'ಜೈಲರ್' ಸಿನಿಮಾ ಚೆನ್ನಾಗಿಲ್ಲ ಎಂದವರಿಗೆ ತಲೈವಾ ಫ್ಯಾನ್ಸ್ ಗೂಸಾ.. ವಿಜಯ್ ಫ್ಯಾನ್ಸ್ ಹೀಗ್ ಮಾಡಿದ್ರಾ?

ರಜನಿಕಾಂತ್ 'ಜೈಲರ್' ಆಗಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿ ಭರ್ಜರಿ ಸದ್ದು ಮಾಡ್ತಿದೆ. ತಲೈವಾ ಒನ್‌ಮ್ಯಾನ್ ಶೋ ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಸುಳಿವು ಸಿಕ್ತಿದೆ. ಫಸ್ಟ್ ಹಾಫ್ ಸೂಪರ್ ಎನಿಸಿದರೂ ಸೆಕೆಂಡ್ ಹಾಫ್ ಕೊಂಚ ಮಿಸ್ ಹೊಡೆದಿದೆ. ಆದರೂ ಒಟ್ಟಾರೆಯಾಗಿ ಸಿನಿಮಾ ಗೆದ್ದಿದೆ.

ಅಭಿಮಾನಿಗಳಿಗೆ ಸೂಪರ್ ಸ್ಟಾರ್ ಸಿನಿಮಾ ಅಂದ್ರೆ 2 ವರ್ಷಕ್ಕೊಮ್ಮೆ ಬರುವ ಹಬ್ಬ. ಫಸ್ಟ್‌ ಡೇ ಫಸ್ಟ್ ಶೋ ನೋಡೋಕೆ ಮುಗಿಬೀಳ್ತಾರೆ. ಥಿಯೇಟರ್‌ಗಳ ಮುಂದೆ ಕಟೌಟ್‌, ಬ್ಯಾನರ್ ಕಟ್ಟಿ, ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ, ಜೈಕಾರ ಹಾಕುತ್ತಾರೆ. ಇನ್ನು ಥಿಯೇಟರ್‌ ಒಳಗೆ ತಲೈವಾ ಎಂಟ್ರಿ, ಡೈಲಾಗ್, ಸಾಂಗ್ ಎಲ್ಲದ್ದಕ್ಕೂ ಹುಚ್ಚೆದ್ದು ಕುಣಿಯುತ್ತಾರೆ. ಇಷ್ಟೆಲ್ಲಾ ಸಂಭ್ರಮ ಸಡಗರದಲ್ಲಿ ಅಭಿಮಾನಿಗಳಿಗೆ ಚೆನ್ನೈನಲ್ಲಿ ಕೆಲವರು ಬೇಸರ ಉಂಟು ಮಾಡಿದ್ದಾರೆ. ಸಿನಿಮಾ ಚೆನ್ನಾಗಿಲ್ಲ ಎಂದು ಥಿಯೇಟರ್‌ನಲ್ಲಿ ಹೇಳಲು ಆರಂಭಿಸಿದ್ದಾರೆ.

2 men thrashed at therater by Rajinikanth fans for negative comments about Jailer

ನಮ್ಮ ತಲೈವಾ ಸಿನಿಮಾ ಚೆನ್ನಾಗಿಲ್ಲ ಅಂತೀರಾ? ಎಂದು ಕೂಡಲೇ ಅವರಿಬ್ಬರನ್ನು ಹಿಡಿದು ರಜನಿಕಾಂತ್ ಅಭಿಮಾನಿಗಳು ಥಳಿಸಿದ್ದಾರೆ. ಸದ್ಯ ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಚೆನ್ನೈ ಕ್ರಾಂಪೆಟ್‌ ಏರಿಯಾದ ವೆಟ್ರಿ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದೆ. ಈ ರೀತಿ ತಲೈವಾ ಅಭಿಮಾನಿಗಳಿಂದ ಗೂಸಾ ತಿಂದವರು ದಳಪತಿ ವಿಜಯ್ ಅಭಿಮಾನಿಗಳು ಎನ್ನಲಾಗುತ್ತಿದೆ.

ತಲೈವಾ Vs ವಿಜಯ್ ಫ್ಯಾನ್ಸ್

ಉದ್ದೇಶಪೂರ್ವಕವಾಗಿಯೇ ಅವರಿಬ್ಬರು ತಲೈವಾ ನಟನೆಯ 'ಜೈಲರ್' ಸಿನಿಮಾ ಚೆನ್ನಾಗಿಲ್ಲ ಎಂದು ನೆಗೆಟಿವ್ ರಿವ್ಯೂ ಕೊಡುತ್ತಿದ್ದರು. ಅಷ್ಟೇ ತಲೈವಾಗೆ ಧಿಕ್ಕಾರ ಕೂಗುತ್ತಿದ್ದರು. ಹಾಗಾಗಿ ಅವರಿಗೆ ರಜನಿಕಾಂತ್ ಫ್ಯಾನ್ಸ್ ತಕ್ಕ ಶಾಸ್ತಿ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಹಾಗಾಗಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ರಜನಿಕಾಂತ್ ವರ್ಸಸ್ ವಿಜಯ್ ಫ್ಯಾನ್ಸ್ ನಡುವಿನ ಕೆಸರೆರಚಾಟ ಶುರುವಾಗಿದೆ. ಕೆಲ ದಿನಗಳಿಂದ ಸೂಪರ್ ಸ್ಟಾರ್ ಟೈಟಲ್ ವಿಚಾರವಾಗಿ ತಮಿಳುನಾಡಿನಲ್ಲಿ ಭಾರೀ ಚರ್ಚೆ ನಡೀತಿದೆ. ಅದರ ಬೆನ್ನಲ್ಲೇ ಈ ರೀತಿ 'ಜೈಲರ್' ಸಿನಿಮಾ ಬಗ್ಗೆ ತಪ್ಪಾಗಿ ಮಾತನಾಡಿದವರನ್ನು ಥಳಿಸಲಾಗಿದೆ.

2 men thrashed at therater by Rajinikanth fans for negative comments about Jailer

ಸೂಪರ್ ಸ್ಟಾರ್ ಪಟ್ಟಕ್ಕೆ ಕಿತ್ತಾಟ?

ಕಳೆದೊಂದು ವರ್ಷದಿಂದ ಕಾಲಿವುಡ್ ಸೂಪರ್ ಸ್ಟಾರ್ ಯಾರು? ಎನ್ನುವ ಚರ್ಚೆ ಅಲ್ಲಿ ನಡೀತಿದೆ. ಸಿನಿಮಾಗಳ ಕಲೆಕ್ಷನ್, ಸಂಭಾವನೆ ವಿಚಾರದಲ್ಲಿ ದಳಪತಿ ವಿಜಯ್ ಈಗ ರಜನಿಕಾಂತ್‌ನ ಮೀರಿ ಮುಂದೆ ಹೋಗಿದ್ದಾರೆ. ಹಾಗಾಗಿ ಸೂಪರ್ ಸ್ಟಾರ್‌ ಟೈಟಲ್ ವಿಜಯ್‌ಗೆ ಕೊಡಬೇಕು ಎಂದು ಕೆಲವರು ಕೇಳುತ್ತಿದ್ದಾರೆ. ಆದರೆ ರಜನಿಕಾಂತ್ ಅಭಿಮಾನಿಗಳು, ಸಿನಿಮಾ ತಾರೆಯರು ಇದನ್ನು ಒಪ್ಪುತ್ತಿಲ್ಲ. ಯಾವತ್ತಿಗೂ ಸೂಪರ್ ಸ್ಟಾರ್ ಅಂದರೆ ರಜನಿಕಾಂತ್ ಎನ್ನುತ್ತಿದ್ದಾರೆ. ಇದೇ ಕಾರಣಕ್ಕೆ ವಿಜಯ್-ರಜನಿಕಾಂತ್ ಫ್ಯಾನ್ಸ್ ವಾರ್ ಶುರುವಾಗಿದೆ.

ತಲೈವಾ ಹದ್ದು- ಕಾಗೆ ಕಥೆ

ಇನ್ನು ಇತ್ತೀಚೆಗೆ ನಡೆದ 'ಜೈಲರ್' ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ತಲೈವಾ 'ಸೂಪರ್ ಸ್ಟಾರ್' ಟೈಟಲ್ ಬಗ್ಗೆಯೇ ಮಾತನಾಡಿದ್ದರು. ನನಗೂ ಈ ಟೈಟಲ್ ಇಷ್ಟ ಇಲ್ಲ. ಆದರೆ ಎಲ್ಲರೂ ಕೊಟ್ಟಿದ್ದಾರೆ ಅಷ್ಟೆ ಎಂದರು. ಇನ್ನು ಹದ್ದು ಹಾಗೂ ಕಾಗೆ ಕಥೆ ಹೇಳಿ ಕಾಗೆ ಯಾವತ್ತೂ ಕೂಡ ಹದ್ದು ಹಾರುವ ಎತ್ತರಕ್ಕೆ ಹಾರಲು ಸಾಧ್ಯವಿಲ್ಲ ಎಂದಿದ್ದರು. ನಾನು ಯಾರನ್ನು ಉದ್ದೇಶಿಸಿ ಈ ಮಾತು ಹೇಳುತ್ತಿಲ್ಲ ಎಂದೂ ಕೂಡ ಸ್ಪಷ್ಟಪಡಿಸಿದ್ದರು. ಆದರೆ ಕೆಲವರು ಮಾತ್ರ ಇದನ್ನು ಒಪ್ಪಲು ಸಿದ್ಧರಿಲ್ಲ.

ಬಾಕ್ಸಾಫೀಸ್‌ನಲ್ಲಿ 'ಜೈಲರ್' ಹವಾ

ರಜನಿಕಾಂತ್ ಬೇಕಂತಲೇ ವಿಜಯ್ ಬಗ್ಗೆ ಈ ರೀತಿ ಪರೋಕ್ಷವಾಗಿ ಮಾತನಾಡಿದ್ದಾರೆ ಎನ್ನುವ ಚರ್ಚೆ ಹುಟ್ಟು ಹಾಕಿದರು. ಇದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡಿತು. ಅಂದಹಾಗೆ ನೆಲ್ಸನ್ ನಿರ್ದೇಶನದ 'ಜೈಲರ್' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಎಲ್ಲಾ ವಿಭಾಗದಲ್ಲೂ ಸೂಪರ್ ಎನಿಸುವ ಸಿನಿಮಾ ಭರ್ಜರಿ ಸಕ್ಸಸ್ ಕಾಣುವ ಸುಳಿವು ಸಿಗುತ್ತಿದೆ.

More from Filmibeat

English summary
Rajinikanth fans attacked 2 men for giving Jailer negative review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X