ವಿಮರ್ಶಕರ ಲೆಕ್ಕಾಚಾರದಲ್ಲಿ 'ಯಜಮಾನ' ಹೇಗಿದೆ: ಯಾವ ಪತ್ರಿಕೆ ಏನು ಹೇಳಿದೆ?

ಸುಮಾರು ಒಂದೂವರೆ ವರ್ಷದ ನಂತರ ತೆರೆಮೇಲೆ ಅಬ್ಬರಿಸಿದ ದರ್ಶನ್ ಅವರನ್ನ ನೋಡಿ ಅಭಿಮಾನಿ ಬಳಗ ಉಘೆ ಉಘೇ ಎಂದಿದೆ. ಲೇಟ್ ಆಗಿ ಬಂದ್ರು ಭರ್ಜರಿಯಾಗಿ ಬಂದಿದ್ದಾರೆ ನಮ್ಮ ಯಜಮಾನ್ರು ಎಂದು ಬೀಗುತ್ತಿದ್ದಾರೆ ಡಿ ಫ್ಯಾನ್ಸ್.

ಸಹಜವಾಗಿ ಯಜಮಾನ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲೊಂದು ಇಲ್ಲೊಂದು ನ್ಯೂನತೆಗಳು ಕಂಡು ಬಂದರೂ ಅದನ್ನ ಮರೆಸುವಂತೆ ಸಿನಿಮಾ ಮಾಡಲಾಗಿದೆ ಎಂಬ ಟಾಕ್ ಇದೆ.

ಆದ್ರೆ, ಸಿನಿಮಾಗಳನ್ನ ಸೂಕ್ಷ್ಮವಾಗಿ ಗಮನಿಸುವ ವಿಮರ್ಶಕರಿಗೆ ಯಜಮಾನ ಇಷ್ಟ ಆಯ್ತಾ? ದರ್ಶನ್ ಸಿನಿಮಾ ಅಂತ ಹೋಗಿದ್ದ ಸಿನಿಮಾ ಜರ್ನಲಿಸ್ಟ್ ಗಳಿಗೆ ಯಜಮಾನ ಖುಷಿ ಕೊಟ್ನಾ? ಇಂದಿನ ದಿನಪತ್ರಿಕೆಗಳಲ್ಲಿ ಯಜಮಾನ ಬಗ್ಗೆ ವಿಮರ್ಶೆ ಹೇಗೆ ಬಂದಿದೆ? ಮುಂದೆ ಓದಿ....

ಡೈಲಾಗ್‌ಗಳ ಮೂಲಕ ಧೂಳೆಬ್ಬಿಸುವ ಸಿನಿಮಾ

ಡೈಲಾಗ್‌ಗಳ ಮೂಲಕ ಧೂಳೆಬ್ಬಿಸುವ ಸಿನಿಮಾ

''ದರ್ಶನ್ ಸಿನಿಮಾಗಳಿಗೆ ಕಮರ್ಷಿಯಲ್ ಬ್ರ್ಯಾಂಡ್ ಇರುತ್ತದೆ. ಆ ಬ್ರ್ಯಾಂಡ್ ಗೆ ಒಂದೊಳ್ಳೆ ಕಥೆಯ ಲೇಬಲ್‌ ಅಂಟಿಸಿದರೆ ಯಜಮಾನ ಥರದ ಸಿನಿಮಾವಾಗುತ್ತದೆ. ಈ ಸಬ್ಜೆಕ್ಟ್ ಕನ್ನಡಕ್ಕೆ ಹೊಸದೇ ,ಆದರೆ ಹೇಳಿರುವ ರೀತಿ ಮಾತ್ರ ಹಳೆಯದು. ನಿರ್ದೇಶಕ ದ್ವಯರು ಚಿತ್ರಕಥೆಯನ್ನು ಇನ್ನಷ್ಟು ರೋಚಕಗೊಳಿಸಬಹುದಿತ್ತು. ಪ್ರೇಕ್ಷಕ ಊಹಿಸಿ ಬಿಡುಬಹುದಾಂತಹ ಸಾಕಷ್ಟು ದೃಶ್ಯಗಳು ಸಿನಿಮಾದಲ್ಲಿವೆ. ಆದರೆ ಕಥೆ ಚಿತ್ರಕಥೆ ಇವೆಲ್ಲವನ್ನು ಮೀರಿಸುವುದು ಸಿನಿಮಾದ ಡೈಲಾಗ್‌ಗಳು. ಅಭಿಮಾನಿಗಳು ಹಬ್ಬವನ್ನು ಆಚರಿಸುವಂತಹ ಡೈಲಾಗ್‌ ಬರೆದಿದ್ದಾರೆ ಭರ್ಜರಿ ಚೇತನ್‌. ಅದರಲ್ಲೂ ವಿಲನ್, ಸುಲ್ತಾನ ಎಂಬಂತಹ ಡೈಲಾಗ್‌ಗಳಿಗೆ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಾರೆ. ಸಿನಿಮಾದ ಕ್ಲೈಮ್ಯಾಕ್ಸ್ ಮತ್ತು ಹಿನ್ನೆಲೆ ಸಂಗೀತ ‘ಕತ್ತಿ'ಯಂತೆ ಹರಿತವಾಗಿದೆ'' - ವಿಜಯ ಕರ್ನಾಟಕ

ಅಭಿಮಾನದ ಬ್ರ್ಯಾಂಡ್​ ಸಿಕ್ಕಾಪಟ್ಟೆ ಸೌಂಡು

ಅಭಿಮಾನದ ಬ್ರ್ಯಾಂಡ್​ ಸಿಕ್ಕಾಪಟ್ಟೆ ಸೌಂಡು

''ದರ್ಶನ್ ಸಿನಿಮಾಗಳೆಂದರೆ, ಅಲ್ಲಿ ಕಮರ್ಷಿಯಲ್ ಅಂಶಗಳಿಗೆ ಯಾವುದೇ ಕೊರತೆಯಿರುವುದಿಲ್ಲ. ಫೈಟು, ಹಾಡು, ಡಾನ್ಸ್, ಪಂಚಿಂಗ್ ಡೈಲಾಗ್ಸು.. ಎಲ್ಲವೂ ಸಮಪ್ರಮಾಣದಲ್ಲಿ ಮಿಶ್ರಿತಗೊಂಡಿರುತ್ತವೆ. ಅದೆಲ್ಲವೂ ‘ಯಜಮಾನ'ದಲ್ಲಿವೆ. ಜತೆಗೆ ಒಂದು ಸಾಮಾಜಿಕ ಸಂದೇಶವೂ ಇದೆ. ಅದು ನೋಡುಗರ ಮನತಟ್ಟುತ್ತದೆ! ಒಂದು ಸರಳ ಕಥೆಗೆ ಹರಿಕೃಷ್ಣ ಮತ್ತು ಪಿ. ಕುಮಾರ್ ಮಾಸ್ ಪ್ರೇಕ್ಷಕರು ಬಯಸುವಂತಹ ಅಂಶಗಳನ್ನು ಯಥೇಚ್ಛವಾಗಿ ಸೇರಿಸಿದ್ದಾರೆ. ಐದು ಫೈಟ್​ಗಳು ಮತ್ತು ಪಂಚಿಂಗ್ ಸಂಭಾಷಣೆಗಳ (ಚೇತನ್​ಕುಮಾರ್) ಮೂಲಕ ದರ್ಶನ್ ಅಭಿಮಾನಿಗಳಿಂದ ಭರ್ಜರಿ ಶಿಳ್ಳೆ, ಚಪ್ಪಾಳೆಯನ್ನು ಗಿಟ್ಟಿಸುತ್ತಾರೆ. ಹಾಡುಗಳು ಗುನುಗುವಂತಿದ್ದರೆ, ಹಿನ್ನೆಲೆ ಸಂಗೀತದ ಕೆಲವೊಂದು ಬಿಟ್​ಗಳು ತಮಿಳಿನ ಸಿನಿಮಾವೊಂದನ್ನು ನೆನಪಿಸುತ್ತವೆ'' - ವಿಜಯವಾಣಿ

ಅನ್ನದಾತರ ಬದುಕು ಬಿಂಬಿಸುವ ಯಜಮಾನ

ಅನ್ನದಾತರ ಬದುಕು ಬಿಂಬಿಸುವ ಯಜಮಾನ

''ಒಂದೂವರೆ ವರ್ಷದ ಬಳಿಕ ತೆರೆಯ ಮೇಲೆ ಬಂದಿರುವ ದರ್ಶನ್ ಖಡಕ್ ಡೈಲಾಗ್ ಗಳ ಮೂಲಕ ಅಭಿಮಾನಿಗಳಿಗೆ ರಸದೌತಣ ಉಣಬಡಿಸುತ್ತಾರೆ. ಚಿತ್ರದ ಮೊದಲಾರ್ಧ ಎಣ್ಣೆ ಬೆಳೆಗಾರರ ಸಂಕಷ್ಟ, ನಾಯಕ-ನಾಯಕಿ ಪ್ರೇಮದಾಟ, ಹಾಡುಗಳು ಭರ್ಜರಿ ಫೈಟಿಂಗ್ ನಡುವೆ ಕಳೆದುಹೋಗುತ್ತದೆ. ದ್ವಿತೀಯಾರ್ಧದಲ್ಲಿ ಕಥೆ ಮುಂಬೈನ ಬೀದಿಗೆ ಜಿಗಿಯುತ್ತದೆ. ದರ್ಶನ್ ಖಡಕ್ ಡೈಲಾಗ್ ಗಳ ಮೂಲಕ ಮಿಂಚು ಹರಿಸುತ್ತಾರೆ. ಖಳನಟನಾಗಿ ಅನೂಪ್ ಠಾಕೂರ್ ಸೂಕ್ತ. ಮಿಠಾಯಿ ಸೂರಿ ಮಿಂಚಿದ್ದಾರೆ.'' ಪ್ರಜಾವಾಣಿ

It's a fan-tastic action thriller

It's a fan-tastic action thriller

''Darshan, who is fondly referred to as challenging star shines in this typical action thriller composed, and directed by debutant V. Harikrishna along with Kumar. Along with the oil, Yajamana is mixed well with a short love story, in which Rashmika as Kaveri is paired opposite Darshan and the rest of it garnished with comedy and loads of action in addition to challenging dialogues'' - Deccan chronicle

Yajamana movie review - times of india

Yajamana movie review - times of india

''Darshan is back after a hiatus of over a year and the expectations are quite high from his fans. This film promised a package filled with a big cast and lots of action and emotions in its trailer. Does it keep up the promise? It does. Yajamana is entertaining and lives up to expectations. The film has Darshan shouldering a script that is cleverly woven together. It might seem a song and a couple of scenes too long, but those can be overlooked'' - times of india

More from Filmibeat

English summary
Challenging star darshan starrer yajamana movie released yesterday all over world. the movie get good response from audience. here is the karnataka papers critics review about yajamana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X