ರಮ್ಯಾ ಸಂಭಾವನೆ ಈಗ ಅಷ್ಟಿಟ್ಟಲ್ಲ, ಎಷ್ಟು ಗೊತ್ತೇ?
ಸ್ಯಾಂಡಲ್ ವುಡ್ ರಮ್ಯಾ ಸಿದ್ಲುಂಗು ಬಿಡುಗಡೆಯ ನಂತರ 'ಕಠಾರಿವೀರ ಸುರಸುಂದರಾಂಗಿ' ಚಿತ್ರೀಕರಣ ಮುಗಿಸಿ ತಮಿಳು ಚಿತ್ರರಂಗದತ್ತ ಮತ್ತೆ ಮುಖ ಮಾಡಿದ್ದಾರೆ. ತಮಿಳು ನಟ ಸಿಂಬರಸನ್ (ಸಿಂಬು) ಜೊತೆ 7 ವರ್ಷಗಳ ನಂತರ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ. 'ಸಿದ್ಲಿಂಗು' ಚಿತ್ರದ ಮಂಗಳಾ ಟೀಚರ್ ಪಾತ್ರವನ್ನು ಮೆಚ್ಚಿ ಈಗಲೂ ಸ್ವತಃ ರಮ್ಯಾ ಮಾತನಾಡುತ್ತಿದ್ದಾರೆ.
ಈಗ ರಮ್ಯಾ ಕುರಿತಂತೆ ಮತ್ತೊಂದು ಸುದ್ದಿ ಸ್ಫೋಟವಾಗಿದೆ. ಇದು ಕನ್ನಡದ ನಂಬರ್ ಒನ್ ನಟಿ ಎಂದು ಕರೆಸಿಕೊಳ್ಳುವ ರಮ್ಯಾರ ಸಂಭಾವನೆ ವಿಷಯ. ಈಗ ರಮ್ಯಾ ಚಿತ್ರವೊಂದಕ್ಕೆ ರು. 50 ಲಕ್ಷ ತೆಗೆದುಕೊಳ್ಳುತ್ತಾರೆ ಎಂಬ ಸುದ್ದಿ ಗಾಂಧಿನಗರದ ಗಡಿ ದಾಟಿ ಹಬ್ಬುತ್ತಿದೆ. ಈ ಮೊದಲು ರಮ್ಯಾರ ಸಂಭಾವನೆ ರು. 32 ಲಕ್ಷ ಎನ್ನಲಾಗುತ್ತಿತ್ತು.
ಈ ವಿಷಯದ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ರಮ್ಯಾ. "ನನಗೆ ಸಂಭಾವನೆ ವಿಚಾರದಲ್ಲಿ ಅಂತಹ ಆಸಕ್ತಿ ಇಲ್ಲ. ಚಿತ್ರದ ಕಥೆ ಹಾಗೂ ನನ್ನ ಪಾತ್ರ ಇಷ್ಟವಾದರೆ ಮಾತ್ರ ನಾನು ನಟಿಸುತ್ತೇನೆ. ನನ್ನನ್ನೇ ಹುಡುಕಿಕೊಂಡು ಬಂದಿರುವ ನಿರ್ಮಾಪಕರು ನಾನು ಕೇಳಿದಷ್ಟು ಕೊಡುತ್ತಾರೆ. ಆ ಪಾತ್ರಕ್ಕೆ ಅನ್ಯಾಯವಾಗದಂತೆ ನಟಿಸುತ್ತೇನೆ.
ಇಷ್ಟನ್ನು ಕೇಳಿದರೆ ನನ್ನಿಂದ ಚಿತ್ರಕ್ಕೆ ಹಾಗೂ ನಿರ್ಮಾಪಕರಿಗೆ ಮೋಸವಾಗುವುದಿಲ್ಲ ಎಂದು ಖಾತ್ರಿ ಮಾಡಿಕೊಂಡೇ ಪಡೆದುಕೊಳ್ಳುತ್ತೇನೆ. ಅದು ಅಷ್ಟು, ಇಷ್ಟು ಎಂಬ ವಿಷಯವೇ ಅಪ್ರಸ್ತುತ ಎಂದು ಹೇಳುವ ಮೂಲಕ ರಮ್ಯಾ ಆ ವಿಷಯಕ್ಕೆ ಬುದ್ಧಿವಂತಿಕೆಯಿಂದ ಉತ್ತರಿಸಿ ತೆರೆ ಎಳೆಯುತ್ತಾರೆ. ಅದೇ ರಮ್ಯಾ ಸ್ಪೆಷಾಲಿಟಿಯಲ್ಲೊಂದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











