twitter
    For Quick Alerts
    ALLOW NOTIFICATIONS  
    For Daily Alerts

    Yajamana Review : ಮನೆಗೆ ಯಜಮಾನ.. ಮಾರ್ಕೆಟ್ ಗೆ ಸುಲ್ತಾನ..

    |

    'ಯಜಮಾನ' ಚಿತ್ರ ಎಲ್ಲ ರೀತಿಯ ಮನರಂಜನೆಯ ಅಂಶಗಳ ಮಿಶ್ರಣ. ಬೆಳೆ ಬೆಳೆದ ರೈತನೇ ನಿಜವಾದ 'ಯಜಮಾನ' ಎಂದು ಹೇಳುವ ಈ ಸಿನಿಮಾ ಕೆಲ ಸೂಕ್ಷ್ಮ ವಿಷಯಗಳನ್ನು ಕಮರ್ಶಿಯಲ್ ಶೈಲಿಯಲ್ಲಿ ಹೇಳಿದೆ. ಮಜಾ ನೀಡೋ ಹಾಡು, ಥ್ರಿಲ್ ನೀಡುವ ಫೈಟುಗಳ ಜೊತೆಜೊತೆಗೆ ಫ್ಯಾಮಿಲಿ ಹಾಗೂ ಊರಿನ ಕಥೆ ಇರುವ 'ಯಜಮಾನ' ದರ್ಶನ್ ಅಭಿಮಾನಿಗಳಿಗೆ ಮೋಸ ಮಾಡುವುದಿಲ್ಲ.

    Rating:
    3.5/5
    Star Cast: ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯ ಹೂಪ್
    Director: ವಿ ಹರಿಕೃಷ್ಣ, ಪಿ ಕುಮಾರ್

    ಒಂದು ಸಾಲಿನ ಕಥೆ

    ಒಂದು ಸಾಲಿನ ಕಥೆ

    'ಹುಲಿದುರ್ಗ'ದಲ್ಲಿ ರೈತರು ತಾವೇ ಬೆಳೆ ಬೆಳೆದು ಎಣ್ಣೆ ತಯಾರಿಸುತ್ತಿರುತ್ತಾರೆ. ಒಮ್ಮೆ ಅಲ್ಲಿಗೆ ಗೋಲ್ಡನ್ ಈಗಲ್ ಎಂಬ ದೊಡ್ಡ ಕಂಪನಿ ರೈತರ ಎಣ್ಣೆಯನ್ನು ಕೊಂಡುಕೊಳ್ಳಲು ಬರುತ್ತದೆ. ಇದನ್ನು ಕೃಷ್ಣ (ದರ್ಶನ್) ವಿರೋಧ ಮಾಡುತ್ತಾನೆ. ನಂತರ ಅಂತಹ ದೊಡ್ಡ ಕಂಪನಿ ಎದುರು ಕೃಷ್ಣನ ನಂದಿ ಬ್ರಾಂಡ್ ಎಣ್ಣೆ ಹೇಗೆ ಗೆಲ್ಲುತ್ತದೆ ಎನ್ನುವುದೇ ಚಿತ್ರದ ಕಥೆ.

    'ಯಜಮಾನ' ಸಿನಿಮಾವನ್ನು ಯಾರಾದ್ರೂ ಪೈರಸಿ ಮಾಡಿದ್ರೆ ಹೀಗೆ ಮಾಡಿ'ಯಜಮಾನ' ಸಿನಿಮಾವನ್ನು ಯಾರಾದ್ರೂ ಪೈರಸಿ ಮಾಡಿದ್ರೆ ಹೀಗೆ ಮಾಡಿ

    ಊರಿನ 'ಯಜಮಾನ', ಮುಂಬೈಗೆ ಸುಲ್ತಾನ

    ಊರಿನ 'ಯಜಮಾನ', ಮುಂಬೈಗೆ ಸುಲ್ತಾನ

    ಊರಿನ ನಾಯಕ ಹುಲಿಯ (ದೇವರಾಜ್) ಎಣ್ಣೆ ಮಾರಾಟಗಾರರ ಸಂಘದ ಅಧ್ಯಕ್ಷ. ಬಾಲ್ಯದಲ್ಲಿಯೇ ಕೃಷ್ಣ (ದರ್ಶನ್), 'ನಿಮ್ಮ ಮಗಳು ಕಾವೇರಿನೂ (ರಶ್ಮಿಕಾ ಮಂದಣ್ಣ) ನಂದೇ.. ಬೆಂಜ್ ಕಾರೂ ನಂದೇ..' ಅಂತ ಹೇಳಿರುತ್ತಾನೆ. ಊರಿನ ಜನರ ಕಷ್ಟದಲ್ಲಿ 'ಯಜಮಾನ'ನಾಗಿ ಮುಂದೆ ನಿಲ್ಲುವ ಕೃಷ್ಣ ಮುಂದೆ ಮುಂಬೈ ಆಯಿಲ್ ವ್ಯವಹಾರದಲ್ಲಿ ಸುಲ್ತಾನ ಆಗುತ್ತಾನೆ. ತಮ್ಮ ಊರಿನ ರೈತರನ್ನು ಯಜಮಾನ ಮಾಡುತ್ತಾನೆ.

    ಥಿಯೇಟರ್ ಮುಂದೆ ನಿಂತ ಜೂನಿಯರ್ 'ಯಜಮಾನ'.! ಎಲ್ಲಿದು?ಥಿಯೇಟರ್ ಮುಂದೆ ನಿಂತ ಜೂನಿಯರ್ 'ಯಜಮಾನ'.! ಎಲ್ಲಿದು?

    ದಾಸ ಅಭಿಮಾನಿಗಳಿಗೆ ಖಾಸ

    ದಾಸ ಅಭಿಮಾನಿಗಳಿಗೆ ಖಾಸ

    ದರ್ಶನ್ ಈ ಸಿನಿಮಾದಲ್ಲಿ ಮಾಸ್ ಪ್ರೇಕ್ಷಕರಿಗೆ ಮಾಸ್ ಹೀರೋ ಆಗಿ, ಕ್ಲಾಸ್ ಪ್ರೇಕ್ಷಕರಿಗೆ ಮನೆ ಹುಡುಗನಾಗಿ ಇಷ್ಟ ಆಗುತ್ತಾರೆ. ಕೃಷ್ಣ ಪಾತ್ರದಲ್ಲಿ ದರ್ಶನ್ ಸರಳತೆಯ ಶ್ರೀಮಂತನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರ ಡ್ಯಾನ್ಸ್ ಕೂಡ ಸಖತ್ ಇದೆ. ದರ್ಶನ್ ನಟನೆ ನೋಡಿದ ಮೇಲೆ ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ, 'ದಾಸ ಅಭಿಮಾನಿಗಳಿಗೆ ಖಾಸ'.

    ಕಾವೇರಿ, ಗಂಗಾ, ಮಿಠಾಯಿ ಸೂರಿ ಇತರರು

    ಕಾವೇರಿ, ಗಂಗಾ, ಮಿಠಾಯಿ ಸೂರಿ ಇತರರು

    ಕಾವೇರಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಇಷ್ಟ ಆಗುತ್ತಾರೆ. ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿರುವ ಅವರು ತಮ್ಮ ವೈಯಾರದ ಮೂಲಕ ಮೋಡಿ ಮಾಡಿದ್ದಾರೆ. ಗಂಗಾ ಆಗಿ ತಾನ್ಯ ಹೂಪ್ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರದ್ದು ನ್ಯೂಸ್ ರಿಪೋರ್ಟರ್ ಪಾತ್ರ. ಆದರೆ, ಇದೇ ಗಂಗಾ ಬಸಣ್ಣಿಯಾಗಿ ಕುಣಿದಿದ್ದಾರೆ. ಮಿಠಾಯಿ ಸೂರಿ ಸಿಹಿಯಾಗಿದ್ದಾನೆ. ವಿಲನ್ ಠಾಕೂರ್ ಅನೂಪ್ ಸಿಂಗ್ ಅಬ್ಬರ ನೋಡಲೇಬೇಕು. ಉಳಿದಂತೆ, ದೇವರಾಜ್, ರವಿಶಂಕರ್, ದತ್ತಣ್ಣ, ಸಾಧು ಕೋಕಿಲ, ಸಂಜು ಬಸಯ್ಯ ಹೀಗೆ ಎಲ್ಲ ಪಾತ್ರಗಳು ಅಚ್ಚುಕಟ್ಟಾಗಿದೆ.

    ಸಂಗೀತಕ್ಕೆ ಹರಿಕೃಷ್ಣ ಸುಲ್ತಾನ

    ಸಂಗೀತಕ್ಕೆ ಹರಿಕೃಷ್ಣ ಸುಲ್ತಾನ

    'ಯಜಮಾನ' ಸಿನಿಮಾದ ತೆರೆ ಹಿಂದಿನ ಸುಲ್ತಾನ ಹರಿಕೃಷ್ಣ. ಅವರ ಸಂಗೀತದ ಐದೂ ಹಾಡುಗಳು ಹಿಟ್ ಆಗಿವೆ. ವಿಶೇಷವಾಗಿ ಹಿನ್ನಲೆ ಸಂಗೀತ ಸಿನಿಮಾದ ಜೊತೆಗೆ ಪ್ರೇಕ್ಷಕರ ಸುಖಕರ ಪ್ರಯಾಣಕ್ಕೆ ಸಹಾಯ ಮಾಡಿದೆ. ಹಿನ್ನಲೆ ಸಂಗೀತದಿಂದ ದೃಶ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿವೆ. ಸಂಗೀತ ಮಾತ್ರವಲ್ಲದೆ ನಿರ್ದೇಶಕನಾಗಿಯೂ ಹರಿಕೃಷ್ಣ ಚೆಪ್ಪಾಳೆ ಪಡೆದಿದ್ದಾರೆ.

    ಸಂಭಾಷಣೆಯ ಸೊಗಸು

    ಸಂಭಾಷಣೆಯ ಸೊಗಸು

    ಮಾಸ್ ಸಿನಿಮಾದಲ್ಲಿ ಡೈಲಾಗ್ ಗಳು ಉಪ್ಪಿನಕಾಯಿಯಂತೆ. ಈ ಸಿನಿಮಾದಲ್ಲಿ ದರ್ಶನ್ ಬಾಯಿಂದ ಸಾಕಷ್ಟು ಸೂಪರ್ ಡೈಲಾಗ್ ಗಳು ಬರುತ್ತದೆ. ಅಂತಹ ಪ್ರತಿ ಡೈಲಾಗ್ ಗಳು ಕೂಡ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತದೆ. 'ಸ್ವತಃ ಬ್ರಾಂಡು', 'ಏ ಕ್ಯಾಬರಿಸ್' ಈ ಎಲ್ಲ ಡೈಲಾಗ್ ಗಳು ಯಾರಿಗೆ ಹೇಳಿದ್ದು ಎನ್ನುವುದಕ್ಕೆ ಸಿನಿಮಾದಲ್ಲಿ ಉತ್ತರವಿದೆ. 'ಬಹದ್ದೂರ್' ಚೇತನ್ ಕುಮಾರ್ ಬರವಣಿಗೆ ಸಿನಿಮಾದ ತೂಕವನ್ನು ಹೆಚ್ಚು ಮಾಡಿದೆ.

    ಕೆಲ ತಪ್ಪುಗಳು ಇವೆ

    ಕೆಲ ತಪ್ಪುಗಳು ಇವೆ

    ಸಿನಿಮಾದಲ್ಲಿ ಕೆಲವು ತಪ್ಪುಗಳು ಕೂಡ ಪ್ರೇಕ್ಷಕರಿಗೆ ತಿಳಿದುಬಿಡುತ್ತದೆ. ಅನಗತ್ಯ ಕಾಮಿಡಿ ಸನ್ನಿವೇಶ, ಯಾವುದೇ ಹಿನ್ನಲೆ ಇಲ್ಲದೆ ಬಸಣ್ಣಿ ಹಾಡು ಬರುವುದು, ಸಿನಿಮಾ ಅವಧಿ ಜಾಸ್ತಿ ಇರುವುದು, ಅಗತ್ಯಕ್ಕಿಂತ ಹೆಚ್ಚು ಆಕ್ಷನ್ ದೃಶ್ಯಗಳು ಹೀಗೆ ಕೆಲವು ತಪ್ಪುಗಳು ಸಿನಿಮಾದಲ್ಲಿವೆ. ಆದರೂ, ಇದು ನೋಡಬಹುದಾದ ಸಿನಿಮಾ.

    ಇದು ಅಭಿಮಾನಿಗಳ ಸಿನಿಮಾ

    ಇದು ಅಭಿಮಾನಿಗಳ ಸಿನಿಮಾ

    ಒಂದುವರೆ ವರ್ಷದಿಂದ ಕಾಯುತ್ತಿದ್ದ ದರ್ಶನ್ ಅಭಿಮಾನಿಗಳು ಮಿಸ್ ಮಾಡದೆ ಈ ಸಿನಿಮಾ ನೋಡಿ. ಹೆಚ್ಚು ವೈಭವಿಕರಣ ಇಲ್ಲದ ಸೀದಾಸಾಧ 'ಯಜಮಾನ' ಫ್ಯಾಮಿಲಿ ಸಮೇತ ನೋಡಬಹುದಾದ ಸಿನಿಮಾ. ಒಂದು ಒಳ್ಳೆಯ ಮನರಂಜನೆ ಸಿನಿಮಾ ಆಗುವ ಎಲ್ಲ ಲಕ್ಷಣ 'ಯಜಮಾನ'ನಿಗೆ ಇದೆ.

    English summary
    Challenging star Darshan and Rashmika Mandanna's most expected movie 'Yajamana' review. The movie is a mass and family entertainer. Song and action scenes are highlight in this movie.
    Friday, March 1, 2019, 12:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X