For Quick Alerts
  ALLOW NOTIFICATIONS  
  For Daily Alerts

  Cobra Movie Review : ವಿಕ್ರಂ ನಟನೆಯ ಕೋಬ್ರ ಸಿನಿಮಾ ವಿಮರ್ಶೆ

  By ವಿಗ್ನೇಶ್ ವಿಜಯ್ ಕೆಕೆ
  |

  Rating:
  3.0/5

  'ಕೋಬ್ರಾ' ಸಿನಿಮಾದ ಹೆಸರಿನ ಆಯ್ಕೆ ಚೆನ್ನಾಗಿದೆ. ಸಿನಿಮಾದ ನಾಯಕ ಹಾವಿನಂತೆ ತೀಕ್ಷ್ಣ ಆದರೆ ಅಷ್ಟೆ ಜಾಣತನದಿಂದ ಕೈಗೆ ಸಿಗದೆ ಜಾರಿಕೊಳ್ಳುತ್ತಾನೆ. ಆತನ ಬರುವಿಕೆ ಯಾರಿಗೂ ಗೊತ್ತಾಗುವುದಿಲ್ಲ, ಆತ ಹೇಗೆ, ಎಷ್ಟು ವೇಗವಾಗಿ ದಾಳಿ ಮಾಡುತ್ತಾನೆ ಎಂಬುದು ಸಹ ಊಹಿಸಲಸಾಧ್ಯ.

  ಗಣಿತದ ಮೇರು ಪ್ರತಿಭೆಯಾಗಿರುವ ನಾಯಕ ಜೀವನದಲ್ಲಿ ಕೆಲವು ಕಹಿ ನೆನೆಪುಗಳನ್ನು ಸಹ ಹೊಂದಿದ್ದಾನೆ. ಏನೇ ಕ್ಲಿಷ್ಟಕರ ಸನ್ನಿವೇಶಗಳು ಎದುರಾದರೂ ಅವನ್ನು ಗಣಿತದ ಮೂಲಕ ನಿರ್ವಹಿಸುತ್ತಾನೆ. ಸಿನಿಮಾದಲ್ಲಿ ಈ ಬರವಣಿಗೆಗಳು ಅವನ ಯೋಜನೆಗಳನ್ನು ಹಾಸ್ಯದಂತೆ ಕಾಣದಂತೆ ಸಾಕಷ್ಟು ಪ್ರಾಮಾಣಿಕವಾಗಿದೆ. ಪ್ರೇಕ್ಷಕರು ನಂಬುವಂತೆ ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ಆಕ್ಷನ್‌ಗೆ ಕೊರತೆಯಿಲ್ಲ, ಕಥೆಯು ಬುದ್ದಿಜೀವಿಯ ಸುತ್ತ ಸುತ್ತುತ್ತದೆ ಎಂದು ಪರಿಗಣಿಸಬಹುದು. ಆದಾಗ್ಯೂ, ಈ ಬುದ್ಧಿಜೀವಿಯು ಕೆಲವು ಸನ್ನಿವೇಶಗಳನ್ನು ನಿಭಾಯಿಸಲು ಬಾಹುಬಲವನ್ನು ಬಳಸುತ್ತಾನೆ.

  ಈ ಸಿನಿಮಾವು ನಟ ವಿಕ್ರಮ್ ಪ್ರತಿಭೆಗೆ ಸಲ್ಲಿಸಿದ ಗೌರವ ಎನ್ನಬಹುದು. ಭಿನ್ನತೆ, ಏರಿಳಿತವುಳ್ಳ ಮತ್ತು ಆಳ ಭಾವನೆಗಳ ಆಟವುಳ್ಳ ಪಾತ್ರವನ್ನು ವಿಕ್ರಂಗಾಗಿ ಸೃಷ್ಟಿಸಲಾಗಿದೆ. 'ಕೋಬ್ರಾ' ಸಿನಿಮಾ ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದು ಎನ್ನಬಹುದು. ಸಿನಿಮಾದ ನಾಯಕ ಪಾತ್ರದಲ್ಲಿ ವಿಕ್ರಂನ ಹೊರತಾಗಿ ಇನ್ನಾರನ್ನೂ ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲದ ಮಾದರಿಯಲ್ಲಿ ವಿಕ್ರಂ ನಟಿಸಿದ್ದಾರೆ.

  ಕತೆ ಏನು?

  ಕತೆ ಏನು?

  ಸಿನಿಮಾದಲ್ಲಿ ಮಧಿ (ವಿಕ್ರಂ) ಒಬ್ಬ ಗಣಿತ ಶಿಕ್ಷಕ ಕಮ್ ಮಾಫಿಕಾ ಕಿಲ್ಲರ್, ಅವನು ತನ್ನ ಆದಾಯವನ್ನು ಅನಾಥಾಶ್ರಮಗಳು ಮತ್ತು ಚಾರಿಟಿ ಹೋಮ್‌ಗಳಗೆ ನೀಡುತ್ತಿರುತ್ತಾನೆ. ಅವನಿಗೆ ಆಘಾತಕಾರಿ ಬಾಲ್ಯದ ನೆನಪಿದೆ ಅದರಿಂದಾಗಿ ಮಾನಸಿಕ ಸಮಸ್ಯೆಯೊಂದು ಆತನನ್ನು ಕಾಡುತ್ತಿದೆ. ಕತೆಯಲ್ಲಿ, ಶ್ರೀನಿಧಿ ಶೆಟ್ಟಿ ನಟಿಸಿರುವ ಭಾವನಾ ಪಾತ್ರ ತನ್ನೆಡೆ ತೋರಿದ ಪ್ರೀತಿ, ಆಸಕ್ತಿಯನ್ನು ಒಪ್ಪಿಕೊಳ್ಳಬೇಕೋ ಅಥವಾ ತಿರಸ್ಕರಿಸಬೇಕೋ ಎಂಬ ಸಂದಿಗ್ಧತೆಯೊಂದಿಗೆ ಹೋರಾಡುತ್ತಿರುವಾಗಲೇ, ಮಾಧಿ, ತನ್ನನ್ನು ಹುಡುಕಿ ಬರುತ್ತಿರುವ ಇಂಟರ್‌ಪೋಲ್ ಅಧಿಕಾರಿಯೊಬ್ಬನು ನಿಭಾಯಿಸಬೇಕಾಗಿದೆ. ಈ ಮಧ್ಯೆ, ಮಾಧಿಯ ಬುದ್ಧಿವಂತಿಕೆಯಿಂದ ಲಾಭ ಪಡೆದುಕೊಳ್ಳುತ್ತಿರುವ ವ್ಯಕ್ತಿ ತನ್ನನ್ನು ಉಳಿಸಿಕೊಳ್ಳಲು ಮಾಧಿಯನ್ನು ಬಲಿಪಶು ಮಾಡುತ್ತಾನೆ.

  ಅತ್ಯುತ್ತಮವಾಗಿ ನಟಿಸಿರುವ ವಿಕ್ರಮ್

  ಅತ್ಯುತ್ತಮವಾಗಿ ನಟಿಸಿರುವ ವಿಕ್ರಮ್

  ಅತ್ಯುತ್ತಮವಾಗಿ ನಟಿಸಿರುವ ವಿಕ್ರಮ್, ಸಿನಿಮಾದಲ್ಲಿನ ಸೋಷಿಯೋಪಾತ್ ವ್ಯಕ್ತಿತ್ವದ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಬರವಣಿಗೆ ಕೀಳಾಗಿಲ್ಲ ಮತ್ತು ಕತೆಯ ಉದ್ದೇಶಕ್ಕೆ ಧಕ್ಕೆ ಆಗದಂತೆ ನಿರೂಪಣೆ ಮಾಡಲಾಗಿದೆ. ಚಿತ್ರದಲ್ಲಿನ ವಿಕ್ರಮ್ ಅವರ ಅನೇಕ ಅವತಾರಗಳು ವೀಕ್ಷಕರನ್ನು ತೃಪ್ತಿಪಡಿಸುತ್ತವೆ ಮತ್ತು ವಿಕ್ರಮ್‌ ಅನ್ನು ಪ್ರತಿ ಅವತಾರದಲ್ಲೂ ನೋಡಿದಾಗ ಶಿಳ್ಳೆ ಹೊಡೆಯಬೇಕೆನ್ನಿಸುತ್ತದೆ. ನಿರೂಪಣೆಯು ಸುಸಂಬದ್ಧವಾಗಿದೆ ಮತ್ತು ತಾರ್ಕಿಕ ನ್ಯೂನತೆಗಳಿಗೆ ಹೆಚ್ಚು ಅವಕಾಶ ನೀಡಿಲ್ಲ.

  ನಟನೆ ಹೇಗಿದೆ?

  ನಟನೆ ಹೇಗಿದೆ?

  ರಿಷಿ ಪಾತ್ರದಲ್ಲಿ ರೋಷನ್ ಮ್ಯಾಥ್ಯೂ ಉನ್ಮಾದದಲ್ಲಿರುವಂತೆ ನಟಿಸಿದ್ದಾರೆ. ಅವರ ನಟನೆ ಮಜಾ ಕೊಡುತ್ತದೆ. ಒಂದೆರಡು ಕುತೂಹಲಕಾರಿ ಕ್ಷಣಗಳನ್ನು ತೆರೆಯ ಮೇಲೆ ತಂದಿಡುತ್ತಾರೆ. ಇರ್ಫಾನ್ ಪಠಾಣ್ ಇಂಟರ್‌ಪೋಲ್ ಅಧಿಕಾರಿಯಾಗಿ ನಟಿಸಿದ್ದಾರೆ. ಇವರಿಬ್ಬರ ಅಭಿನಯ ಉತ್ತಮವಾಗಿದೆ. ಸಾಮಾನ್ಯ ಮಾದರಿಯ ಸಿನಿಮಾ ಚಿತ್ರಕತೆಗಳನ್ನು ಮುರಿದು ತುಸು ಭಿನ್ನ ರೀತಿಯ ಚಿತ್ರಕತೆಯನ್ನು ಸಿನಿಮಾದಲ್ಲಿ ನೋಡಬಹುದಾಗಿದೆ. ವಿಕ್ರಮ್‌ ಪ್ರತಿಭೆಯನ್ನು ಅದ್ಭುತವಾಗಿ ಬಳಸಿಕೊಳ್ಳಲಾಗಿದೆ. 'ಅನ್ನಿಯನ್' ಮಾದರಿಯಲ್ಲಿಯೇ ಈ ಸಿನಿಮಾದಲ್ಲಿಯೂ ಕೆಲವು ದೃಶ್ಯಗಳಿವೆ.

  ಚಿತ್ರದ ನ್ಯೂನ್ಯತೆ ಏನು?

  ಚಿತ್ರದ ನ್ಯೂನ್ಯತೆ ಏನು?

  ಚಿತ್ರದ ಏಕೈಕ ನ್ಯೂನ್ಯತೆಯೆಂದರೆ ಅದು ತನ್ನ ಥ್ರಿಲ್ಲರ್ ನಿರೂಪಣೆಯ ಸಮರ್ಥವಾಗಿದ್ದರೂ, ಭಾವನಾತ್ಮಕ ದೃಶ್ಯಗಳಲ್ಲಿ ಭಾವವನ್ನು ವಿಫಲವಾಗಿದೆ. ಸಿನಿಮಾದಲ್ಲಿ ಕೆಲವು ಕ್ಷಣಗಳು ಪ್ರೇಕ್ಷಕರನ್ನು ತಾಗುತ್ತವೆ, ಆದರೆ ಕೆಲವು ದೃಶ್ಯಗಳು ಪ್ರೇಕ್ಷಕನ ಮನದಲ್ಲಿ ಪ್ರಭಾವ ಬೀರದೆ ಮುಂದೆ ಸಾಗುತ್ತದೆ. ಸಿನಿಮಾವು ಭಾವುಕತೆಗಿಂತಲೂ ಹೆಚ್ಚಾಗಿ ಬೌದ್ಧಿಕತೆಯನ್ನು ಹೆಚ್ಚು ನಂಬಿಕೊಂಡಿರುವ ಕಾರಣ ಹೀಗಾಗಿರುವ ಸಾಧ್ಯತೆ ಇದೆ. ಚಿತ್ರವು ಆರಂಭದಲ್ಲಿ ವೇಗವಾಗಿ ಚಲಿಸುತ್ತದೆ ಚಕ-ಚಕನೆ ದೃಶ್ಯಗಳು ಓಡುತ್ತವೆ. ಆ ನಂತರ ತುಸು ನಿಧಾನವಾಗುತ್ತದೆಯಾದರೂ ಸಿನಿಮಾದ ಪೂರ್ತಿ ಒಂದು ಸರಾಸರಿ ವೇಗವಂತೂ ಇದೆ. ಸಿನಿಮಾ ವೇಗವಾಗಿರುವ ಕಾರಣದಿಂದಲೋ ಏನೋ ಪಾತ್ರಗಳೊಟ್ಟಿಗೆ ಭಾವನಾತ್ಮಕವಾಗಿ ಪ್ರೇಕ್ಷಕ ಕನೆಕ್ಟ್ ಆಗಲು ಹೆಚ್ಚು ಕಾಲಾವಕಾಶ ದೊರೆತಿಲ್ಲ. ಇದೇ ಕಾರಣಕ್ಕೆ ಚಿತ್ರದ ಕೊನೆಯ ಭಾಗ ಸ್ವಲ್ಪ ಹೆಚ್ಚು ಉದ್ದವಾಗಿದೆ ಎಂದು ಭಾಸವಾಗಿಸುತ್ತದೆ.

  ಸಿನಿಮಾ ನೋಡಬಹುದೆ?

  ಸಿನಿಮಾ ನೋಡಬಹುದೆ?

  ಸಿನಿಮಾದಲ್ಲಿ ಕ್ಯಾಮೆರಾ ಕೆಲಸ ಉತ್ತಮವಾಗಿದೆ. ಸಿನಿಮಾದ ಹಿನ್ನೆಲೆ ಸಂಗೀತ ಹಾಗೂ ಕೆಲವು ಹಾಡುಗಳು ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿರುವುದು ನೆನಪಾಗುವಂತೆ ಮಾಡುತ್ತದೆ. ಆದರೆ ಸಿನಿಮಾದಲ್ಲಿ ಕೆಲವೆಡೆ ಸಿಜಿ ಕೆಲಸ ಚೆನ್ನಾಗಿರಬಹುದಿತ್ತು ಎನಿಸುತ್ತದೆ. ಇನ್ನು ಕೆಲವೆಡೆ ದೃಶ್ಯಗಳು ಇನ್ನಷ್ಟು ತೀಕ್ಷಣಾಗಿಯೂ, ಸುಂದರವಾಗಿಯೂ ಇರಬಹುದಿತ್ತು ಎನಿಸುತ್ತದೆ ಆದರೆ ಒಟ್ಟಾರೆ ಸಿನಿಮಾ ನೀಡುವ ಅನುಭವದ ಮೇಲೆ ಇದು ಹೆಚ್ಚೇನು ಪರಿಣಾಮ ಬೀರುವುದಿಲ್ಲ. ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಕಥೆಗಳನ್ನು ಇಷ್ಟಪಡುವವರಿಗೆ ಇದು ಖಚಿತವಾಗಿ ಉತ್ತಮ ಸಿನಿಮಾ ಆಗಲಿದೆ. ನೀವು ನಾಯಕನ ನಟನೆಯನ್ನು ಮೆಚ್ಚುವಿರಾದರೆ ಇದು ನೋಡಲೇ ಬೇಕಾದ ಸಿನಿಮಾ. ನೀವು ವಿಕ್ರಮ್ ಅವರ ಅಭಿಮಾನಿಯಾಗಿದ್ದರೆ, ಇದು ಖಂಡಿತವಾಗಿಯೂ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ.

  English summary
  Vikram starrer Tamil movie Cobra review in Kannada. Movie released in Tamil, Hindi, Kannada, Telugu, Malayalam languages.
  Thursday, September 1, 2022, 10:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X