ತಮಿಳಿನ ಸೆಂದಿಲ್ ಚಿತ್ರಕ್ಕೆ ಕನ್ನಡ ಸಿನಿ ತಾರೆ ಸ್ಫೂರ್ತಿ ಆಯ್ಕೆ
ಕನ್ನಡದ ಮತ್ತೊಂದು ಹಕ್ಕಿ ತಮಿಳಿಗೆ ಹಾರಲು ರೆಡಿಯಾಗಿದೆ. 'ಜಾಲಿಡೇಸ್' ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಟ್ಟ ಸ್ಫೂರ್ತಿಗೆ ತಮಿಳಿನಲ್ಲಿ ಭರ್ಜರಿ ಆಫರ್ ಸಿಕ್ಕಿದೆ. ತಮಿಳಿನ ಯಶಸ್ವಿ ನಿರ್ದೇಶಕ ಸೆಂದಿಲ್ ಚಿತ್ರದಲ್ಲಿ ಸ್ಫೂರ್ತಿ ಅಭಿನಯಿಸಲಿದ್ದಾರೆ.
ಸದ್ಯಕ್ಕೆ ಬಿಬಿಎಂ ಓದುತ್ತಿರುವ ಸ್ಫೂರ್ತಿ ಆದಷ್ಟು ಬೇಗ ಕೋರ್ಸನ್ನು ಮುಗಿಸುವ ಸ್ಫೂರ್ತಿಯಲ್ಲಿದ್ದಾರೆ. ಚಿತ್ರ ಡಿಸೆಂಬರ್‌ನಲ್ಲಿ ಶುರುವಾಗಲಿರುವುದೇ ಇದಕ್ಕೆ ಕಾರಣ. ಈಗಾಗಲೆ ಸ್ಫೂರ್ತಿ ಕನ್ನಡದ ಏಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಷ್ಟೆ ತೆರೆಕಂಡಿರು ಜಗ್ಗೇಶ್ ಅಭಿನಯದ 'ಬಾಡಿಗಾರ್ಡ್' ಚಿತ್ರದಲ್ಲೂ ಮುಖ್ಯ ಪಾತ್ರ ಪೋಷಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮದುವೆ ಮನೆ' ಚಿತ್ರದಲ್ಲಿ ತಂಗಿಯ ಪಾತ್ರಕ್ಕೆ ಜೀವತುಂಬಿದ್ದಾರೆ. ನವೀನ ಕೃಷ್ಣ ಜೊತೆಗಿನ 'ಜೀವನ ಜೋಕಾಲಿ' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಇಷ್ಟೆಲ್ಲಾ ಆಫರ್‌ಗಳ ನಡುವೆ ತಮಿಳು ಚಿತ್ರ ಸ್ಫೂರ್ತಿಯನ್ನು ಹುಡುಕಿಕೊಂಡು ಬಂದಿರುವುದು ಆಕೆಯ ಪಾಲಿಗೆ ಅದೃಷ್ಟದ ಬಾಗಿಲು ತೆರೆದಂತಾಗಿದೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











