For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ ನಟ ವಿಜಯ್ ತಮಿಳು ಚಿತ್ರ ಪ್ರಚಾರ!

  By Rajendra
  |

  ಬೆಂಗಳೂರು ಮಹಾನಗರದಲ್ಲಿ ತಮಿಳು ಚಿತ್ರಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ! ಇದರಲ್ಲಿ ಎರಡು ಮಾತಿಲ್ಲ. ಭಾರಿ ನಿರೀಕ್ಷೆ ಹುಟ್ಟಿಸಿರುವ ತಮಿಳು ಚಿತ್ರ 'ವೇಲಾಯುಧಂ' ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಬೆಂಗಳೂರಿನ ವಿತರಕರು ಕೊಬ್ರಿ ಮಂಜು ಅಲಿಯಾಸ್ ಕೆ ಮಂಜು ಹಾಗೂ ಗುರುಪ್ರಸಾದ್!

  ಈ ಚಿತ್ರವನ್ನು ಪ್ರಚಾರ ಮಾಡಲು ಶನಿವಾರ ಬೆಂಗಳೂರಿನ ಪೂರ್ಣಿಮಾ ಚಿತ್ರಮಂದಿರಕ್ಕೆ ತಮಿಳು ನಟ ವಿಜಯ್ ಆಗಮಿಸಲಿದ್ದಾರೆ. ಹಂಸಿಕಾ ಮೋಟ್ವಾನಿ ಹಾಗೂ ಜೆನಿಲಿಯಾ ಚಿತ್ರದ ನಾಯಕಿಯರು. ಶನಿವಾರ ಸಂಜೆ (ಅ.15) 6 ಗಂಟೆಗೆ ವಿಜಯ್ ಬೆಂಗಳೂರಿಗೆ ಆಗಮಿಸಿ ತಮ್ಮ ಚಿತ್ರದ ಪ್ರಚಾರಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೋಗಯ್ಯ ಚಿತ್ರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸೆಟ್ಟೇರಿದ ಸಂದರ್ಭದಲ್ಲಿ ವಿಜಯ್ ಬೆಂಗಳೂರಿಗೆ ಬಂದಿದ್ದರು. ಅದಾದ ಬಳಿಕ ತಮಿಳು ನಟ ವಿಜಯ್ ಈಗ ಮತ್ತೊಮ್ಮೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. (ಏಜೆನ್ಸೀಸ್)

  English summary
  Tamil films young star Vijay is on promotion of his film ‘Velayudham’ in Bengaluru on Saturday. The ‘Velayudham’ Tamil film is distributed in Karnataka by Kannada producer and distributor K Manju and Guruprasad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X