರವಾದ ಕಥೆಯೊಂದಿಗೆ ಪ್ರೆಸೆಂಟ್ ಮಾಡಿದೆ 'ಕಿಸ್ಮತ್'.

    Rating:
    3.5/5

    ಚಿತ್ರ: ಕಿಸ್ಮತ್
    ನಿರ್ದೇಶನ: ವಿಜಯ ರಾಘವೇಂದ್ರ
    ನಿರ್ಮಾಣ: ಸ್ಪಂದನ ವಿಜಯ ರಾಘವೇಂದ್ರ
    ಕಲಾವಿದರು: ವಿಜಯ ರಾಘವೇಂದ್ರ, ಸಂಗೀತಾ ಭಟ್, ಸಾಯಿಕುಮಾರ್, ಸುಂದರ್ ರಾಜ್, ಧರ್ಮ, ಚಿಕ್ಕಣ್ಣ, ರಾಜೇಶ್ ಮತ್ತು ಇತರರು
    ಬಿಡುಗಡೆ: 23 ನವೆಂಬರ್ 2018

    ಅದೃಷ್ಟದ ಮೇಲೆ ನಡೆಯುವ 'ಕಿಸ್ಮತ್'

    ಅದೃಷ್ಟದ ಮೇಲೆ ನಡೆಯುವ 'ಕಿಸ್ಮತ್'

    ಕಿಸ್ಮತ್ ಅಂದ್ರೆ ಅದೃಷ್ಟ. ಈ ಅದೃಷ್ಟ ಹೇಳಿ ಕೇಳಿ ಬರಲ್ಲ. ಆದ್ರೆ, ಕೈಯಲ್ಲಿದ್ದ ಅದೃಷ್ಟ ದೂರ ಆದಾಗ ಆಗುವ ನೋವು ಹೇಳುವುದೇ ಬೇಡ. ಕಿಸ್ಮತ್ ಚಿತ್ರವೂ ಹಾಗೆ, ಅದೃಷ್ಟ ಮೇಲೆ ನಡೆಯುತ್ತೆ. ಎಲ್ಲಾ ಆರಾಮಾಗಿದ್ದ ನಾಯಕನ (ವಿಜಯ್) ಬಾಳಲ್ಲಿ ಅನಿರೀಕ್ಷಿತವಾಗಿ ಬಿರುಗಾಳಿಯೊಂದು ಬೀಸುತ್ತೆ. ಈ ಬಿರುಗಾಳಿಗೆ ನಾಯಕ ಹೇಗೆಲ್ಲಾ ಒದ್ದಾಡುತ್ತಾನೆ, ಅದರಿಂದ ಹೇಗೆ ಹೊರಬರ್ತಾನೆ ಎಂಬುದು ಸಿನಿಮಾ. ಇಂತಹ ಕಥೆಯನ್ನ ನೀಟ್ ಆಗಿ ಪ್ರೆಸೆಂಟ್ ಮಾಡುವಲ್ಲಿ ಸಿನಿಮಾ ಸಕ್ಸಸ್ ಆಗಿದೆ.

    'ಕಿಸ್ಮತ್' ಕಥೆ ಏನು.?

    'ಕಿಸ್ಮತ್' ಕಥೆ ಏನು.?

    ಕೈಯಲ್ಲಿದ್ದ ಕೆಲಸ ಕಳೆದುಕೊಳ್ಳುವ ನಾಯಕ, ತಂಗಿ ಮದುವೆಗಾಗಿ ರಾಕ್ಷಸ ರೂಪದ ಬಡ್ಡಿ ಭದ್ರನ ಬಳಿ ಬಡ್ಡಿಗೆ ಸಾಲ ಪಡೀತಾನೆ. ಸಾಲ ತೀರಿಸಲು ನಾಲ್ಕು ತಿಂಗಳು ಡೆಡ್ಲೈನ್ ಇರುತ್ತೆ. ಕೆಲಸವಿಲ್ಲದ ವಿಜಯ್ ಗೆ ಪ್ರೀತಿಸಿದ ಹುಡುಗಿಯನ್ನ (ಸಂಗೀತಾ ಭಟ್) ಮದುವೆಯಾಗಲು ಅವರ ತಂದೆ ಅಡ್ಡಗಾಲು. ಈ ಕಡೆ ಕೆಲಸನೂ ಸಿಗಲ್ಲ, ದುಡ್ಡ ಸಾಲು ವಾಪಸ್ ಕೊಡೋಕು ಆಗಲ್ಲ. ಪ್ರೀತಿಸಿದ ಹುಡುಗಿಯ ತಂದೆಯನ್ನ ಒಪ್ಪಿಸುವುದಕ್ಕೂ ಆಗಲ್ಲ. ಡೆಡ್ ಲೈನ್ ಬೇರೆ ಮುಗಿತು. ಇದು ಚಿತ್ರ ಫಸ್ಟ್ ಹಾಫ್ ಕಥೆ. ಇಲ್ಲಿಯವರೆಗೂ ಸಿನಿಮಾ ಸಾಮಾನ್ಯವೆನಿಸುತ್ತೆ. ಸ್ಕ್ರಿಪ್ಟ್ ನಲ್ಲೂ ಕೊಂಚ ನಿಧಾನಗತಿ ಕಥೆ ಸಾಗುತ್ತೆ. ಅಸಲಿ ಕಥೆ ಇರೋದು ಸೆಕೆಂಡ್ ಹಾಫ್ ನಲ್ಲಿ.

    ಟೆಕ್ನಿಕಲಿ ಸಿನಿಮಾ ಸ್ಟ್ರಾಂಗ್ ಆಗಿದೆ

    ಟೆಕ್ನಿಕಲಿ ಸಿನಿಮಾ ಸ್ಟ್ರಾಂಗ್ ಆಗಿದೆ

    ಸಿನಿಮಾಗೆ ಟ್ವಿಸ್ಟ್ ಸಿಗೋದು ಸೆಕೆಂಡ್ ಹಾಫ್ ನಲ್ಲಿ. ಇಲ್ಲಿಂದ ಕಿಸ್ಮತ್ ಮಜಾ ಬದಲಾಗುತ್ತೆ. ರೋಚಕತೆ ಹೆಚ್ಚಾಗುತ್ತೆ. ಪ್ರೇಕ್ಷಕರ ಆಸಕ್ತಿ ಕೊನೆಯವರೆಗೂ ಉಳಿದುಕೊಳ್ಳುತ್ತೆ. ಇದಕ್ಕೆ ಕಾರಣ ಚಿತ್ರಕಥೆ ಮತ್ತು ಚಿತ್ರದ ಟೆಕ್ನಿಕಲ್ ಅಂಶಗಳು. ಸರಳ ದೃಶ್ಯ ಮತ್ತು ಕಥೆಯನ್ನ ತುಂಬಾ ಇಂಟ್ರೆಸ್ಟಿಂಗ್ ಆಗಿ ತೋರಿಸುವಲ್ಲಿ ಸಫಲವಾಗಿದೆ. ಮೊದಲಾರ್ಧದಲ್ಲಿ ಕಳೆದುಕೊಂಡಿದ್ದ ಜೋಶ್ ಕ್ಲೈಮ್ಯಾಕ್ಸ್ ವೊತ್ತಿಗೆ ವಾಪಸ್ ಬಂದಿರುತ್ತೆ. ಸಿನಿಮಾ ಮುಗಿಸಿ ಹೊರಬರುವ ಪ್ರೇಕ್ಷಕರು ಚೆನ್ನಾಗಿದೆ ಎಂಬ ನಿರ್ಧಾರಕ್ಕೆ ಬರುವಂತೆ ಚಿತ್ರಕಥೆ ಕೊನೆಯ ಇಪತ್ತು ನಿಮಿಷವಿದೆ. ಅದನ್ನ ಬಿಟ್ಟರೇ, ಎರಡ್ಮೂರು ವರ್ಷದ ಹಿಂದಿನ ಮೇಕಿಂಗ್ ಆಗಿರುವುದರಿಂದ ಅಲ್ಲಲ್ಲಿ ಕೆಲವು ದೃಶ್ಯಗಳು ವಾಸ್ತವತೆಗೆ ದೂರವಾಗಿದೆ.

    ವಿಜಯ ರಾಘವೇಂದ್ರ ನಿರ್ದೇಶನ

    ವಿಜಯ ರಾಘವೇಂದ್ರ ನಿರ್ದೇಶನ

    ಮೊದಲ ಡೈರೆಕ್ಷನ್ ನಲ್ಲಿ ವಿಜಯ ರಾಘವೇಂದ್ರ ಅವರು ಸಕ್ಸಸ್ ಕಂಡಿದ್ದಾರೆ. ಕಥೆಗೆ ಬೇಕಾದ ಕಲಾವಿದರ ಆಯ್ಕೆ, ಅದಕ್ಕೆ ಪೂರಕವಾದ ಸಂಗೀತ, ಅದನ್ನ ಪ್ರೆಸೆಂಟ್ ಮಾಡಿರುವ ರೀತಿ ಎಲ್ಲವೂ ಇಷ್ಟವಾಗುತ್ತೆ. ರಾಜೇಶ್ ಮುರುಗನ್ ಅವರ ಸೈಲೆಂಟ್ ಮ್ಯೂಸಿಕ್ ಗಮನ ಸೆಳೆಯುತ್ತೆ. ರಾಜೇಶ್ ಅವರ ಛಾಯಾಗ್ರಹಣ ಕೂಡ ಸಾಥ್ ನೀಡಿದೆ. ಇನ್ನುಳಿದಂತೆ ಹಾಡುಗಳು ಅಷ್ಟಾಗಿ ಸದ್ದು ಮಾಡದೇ ಇದ್ದರು, ಕೊನೆಯಲ್ಲಿ ಪುನೀತ್ ರಾಜ್ ಕುಮಾರ್ ಕಂಠದಲ್ಲಿ ಬರುವ ಹಾಡು ಒಳ್ಳೆಯ ಶುಭಂ ಅನ್ನುವಂತಿದೆ.

    ಕಲಾವಿದರು ಗೆಲ್ಲಿಸಿದ ಕಿಸ್ಮತ್

    ಕಲಾವಿದರು ಗೆಲ್ಲಿಸಿದ ಕಿಸ್ಮತ್

    'ಕಿಸ್ಮತ್' ಚಿತ್ರದ ನಿಜವಾದ ಶಕ್ತಿ ಕಲಾವಿದರು. ನಿಜವಾಗಲೂ ನಿರುದ್ಯೋಗಿಯೇ ಇರಬಹುದು ಎನ್ನುವಂತಹ ವಿಜಯ ರಾಘವೇಂದ್ರ ಅಭಿನಯ. ಅದಕ್ಕೆ ತಕ್ಕ ಲವರ್ ಪಾತ್ರದಲ್ಲಿ ಸಂಗೀತಾ ಭಟ್, ವಿಜಯ ಸಂಕಷ್ಟದಲ್ಲಿ ಬೈಯ್ಕೊಂಡೆ ಸಹಾಯ ಮಾಡುವ ಆಪ್ತಮಿತ್ರ ದಿಲೀಪ್ ರಾಜ್, ಇವರುಗಳು ಜೊತೆ ಪೊಲೀಸ್ ಆಗಿ ಧರ್ಮ, ಹುಡುಗಿಯ ತಂದೆಯಾಗಿ ಸುಂದರ್ ರಾಜ್ ಬರುವ ಕೆಲವು ದೃಶ್ಯಗಳಲ್ಲಿ ಕಿಕ್ ಕೊಡ್ತಾರೆ. ಕೊನೆಯಲ್ಲಿ ಸಾಯಿ ಕುಮಾರ್ ಸರ್ಪ್ರೈಸ್ ಎಂಟ್ರಿ ಕೂಡ ಇಷ್ಟವಾಗುತ್ತೆ. ಇನ್ನು ಚಿತ್ರದ ವಿಶೇಷ ಅಂದ್ರೆ ಚಿಕ್ಕಣ. ಹಾಸ್ಯನಟ ಚಿಕ್ಕಣ್ಣ, ಇಲ್ಲಿ ಸೀರಿಯಸ್ ಆಗಿರುವ ನೆಗಿಟೀವ್ ಪಾತ್ರದಲ್ಲಿ ಮಿಂಚಿದ್ದಾರೆ. ಇಡೀ 'ಕಿಸ್ಮತ್'ಗೆ ಫುಲ್ ಜೋಶ್ ನೀಡುವುದು ಬಡ್ಡಿ ಭದ್ರನ ಪಾತ್ರಧಾರಿ ರಾಜೇಶ್.

    ಕೊನೆಗೆ ಇದನ್ನ ಮರೆಯುವಂತಿಲ್ಲ

    ಕೊನೆಗೆ ಇದನ್ನ ಮರೆಯುವಂತಿಲ್ಲ

    ಇಷ್ಟೆಲ್ಲಾ ಹೇಳಿದ ಮೇಲೆ ಇದನ್ನ ಮರೆಯುವಂತಿಲ್ಲ. ಅಂದ್ಹಾಗೆ, ಕಿಸ್ಮತ್ ಸಿನಿಮಾ ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಂದಿದ್ದ 'ನೇರಂ' ಚಿತ್ರದ ರೀಮೇಕ್. ರೀಮೇಕ್ ಅಂದ ಮಾತ್ರಕ್ಕೆ ಕೆಟ್ಟ ಸಿನಿಮಾ ಅಲ್ಲ. ಬಹಳ ಅಚ್ಚುಕಟ್ಟಾಗಿ, ಕುತೂಹಲವಾಗಿ ಸ್ಕ್ರೀನ್ ಮೇಲೆ ಬಂದಿರುವ ಕಿಸ್ಮತ್ ನೋಡು ನೋಡುತ್ತಲೇ ಪ್ರೇಕ್ಷಕರಿಗೆ ಇಷ್ಟವಾಗುತ್ತೆ.

    English summary
    Kannada actor vijay raghavendra directional movie Kismath has released today (November 23). the movie gets good response from audience.
    Friday, November 23, 2018, 13:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X