ರಜನಿಕಾಂತ್ ಅಳಿಯ ಧನುಷ್ ಬಾಲಿವುಡ್ ಯಾತ್ರೆಗೆ ರೆಡಿ

ಈ ಮೊದಲೇ ಸಾಕಷ್ಟು ಬಾರಿ ಈ ವಿಷಯವನ್ನು ಹೇಳಿದ್ದ ಧನುಷ್, ಈಗ ಪಕ್ಕಾ ರೆಡಿಯಾಗಿದ್ದಾರೆ. ಏಕೆಂದರೆ, ಈಗ ಆಲ್ ಇಂಡಿಯಾದಲ್ಲಿ ಧನುಷ್ ಯಾರೆಂದು ಕೇಳುವವರಿಲ್ಲ. ಕೊಲವೆರಿ ಹಾಡೂ ಕೇಳದವರಿಲ್ಲ ಎಂಬಂತಾಗಿದೆ. ಕಾದಾಗಲೇ ಕಬ್ಬಿಣ ಬಡಿಯಬೇಕೆಂಬುದು ಧನುಷ್ ಮಾವ ರಜನಿಯಿಂದ ಕಲಿತ ಪಾಠ.
ತೀರಾ ಇತ್ತೀಚಿಗೆ ಹೃತಿಕ್ ರನ್ನು ಮುಂಬೈನಲ್ಲಿ ಧನುಷ್ ಭೇಟಿಯಾಗಿದ್ದಾರೆ. ಮಾತುಕತೆ ಕೂಡ ನಡೆಸಿದ್ದಾರೆ. ಹೃತಿಕ್ ಗ್ರೀನ್ ಸಿಗ್ನಲ್ ಕೊಟ್ಟರೋ ಬಿಟ್ಟರೋ ಹೇಳುವವರಿಲ್ಲ. ಗುಟ್ಟು ಹೃತಿಕ್ ಹಾಗೂ ಧನುಷ್ ಇಬ್ಬರ ಬಾಯಿಂದಲೂ ಆಚೆ ಬರುತ್ತಿಲ್ಲ. ಕಾಲ ಬಂದಾಗ ಈಚೆ ಬಂದೇ ಬರುತ್ತದೆ ಬಿಡಿ, ಕಾಲವನ್ನು ತಡೆಯೋರು ಯಾರೂ ಇಲ್ಲ. ಶುಭಸ್ಯ ಶೀಘ್ರಂ ಎಂದು ಅವರೇ ಬಾಯ್ಬಿಟ್ಟರೆ ಒಳ್ಳೆಯದು. (ಏಜೆನ್ಸೀಸ್)
More from Filmibeat
English summary
Tamil Actor Dhanush is going to direct Hrithik Roshan. Many time he told this to media. Now, after the grand hit of his 'KOlaver...di' Song, he met with Hrithik and told him his desire.


Click it and Unblock the Notifications











