For Quick Alerts
  ALLOW NOTIFICATIONS  
  For Daily Alerts

  ಹೊಸದಾಗಿ ನಿರ್ಮಿಸಲಾದ, ಹಳ್ಳ ಕೊಳ್ಳಗಳಿಲ್ಲದ ಫ್ಲೈ ಓವರ್‌ ಮೇಲೆ ವಾಹನಗಳು ಸರಾಗವಾಗಿ, ಯಾವುದೇ ಅಡೆತಡೆ ಇಲ್ಲದಂತೆ ಸಾಗುವ ರೀತಿಯ ಈ ಚಿತ್ರವನ್ನು ನೀವು ನೋಡುವುದು ಯಾವಾಗ ?

  By Staff
  |

  ಚಿತ್ರ : ಯಜಮಾನಸಂಭಾಷಣೆ : ರವಿ ಶ್ರೀವತ್ಸ, ಛಾಯಾಗ್ರಹಣ: ರಮೇಶ್‌ ಬಾಬುನಿರ್ದೇಶನ : ಆರ್‌. ಶೇಷಾದ್ರಿ - ರಾಧಾ ಭಾರತಿತಾರಾಗಣ: ವಿಷ್ಣುವರ್ಧನ್‌, ಪ್ರೇಮಾ, ಪವಿತ್ರಾ ಲೋಕೇಶ್‌, ಶಶಿಕುಮಾರ್‌, ರಮೇಶ್‌ ಭಟ್‌, ಅಭಿಜಿತ್‌, ಶಿವರಾಂ
  *ಹಂಸಕ್ಷೀರ

  ಸಾಕ್ಷಾತ್ಕಾರ, ಜೇನುಗೂಡು, ನಮ್ಮ ಸಂಸಾರ ಚಿತ್ರಗಳಾದಿಯಾಗಿ ಅವಿಭಕ್ತ ಕುಟುಂಬದ ಕತೆಯನ್ನೊಳಗೊಂಡ ಚಿತ್ರಗಳೆಲ್ಲ ಬಹುತೇಕ ಕನ್ನಡದಲ್ಲಿ ಗೆದ್ದಿವೆ. ಈ ಸಾಲಿನಲ್ಲಿ ಈಗ ‘ಯಜಮಾನ ’ ಹೊಸ ಸೇರ್ಪಡೆ. ವಿಷ್ಣುವರ್ಧನ್‌ ತಾರಾಮೌಲ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿರುವ ಮಹತ್ವಾಕಾಂಕ್ಷೆಯ ಚಿತ್ರ ಯಜಮಾನ ಎಂಬುದು ಸ್ಯಾಂಡಲ್‌ವುಡ್‌ ಹೇಳಿಕೆ.

  ಚಿತ್ರ ನೋಡಿದ ಮೇಲೆ ಈ ಮಾತು ನಿಜವಾಗುತ್ತಿದೆ ಎನ್ನಿಸುತ್ತದೆ. ಸೋದರ ವಾತ್ಸಲ್ಯ, ಕಿರಿಯ ಸೋದರರಿಗೆ ಅಣ್ಣನ ಮಾತೇ ವೇದವಾಕ್ಯ ತತ್ವ ಈ ಚಿತ್ರದ್ದು. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ನೀತಿಯನ್ನು ಚಿತ್ರದಲ್ಲಿ ಲವಲವಿಕೆಯಿಂದ ನಿರೂಪಿಸಲಾಗಿದೆ. ಹೊಸದಾಗಿ ನಿರ್ಮಿಸಲಾದ, ಹಳ್ಳ ಕೊಳ್ಳಗಳಿಲ್ಲದ ಫ್ಲೈ ಓವರ್‌ ಮೇಲೆ ವಾಹನಗಳು ಸರಾಗವಾಗಿ, ಯಾವುದೇ ಅಡೆತಡೆ ಇಲ್ಲದೆ ಸಾಗುವಂತೆ ಚಿತ್ರ ಓಡುತ್ತದೆ. ಆದರೆ ಮಧ್ಯದಲ್ಲಿ ಒಮ್ಮೊಮ್ಮೆ ಹಂಪ್‌ಗಳು ವೇಗಕ್ಕೆ ಕಡಿವಾಣವನ್ನೂ ಹಾಕಿವೆ. ಆದರೂ ಮರ್ಸಿಡೀಸ್‌ ಬೆಂಜ್‌ ಕಾರಿನಲ್ಲಿ ಕುಳಿತ ಸುಖಕರ ಪ್ರಯಾಣದ ಅನುಭವಕ್ಕೆ ಅಡ್ಡಿಯೇನಿಲ್ಲ.

  ಕಸ್ತೂರಿ ನಿವಾಸ, ಬೆಂಕಿಯ ಬಲೆ, ಬಂಗಾರದ ಮನುಷ್ಯ ಮುಂತಾದ ಚಿತ್ರಗಳು ಒಂದು ಚಿತ್ರಕ್ಕೆ ಕತೆ ಎಷ್ಟು ಮುಖ್ಯ ಎಂದು ಸಾಬೀತು ಪಡಿಸಿದ್ದವು. ಈಗ ಯಜಮಾನ ಕೂಡ ಒಂದು ಚಿತ್ರದ ಜೀವಾಳ ಕತೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ಆದರೂ ಚಿತ್ರದಲ್ಲಿ ಕತೆಗಿಂತಲೂ ಘಟನೆಗಳೇ ಪ್ರಾಮುಖ್ಯತೆ ಪಡೆದಿವೆ. ಚಿತ್ರದಲ್ಲಿ ಒಂದೊಂದು ಸನ್ನಿವೇಶವೂ ಒಂದೊಂದು ಕತೆ ಹೇಳುತ್ತವೆ. ಈ ಎಲ್ಲ ಕತೆಗೂ ಪ್ರೀತಿ, ವಾತ್ಸಲ್ಯವೇ ಜೀವಾಳವಾಗಿದೆ.

  ಚಿತ್ರ ನಿರೂಪಣೆಯ ಶೈಲಿ ಸೊಗಸಾಗಿದೆ ಮಿಗಿಲಾಗಿ ಪ್ರೇಕ್ಷಕರ ಗಮನ ಅನ್ಯದೆಡೆಗೆ ಹರಿಯದಂತೆ ಮಾಡಿರುವುದೇ ಚಿತ್ರದ ಮತ್ತೊಂದು ಅಗ್ಗಳಿಕೆ. ಕೆಲವು ಸನ್ನಿವೇಶ, ನಿರೂಪಣೆ ಶೈಲಿ ತಮಿಳು ಪ್ರಭಾವಕ್ಕೆ ಒಳಗಾಗಿದ್ದು, ಕನ್ನಡ ಮನಗಳಿಗೆ ಒಗ್ಗದಿರಲೂ ಬಹುದು. ಕಲೆಗೆ ಜಾತಿ ಭಾಷೆ ಇಲ್ಲ ಅಲ್ಲವೇ ಅಂತೆಯೇ ಸಂವೇದನೆಗೂ ಭಾಷೆಯ ಹಂಗಿಲ್ಲ.

  ಇದಕ್ಕೆ ಕಾರಣವೂ ಇಲ್ಲದಿಲ್ಲ. ಚಿತ್ರ ಹೇಳಿಕೇಳಿ ವಾನತ್ತೆೈಪೋಲ ಎಂಬ ಚಿತ್ರದ ರೀಮೇಕ್‌. ಆದರೂ, ವಿಷ್ಣುವರ್ಧನ್‌ರ ಪ್ರೌಢ ಅಭಿನಯದ ರಸಾಸ್ವಾದಕ್ಕೆ ಇದೊಂದು ಉತ್ತಮ ಅವಕಾಶ. ವಿಷ್ಣು ಅಭಿಮಾನಿಗಳಿಗಂತೂ ಹೆಮ್ಮೆ ತರುವ ಚಿತ್ರ.

  ಕತೆ ಬಗ್ಗೆ ಹೇಳಬೇಕೆಂದರೆ, ತಾನು ಮದುವೆ ಆದರೆ, ಬರುವ ಹೆಂಡತಿ ತನ್ನ ತಮ್ಮಂದಿರನ್ನು ಕಡೆಗಣಿಸಬಹುದೆಂಬ ಅತಿಯಾದ ಮಮಕಾರದಿಂದ ಅವಿವಾಹಿತನಾಗೇ ಉಳಿಯುತ್ತಾನೆ. ಆತ ಪ್ರೀತಿಸಿದ ನಾಯಕಿಯ ಅಪ್ಪ, ಜೇನುಗೂಡಿನಂತಹ ಕುಟುಂಬವನ್ನು ಸಹಸ್ರ ಹೋಳು ಮಾಡುವ ಶಪಥ ಮಾಡುತ್ತಾನೆ. ಈ ಸವಾಲಿಗೆ ಸೆಡ್ಡು ಹೊಡೆವ ನಾಯಕ ತಮ್ಮಂದಿರ ಓದಿಸಿ, ಮದುವೆ ಮಾಡಿ, ಅವರಿಗೂ ಮದುವೆ ಮಾಡಿಸಿ, ತಮ್ಮಂದಿರ ಹೆಂಡತಿಯರೂ ಮನೆಯನ್ನು ಮುರಿಯದಂತೆ ಕಾವಲುಗಾರನಾಗುತ್ತಾನೆ.

  ವಿಷ್ಣು ದ್ವಿಪಾತ್ರ ಅಭಿನಯದ ಈ ಚಿತ್ರದ ಯಥಾಪ್ರಕಾರ ಸೆಂಟಿಮೆಂಟ್‌ ನಡುವೆಯೂ ಪ್ರೇಮ ಇದೆ, ವಿರಹ ಇದೆ, ಘರ್ಷಣೆ ಇದೆ, ನೆಮ್ಮದಿ ಕಲಕುವ ವಾತಾವರಣವೂ ಇದೆ. ಇವೆಲ್ಲವಕ್ಕೂ ಪರಿಹಾರವೆಂಬುದು ಇರಲೇಬೇಕಲ್ಲವೆ. ಇದೆ. ಖಳನಾಯಕನೂ ನಾಟಕೀಯವಾಗಿ ಸದ್ಗುಣ ಸಂಪನ್ನನಾಗುತ್ತಾನೆ, ಮನೆ ಮುರಿಯಲು ಬಂದಳೆಂದುಕೊಳ್ಳುವ ನಾಯಕಿಯೂ ಪ್ರೀತಿಯ ಸಂಕೋಲೆಯಲ್ಲಿ ಸಿರಿವಂತಳಾಗುತ್ತಾಳೆ, ಶ್ರೀಮಂತಿಕೆಯ ಅಟ್ಟಹಾಸ ಮೆರೆವ ಮತ್ತೊಬ್ಬಳು ನಾಯಕಿ ಬಡತನದಲ್ಲೂ ಬಂಗಾರದ ಬದುಕಿದೆ ಎನ್ನುತ್ತಾಳೆ. ನಡು ನಡುವೆ ಪಾನೀಯಂ ಸಮರ್ಪಯಾಮಿ ಎನ್ನುವಂತೆ ಶಿವರಾಮ್‌ - ಟೆನ್ನಿಸ್‌ ಕೃಷ್ಣರ ಹಾಸ್ಯವೂ ಇದೆ.

  ಸಂಕಲನ ಕೊಂಚ ಕೈಕೊಟ್ಟಿದೆಯಾದರೂ, ರಮೇಶ್‌ ಬಾಬು ಛಾಯಾಗ್ರಹಣ ಕೈ ಹಿಡಿದು ನಡೆಸುತ್ತದೆ.

  ಗತ್ತಿನ ಯಜಮಾನನಿಗೆ ಐವತ್ತು
  ರಾಮಾಚಾರಿ ಬಲು ದುಬಾರಿ

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X