Cult Review: ಭಗ್ನ ಪ್ರೇಮಿಯಾದ ಝೈದ್ ಖಾನ್ 'ಕಲ್ಟ್' ಸ್ಟೋರಿ; ಪ್ಲಸ್ ಏನು? ಮೈನಸ್ ಏನು?

By Chandana

Rating:
3.0/5

ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ 2ನೇ ಸಿನಿಮಾ ರಿಲೀಸ್ ಆಗಿದೆ. ಇಂದು (ಜನವರಿ 23) ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾ ರಾಜ್ಯಾದ್ಯಾಂತ ರಿಲೀಸ್ ಆಗಿದೆ. ಚೊಚ್ಚಲ ಸಿನಿಮಾ 'ಬನಾರಸ್‌' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಝೈದ್ ಖಾನ್ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಸಿನಿಮಾ ಹಾಡುಗಳ ಸೂಪರ್‌ ಹಿಟ್ ಆಗಿದ್ದವು. ಆದರೆ, 'ಕಲ್ಟ್‌'ನಲ್ಲಿ ಅದಕ್ಕೆ ತದ್ವಿರುದ್ಧ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

'ಕಲ್ಟ್' ಸಿನಿಮಾ ಮೂಲಕ ರಗಡ್ ಲುಕ್‌ನಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಝೈದ್‌ ಖಾನ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ರಚಿತಾ ರಾಮ್, ಮಲೈಕಾ ವಸುಪಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನಿಲ್ ಕುಮಾರ್ ನಿರ್ದೇಶನ ಮಾಡಿರುವ ಈ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ.

Zaid Khan  Rachita Ram  Malaika Vasupal movie Cult review and rating in Kannada

ಝೈದ್ ಖಾನ್ ಎರಡನೇ ಸಿನಿಮಾ ಹೇಗಿದೆ? ಸಿನಿಮಾದ ಕಥೆಯೇನು? ಮಾಸ್ ಅವತಾರದಲ್ಲಿ ಝೈದ್ ಖಾನ್ ಕ್ಲಿಕ್ ಆಗುತ್ತಾರಾ? ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ಇಬ್ಬರಲ್ಲಿ ಝೈದ್‌ ಖಾನ್‌ಗೆ ಜೋಡಿ ಯಾರು? ನಿರ್ದೇಶನ ಹೇಗಿದೆ? ಸಿನಿಮಾದ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ಎಂದು ತಿಳಿಯುವುದಕ್ಕೆ ಮುಂದೆ ಓದಿ.

'ಕಲ್ಟ್' ಕಥೆಯೇನು?

'ಕಲ್ಟ್' ಒಂದು ಅಪ್ಪಟ ಪ್ರೇಮಕಥೆ. ಒಬ್ಬ ಹುಡುಗನಿಗೆ ಲವ್ ಫೆಲ್ಯೂರ್ ಆದಾಗ ಅವನು ಹೇಗೆ ದು:ಖಕ್ಕೆ ಒಳಗಾಗುತ್ತಾನೆ. ಅವನು ಕುಡಿಯುವುದಕ್ಕೆ ಶುರು ಮಾಡುತ್ತಾನೆ. ಅವನ ಲೈಫ್‌ನಲ್ಲಿ ಏರಿಳಿತಗಳು ಯಾಕೆ ಬರುತ್ತವೆ. ಏನೆಲ್ಲ ಬದಲಾವಣೆಗಳು ಆಗುತ್ತೆ ಅನ್ನೋದನ್ನು ಇಟ್ಟುಕೊಂಡಿ ಸಿನಿಮಾ ಮಾಡಲಾಗಿದೆ. ಇಂಜಿನಿಯರಿಂಗ್ ಓದುತ್ತಿದ್ದ ಮಾಧವ ಉರ್ಫ್ ಮ್ಯಾಡಿ ಅರ್ಧಕ್ಕೆ ಬಿಟ್ಟು ಕುಡಿತಕ್ಕೆ ದಾಸನಾಗುತ್ತಾನೆ. ಅದಕ್ಕೆ ಕಾರಣ ಈತನ ಲವರ್ ಗೀತಾ (ಮಲೈಕಾ) ಬಿಟ್ಟು ಹೋಗಿರುತ್ತಾಳೆ. ಇಂತಹ ಸ್ಥಿತಿಯಲ್ಲಿ ಇತಿಹಾಸಿನಿ (ರಚಿತಾ) ಎಂಟ್ರಿ ಆಗುತ್ತೆ. ಈಗ ಗೀತಾ ಬಿಟ್ಟು ಹೋಗಿದೇಕೆ? ಮತ್ತೆ ಇಬ್ಬರೂ ಒಂದಾಗುತ್ತಾರಾ? ಮ್ಯಾಡಿ ಜೊತೆಯಾಗೋದು ಇತಿಹಾಸಿನಿನಾ? ಗೀತಾನಾ? ಅನ್ನೋದು ಸಿನಿಮಾ ಕಥೆ.

ಪರ್ಫಾಮೆನ್ಸ್ ಹೇಗಿದೆ?

ಝೈದ್ ಖಾನ್ ಈ ಸಿನಿಮಾ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಕುಡಿತಕ್ಕೆ ಒಳಗಾದ ಮ್ಯಾಡಿ ಪಾತ್ರ. ಇನ್ನೊಂದು ಮುಗ್ಧ ಮಾಧವ ಲುಕ್, ಮೂರನೆಯದ್ದು ಮ್ಯಾಡಿ ಹಾಗೂ ಮಾಧವ ಇಬ್ಬರ ಸ್ವಭಾವಗಳು ಒಟ್ಟಿಗೆ ಸೇರಿದರೆ ಹೇಗಾಗುತ್ತೋ ಹಾಗೆ. ಮಾಧನ ಪಾತ್ರವನ್ನು ಇಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಝೈದ್ ಖಾನ್ ನಟನೆಯಲ್ಲಿ ಮಾಗಿದ್ದಾರೆ. ಮಲೈಕಾ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಇನ್ನು ರಚಿತಾ ರಾಮ್ ಪಾತ್ರ ಪ್ರೇಕ್ಷಕರ ಗಮನ ಸೆಳೆಯುತ್ತೆ.

ಟೆಕ್ನಿಕಲಿ ಹೇಗಿದೆ ಸಿನಿಮಾ?

ಕಲ್ಟ್ ಸಿನಿಮಾ ಟೆಕ್ನಿಕಲಿ ಸ್ವಲ್ಪ ವೀಕ್ ಆಗಿದೆ. ಒಂದು ಶಾಟ್ ಎಂಡ್ ಆಗುತ್ತಿದ್ದಂತೆ ಇನ್ನೊಂದು ಶಾಟ್‌ಗೆ ಹೋಗಬೇಕು ಎನ್ನುವಾಗ ಡಿಸ್ಟರ್ಬ್ ಆಗುತ್ತೆ. ಕೆಲವೊಮ್ಮೆ ಕಂಟಿನ್ಯೂಟಿ ಇಲ್ಲ ಅಂತ ಅನಿಸುತ್ತೆ. ಅದು ಬಿಟ್ಟರೆ, ಟೆಕ್ನಿಕಲಿ ಸಮಸ್ಯೆ ಏನಿಲ್ಲ. ಅನಿಲ್ ಇನ್ನೂ ಸ್ವಲ್ಪ ಎಫರ್ಟ್ ಹಾಕಬೇಕಿತ್ತು ಅಂತ ಅನಿಸುತ್ತೆ. ಆದರೆ, ಪಂಚಿಂಗ್ ಡೈಲಾಗ್‌ಗಳು ಪ್ರೇಕ್ಷಕರಿಂದ ಶಿಳ್ಳೆಗಳನ್ನು ಗಿಟ್ಟಿಸಿಕೊಳ್ಳುತ್ತವೆ.

ಕಲ್ಟ್ ಪ್ಲಸ್ ಏನು?

'ಕಲ್ಟ್' ಸಿನಿಮಾದ ಪ್ಲಸ್ ಪಾಯಿಂಟ್ ಅಂದರೆ, ಅದು ಹಾಡುಗಳು. ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಹಾಡುಗಳು ಇಷ್ಟ ಆಗುತ್ತವೆ. ಅಯ್ಯೋ ಶಿವನೇ ಹಾಡು ಇಷ್ಟ ಆಗುತ್ತೆ. ಇನ್ನು ಆಲ್‌ ಓಕೆಯ ಹ್ಯಾಪಿಯಾಗಿದೆ ಹಾಗೂ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ "ಹೇ ಶಾರದೆ.." ಹಾಡನ್ನು ಮರು ಬಳಕೆ ಮಾಡಿಕೊಳ್ಳಲಾಗಿದೆ. ರವಿ ವರ್ಮಾ ಕಂಪೋಸ್ ಮಾಡಿರುವ ಆಕ್ಷನ್ ಸೀಕ್ವೆನ್ಸ್ ಗಮನ ಸೆಳೆಯುತ್ತೆ. ಕ್ಯಾಮರಾ ವರ್ಕ್ ಕಣ್ಣಿಗೆ ತಂಪು ನೀಡುತ್ತೆ. ಸಿನಿಮಾ ಸೆಂಟಿಮೆಂಟ್ ಸೀನ್‌ಗಳು ಹೈಲೈಟ್ ಎನ್ನಬಹುದು.

ಕಲ್ಟ್ ಮೈನಸ್ ಏನು?

ಅನಿಲ್ ಸಿನಿಮಾ ಚಿತ್ರಕಥೆಗೆ ಇನ್ನಷ್ಟು ಗಮನ ಕೊಡಬೇಕಿತ್ತು. ಕಥೆಯನ್ನು ಇನ್ನಷ್ಟು ಗಟ್ಟಿಗೊಳಿಸಿದ್ದರೆ, ಸಿನಿಮಾ ಮತ್ತಷ್ಟು ಚೆನ್ನಾಗಿ ಇರುತ್ತಿತ್ತು. ಈ ಸಿನಿಮಾದಲ್ಲಿ ಹುಡುಗಿಯರನ್ನು ಬಿಂಬಿಸಿದ ರೀತಿ ಹೆಣ್ಣು ಮಕ್ಕಳ ಕೆಂಗಣ್ಣಿಗೆ ಗುರಿಯಾಗಬಹುದು.

More from Filmibeat

English summary
Zaid Khan, Rachita Ram, Malaika Vasupal movie Cult review and rating in Kannada.
Read more about: rachita ram review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X