ಚೇತನ್ ಭಗತ್ ಕೃತಿ ಸಿನಿಮಾಗೆ ತಮಿಳು ಸ್ಟಾರ್ ಸೂರ್ಯ

ಚೇತನ್ ಭಗತ್ ಕಾದಂಬರಿಗೂ ಸಿನಿಮಾಕ್ಕೂ ಅದೇನೋ ಸಿಕ್ಕಾಪಟ್ಟೆ ನಂಟು. ಅವರ ಫೈವ್ ಪಾಯಿಂಟ್ ಸಮ್ ಒನ್-2004, ಒನ್ ನೈಟ್ ಅಟ್ ದಿ ಕಾಲ್ ಸೆಂಟರ್-2005, ತ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್-2008 ಹಾಗೂ ಟೂ ಸ್ಟೇಟ್ಸ್-2009 ರಲ್ಲಿ ಪ್ರಕಟವಾದ ಕಾದಂಬರಿಗಳಾಗಿವೆ. ಅವುಗಳಲ್ಲಿ ಮೊದಲ ಮತ್ತು ಎರಡನೆ ಕೃತಿ ಸಿನಿಮಾಗಳಾಗಿವೆ.

ಅವರ ನಾಲ್ಕನೆಯ ಕೃತಿ, ಟೂ ಸ್ಟೇಟ್ಸ್ ಸಿನಿಮಾ ರೂಪ ಪಡೆಯುವ ಹಂತದಲ್ಲಿದೆ. ಭಾರದ್ವಜ್ ಹಾಗೂ ಸಾಜಿದ್ ನಾದಿಯಾವಾಲಾ ಈ ಸಿನಮಾ ನಿರ್ಮಿಸಲಿದ್ದಾರೆ. 2012ರಲ್ಲಿ ಸೆಟ್ಟೇರಲಿರುವ ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಈ ನಡುವೆ ಹೊಸದೊಂದು ಸುದ್ದಿ ಹರಿದಾಡುತ್ತಿದೆ. ಅದು ಚೇತನ್ ಭಗತ್ ರ ಹೊಚ್ಚ ಹೊಸ ಹಾಗೂ 5ನೆಯ ಕಾದಂಬರಿ ರೆವೊಲ್ಯೂಷನ್ 2020' ಕೂಡ ಸಿನಿಮಾ ಆಗಲಿದೆ.

ಈ ಸಿನಿಮಾಕ್ಕೆ ಖ್ಯಾತ ತಮಿಳು ಸ್ಟಾರ್ ಸೂರ್ಯ ನಾಯಕ ಎಂಬುದು ಅನಿರೀಕ್ಷಿತ ಹಾಗೂ ಹೊಸ ಸುದ್ದಿ. 'ಲವ್, ಕರೆಪ್ಷನ್, ಆಂಬಿಷನ್' ಎಂಬ ಟ್ಯಾಗ್ ಲೈನ್ ಹೊಂದಿರುವ ಈ 'ರೆವೊಲ್ಯೂಷನ್ 2020' ಕೃತಿಯನ್ನು ನಟ ಸೂರ್ಯ ಚೆನೈನಲ್ಲಿ ಬಿಡುಗಡೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಈ ಸುದ್ದಿ ಸ್ಪೋಟವಾಗಿದೆ. ಸೂರ್ಯ ನಾಯಕತ್ವದ ಸಿನಿಮಾ ಎಂದರೆ ಇಡೀ ಸೌತ್ ಇಂಡಿಯಾ ಸಂತೋಷಸಾಗರದಲ್ಲಿ ಮುಳುಗೇಳುವುದು ಗ್ಯಾರಂಟಿ. (ಒನ್ ಇಂಡಿಯಾ ಕನ್ನಡ)

More from Filmibeat

English summary
Writer Chetan bhagat's 'Revolution 2020 Novel' is going to be a movie. Tamil Star Suriya will b the Hero for that. 
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X