twitter
    For Quick Alerts
    ALLOW NOTIFICATIONS  
    For Daily Alerts

    ಭಟ್ಟರ 'ಪಂಚತಂತ್ರ'ಕ್ಕೆ ವಿಮರ್ಶಕರು ಮನಸೋತ್ರಾ?

    |

    ಸ್ಯಾಂಡಲ್ ವುಡ್ ನಲ್ಲಿ 'ಪಂಚತಂತ್ರ' ಸಿನಿಮಾ ಹುಟ್ಟುಹಾಕಿದ್ದ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಸಿನಿಮಾ ನೋಡಿ ಹೊರಬಂದವರು ಭಟ್ಟರ 'ಪಂಚತಂತ್ರ'ಕ್ಕೆ ಮನಸೋತಿದ್ದಾನೆ. ಮಾತಿನ ಪಂಚ್, ಹಾಸ್ಯ ಮತ್ತು ಶೃಂಗಾರ ಎಲ್ಲವೂ ಬೆರೆತಿರುವ 'ಪಂಚತಂತ್ರ'ಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ನಿನ್ನೆ (ಮಾರ್ಚ್-29) 'ಪಂಚತಂತ್ರ' ಸಿನಿಮಾ ರಾಜ್ಯದಾದ್ಯಂತ ರಿಲೀಸ್ ಆಗಿದೆ. ನಿರ್ದೇಶಕ ಯೋಗರಾಜ್ ಭಟ್ ಸಾರಥ್ಯದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಯುವ ಪ್ರತಿಭೆಗಳಾದ ವಿಹಾನ್ ಗೌಡ, ಸೋನಲ್ ಮತ್ತು ಅಕ್ಷರ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಜನರೇಷನ್ ಗ್ಯಾಪ್ ಕಥೆಯನ್ನು ತೆಳುಹಾಸ್ಯದ ಮೂಲಕ ಹೇಳಿರುವ ಭಟ್ಟರ 'ಪಂಚತಂತ್ರ' ವಿಮರ್ಶಕರಿಗೆ ಇಷ್ಟವಾಗಿದೆಯಾ? ಕರ್ನಾಟಕದ ಜನಪ್ರಿಯ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವ 'ಪಂಚತಂತ್ರ' ಚಿತ್ರದ ವಿಮರ್ಶೆಯ ಕಲೆಕ್ಷನ್ ಇಲ್ಲಿದೆ. ಮುಂದೆ ಓದಿ....

    Panchatantra Review : ಅತ್ಲಾಗೆ ಹುಡುಗರು.. ಇತ್ಲಾಗೆ ಮುದುಕರು.. Panchatantra Review : ಅತ್ಲಾಗೆ ಹುಡುಗರು.. ಇತ್ಲಾಗೆ ಮುದುಕರು..

    ನಗಿಸುವ ರೇಸ್​ನಲ್ಲಿ ಆಮೆ ಮತ್ತು ಮೊಲ

    ನಗಿಸುವ ರೇಸ್​ನಲ್ಲಿ ಆಮೆ ಮತ್ತು ಮೊಲ

    ''ಪ್ರತಿ ಬಾರಿ ಪ್ರೀತಿ-ಪ್ರೇಮಕ್ಕೆ ಹೆಚ್ಚು ಒತ್ತು ನೀಡುವ ಯೋಗರಾಜ್, ಈ ಬಾರಿ ಅದನ್ನು ರುಚಿಗೆ ತಕ್ಕಷ್ಟು ಉಪ್ಪಿನಂತೆ ಹಿತ-ಮಿತವಾಗಿ ಬಳಸಿದ್ದಾರೆ. ಸಾಹಿತ್ಯಾ-ಕಾರ್ತಿಕ್ ನಡುವಿನ ಲವ್​ಸ್ಟೋರಿ ಕಾರಣಕ್ಕೆ ಚಿತ್ರದಲ್ಲಿ ಶೃಂಗಾರ ಹೆಚ್ಚಿದೆ. ಹದಿಹರೆಯದವರ ಭಾವನೆಗಳನ್ನು ರಂಗುರಂಗಾಗಿ ಪ್ರತಿನಿಧಿಸಿವೆ ಈ ಎರಡು ಪಾತ್ರಗಳು. ನಗು ಉಕ್ಕಿಸುವ ಸಲುವಾಗಿ ನಡೆದಿರುವ ಎಲ್ಲ ಕಸರತ್ತುಗಳು ಕಥೆಯ ಚೌಕಟ್ಟನ್ನು ಮೀರದ ಕಾರಣ ‘ಪಂಚತಂತ್ರ' ಹೆಚ್ಚು ಆಪ್ತ ಎನಿಸುತ್ತದೆ. ಮೊದಲಾರ್ಧ ಕೊಂಚ ಎಳೆದಾಡಿದಂತಿದೆ. ರೇಸ್ ದೃಶ್ಯಗಳನ್ನು ಇನ್ನಷ್ಟು ನೈಜವಾಗಿ ಕಟ್ಟಿಕೊಡಬಹುದಿತ್ತು. ಪಾತ್ರಧಾರಿಗಳ ಪೈಕಿ ರಂಗಾಯಣ ರಘು ಹೆಚ್ಚು ಗಮನ ಸೆಳೆಯುತ್ತಾರೆ. ಸಿಕ್ಕಷ್ಟೇ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ ಸೋನಲ್ ಮತ್ತು ಅಕ್ಷರಾ. ನಟನೆ, ಡಾನ್ಸ್, ಫೈಟ್ ಎಲ್ಲದರಲ್ಲೂ ಭರವಸೆ ಮೂಡಿಸುತ್ತಾರೆ ವಿಹಾನ್'' - ವಿಜಯವಾಣಿ

    'ಪಂಚತಂತ್ರ' ಚಿತ್ರದಲ್ಲಿ ಕಾಣಿಸಿಕೊಂಡ ದಿಗಂತ್'ಪಂಚತಂತ್ರ' ಚಿತ್ರದಲ್ಲಿ ಕಾಣಿಸಿಕೊಂಡ ದಿಗಂತ್

    ಪಂಚತಂತ್ರದ ಕಥೆಗೆ ಭಟ್ಟರ ಹೊಸ ವ್ಯಾಖ್ಯಾ

    ಪಂಚತಂತ್ರದ ಕಥೆಗೆ ಭಟ್ಟರ ಹೊಸ ವ್ಯಾಖ್ಯಾ

    ''ಯೋಗರಾಜ್ ಭಟ್ಟರ ಸಿನಿಮಾ ಎಂದ ತಕ್ಷಣ ಅಲ್ಲೊಬ್ಬ ಉಡಾಫೆ ನಾಯಕ, ಮುದ್ದಾಗಿರುವ ನಾಯಕಿ ಅವರ ನಡುವೆ ಪ್ರೀತಿ ಆ ಪ್ರೀತಿಗೆ ಭಟ್ಟರದ್ದೇ ಆದ ವ್ಯಾಖ್ಯಾನ ಎಲ್ಲವೂ ಇರುತ್ತದೆ. ಪಂಚತಂತ್ರದಲ್ಲಿಯೂ ಇವೆಲ್ಲವೂ ಇದೆ, ಜತೆಗೆ ಕಮರ್ಷಿಯಲ್ ಆಗಿ ಎಂಟರ್‌ಟೇನರ್ ಮಾಡುವ ಅಂಶಗಳನ್ನು ಸೇರಿಸಿಕೊಂಡು ಸಿನಿಮಾ ಮಾಡಿದ್ದಾರೆ. ಮಾತುಗಳೆಲ್ಲವೂ ಪಂಚ್ ಆಗಿದ್ದು, ಪ್ರೇಕ್ಷಕರನ್ನು ನಗಿಸುತ್ತವೆ. ಸಂಗೀತ ನಿರ್ದೇಶಕ ಹರಿಕೃಷ್ಣ ಮತ್ತು ಸಿನಿಮಾಟೋಗ್ರಫರ್ ಸುಜ್ಞಾನ್ ಅವರು ಪಂಚತಂತ್ರದ ಶ್ರೀಮಂತಿಕೆಗೆ ಸರದಾರರು. ಕಾರ್‌ ರೇಸ್‌ ದೃಶ್ಯಗಳನ್ನಂತು ಸುಜ್ಞಾನ್ ಅವರು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಯಾರು ನಿರೀಕ್ಷೆ ಮಾಡದಂತಹ ಕ್ಲೈಮ್ಯಾಕ್ಸ್ ಸಿನಿಮಾದಲ್ಲಿದೆ. ಸಣ್ಣ ಪುಟ್ಟ ನ್ಯೂನ್ಯತೆಗಳಿದ್ದರೂ ಪಂಚತಂತ್ರ ನೋಡಿದ ಪ್ರೇಕ್ಷಕ ರಿಫ್ರೆಶ್‌ ಆಗುತ್ತಾನೆ'' - ವಿಜಯ ಕರ್ನಾಟಕ

    ಬಾಲಿವುಡ್ ನಿಂದ ಆಫರ್ ಪಡೆದ 'ಪಂಚತಂತ್ರ' ನಟಿ ಸೊನಾಲ್ ಬಾಲಿವುಡ್ ನಿಂದ ಆಫರ್ ಪಡೆದ 'ಪಂಚತಂತ್ರ' ನಟಿ ಸೊನಾಲ್

    ಕಾರ್ ರೇಸಿನಲ್ಲಿ ಬದುಕಿನ ಭಲೇ ಆಟ

    ಕಾರ್ ರೇಸಿನಲ್ಲಿ ಬದುಕಿನ ಭಲೇ ಆಟ

    ''ಯುವಕರ ಪ್ರೀತಿ ಪ್ರೇಮ್ ಹಾಲಿವುಡ್ ಶೈಲಿಯದು. ಬಾಳಿನ ಮುಸ್ಸಂಜೆಯಲ್ಲಿರುವವರ ಜೀವನ ಪ್ರೀತಿ ಅಂಬಾಸಿಡರ್ ಕಾರು ಇದ್ದಂತೆ. ಅವರಿಬ್ಬದ ನಡುವೆ ಎಲ್ಲಾ ವಿಷಯಗಳಲ್ಲೂ ಜಿದ್ದಾಜಿದ್ದಿ. ಈ ಜನರೇಷನ್ ಗ್ಯಾಪ್ ಕಥೆಯನ್ನು ತೆಳುಹಾಸ್ಯದ ಮೂಲಕ ಪಂಚತಂತ್ರ ಚಿತ್ರದಲ್ಲಿ ಹೇಳಿದ್ದಾರೆ ನಿರ್ದೇಶಕ ಯೋಗರಾಜ್ ಭಟ್. ಆಮೆ ಮೊದಲದ ಕಥೆಗೆ ಸಿನಿಮಾ ರೂಪ ನೀಡಿದ್ದಾರೆ. ಮುದುಕರು ಮತ್ತು ಯುವಕರ ರೋಮಾಂಚಕ ಜೀವನ ಕಥೆ ಇಲ್ಲಿದೆ. ಹೊಸ ಕಾಲದ ತಲ್ಲಣಗಳನ್ನು ಗುಪ್ತಗಾಮಿನಿಯಂತೆ ತೆರೆ ಮೇಲೆ ಹರಿಬಿಟ್ಟಿದ್ದಾರೆ. ಕ್ಲೈಮ್ಯಾಕ್ಸ್ ನ ಸಾವು ನೋವಿನ ಪಯಣದಲ್ಲಿ ಬದುಕಿನ ತತ್ವವನ್ನು ಬಿಚ್ಚಿಟ್ಟಿದ್ದಾರೆ. ಜೀವನದ ಪಾಠ ಹೇಳುವ ಭಾವನಾತ್ಮಕ ದೃಶ್ಯಗಳು ನೋಡುಗರಿಗೆ ಆಪ್ತವಾಗಿ ಕಾಣಿಸುವುದಿಲ್ಲ'' -ಪ್ರಜಾವಾಣಿ

    Panchatantra Movie Review

    Panchatantra Movie Review

    ''Whenever Yogaraj Bhat has embarked on a project with newcomers, it has most often turned out to be good. Panchatantra has all that one expects from his films, witticisms galore in the dialogues, a young romance that is tackled in a cute, naughty way and loads of emotional drama, finally peppered with philosophy. Some good songs, the picturisation is quite stunning and the art direction throughout the film is commendable. Panchatantra might be a tad loud and a little long, but it is entertaining and engrossing for those who like their commercial films with all emotions yoked in togethe'' - TIMES OF INDIA

    'Racy' film with sharp twists and turns

    'Racy' film with sharp twists and turns

    The popular folk tale of the hare and tortoise race is brought into a modern day context in Yogaraj Bhat's Panchatantra. A simple thought profoundly put across through a complicated journey, the film has two groups young and old entangled in different kinds of struggles. But who will win this race? With Panchatantra, Bhatru comes up with a well-crafted story, very unlike from the director's previous films. Another highlight of Panchatantra are its songs, with every track placed meaningfully - The New Indian Express

    English summary
    Kannada director Yogaraj bhat directional panchatantra movie has released on yesterday (march 30th). here is the critics review of panchatantra.
    Saturday, March 30, 2019, 12:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X