twitter
    For Quick Alerts
    ALLOW NOTIFICATIONS  
    For Daily Alerts

    ಜೀರೋ: ಹೃದಯ ತಟ್ಟಿದರೂ, ಗಲ್ಲಾಪೆಟ್ಟಿಯಲ್ಲಿ ನಿರೀಕ್ಷೆ ಮುಟ್ಟಲ್ಲ!

    By ಜೇಮ್ಸ್ ಮಾರ್ಟಿನ್
    |

    Recommended Video

    ಹೃದಯ ತಟ್ಟಿದರೂ, ಗಲ್ಲಾಪೆಟ್ಟಿಯಲ್ಲಿ ನಿರೀಕ್ಷೆ ಮುಟ್ಟಲ್ಲ! | FILMIBEAT KANNADA

    ಜೀರೋ ಒಳಗೊಬ್ಬ ಹೀರೋ ಇದ್ದಾನೆ. ಇದೊಂದು ಪಾಸಿಟಿವ್ ಕಥೆ. ಇದು ಹೊಸ ಆರಂಭದ ಕಥೆ, ಈ ಚಿತ್ರ ಗೆಲ್ಲಲೇಬೇಕು ಎಂದು ಕಿಂಗ್ ಖಾನ್ ಶಾರುಖ್ ಎಷ್ಟೇ ಹೇಳಿದರೂ 'ಜೀರೋ' ಚಿತ್ರಕ್ಕೆ ವಿಮರ್ಶಕರು ಸೊನ್ನೆ ಸುತ್ತಿದ್ದಾರೆ.

    ಕುಬ್ಜ ವ್ಯಕ್ತಿಯೊಬ್ಬನನ್ನು ಇಡೀ ಚಿತ್ರ ಹೀರೋನಂತೆ ತೋರಿಸುವ, ನಾಯಕಿಯನ್ನು ವ್ಹೀಲ್ ಚೇರ್ ಮೇಲೆ ಕೂರಿಸಿ ನಟಿಸುವಂತೆ ಮಾಡಿರುವ ನಿರ್ದೇಶಕರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿ ಭಾವನೆಗಳೆ ಎಲ್ಲಕ್ಕಿಂತ ಮಿಗಿಲಾದದ್ದು, ಪ್ರೇಮಿಯೊಬ್ಬ ಚಂದಿರನನ್ನು ಬೇಕಾದರೂ ಭೂಮಿಗೆ ತರಬಲ್ಲ ಎಂಬುದನ್ನು ಕಥೆಗಳಲ್ಲಿ ಕೇಳಿದ್ದೆ, ನಾನು ಇದನ್ನು ಸೀರಿಯಸ್ ಆಗಿ ತೆಗೆದುಕೊಂಡು ಬಿಟ್ಟೆ ಎಂಬ ಮಾತು ಗುನುಗುವಂತೆ ಮಾಡುತ್ತದೆ.

    ಆದರೆ, ಕಥೆ ಹೇಳುವಲ್ಲಿ ನಿರ್ದೇಶಕ ಆನಂದ್ ರಾಯ್ ಕೊಂಚ ಎಡವಿದ್ದಾರೆ. ಚಿತ್ರದ ಕಥೆ ಬಗ್ಗೆ ಈಗಾಗಲೇ ಪ್ರೇಕ್ಷಕರಿಗೆ ಇದ್ದ ಕುತೂಹಲ ಚಿತ್ರ ನೋಡಿದ ಬಳಿಕ ಇರುವುದಿಲ್ಲ. ಮೊದಲಾರ್ಧದಲ್ಲಿ ಇರುವ ವೇಗ, ನಂತರ ಇಲ್ಲ, ಚಿತ್ರದ ದ್ವಿತೀಯಾರ್ಧದಲ್ಲಿ ಕಥೆ ಬೇರೆಯದ್ದೇ ಆಯಾಯ ಪಡೆದುಕೊಂಡು ವೇಗ ತಗ್ಗುತ್ತದೆ.

    'ಝೀರೋ' ಟ್ವಿಟ್ಟರ್ ವಿಮರ್ಶೆ: ನಿರೀಕ್ಷೆ ಹುಸಿಗೊಳಿಸುವ ಸಿನಿಮಾ.!'ಝೀರೋ' ಟ್ವಿಟ್ಟರ್ ವಿಮರ್ಶೆ: ನಿರೀಕ್ಷೆ ಹುಸಿಗೊಳಿಸುವ ಸಿನಿಮಾ.!

    ಶಾರುಖ್, ಕತ್ರೀನಾ, ಅನುಷ್ಕಾ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಶೀಬಾ ಛಡ್ಡಾ, ಜೀಶಂ ಅಯೂಬ್, ತಿಗ್ಮಂಶು ಧೂಲಿಯಾ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಹೀರೋನಿಂದ ಜೀರೋ, ಜೀರೋನಿಂದ ಹೀರೋ ಆಗುವ ತನಕ ಬಾಲಿವುಡ್ ಗೆ ಹೊಸದೇನಲ್ಲ. ಆದರೆ, ಕಥೆ ನಿರೂಪಣೆಯಲ್ಲಿ ಹೊಸ ತನ ವಿಲ್ಲದ ಕಾರಣ ಜೀರೋ ಬಹುತೇಕ ಎಲ್ಲಾ ವಿಮರ್ಶಕರಿಂದ ಥಮ್ಸ್ ಡೌನ್ ಪಡೆದುಕೊಂಡಿದೆ. ಸರಾಸರಿ ರೇಟಿಂಗ್ 5ಕ್ಕೆ 3 ದಾಟುವುದು ಕಷ್ಟವಾಗಿದೆ.

    ಟೈಮ್ಸ್ ಆಫ್ ಇಂಡಿಯಾ 3/5

    ಟೈಮ್ಸ್ ಆಫ್ ಇಂಡಿಯಾ 3/5

    ಉತ್ತಮ ಕಥೆಯನ್ನು ಉತ್ತಮ ರೀತಿಯಾಗಿ ಪ್ರೇಕ್ಷಕರಿಗೆ ಮುಟ್ಟಿಸುವುದು ಮುಖ್ಯ. ಕುತೂಹಲಕಾರಿ, ಸ್ಫೂರ್ತಿದಾಯಕ ಕಥೆಯೊಂದನ್ನು ಮೀರತ್ ನಿಂದ ಮಾರ್ಸ್ ತನಕ ಕೊಂಡೊಯ್ಯುವಲ್ಲಿ ಬರುವ ಅನೇಕ ಐಡಿಯಾಗಳು ವರ್ಕ್ ಔಟ್ ಆಗಿಲ್ಲ. ಚಿತ್ರದಲ್ಲಿ ಎಲ್ಲವೂ ಇದ್ದರೂ ಏನೋ ಮಿಸ್ ಆಗುತ್ತಿದೆ ಎನ್ನುವಷ್ಟರದಲ್ಲಿ ಚಿತ್ರ ಮುಗಿದುಬಿಡುತ್ತದೆ. ಶಾರುಖ್, ಕತ್ರೀನಾ, ಅನುಷ್ಕಾ ನಟನೆ ಚಿತ್ರವನ್ನು ಗೆಲ್ಲಿಸಿದರೂ ಗೆಲ್ಲಿಸಬಹುದು.

    ಸ್ಕ್ರೀನ್ ಪ್ಲೇ ಜೀರೋ: ಎನ್ಡಿಟಿವಿ 2/5

    ಸ್ಕ್ರೀನ್ ಪ್ಲೇ ಜೀರೋ: ಎನ್ಡಿಟಿವಿ 2/5

    ಸೂಪರ್ ಸ್ಟಾರ್ ತನ್ನ ಎಂದಿನ ಹೀರೋಯಿಸಂ ಬಿಟ್ಟು ಬೇರೆ ರೀತಿ ಸದಭಿರುಚಿ ಚಿತ್ರ ಒಪ್ಪಿಕೊಳ್ಳುವುದು ಬಾಲಿವುಡ್ ನಲ್ಲಿ ಸಾಮಾನ್ಯ ಸಂಗತಿಯಲ್ಲ. ಇಲ್ಲಿ ಪಾತ್ರಗಳು, ಪಾತ್ರಗಳಿಗೆ ನಟ, ನಟಿಯರ ಆಯ್ಕೆ ಸೂಕ್ತವಾಗಿದೆ. ಆದರೆ, ಕಳಪೆ ಸ್ಕ್ರೀನ್ ಪ್ಲೇಯಿಂದಾಗಿ ಅನಾನಸ್ ಹಾಕಿ ಮಾಡಿದ ಕೇಸರಿಬಾತ್ ತಿನ್ನುವ ಮಧ್ಯೆ ಎಲೆ ಕೋಸು ಸಿಕ್ಕಿ ರಸಭಂಗ ಉಂಟಾದ ಅನುಭವ ಪ್ರೇಕ್ಷಕರಿಗೆ ಆಗುತ್ತದೆ.

    ಕೋಯಿ ಮೋಯಿ 3/5

    ಕೋಯಿ ಮೋಯಿ 3/5

    ಶಾರುಖ್ ಖಾನ್ ಸೇರಿ ಪ್ರಮುಖ ನಟ, ನಟಿಯರ ನಟನೆ ಪ್ಲಸ್ ಆಗಿದ್ದರೆ, ಸೆಕೆಂಡ್ ಹಾಫ್ ನಲ್ಲಿ ಕಥೆಯ ವೇಗ, ಸಂಕಲನಕಾರರ ವೈಫಲ್ಯ ಚಿತ್ರದ ಯಶಸ್ಸಿಗೆ ಕಡಿವಾಣ ಹಾಕಬಹುದು.
    ಶಾರುಖ್ ಅಭಿನಯ ನೋಡಲು ಒಮ್ಮೆ ನೋಡಬಹುದು. ಛಾಯಾಗ್ರಹಣ, ಡೈಲಾಗ್ಸ್, ಸಂಗೀತ ಎಲ್ಲವೂ ಓಕೆ, ಆದರೆ, ಚಿತ್ರ ಹಿಟ್ ಲಿಸ್ಟ್ ಸೇರುವುದು ಕಷ್ಟ.

    ಅಭಿಮಾನಿಗಳಿಗೆ ಮಾತ್ರ ಕ್ವಿಂಟ್ 1/5

    ಅಭಿಮಾನಿಗಳಿಗೆ ಮಾತ್ರ ಕ್ವಿಂಟ್ 1/5

    ಶಾರುಖ್ ಅಭಿಮಾನಿಗಳು ಟೈಂ ಪಾಸಿಗಾಗಿ ಚಿತ್ರದ ಮೊದಲಾರ್ಧ ನೋಡಿ ಎದ್ದು ಹೋಗಬಹುದು. ಡ್ಯಾನ್ಸ್ ಸ್ಪರ್ಧೆ ಮಾಡಿ ಕುಬ್ಜನೊಬ್ಬ ಬಾಹ್ಯಾಕಾಶ ಸಾಹಸಕ್ಕೆ ಹಾರುವುದು ರೋಚಕವಾಗಿ ಕಾಣುತ್ತದೆ. ಇಂಟರ್ವಲ್ ನಂತರ ಚಿತ್ರ ನೋಡಿದರೆ ಅದು ಶಾರುಖ್ ಗಾಗಿ ಮಾತ್ರ ಎಂದು ಅಭಿಮಾನಿಗಳು ಕೂಡಾ ಹೇಳುವ ಮಾತಲ್ಲ, ಎಲ್ಲರ ಅನಿಸಿಕೆಯಾಗಿದೆ.

    English summary
    Zero Movie Critics Review: Zero leaves you with a bittersweet feeling. You walk out of the theatre in awe of the superlative performances, but your heart refuses to forgive the wobbly writing in second half.
    Friday, December 21, 2018, 20:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X