For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ' ಮೊದಲ ವಿಮರ್ಶೆ: ಪ್ಯಾನ್ ಇಂಡಿಯಾ ಸಿನಿಮಾದ ಹೈಲೈಟ್ ಏನು?

  |

  ಇಡೀ ಭಾರತದ ಎಲ್ಲಾ ಚಿತ್ರರಂಗದ ಕಣ್ಣು 'ವಿಕ್ರಾಂತ್ ರೋಣ' ಸಿನಿಮಾದ ಮೇಲೆ ನೆಟ್ಟಿದೆ. ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಬಾಕಿ ಇದ್ದು, ಕ್ಷಣ ಕ್ಷಣಕ್ಕೂ ಸಿನಿಮಾ ಬಗ್ಗೆ ಹೆಚ್ಚಾಗುತ್ತಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅದ್ಯಾವವ ದಾಖಲೆ ಮಾಡಬಹುದು ಎಂದು ಎದುರು ನೋಡುತ್ತಿದ್ದಾರೆ.

  ಕಿಚ್ಚ ಸುದೀಪ್ ಸಿನಿಮಾ ಕಳೆದೊಂದು ವಾರದಿಂದ 'ವಿಕ್ರಾಂತ್ ರೋಣ'ಗೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಮುಂಬೈ, ಹೈದರಾಬಾದ್, ಬೆಂಗಳೂರು ಅಂತ ಸುದೀಪ್ ಓಡಾಡುತ್ತಿದ್ದರು. ಇನ್ನು ಒಂದು ದಿನದ ಮಟ್ಟಿಗೆ ದುಬೈಗೂ ಹಾರಲಿದ್ದಾರೆ. ಇಷ್ಟೆಲ್ಲದರ ನಡುವೆ 'ವಿಕ್ರಾಂತ್ ರೋಣ' ಬಿಡುಗಡೆಗೂ ಮುನ್ನವೇ ಮೊದಲ ವಿಮರ್ಶೆ ಹೊರಬಿದ್ದಿದೆ.

  ಪಾಕಿಸ್ತಾನದಲ್ಲೂ ರಿಲೀಸ್ ಆಗುತ್ತಾ 'ವಿಕ್ರಾಂತ್ ರೋಣ'? ನಿರ್ಮಾಪಕರು ಹೇಳಿದ್ದೇನು?ಪಾಕಿಸ್ತಾನದಲ್ಲೂ ರಿಲೀಸ್ ಆಗುತ್ತಾ 'ವಿಕ್ರಾಂತ್ ರೋಣ'? ನಿರ್ಮಾಪಕರು ಹೇಳಿದ್ದೇನು?

  ವಿದೇಶದಲ್ಲಿ ಸಿನಿಮಾ ಯಾವುದೇ ಭಾರತೀಯ ಬಿಡುಗಡೆಯಾಗುತ್ತಿದ್ದರೂ ಅಲ್ಲಿ ಪ್ರತ್ಯೇಕವಾಗಿ ಸೆನ್ಸಾರ್ ಆಗಬೇಕು. ಇದಕ್ಕಾಗಿ ಓವರ್‌ ಸೀಸ್‌ ಸೆನ್ಸಾರ್ ಬೋರ್ಡ್ ಎಂಬ ಸಂಸ್ಥೆ ಕೆಲಸ ಮಾಡುತ್ತಿದೆ. ಈ ಸೆನ್ಸಾರ್ ಬೋರ್ಡ್‌ನ ಸದಸ್ಯ ಉಮೈರ್ ಸಂಧು ವಿದೇಶದಲ್ಲಿ ಬಿಡುಗಡೆಯಾಗುವ ಭಾರತೀಯ ಸಿನಿಮಾಗಳನ್ನು ಮೊದಲು ವೀಕ್ಷಣೆ ಮಾಡುತ್ತಾರೆ. ಇವರು 'ವಿಕ್ರಾಂತ್ ರೋಣ' ಬಗ್ಗೆ ಮೊದಲ ರಿವ್ಯೂ ಕೊಟ್ಟಿದ್ದಾರೆ.

   'ವಿಕ್ರಾಂತ್ ರೋಣ'ಗೆ ಕ್ರೇಜ್

  'ವಿಕ್ರಾಂತ್ ರೋಣ'ಗೆ ಕ್ರೇಜ್

  ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಅದ್ಧೂರಿ ಬಿಡುಗಡೆಗೆ ತುದಿಗಾಲಲ್ಲಿ ನಿಂತಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ಬೆಳ್ಳಿ ಪರದೆ ಮೇಲೆ ಆರ್ಭಟಿಸಲಿದೆ. ಈ ಬೆನ್ನಲೇ ಸಿನಿಪ್ರಿಯರಿಗೆ ಈ ಸಿನಿಮಾ ಹೇಗಿರಬಹುದು ಎನ್ನುವ ಕುತೂಹಲವಿದೆ. ಈ ಮಧ್ಯೆ ದಕ್ಷಿಣ ಭಾರತದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ವರ್ಲ್ಡ್ ವೈಡ್ ಬಾಕ್ಸಾಫೀಸ್‌ನಲ್ಲಿ ದಾಖಲೆ ಸೃಷ್ಟಿಸುತ್ತಾ? ಅನ್ನೋ ಕುತೂಹಲವೂ ಇದೆ. ಈ ಮಧ್ಯೆ ಸಿನಿಮಾ ಬಗ್ಗೆ ಮೊಟ್ಟ ಮೊದಲ ರಿವ್ಯೂ ಹೊರಬಿದ್ದಿದೆ.

  'ವಿಕ್ರಾಂತ್ ರೋಣ' 3Dಯಲ್ಲಿ ರಿಲೀಸ್ ಆಗಲ್ಲ ಅಂದೋರಿಗೆ ಜಾಕ್ ಮಂಜು ತಿರುಗೇಟು!'ವಿಕ್ರಾಂತ್ ರೋಣ' 3Dಯಲ್ಲಿ ರಿಲೀಸ್ ಆಗಲ್ಲ ಅಂದೋರಿಗೆ ಜಾಕ್ ಮಂಜು ತಿರುಗೇಟು!

  'ವಿಕ್ರಾಂತ್ ರೋಣ' ಮೊದಲ ವಿಮರ್ಶೆ

  ಕನ್ನಡದ ಮತ್ತೊಂದು ದುಬಾರಿ ವೆಚ್ಚದ ಪ್ಯಾನ್ ಇಂಡಿಯಾ 'ವಿಕ್ರಾಂತ್ ರೋಣ' ಸಿನಿಮಾದ ಮೊದಲ ವಿಮರ್ಶೆ ಹೊರಬಿದ್ದಿದೆ. ಓವರ್‌ಸೀನ್‌ ಸೆನ್ಸಾರ್ ಬೋರ್ಡ್‌ನ ಸದಸ್ಯ ಒಮೈರ್ ಸಂಧು ವಿಕ್ರಾಂತ್ ರೋಣ ಸಿನಿಮಾವನ್ನು ಈಗಾಗಲೇ ನೋಡಿ ಸಿನಿಮಾ ಬಗ್ಗೆ ಭವಿಷ್ಯ ನುಡಿದಿದ್ದಾರೆ. " ಸೆನ್ಸಾರ್ ಬೋರ್ಡ್‌ನಿಂದ ವಿಕ್ರಾಂತ್ ರೋಣ ಮೊದಲ ವಿಮರ್ಶೆ. 'ವಿಕ್ರಾಂತ್ ರೋಣ' ಕೊಟ್ಟ ಹಣಕ್ಕೆ ಮೋಸವಿಲ್ಲ. ಅನೂಪ್ ಭಂಡಾರಿ ನಿರ್ದೇಶನ ಅದ್ಭುತ. ಹಿಡಿದಿಡುವ ಕಥೆ, ಉಸಿರೆಳೆದುಕೊಳ್ಳುವ ಛಾಯಾಗ್ರಹಣ, ಸಾಹಸ ಸನ್ನಿವೇಶಗಳು, ಥ್ರಿಲ್ಲರ್ ಹಾಗೂ ಭಯ ಹುಟ್ಟಿಸುವ ಸುದೀಪ್ ಉಪಸ್ಥಿತಿ ಅದ್ಭುತ" ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ.

   'ವಿಕ್ರಾಂತ್ ರೋಣ'ಗೆ ಸಿಕ್ಕ ಸ್ಟಾರ್ ಎಷ್ಟು?

  'ವಿಕ್ರಾಂತ್ ರೋಣ'ಗೆ ಸಿಕ್ಕ ಸ್ಟಾರ್ ಎಷ್ಟು?

  ಉಮೈರ್ ಸಂಧು ಇದೂವರೆಗೂ ಸಿನಿಮಾ ಬಗ್ಗೆ ಹೇಳಿದ ಮಾತು ಸುಳ್ಳಾಗಿಲ್ಲ. ಈ ಹಿಂದೆ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ವಿಮರ್ಶೆ ಮಾಡಿದ್ದರು. ಅಲ್ಲು ಅರ್ಜುನ್ 'ಪುಷ್ಪ', ಯಶ್ 'ಕೆಜಿಎಫ್ 2' ಹಾಗೂ ರಾಜಮೌಳಿಯ 'RRR' ಈ ಮೂರು ಸಿನಿಮಾಗಳ ಬಗ್ಗೆ ರಿವ್ಯೂ ಮಾಡಿದ್ದರು. ಆ ಎಲ್ಲಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿವೆ. ಈಗ ಉಮೈರ್ ಸಂಧು ವಿಕ್ರಾಂತ್ ರೋಣ ಮೈಂಡ್ ಬ್ಲೋಯಿಂಗ್ ಎಂದಿದ್ದಾರೆ. ಅಲ್ಲದೆ ಸಿನಿಮಾ 4 ಸ್ಟಾರ್ ಕೊಟ್ಟಿದ್ದು, ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ.

  'ಕೆಜಿಎಫ್ 2' ಮತ್ತು 'ವಿಕ್ರಾಂತ್ ರೋಣ'

  ಉಮೈರ್ ಸಂಧು ಕನ್ನಡ ಸಿನಿಮಾಗಳ ಏಳಿಕೆ ಬಗ್ಗೆನೂ ಟ್ವೀಟ್ ಮಾಡಿದ್ದಾರೆ. "2022ರಲ್ಲಿ ಭಾರತದಲ್ಲಿ ಕನ್ನಡ ಸಿನಿಮಾಗಳು ಅತ್ಯದ್ಬುತವಾಗಿವೆ. ಮೊದಲು 'ಕೆಜಿಎಫ್ ಚಾಪ್ಟರ್ 2' ಈಗ 'ವಿಕ್ರಾಂತ್ ರೋಣ' ಎರಡೂ ಸಿನಿಮಾಗಳೂ ಅತ್ಯದ್ಭುತ. ಅಭಿಮಾನಿಗಳು ಸಂಭ್ರಮ ಪಡುವ ಸಮಯ." ಎಂದು ಟ್ವೀಟ್ ಮಾಡಿದ್ದಾರೆ. ಒಂದು ವೇಳೆ ಮತ್ತೆ ಉಮೈರ್ ಸಂಧು ಭವಿಷ್ಯ ನಿಜವಾದರೆ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಸಿಗೋದು ಗ್ಯಾರಂಟಿ.

  Recommended Video

  ಹೆಂಡತಿ ಕೈ ಹಿಡಿದು ಬರಮಾಡಿಕೊಂಡ ಸುದೀಪ್ | Vikrant Rona | Kiccha Sudeep | Priya Sudeep | *Press Meet

  English summary
  Vikrant Rona First Review By Overseas Censor Board Member Umair Sandhu, Know More.
  Wednesday, July 27, 2022, 12:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X