Just In
Don't Miss!
- News
ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ, ಜಾಹೀರಾತು ಬೈಲಾ ತಿದ್ದುಪಡಿ: ಬಿಬಿಎಂಪಿ ಆಯುಕ್ತ
- Automobiles
ಮಾರಾಟದಲ್ಲಿ ಹೊಸ ಮೈಲಿಗಲ್ಲು ದಾಟಿದ ಟಾಟಾ ಆಲ್ಟ್ರೋಜ್ ಕಾರು
- Finance
ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಈ ವರದಿಗೆ ಏಕಿಷ್ಟು ಮಹತ್ವ?
- Lifestyle
ಕಾಂತಿಯುತ ತ್ವಚೆಗಾಗಿ ಬಾಳೆಹಣ್ಣಿನ ವಿವಿಧ ಫೇಸ್ ಮಾಸ್ಕ್ ಗಳು
- Sports
ಟೀಮ್ ಇಂಡಿಯಾ vs ಇಂಗ್ಲೆಂಡ್: ಚೆನ್ನೈಗೆ ಬಂದಿಳಿದ ಜೋ ರೂಟ್ ಪಡೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಮಿಳಿನಲ್ಲಿ ಶರ್ಮಿಳಾ ಮಾಂಡ್ರೆ ಹೊಸ ಇನ್ನಿಂಗ್ಸ್ ಆರಂಭ
ಬೆಂಗಳೂರು ಹುಡುಗಿ ಶರ್ಮಿಳಾ ಮಾಂಡ್ರೆ ತಮಿಳಿನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ತಮಿಳಿಗೆ ಚೊಚ್ಚಲ ಅಡಿಯಿಟ್ಟಿರುವ ಶರ್ಮಿಳಾ ಸಹಜವಾಗಿಯೇ ಥ್ರಿಲ್ ಆಗಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ನಾಯಕ ನಟ ಕನ್ನಡಿಗ ವಿನಯ್ ರೈ ಎಂಬುದು ಮತ್ತೊಂದು ವಿಶೇಷ. ಕಾಮಿಡಿ, ಸೆಂಟಿಮೆಂಟು ಹಾಗೂ ಮನರಂಜನೆಯ ಎಲ್ಲಾ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿವೆಯಂತೆ.
ಗ್ಲಾಮರ್ ಗರ್ಲ್ ಆಗಿ 'ಸಜನಿ'ಯಲ್ಲಿ, ಹಳ್ಳಿ ಹುಡುಗಿಯಾಗಿ 'ಕೃಷ್ಣ' ಚಿತ್ರದಲ್ಲಿ ಶರ್ಮಿಲಾ ಮಿಂಚಿದ್ದರು. ಅವಕಾಶ ಸಿಕ್ಕರೆ ತಮಿಳಾದರೇನು, ಮಲಯಾಳಂ ಆದರೇನು ಅಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವುದಾಗಿ ಹೇಳಿದ್ದರು. ಕಡೆಗೂ ಆಕೆಯ ಚೊಚ್ಚಲ ತಮಿಳು ಚಿತ್ರ ಸೆಟ್ಟೇರಿದೆ. ಚಿತ್ರದ ಶೂಟಿಂಗ್‌ಗಾಗಿ ಶರ್ಮಿಳಾ ಇತ್ತೀತೆಗೆ ಲಂಡನ್‌ಗೂ ಹೋಗಿ ಬಂದಿದ್ದಾರೆ. ಒಟ್ಟಿನಲ್ಲಿ ಬೆಂಗಳೂರು ಹವಾಗುಣದ ಮುಂದೆ ಲಂಡನ್ ಏನೇನೂ ಇಲ್ಲವಂತೆ.
ಶರ್ಮಿಳಾಗೆ ಕನ್ನಡದಲ್ಲಿ ಅವಕಾಶಗಳು ತಳಕಚ್ಚಿರುವುದು ಸುಳ್ಳಲ್ಲ. ಆಗಾಗ ಲೋಕಲ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶರ್ಮಿಳಾ ಕಡೆಗೂ ತಮಿಳುನಾಡಿಗೆ ಸಿನಿಯಾನ ಕೈಗೊಂಡಿದ್ದಾರೆ. ಅಲ್ಲೂ ಆಕೆಗೆ ಯಶಸ್ಸು ಸಿಗುತ್ತದೋ ಇಲ್ಲವೋ ಕಾದುನೋಡಬೇಕು. ಇದು ತೆಲುಗಿನ ಸೂಪರ್ ಹಿಟ್ ಚಿತ್ರ 'ಧೀ' ರೀಮೇಕ್ ಎಂಬುದು ಲೇಟೆಸ್ಟ್ ಮಾಹಿತಿ.