ಯಾಕೋ ಐಂದ್ರಿತಾ ನಸೀಬು ಎಲ್ಲೂ ನೆಟ್ಟಗಿಲ್ಲ!

<ul id="pagination-digg"><li class="previous"><a href="/news/01-kannada-actress-aindrita-ray-tamil-movie-shooting-aid0172.html">« Previous</a>

Aindrita Ray
ಕನ್ನಡದ ಕಥೆ ಇದಾಯ್ತು. ಇನ್ನು ತಮಿಳಿ ಕಡೆ ಮುಖ ಮಾಡಿದ್ದ ಐಂದ್ರಿತಾಗೆ ಅಲ್ಲೂ ಅದೃಷ್ಟ ಕೈ ಕೊಟ್ಟಿದೆ. ಕನ್ನಡಿಗ ವಿನಯ್ ರೈ ನಾಯಕರಾಗಿದ್ದ, ನಾಯಕಿಯಾಗಿ ಐಂದ್ರಿತಾ ನಟಿಸಬೇಕಾಗಿದ್ದ ಚಿತ್ರದ ಚಿತ್ರೀಕರಣವೀಗ ಮುಂದಕ್ಕೆ ಹೋಗಿದೆ. ಇದಕ್ಕೆ ಕಾರಣ ಅಪಘಾತ. ನಾಯಕ ವಿನಯ್ ರೈಗೆ ಅಪಘಾತವಾಗಿದೆ. ಹಾಗಾಗಿ ಚಿತ್ರದ ಆರಂಭವೇನಿದ್ದರೂ ಮೇ ತಿಂಗಳಲ್ಲಿ. ಅಷ್ಟರಲ್ಲಿ ಏನೇನಾಗುತ್ತೋ!

ಅಂದ ಹಾಗೆ, ಈ ತಮಿಳು ಚಿತ್ರದ ನಿರ್ದೇಶಕ ಛಾಯಾಗ್ರಾಹಕ ರಮೇಶ್. ಇದೇ ಮೊದಲ ಬಾರಿಗೆ ಅವರು ನಿರ್ದೇಶಕರಾಗಲಿದ್ದಾರೆ. ಇನ್ನೊಂದು ವಿಷಯವೆಂದರೆ ಐಂದ್ರಿತಾ ಹೀಗೆ ತಮಿಳಿನಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗುತ್ತಿರುವುದು ಇದು ಎರಡನೇ ಬಾರಿ.

ಈ ಹಿಂದೆ ನಕುಲ್ ನಾಯಕನಾಗಿರುವ ಚಿತ್ರಕ್ಕೂ ಐಂದ್ರಿತಾ ಆಯ್ಕೆಯಾಗಿದ್ದರು. ಇನ್ನೇನು ಶೂಟಿಂಗ್ ಶುರು ಎನ್ನುವಷ್ಟರಲ್ಲಿ ಪ್ರೊಜೆಕ್ಟೇ ನಿಂತು ಹೋಗಿತ್ತು. ಆದರೆ ಈ ಬಾರಿ ಹಾಗಾಗಲಿಕ್ಕಿಲ್ಲ ಅನ್ನೋದು ಐಂದ್ರಿತಾ ಭರವಸೆ. "ವಿನಯ್ ಕಾಲು ಮುರಿದಿರುವುದು ಹೌದು, ಆ ಕಾರಣಕ್ಕೇ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಸದ್ಯಕ್ಕೆ ನಾನು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ" ಎನ್ನುತ್ತಿದ್ದಾರೆ ಐಂದ್ರಿತಾ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/01-kannada-actress-aindrita-ray-tamil-movie-shooting-aid0172.html">« Previous</a>

More from Filmibeat

English summary
Kannada Actress Aindrita Ray's Tamil Movie shooting Post-phoned. The reason is the Hero Kannadiga Vinay Rai got accident. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X