War-2 Twitter Review: 'ಕೂಲಿ' ಎದುರು ಹೃತಿಕ್-ತಾರಕ್ ಗೆಲ್ತಾರಾ? 'ವಾರ್‌-2' ಟ್ವಿಟ್ಟರ್ ರಿವ್ಯೂ

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲೇ 'ಕೂಲಿ' ಜೊತೆ ಬಾಲಿವುಡ್ 'ವಾರ್- 2' ಸಿನಿಮಾ ತೆರೆಕಂಡಿದೆ. ಅಡ್ವಾನ್ಸ್ ಬುಕಿಂಹಗ್ ವಿಚಾರದಲ್ಲಿ ರಜನಿಕಾಂತ್ ಕ್ರೇಜ್ ಮುಂದೆ ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ 'ವಾರ್' ನಡೀಲಿಲ್ಲ. ಇದೀಗ ಸಿನಿಮಾ ತೆರೆ ಕಂಡಿದೆ. ಬೆಳ್ಳಂಬೆಳಗ್ಗೆ ಅಭಿಮಾನಿಗಳು ಸಿನಿಮಾ ನೋಡಿದ್ದಾರೆ. ಟ್ವಿಟ್ಟರ್‌ನಲ್ಲಿ ರಿವ್ಯೂ ಬರೆದುಕೊಂಡಿದ್ದಾರೆ.

ಅಯಾನ್ ಮುಖರ್ಜಿ ನಿರ್ದೇಶನದ ಸ್ಪೈ ಥ್ರಿಲ್ಲರ್ ಸಿನಿಮಾ ಇದು. ಕಿಯಾರಾ ಅದ್ವಾನಿ ನಾಯಕಿಯಾಗಿ ನಟಿಸಿದ್ದಾರೆ. ಯಶ್ ರಾಜ್‌ ಫಿಲ್ಮ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದೆ. ತೆಲುಗು ನಟ ಜ್ಯೂ. ಎನ್‌ಟಿಆರ್ ಈ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದಾರೆ. ಹೃತಿಕ್ ಎದುರು ಅಬ್ಬರಿಸಿದ್ದಾರೆ. ತಾರಕ್ ಕಾರಣಕ್ಕೆ ಅತ್ತ ಆಂಧ್ರ, ತೆಲಂಗಾಣದಲ್ಲಿ ಕೂಡ ಸಿನಿಮಾ ಕುತೂಹಲ ಮೂಡಿಸಿತ್ತು.

War-2 Twitter Review  Hrithik Roshan-Jr NTR s Action Flick Gets Mixed Response

ಬಾಕ್ಸಾಫೀಸ್‌ನಲ್ಲಿ 'ಕೂಲಿ' ಹಾಗೂ 'ವಾರ್- 2' ಎರಡೂ ಚಿತ್ರಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಒಂದ್ಕಾಲದಲ್ಲಿ ರಜನಿಕಾಂತ್ ಜೊತೆ ಬಾಲನಟನಾಗಿ ಹೃತಿಕ್ ನಟಿಸಿದ್ದರು. ಇದೀಗ ಇಬ್ಬರ ಸಿನಿಮಾ ಬಾಕ್ಸಾಫೀಸ್‌ ಅಂಗಳದಲ್ಲಿ ಎದುರುಬದಿರಾಗಿರುವುದು ವಿಶೇಷ. ಸಿನಿಮಾ ಸಿನಿಮಾ ನೋಡಿದವರು ಏನಂತಾರೆ ಮುಂದೆ ಓದಿ.

ಕೆಟ್ಟ ಸಿನಿಮಾ

"ವಾರ್-2 ಸಿನಿಮಾ ನೋಡುವುದು ಬಹಳ ಟಾರ್ಚರ್. ಕೇವಲ ಜೋರು ಸಂಗೀತ, ಸ್ಲೋ-ಮೋಷನ್ ಎಂಟ್ರಿಗಳು, ಅಷ್ಟೇ. ಕಥೆ ದುರ್ಬಲವಾಗಿದೆ. ಕಳಪೆ VFX ಮತ್ತು ಊಹಿಸಬಹುದಾದ ಟ್ವಿಸ್ಟ್‌ಗಳು. ಹೃತಿಕ್ ರೋಷನ್ ಅಭಿನಯ ಸಪ್ಪೆ ಎನಿಸುತ್ತಿದೆ. ಜ್ಯೂ. NTR ನಟನೆ ಚೆನ್ನಾಗಿದೆ. ಬಾಲಿವುಡ್ ಸ್ಪೈ ಯೂನಿವರ್ಸ್‌ನಲ್ಲಿ 'ವಾರ್- 2' ಕೆಟ್ಟ ಚಿತ್ರ. ಅಷ್ಟೇ ಅಲ್ಲ ಇತ್ತೀಚೆಗೆ ಬಂದು ಅತ್ಯಂತ ಕೆಟ್ಟ ಆಕ್ಷನ್ ಚಿತ್ರವಾಗಿದೆ" ಎಂದು ಸಲ್ಮಾನ್ ಎಂಬುವವರಯ ಬರೆದುಕೊಂಡಿದ್ದಾರೆ.

ಫಸ್ಟ್ ಹಾಫ್ ಚೆನ್ನಾಗಿದೆ. ಸೆಕೆಂಡ್ ಹಾಫ್ ನಿಧಾನವಾಗಿ ಆರಂಭವಾಗುತ್ತದೆ. ಕ್ಲೈಮ್ಯಾಕ್ಸ್ ತೃಪ್ತಿ ಕೊಡಿವಂತಿದೆ. ಒಟ್ಟಾರೆ ಎನ್‌ಟಿಆರ್ ಅಭಿಮಾನಿಯಾಗಿ ಹೀರೊವನ್ನು ತೋರಿಸಿರುವ ಬಗೆ ಸೂಪರ್ ಎನಿಸಿತು. ಹಿಂದೆಂದೂ ನೋಡಿರದ ಲುಕ್ಸ್‌ನಲ್ಲಿ ತೋರಿಸಿರುವುದು ಚೆನ್ನಾಗಿದೆ ಎಂದು ಲೋಕೇಶ್ ಟ್ವೀಟ್ ಮಾಡಿದ್ದಾರೆ.

ಆತ್ಮವೇ ಇಲ್ಲ

ಬಾಲಿವುಡ್ ಖ್ಯಾತ ಚಿತ್ರ ವಿಮರ್ಶಕ, ಬಾಕ್ಸಾಫೀಸ್ ಪಂಡಿತ ತರಣ್ ಆದರ್ಶ್ ಕೂಡ ವಾರ್-2 ರಿವ್ಯೂ ಕೊಟ್ಟಿದ್ದಾರೆ. "ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಸಿನಿಮಾ ನಿರಾಸೆ ಮೂಡಿಸುತ್ತದೆ. ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನಲ್ಲೇ ಬಹಳ ಕೆಟ್ಟ ಸಿನಿಮಾ. ಸ್ಟಾರ್ ಪವರ್, ದೊಡ್ ಸ್ಕೇಲ್, ಸ್ಟೈಲ್, ಸ್ಟಂಟ್ಸ್ ಎಲ್ಲಾ ಇದ್ದರೂ ಚಿತ್ರಕ್ಕೆ ಆತ್ಮವೇ ಇಲ್ಲ. ಬರವಣಿಗೆ ಅದಕ್ಕೆ ಮುಖ್ಯ ಕಾರಣ. ಹೃತಿಕ್- ತಾರಕ್ ನಟನೆ ಕೂಡ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

ಒಟ್ಟಾರೆ ಒಳ್ಳೆ ಸಿನಿಮಾ

"ಫಸ್ಟ್ ಹಾಫ್ ಹೃತಿಕ್ ಎಂಟ್ರಿ ಸಿಂಪಲ್ ಆಗಿದೆ. ಮೊದಲ ಅರ್ಧ ಗಂಟೆಯಲ್ಲಿ ಕಥೆ ಏನು ಎಂದು ಅರ್ಥವಾಗಿಬಿಡುತ್ತದೆ. ಎನ್‌ಟಿಆರ್ ಎಂಟ್ರಿ ಸೂಪರ್. ಆಕ್ಷನ್ ಸನ್ನಿವೇಶಗಳು, ಕ್ಯಾಮರಾ ವರ್ಕ್, ಡ್ಯಾನ್ಸ್ ನಂಬರ್, ಬಿಜಿಎಂ ಚೆನ್ನಾಗಿದೆ. ಇಂಟರ್‌ವಲ್ ಕೂಡ ಸೂಪರ್. ಸೆಕೆಂಡ್ ಹಾಫ್ ಫ್ಲ್ಯಾಶ್‌ಬ್ಯಾಕ್, ಕಿಯಾರಾ ನಟನೆ, ಟ್ವಿಸ್ಟ್‌ಗಳು, ಭಾವನಾತ್ಮಕ ಸನ್ನಿವೇಶಗಳು ಚೆನ್ನಾಗಿದೆ. ಮೊದಲ ಭಾಗಕ್ಕೆ ಹೋಲಿಸಿದರೆ 2ನೇ ಭಾಗದಲ್ಲಿ ಎನ್‌ಟಿಆರ್‌ಗೆ ಅವಕಾಶ ಕಮ್ಮಿ. ಕ್ಲೈಮ್ಯಾಕ್ಸ್ ಚೆನ್ನಾಗಿದೆ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಪ್ಲಸ್ & ಮೈನಸ್

ಚಿಂಪ್ಟು ಬಾಬು ಎಂಬುವವರು 'ವಾರ್-2' ಸಿನಿಮಾ ನೋಡಿ ಪ್ಲಸ್ ಏನು? ಮೈನಸ್ ಏನು? ಎಂದು ಟ್ವೀಟ್ ಮಾಡಿದ್ದಾರೆ. ಹೃತಿಕ್, ತಾರಕ್, ಕಿಯಾರಾ ನಟನೆ, ಆಕ್ಷನ್ ಸನ್ನಿವೇಶಗಳು, ಸಲಾಂ ಅನಾಲಿ ಸಾಂಗ್, ಗುಡ್ ಫಸ್ಟ್ ಹಾಫ್ ಎಂದು ಪಾಸಿಟಿವ್ ಅಂಶಗಳನ್ನು ಪಟ್ಟಿ ಮಾಡಿದ್ದಾರೆ. ಎಮೋಷನ್ಸ್ ಮಿಸ್ ಆಗಿದೆ. ಬಾಲ್ಯದ ಸನ್ನಿವೇಶಗಳು ದುರ್ಬಲವಾಗಿದೆ. ಸೆಕೆಂಡ್ ಹಾಫ್ ಅಷ್ಟೇನು ಚೆನ್ನಾಗಿಲ್ಲ ಎಂದು ನೆಗೆಟಿವ್ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.

More from Filmibeat

English summary
War-2 X Review: Hrithik Roshan-Jr NTR's action film leave netizens divided;
Read more about: hrithik roshan ntr bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X