»   » ಗೂಗ್ಲಿ -ರೋಮ್ಯಾಂಟಿಕ್ ಕಾಮಿಡಿ, ಟ್ವೀಟರ್ ತೀರ್ಪು

ಗೂಗ್ಲಿ -ರೋಮ್ಯಾಂಟಿಕ್ ಕಾಮಿಡಿ, ಟ್ವೀಟರ್ ತೀರ್ಪು

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೂಗ್ಲಿ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಬೆಂಗಳೂರಿನ ಶುಕ್ರವಾರ ತುಂತುರು ಮಳೆ ಜತೆಗೆ ಪ್ರಣಯ-ಹಾಸ್ಯ ಭರಿತ ಚಿತ್ರದ ಸವಿಯನ್ನು ಸಿನಿ ರಸಿಕರು ಆಸ್ವಾದಿಸಿ ಆನಂದಿಸಿದ್ದಾರೆ. ಕೆಂಪೇಗೌಡ ರಸ್ತೆಯಲ್ಲಿ ಯುವಮೇಳವೇ ಜಮಾಯಿಸಿದೆ.

ಕೃತಿ ಕರಬಂದ ನಾಯಕಿಯಾಗಿರುವ ಈ ಚಿತ್ರದಲ್ಲಿ ಪಾತ್ರಕ್ಕೆ ತಕ್ಕ ಸಂಭಾಷಣೆ, ಹಾಡಿಗೆ ತಕ್ಕ ಲೊಕೇಷನ್ ಹುಡುಕಿರುವ ನಿರ್ದೇಶಕ ಪವನ್ ಒಡೆಯರ್ ಮತ್ತೊಮ್ಮೆ ಗೆದ್ದಿದ್ದಾರೆ. ಮೊದಲ ದಿನದ ಮೊದಲ ಶೋ ನಂತರ ಗಂಧದಗುಡಿ ತಂಡದ ಸದಸ್ಯರು ಚಿತ್ರಕ್ಕೆ 'ಜೈ' ಎಂದಿದ್ದಾರೆ.

ಗೂಗ್ಲಿ ಚಿತ್ರದ ಹಾಡುಗಳು ಭಾರಿ ಸದ್ದು ಮಾಡುತ್ತಿದ್ದು ಯುವಜನತೆಯನ್ನು ಸೆಳೆಯುತ್ತಿದೆ. ಚಿತ್ರ ಸರಿಸುಮಾರು 125 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶ್ನ ಕಾಣುತ್ತಿದೆ. ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಯು' ಸರ್ಟಿಫಿಕೇಟ್ ನೀಡಿದೆ. ಚಿತ್ರದಲ್ಲಿ ಒಂದೇ ಒಂದು ಪದಕ್ಕಷ್ಟೇ ಸೆನ್ಸಾರ್ ಆಕ್ಷೇಪ ವ್ಯಕ್ತಪಡಿಸಿದ್ದು ಉಳಿದಂತೆ 2.15 ಗಂಟೆ ಚಿತ್ರಕ್ಕೆ ತುಟಿಪಿಟಿಕ್ ಎಂದಿಲ್ಲದಿರುವುದು ನಿರ್ದೇಶಕರಿಗೆ ಸಮಾಧಾನ ತಂದಿಲ್ಲ

ಈ ಹಿಂದಿನ ಚಿತ್ರ ಗೋವಿಂದಾಯ ನಮಃ ಗೆದ್ದಿದ್ದು ಡಬ್ಬಲ್ ಮೀನಿಂಗ್ ಡೈಲಾಗ್ ನಿಂದ ಎಂಬ ಅಪವಾದ ಹೊತ್ತಿದ್ದ ಪವನ್ ಈ ಚಿತ್ರದಲ್ಲಿ ಎಚ್ಚರಿಕೆ ವಹಿಸಿದಂತೆ ಡೈಲಾಗ್ಸ್ ಬಿಟ್ಟಿದ್ದಾರೆ. ಚಿತ್ರದ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವೀಟರ್ ನಲ್ಲಿ ಹರಿದು ಬಂದಿರುವ ಸಂದೇಶಗಳನ್ನು ಹೆಕ್ಕಿ ನೀಡುತ್ತಿದ್ದೇವೆ ಓದಿ ಆನಂದಿಸಿ.. ಚಿತ್ರ ವಿಮರ್ಶೆಗಾಗಿ ನಿರೀಕ್ಷಿಸಿ...

ನಾಯಕಿಯ ಟ್ವೀಟ್

ಯಶ್ ಯಾವುದೇ ಸಾಮಾಜಿಕ ಜಾಲ ತಾಣಗಳಲ್ಲಿ ಅಧಿಕೃತ ಖಾತೆ ಹೊಂದಿಲ್ಲವಂತೆ. ಅವರ ಫ್ಯಾನ್ ಕ್ಲಬ್ ಗಳಿವೆ ಅಷ್ಟೆ. ಕೃತಿ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿದ್ದಾರೆ.

ಸಂತೋಷ್ ಥೇಟರ್ ನಲ್ಲಿ

ಕೆಂಪೇಗೌಡ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ಯಶ್ ಕಟೌಟ್ ಹಾಗೂ ಜನಸಂದಣಿ

ಭಟ್ಟರಿಗೆ ಸವಾಲ್

ಯೋಗರಾಜ್ ಭಟ್ಟರ ಶಿಷ್ಯ ಪವನ್ ಒಡೆಯರ್ ಅವರ ಮೊನಚು ಸಂಭಾಷಣೆ ಚಿತ್ರದ ಮುಖ್ಯಾಂಶಗಳಲ್ಲಿ ಒಂದು, ಭಟ್ಟರಿಗೆ ಸವಾಲೆನಿಸುವಂತೆ ಡೈಲಾಗ್ಸ್ ಇದೆ

ಸೂಪರ್ ಸೀನ್ಸ್

ದೃಶ್ಯಗಳ ಸಂಯೋಜನೆಯಲ್ಲಿ ಲವಲವಿಕೆ ಹೊಸತನ ಇದೆ. ಯಶ್ ಹಾಗೂ ಕೃತಿ ಜೋಡಿ ಪ್ರೇಕ್ಷಕರನ್ನು ಸೆಳೆಯುತ್ತದೆ.

ಪ್ರೇಕ್ಷಕರಿಗೆ ಪೈಸಾ ವಸೂಲ್

ಈ ಚಿತ್ರದ ಬಗ್ಗೆ ನಮ್ಮ ಓದುಗರ ವಿಮರ್ಶೆ

ಸಿನಿಲೋಕ ತೀರ್ಪು

ಸಿನಿಲೋಕ ವೆಬ್ ತಾಣ ನೀಡಿದ ತೀರ್ಪು

ಶ್ಯಾಮ್ ವಿಮರ್ಶೆ

ಪತ್ರಕರ್ತ ಶ್ಯಾಮ್ ಸುಂದರ್ ಕೊಟ್ಟ ತೀರ್ಪು

English summary
Googly Staring Yash, Kriti Karabanda has Pawan Wodeyar's punching dialogues and good narration. Movie is worth watch as it easily falls in to romantic comedy category says Tweet report from Gandhadagudi Team
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada