For Quick Alerts
  ALLOW NOTIFICATIONS  
  For Daily Alerts

  Yajamana First Review: ಮೊದಲ ಶೋ ನೋಡಿದವರ ಟ್ವಿಟ್ಟರ್ ಪ್ರತಿಕ್ರಿಯೆ

  |
  Yajamana Movie: ಮೊದಲ ಶೋ ನೋಡಿದವರ ಟ್ವಿಟ್ಟರ್ ಪ್ರತಿಕ್ರಿಯೆ |FILMIBEAT KANNADA

  ಸುಮಾರು 18 ತಿಂಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಚಿತ್ರಮಂದಿರದಲ್ಲಿ ದರ್ಶನ ಕೊಟ್ಟಿದ್ದಾರೆ. ಡಿ ಬಾಸ್ ಸಿನಿಮಾ ನೋಡದೇ ಉಪವಾಸದಲ್ಲಿದ್ದ ಅಭಿಮಾನಿಗಳು ಇಂದು ಯಜಮಾನನನ್ನ ನೋಡಲು ಬೆಳ್ಳಂಬೆಳಗ್ಗೆಯೇ ಥಿಯೇಟರ್ ಕಡೆ ಹೋಗಿದ್ದಾರೆ.

  ಬೆಳಿಗ್ಗೆ ಆರು ಗಂಟೆಗೆ ಮೊದಲ ಶೋ ಆರಂಭವಾಗಿದ್ದು, ಸದ್ಯಕ್ಕೆ ಬಹುತೇಕ ಕಡೆ ಫಸ್ಟ್ ಶೋ ಅಂತ್ಯವಾಗಿರುತ್ತೆ. ಅಲ್ಲಿಗೆ ಯಜಮಾನ ಚಿತ್ರದ ಹಣೆಬರಹ ನಿರ್ಧಾರವಾಗಿರುತ್ತೆ.

  ಸಿನಿಮಾ ನೋಡಿದ ಖುಷಿಯನ್ನ, ಚಿತ್ರ ಹೇಗಿದೆ ಎಂಬ ಅಭಿಪ್ರಾಯವನ್ನ ಕೆಲವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ವಿಟ್ಟರ್ ಪ್ರತಿಕ್ರಿಯೆಯಲ್ಲಿ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಬಂದಿದೆ. ಹಾಗಿದ್ರೆ, ಯಜಮಾನ ಹೇಗಿದೆ? ನೆಟ್ಟಿಗರ ವಿಮರ್ಶೆ ಇಲ್ಲಿದೆ? ಮುಂದೆ ಓದಿ.....

  3.5 ಸ್ಟಾರ್ ಪಡೆದ ಯಜಮಾನ

  3.5 ಸ್ಟಾರ್ ಪಡೆದ ಯಜಮಾನ

  ಕಮರ್ಷಿಯಲ್ ಎಂಟರ್ ಟೈನ್ ಮೆಂಟ್ ಸಿನಿಮಾ ತುಂಬಾ ಚಾಲೆಂಜಿಂಗ್ ಆಗಿದೆ. ಸ್ವಲ್ಪಮಟ್ಟಿಗೆ ಸಡಿಲತೆ ಇದೆ. ಆದ್ರೆ, ಸಿನಿಮೀಯ ದೃಶ್ಯಗಳಿಗೆ ಕೊರತೆಯಿಲ್ಲ'' ಎಂದು ಖ್ಯಾತ ಪತ್ರಕರ್ತ ಶ್ಯಾಮ್ ಪ್ರಸಾದ್ ಟ್ವೀಟ್ ಮಾಡಿ 3.5 ಸ್ಟಾರ್ ಕೊಟ್ಟಿದ್ದಾರೆ.

  ಅಭಿಮಾನಿಗಳಿಗೆ ತಕ್ಕ ಸಿನಿಮಾ

  ಅಭಿಮಾನಿಗಳಿಗೆ ತಕ್ಕ ಸಿನಿಮಾ

  ''ಅಭಿಮಾನಿಗಳಿಗೆ ಯಜಮಾನ ತಕ್ಕ ಸಿನಿಮಾ. ಎಮೋಷನ್, ಸಂದೇಶ, ಆಕ್ಷನ್ ಎಲ್ಲವೂ ನೋಡಬಹುದು. ಡಿ ಬಾಸ್ ತಮ್ಮ ಪರ್ಫಾಮೆನ್ಸ್ ಮೂಲಕ ಚಿಂದಿ ಎನಿಸುತ್ತಾರೆ'' ಎಂದು ಪ್ರೇಕ್ಷಕನೊಬ್ಬ ಟ್ವೀಟ್ ಮಾಡಿದ್ದಾನೆ.

  ರೈತರ ಬಗ್ಗೆ ಕಾಳಜಿ ಇದೆ

  ರೈತರ ಬಗ್ಗೆ ಕಾಳಜಿ ಇದೆ

  ''ಅಭಿಮಾನಿಗಳಿಗೆ ಇದು ಹಬ್ಬ. ಎಲ್ಲವೂ ಪಕ್ಕಾ ಆಗಿದೆ. ತುಂಬಾ ಸಮಯದ ನಂತರ ಬಂದಿರುವ ದರ್ಶನ್ ಈ ಸಲ ರೈತರಿಗೆ ಹಾಗೂ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಿದ್ದಾರೆ. ಮಾಸ್, ಫ್ಯಾಮಿಲಿ ಫ್ಯಾನ್ಸ್ ಗೆ ಇಷ್ಟವಾಗುತ್ತೆ'' ಎಂದು ಹೇಳಿದ್ದಾರೆ.

  ಸೆಕೆಂಡ್ ಹಾಫ್ ನಿಧಾನ

  ಸೆಕೆಂಡ್ ಹಾಫ್ ನಿಧಾನ

  ''ಒಂದು ಸಲ ನೋಡಬಹುದು. ಸೆಕೆಂಡ್ ಹಾಫ್ ನಿಧಾನಗತಿಯಲ್ಲಿದೆ'' ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾನೆ.

  ಎಂಟರ್ ಟೈನಿಂಗ್ ಫಸ್ಟ್ ಹಾಫ್

  ಎಂಟರ್ ಟೈನಿಂಗ್ ಫಸ್ಟ್ ಹಾಫ್

  'ಯಜಮಾನ ಚಿತ್ರದ ಫಸ್ಟ್ ಹಾಫ್ ಮನರಂಜನೆ ಕೂಡಿದೆ' ಎಂದು ಇಂಟರ್ ವಲ್ ವರೆಗೂ ಸಿನಿಮಾ ನೋಡಿದ ವ್ಯಕ್ತಿಯೊಬ್ಬ ಟ್ವೀಟ್ ಮಾಡಿದ್ದಾನೆ.

  ದರ್ಶನ್ ಈಸ್ ಬ್ಯಾಕ್

  ದರ್ಶನ್ ಈಸ್ ಬ್ಯಾಕ್

  ''ಯಜಮಾನ ಚಿತ್ರವೂ ಫ್ಯಾಮಿಲಿ ಎಂಟರ್ ಟೈನ್ಮೆಂಟ್. ಜೊತೆಗೊಂದು ಅದ್ಭುತ ಸಂದೇಶವಿದೆ. ದರ್ಶನ್ ಅವರು ತಮ್ಮ ಡೈಲಾಗ್, ಲುಕ್‌, ಆಕ್ಟಿಂಗ್ ಮೂಲಕ ಮತ್ತೆ ಕಂಬ್ಯಾಕ್ ಆಗಿದ್ದಾರೆ. ರಶ್ಮಿಕಾ, ಠಾಕೂರ್, ದೇವರಾಜ್ ಎಲ್ಲರೂ ಉತ್ತಮವಾಗಿ ಅಭಿನಯಿಸಿದ್ದಾರೆ. ಕಾಮಿಡಿ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ನಾನು ಇದಕ್ಕೆ 4 ಸ್ಟಾರ್ ಕೊಡ್ತೀನಿ'' ಎಂದಿದ್ದಾರೆ ಪ್ರೇಕ್ಷಕ ಪ್ರಭು.

  ಫಸ್ಟ್ ಹಾಫ್ ಆವರೇಜ್ ಸೆಕೆಂಡ್ ಹಾಫ್ ಅಲ್ಟಿಮೆಟ್

  ಫಸ್ಟ್ ಹಾಫ್ ಆವರೇಜ್ ಸೆಕೆಂಡ್ ಹಾಫ್ ಅಲ್ಟಿಮೆಟ್

  ಯಜಮಾನ ಫಸ್ಟ್ ಹಾಫ್ ಅವರೇಜ್. ಆದ್ರೆ ಸೆಕೆಂಡ್ ಹಾಫ್ ಅಲ್ಟಿಮೆಟ್. ಡೈಲಾಗ್ ಎಲ್ಲವೂ ನೆಕ್ಸ್ಟ್ ಲವೆಲ್ ಗಿದೆ. ಸೆಂಟಿಮೆಂಟ್ ದೃಶ್ಯಗಳು ಗಮನ ಸೆಳೆಯುತ್ತೆ. ಯಜಮಾನ ಪಕ್ಕಾ ಮಾಸ್ ಸಿನಿಮಾ. ಇನ್ನೊಂದು ಸಲ ನೋಡೋಕೆ ಹೋಗ್ತಿದ್ದೀನಿ'' ಎಂದು ಪ್ರೇಕ್ಷಕನೊಬ್ಬ ಟ್ವೀಟ್ ಮಾಡಿದ್ದಾರೆ.

  ನನಗೆ ನಿರಾಸೆ ಆಯ್ತು

  ನನಗೆ ನಿರಾಸೆ ಆಯ್ತು

  ''ಯಜಮಾನ ಚಿತ್ರದಲ್ಲಿ ಮತ್ತೆ ಅದೇ ಹೇಳೆ ಕಥೆ. ನನಗೆ ನಿರಾಸೆಯಾಗಿದೆ'' ಎಂದು ಇಲ್ಲೊಬ್ಬ ಪ್ರೇಕ್ಷಕ ಟ್ವೀಟ್ ಮಾಡಿದ್ದಾನೆ.

  English summary
  Darshan starrer Yajamana movie has released today all over world. the movie get positive response from audience. here is the twitter review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X