twitter
    For Quick Alerts
    ALLOW NOTIFICATIONS  
    For Daily Alerts

    ಶಂಕರ್ -ವಿಕ್ರಮ್ 'ಐ' ವಿಮರ್ಶಕರ ಮಿಶ್ರ ಪ್ರತಿಕ್ರಿಯೆ

    By ಜೇಮ್ಸ್ ಮಾರ್ಟಿನ್
    |

    ಶಂಕರ್ ನಿರ್ದೇಶನದ ಬಹುನಿರೀಕ್ಷೆಯ ಚಿತ್ರ ವಿಶ್ವದೆಲ್ಲೆಡೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಎಲ್ಲವೂ ಇದ್ದರೂ ಏನು ಕೊರತೆ ಕೊನೆ ತನಕ ಪ್ರೇಕ್ಷಕರನ್ನು ಕಾಡುತ್ತದೆ.

    ಚಿತ್ರ ನೋಡುತ್ತಾ ನಿದ್ರೆಗೆ ಕೆಲವರು ಜಾರಿದರೆ, ಮತ್ತೆ ಕೆಲವರು ಛೇ ಶಂಕರ್ ನಿಜಕ್ಕೂ ಈ ಚಿತ್ರ ನಿರ್ದೇಶನ ಮಾಡಿದ್ರಾ? ಎಂಬ ಪ್ರಶ್ನೆಯೊಂದಿಗೆ ಮನೆಗೆ ತೆರಳುತ್ತಿದ್ದಾರೆ. ಒಟ್ಟಾರೆ, ಚಿತ್ರ ಏನಾದರೂ ಗೆದ್ದರೆ ಅದು ವಿಕ್ರಮ್ ಅಭಿನಯ, ಪಿಸಿ ಶ್ರೀರಾಮ್ ಕೆಮರಾ ವರ್ಕ್ ನಿಂದ ಮಾತ್ರ.ಎಂಬುದು ಎಲ್ಲರಿಗೂ ಅರಿವಾಗುತ್ತದೆ. ['ಐ' ಟ್ರೇಲರ್ ಅದ್ಭುತ| ಟೀಸರ್ ಸೂಪರ್]

    ವಿಕ್ರಮ್ ಅವರ ಡೆಡಿಕೇಷನ್ ಮತ್ತು ಹಾರ್ಡ್ ವರ್ಕ್, ಶಂಕರ್ ಅವರ ಸನ್ನಿವೇಶಗಳ ಪರಿಕಲ್ಪನೆ, ಏಮಿ ಜಾಕ್ಸನ್ ಅವರ ಚೆಲುವು, ಸಂತಾನಂ ನವಿರಾದ ಹಾಸ್ಯ, ಪಿಸಿ ಶ್ರೀರಾಮ್ ಅವರ ಕಣ್ಣು ಕುಕ್ಕುವ ಕ್ಯಾಮೆರಾ ಕೈಚಳಕ, ಮೈನವಿರೇಳಿಸುವ ಆಕ್ಷನ್ ಸನ್ನಿವೇಶಗಳು ಚಿತ್ರದ ಹೈಲೈಟ್ ಗಳು. [ವಿಮರ್ಶೆ: ತೆರೆಯ ಮೇಲೆ ಹೊಸ ವಿಕ್ರಮ]

    ಮೈನಸ್ ಅಂಶಗಳಲ್ಲಿ ಚಿತ್ರದ ಕಾಲಾವಧಿಯನ್ನು (189 ನಿಮಿಷ) ಸ್ವಲ್ಪ ಮೊಟುಕುಗೊಳಿಸಬಹುದಿತ್ತು. ಎಆರ್ ರೆಹಮಾನ್ ಪಾಶ್ಚಾತ್ಯ ಶೈಲಿ ಬಿಟ್ಟು ಮತ್ತೊಮ್ಮೆ ಶಂಕರ್ ಚಿತ್ರಕ್ಕೆ ನೀಡಿದ ತಮ್ಮದೇ ಸಂಯೋಜನೆಗಳನ್ನು ಕೇಳುವುದು ಉತ್ತಮ, ಸಂಕಲನ ಕೈಕೊಟ್ಟಿದೆ. ಕಾರಣ ಮೂಲ ಚಿತ್ರಕಥೆ ಅತ್ಯಂತ ಹಳೆ ಕಥೆ ಆಧಾರಿತ. ನಿರೂಪಣೆ ಶೈಲಿಯಲ್ಲಿ ಎಲ್ಲವೂ ನಿರೀಕ್ಷಿತ. ['ಐ' ಚಿತ್ರಕ್ಕೆ ಕಾಡುತ್ತಿದೆ ಪೈರಸಿ ಗ್ರಹಣ]

    ಶಂಕರ್ ಚಿತ್ರಗಳ ಸಂಭಾಷಣೆ ಶಕ್ತಿಯಾಗಿದ್ದ ಸುಜಾತಾ ರಂಗರಾಜನ್ ಅಗಲಿಕೆ ಈಗ 'ಐ' ನಲ್ಲಿ ಎದ್ದು ಕಾಣುತ್ತಿದೆ. ಒಟ್ಟಾರೆ ಕೊರತೆಗಳ ನಡುವೆ ತಾಳ್ಮೆಯಿಂದ ಕುಳಿತು ಚಿತ್ರ ನೋಡಿದ ಪ್ರೇಕ್ಷಕನಿಗೆ ಸಲಾಂ ಹೇಳಲೇಬೇಕು.. ವಿವಿಧ ವೆಬ್ ಸೈಟ್ ಗಳನ್ನು 'ಐ' ಬಗ್ಗೆ ವಿಮರ್ಶೆಗಳ ಸಂಗ್ರಹ ಇಲ್ಲಿದೆ ನೋಡಿ..

    ದೊಡ್ಡ ಕೊರತೆ ಎಂದರೆ ಸ್ಕ್ರೀನ್ ಪ್ಲೇ: ಇಂಡಿಯಾ ಗ್ಲಿಡ್ಜ್

    ದೊಡ್ಡ ಕೊರತೆ ಎಂದರೆ ಸ್ಕ್ರೀನ್ ಪ್ಲೇ: ಇಂಡಿಯಾ ಗ್ಲಿಡ್ಜ್

    ಶಂಕರ್ ಅವರ ಸ್ಕ್ರೀನ್ ಪ್ಲೇ ಅಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ದೃಶ್ಯಗಳು ನಿರೀಕ್ಷಿತವಾಗಿವೆ. 189ನಿಮಿಷ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಚಿತ್ರ ಎನಿಸುವುದಿಲ್ಲ. ಹಳೆ ಕಥೆ ಹೊಸ ಫಾರ್ಮ್ಯೂಲಾ, ರಿವರ್ಸ್ ಸ್ಕ್ರಿನ್ ಪ್ಲೇ, ಆಗಾಗ ಫ್ಲಾಶ್ ಬ್ಯಾಕ್ ಕಥೆ ವರ್ಕ್ ಔಟ್ ಆಗಿಲ್ಲ. ಒಮ್ಮೆ ನೋಡಬಹುದು ಅಷ್ಟೆ. 3/5. ಇಂಡಿಯಾ ಗ್ಲಿಡ್ಜ್

    ವಿಕ್ರಮ್ ಅಭಿಮಾನಿಯಾದರೆ ಐ ನೋಡಿ: ಗುಲ್ಟಿ.ಕಾಂ

    ವಿಕ್ರಮ್ ಅಭಿಮಾನಿಯಾದರೆ ಐ ನೋಡಿ: ಗುಲ್ಟಿ.ಕಾಂ

    ವಿಕ್ರಮ್ ಅಭಿಮಾನಿಯಾದರೆ ಮಾತ್ರ ಐ ನೋಡಿ, ಶಂಕರ್ ಫ್ಯಾನ್ ಆಗಿದ್ದರೆ ನಿರಾಶೆ ಖಚಿತ. ವಿಕ್ರಮ್ ಸೇಡು ತೀರಿಸಿಕೊಳ್ಳುವ ವಿಧಾನ ಕೂಡಾ ಡಲ್ ಆಗಿದೆ. ಕ್ಲೈಮ್ಯಾಕ್ಸ್ ಯಾವಾಗ ಎನ್ನುವಷ್ಟರಲ್ಲಿ ಚಿತ್ರ ಕೊನೆಗೊಂಡಿರುತ್ತದೆ. ಥ್ರಿಲ್ಲಿಂಗ್ ಆಗಿರಬೇಕಿದ್ದ ಶಂಕರ್ ಸಿನಿಮಾ ಬೋರಿಂಗ್ ಆಗಿದೆ. 2.5/5

    ಶಂಕರ್ ಈ ರೀತಿ ಚಿತ್ರ ನಿರ್ದೇಶಿಸುತ್ತಾರಾ?

    ಶಂಕರ್ ಈ ರೀತಿ ಚಿತ್ರ ನಿರ್ದೇಶಿಸುತ್ತಾರಾ?

    ಶಂಕರ್ ಈ ರೀತಿ ಚಿತ್ರ ನಿರ್ದೇಶಿಸುತ್ತಾರಾ? ಎನ್ನುವಷ್ಟರ ಮಟ್ಟಿಗೆ ಅಚ್ಚರಿ ಮೂಡುವಂತೆ ಐ ಕಾಣುತ್ತದೆ.ಬಹುಭಾಷಾ ಚಿತ್ರ ಭಾಷೆಯಿಂದ ಭಾಷೆಗೆ ಪ್ರೇಕ್ಷಕರ ನಿರೀಕ್ಷೆ ಬದಲಾಗುತ್ತದೆ. ತಮಿಳು ಪ್ರೇಕ್ಷಕರಿಗೆ ಬೋರ್ ಎನಿಸುವ ಚಿತ್ರ ತೆಲುಗು, ಹಿಂದಿ ಹಾಗೂ ಇನ್ನಿತರ ಭಾಷಿಗರಿಗೆ ತಲೆ ನೋವು ತರುತ್ತದೆ. ವಿಕ್ರಮ್ ನಟನೆ, ಪಿಸಿ ರಾಮ್ ಛಾಯಾಗ್ರಹಣ ಬಿಟ್ಟರೆ ಚಿತ್ರದಲ್ಲಿ ಏನು ಇಲ್ಲ ಎನ್ನಬಹುದು,. ಚೀನಾದ ಒಂದೇ ಲೋಕೇಷನ್ ಮತ್ತೆ ಮತ್ತೆ ನೋಡಿ ಕಣ್ಣು ಉರಿ ಬರುತ್ತದೆ. ಸಿನಿ ಜೋಶ್ 2/5

    ನಿರೀಕ್ಷೆ ಮಟ್ಟ ಮುಟ್ಟದಿದ್ದರೂ ಚಿತ್ರ ಸೂಪರ್

    ನಿರೀಕ್ಷೆ ಮಟ್ಟ ಮುಟ್ಟದಿದ್ದರೂ ಚಿತ್ರ ಸೂಪರ್

    ಪ್ರೇಕ್ಷಕರ ನಿರೀಕ್ಷೆ ಹಿಮಾಲಯದಷ್ಟು ಐ ಚಿತ್ರ ಇರುವುದು ಗುಡ್ಡದಷ್ಟು ಎನ್ನಬಹುದಾದರೂ ವಿಕ್ರಮ್ ನಟನೆ, ಪಿಸಿ ಶ್ರೀರಾಮ್ ಛಾಯಾಗ್ರಹಣ, ಅರಸು ಫೈಟಿಂಗ್, ಲೊಕೇಷನ್, ರೆಹಮಾನ್ ಇಂಪಾದ ಸಂಗೀತ(ಕೈಕೊಟ್ಟ ಸಾಹಿತ್ಯ),ದೃಶ್ಯ ವೈಭವದ ನಿರೀಕ್ಷೆ ಮಟ್ಟ ಮುಟ್ಟಿದೆ. ಶಂಕರ್ ಆಯ್ಕೆ ಮಾಡಿದ ಕಥೆ ಹಳೆಯದಾದರೂ ಕಥೆ ಹೇಳಿದ ರೀತಿ ಅವರ ಇತರೆ ಚಿತ್ರಗಳಿಗೆ ಹೋಲಿಸಿದರೆ ಭಿನ್ನವಾಗಿದೆ. ಅಂಟೋನಿ ಸ್ವಲ್ಪ ಕತ್ತರಿ ಪ್ರಯೋಗ ಮಾಡಿದರೆ ಚಿತ್ರ ನಿಜಕ್ಕೂ ಅದ್ಭುತ 4/5, ಓನ್ಲಿ ಕಾಲಿವುಡ್.ಕಾಂ

    ಐ ಎಂದರೆ ಏನು ಎಂಬ ನಿರೀಕ್ಷೆ, ಹುಸಿಯಾಗಿಲ್ಲ

    ಐ ಎಂದರೆ ಏನು ಎಂಬ ನಿರೀಕ್ಷೆ, ಹುಸಿಯಾಗಿಲ್ಲ

    ಐ ಎಂದರೆ ಏನು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇತ್ತು. ಇದಕ್ಕೆ ವೈರಸ್ ಎಂಬ ಉತ್ತರ ಕೊನೆಯಲ್ಲಿ ಸಿಗುತ್ತದೆ. ದೃಶ್ಯ ವೈಭವದ ವಿಷಯದಲ್ಲಿ 'ಐ' ಶಂಕರ್ ಅವರ ಶ್ರೇಷ್ಠ ಚಿತ್ರ ಇರಬಹುದು. ಅದರೆ, ಚಿತ್ರಕಥೆ ನಿರ್ದೇಶನದ ವಿಷಯದಲ್ಲಿ ಕಳಪೆ ಚಿತ್ರ. ಜೊತೆಗೆ ಸಂಕಲನ, ಸಂಭಾಷಣೆ, ಹಿನ್ನೆಲೆ ಸಂಗೀತ ಸೇರಿಸಿಕೊಳ್ಳಬಹುದು. ಮಿಕ್ಕಂತೆ ಪಿಸಿ ಶ್ರೀರಾಮ್, ವಿಕ್ರಮ್,ಏಮಿ ಕ್ಯಾಟ್ ವಾಕ್, ವಸ್ತ್ರ ವಿನ್ಯಾಸ, ಫೈಟಿಂಗ್ ಚಿತ್ರವನ್ನು ಒಮ್ಮೆ ನೋಡುವಂತೆ ಮಾಡುತ್ತದೆ. ರೇಟಿಂಗ್: ಸಾಧಾರಣ; ಸಿಫಿ.ಕಾಂ

    English summary
    Vikram's ambitious project I has finally hit the theatres. The movie is getting highly positive reviews from all over and is already declared as blockbuster. I had a massive release all over the world, in almost 25000 screens. It is the first Tamil movie to have such a wide release. Here the collection of film critics review.
    Thursday, January 15, 2015, 18:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X