ತಮಿಳು ವಿಷ್ಣುವರ್ಧನನಿಗೆ ಭಾವನಾ, ಪ್ರಿಯಾಮಣಿ

ಕನ್ನಡದಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ 'ವಿಷ್ಣುವರ್ಧನ' ಚಿತ್ರ ಇದೀಗ ಬಾಲಿವುಡ್ ಹಾಗೂ ತೆಲುಗಿನಲ್ಲಿ ರೀಮೇಕ್ ಆಗುತ್ತಿರುವುದಲ್ಲದೇ ತಮಿಳಿನಲ್ಲೂ ನಿರ್ಮಾಣವಾಗಲಿದೆ. ಇಲ್ಲಿ ಸುದೀಪ್ ಪೋಷಿಸಿದ ವಿಷ್ಣುವರ್ಧನ್ ಪಾತ್ರವನ್ನು ಅಲ್ಲಿ ವಿಜಯ್ ಅಥವಾ ಕಾರ್ತಿ ಮಾಡಲಿದ್ದಾರೆ ಎಂಬ ವಿಷಯ ಇನ್ನೂ ಬಗೆಹರಿದಿಲ್ಲವಾದರೂ ನಾಯಕಿಯರಾಗಿ ಭಾವನಾ ಹಾಗೂ ಪ್ರಿಯಾಮಣಿ ಅಲ್ಲೂ ನಟಿಸಿಲಿದ್ದಾರೆ.

ಕನ್ನಡದಲ್ಲಿ ಜಾಕಿ ಚಿತ್ರ ಮೂಲಕ ಕಾಲಿಟ್ಟ ಭಾವನಾ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಒಂದಾದ ನಂತರ ಇನ್ನೊಂದರಂತೆ ಕನ್ನಡದಲ್ಲಿ ಅವಕಾಶ ಪಡೆಯುತ್ತಿರುವ ಭಾವನಾ ಚೆಲುವೆ ಮಾತ್ರವಲ್ಲ, ಪ್ರತಿಭಾವಂತೆ ಕೂಡ. ವಿಷ್ಣುವರ್ಧನ ನಂತರ ಈಗ ರೋಮಿಯೋ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ಜತೆಯಾಗಿದ್ದಾರೆ.

ಇನ್ನು ನಮ್ಮ ಕನ್ನಡದ ನಟಿಮಣಿ ಪ್ರಿಯಾಮಣಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ನೆರೆಹೊರೆಯ ಭಾಷೆಗಳಲ್ಲೆಲ್ಲಾ ಪ್ರಖ್ಯಾತಿ ಹೊಂದಿದ ಮೇಲೆ ಕನ್ನಡ ಸಿನಿಮಾ ಕಡೆ ಬಂದ ಈ ಕನ್ನಡತಿ ಎಲ್ಲಾ ಕಡೆ ಅವಕಾಶ ಪಡೆಯುತ್ತಿರುವ ಬೋಲ್ಡ್ ಮತ್ತು ಪ್ರತಿಭಾವಂತ ನಟಿ. ಸದ್ಯಕ್ಕೆ ಶ್ರೀನಗರ ಕಿಟ್ಟಿ ಜತೆ 'ಕೋ ಕೋ' ಆಡಿ ಮುಗಿಸಿ ಶಿವಣ್ಣನಿಗೆ 'ಲಕ್ಷ್ಮಿ' ಚಿತ್ರಕ್ಕೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇಬ್ಬರ ಪ್ರಯಾಣವೂ ಜೋರಾಗಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
In Tamil remake kannada Vishnuvardhna movie also, heroines are Bhavana and Priyamani. But hero is not confirmed whether Vijay or Karthi. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X