ಯೋಗೇಶ್ ಹಾಡಿದ ಧನುಷ್ ಸೆನ್ಸೇಷನ್ ಕೊಲವೆರಿ...ಡಿ
ಲೂಸ್ ಮಾದ ಯೋಗೇಶ್ ಹೊಸ ಸಾಹಸವೊಂದನ್ನು ಮಾಡಿದ್ದಾರೆ. ಧನುಷ್ ಬರೆದು ಹಾಡಿದ ತಮಿಳಿನ ಹೊಸ ಸೆನ್ಸೇಷನ್ ಗೀತೆ 'ಕೊಲವೆರಿ...ಡಿ ಹಾಡನ್ನು ಕನ್ನಡದಲ್ಲಿ ಹಾಡಿದ್ದಾರೆ. ತಮಿಳಿನ ಈ ಗೀತೆ ಈಗ ಯುವಜನತೆಯನ್ನು ಹಚ್ಚೆಬ್ಬಿಸಿರುವ ಗೀತೆಯಾಗಿದ್ದು ರಾಷ್ಟ್ರೀಯ ಗೀತೆಯಂತಾಗಿದೆ. ಈಗಗಲೇ ಸಾಕಷ್ಟು ಜನ ಇದನ್ನು ಹಾಡಿದ್ದರೂ ಯೋಗೇಶ್ ಹಾಡು ವಿಶೇಷವಾಗಿದೆ.
ತಮಿಳು ನಟ ಧನುಷ್ ನಟಿಸಿದ ಸಾಕಷ್ಟು ಚಿತ್ರಗಳನ್ನು ಕನ್ನಡದಲ್ಲಿ ರಿಮೇಕ್ ಮಾಡಿದ್ದು ಅದರಲ್ಲಿ ಯೋಗೇಶ್ ಅದ್ಭತವಾಗಿ ನಟಿಸಿದ್ದಾರೆ. ಯೋಗೇಶ್. ನೋಡಲು ಪೆಕರನ ರೀತಿ ಇದ್ದಾರೆ, ಇವರು ಹೀರೋ ಆಗಲು ನಾಲಾಯಕ್ಕು ಎಂದವರಿಗೆ ತಾವು ಸಮರ್ಥ ನಟರು ಎಂಬುದನ್ನು ಧನುಷ್ ಹಾಗೂ ಯೋಗೇಶ್ ತಮ್ಮ ವಿಭಿನ್ನ ನಟನೆಯ ಮೂಲಕ ಉತ್ತರಿಸಿದ್ದಾರೆ.
ಧನುಷ್ ಪಾತ್ರ ಹಾಗೂ ಮ್ಯಾನರಿಸಂ ಯೋಗಿಗೆ ಸಹಜವಾಗಿ ಹೊಂದಿಕೊಳ್ಳುವುದರಿಂದ ಈ ಹಾಡು ಕೂಡ ವಿಶೇಷವೆನಿಸುತ್ತದೆ. ಆಕಾಶದೆತ್ತರಕ್ಕೆ ಬೆಳೆಯಲು ಅವಕಾಶ ಇರುವ ಸಿನಿಮಾ ಕ್ಷೇತ್ರದಲ್ಲಿ ಇಂತಹ ಹೊಸ ಹೊಸ ಪ್ರಯೋಗಗಳು ನಡೆಯುತ್ತಿರಲಿ. ಜೊತೆಗೆ ಶ್ರಮಕ್ಕೆ ತಕ್ಕ ಬೆಲೆ ಹಾಗೂ ಪ್ರಚಾರ ಕೊಡುವುದನ್ನು ಚಿತ್ರರಂಗ ಅಳವಡಿಸಿಕೊಳ್ಲಲಿ. (ಒನ್ ಇಂಡಿಯಾ ಕನ್ನಡ)


Click it and Unblock the Notifications











