For Quick Alerts
  ALLOW NOTIFICATIONS  
  For Daily Alerts

  ಸಿಂಬು ಜೊತೆ ರೊಮಾನ್ಸ್ ಮಾಡಲಿರುವ ರಮ್ಯಾ

  |

  ತಮಿಳು ಲಿಟ್ಲ್ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಸಿಂಬು ಚಿತ್ರದಲ್ಲಿ ನಾಯಕಿಯಾಗಿ ಕನ್ನಡದ ಟಾಪ್ ನಟಿ ರಮ್ಯಾ ಅಭಿನಯಿಸಲಿದ್ದಾರೆ. ಸಿಂಬು ಜೊತೆ ಲೀಡರ್ ಖ್ಯಾತಿಯ ರಾಣಾ ದಗ್ಗುಬಾಟಿ ಕೂಡ ಇದ್ದಾರೆ. ಆದರೆ ರಮ್ಯಾ ಸಿಂಬುಗೆ ನಾಯಕಿ. ಪೊಲ್ಲಾಧವನ್ ಚಿತ್ರ ನಿರ್ದೇಶಿಸಿದ್ದ ವೆಟ್ರಿ ಮಾರನ್ ಈ ಚಿತ್ರದ ನಿರ್ದೇಶಕರು.

  "ಪೊಲ್ಲಾಧವನ್ ಚಿತ್ರದ ನಂತರ ನನಗೆ ಅನೇಕ ಆಫರ್ ಗಳು ಬಂದಿವೆ. ಆದರೆ ನನಗೆ ಯಾವ ನಿರ್ದೆಶಕ ಹಾಗೂ ನಾಯಕನ ಜೊತೆ ನಟಿಸುತ್ತೇನೆ ಅನ್ನುವುದು ಮುಖ್ಯ. ಆ ಕಾರಣಕ್ಕೆ ಹೊಸ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ವೆಟ್ರಿ ಮಾರನ್ ಸರ್ ಜೊತೆ ನನ್ನ ಕಂಫರ್ಟ್ ಲೆವಲ್ ಚೆನ್ನಾಗಿದೆ, ನಟಿಸಲು ಒಪ್ಪಿಕೊಂಡಿದ್ದೇನೆ

  ಹಾಗಾಗಿ ಸಿಂಬು ಎದುರು ನಾಯಕಿಯಾಗಿ ವೆಟ್ರಿ ಮಾರನ್ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಕಥೆ ಕೇಳಿದ್ದೇನೆ, ಚೆನ್ನಾಗಿದೆ. ಕಠಾರಿವೀರ ಸುರ ಸುಂದರಾಂಗಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇರುವುದರಿಂದ ಇನ್ನೂ ಕರಾರುಪತ್ರಕ್ಕೆ ಸಹಿ ಹಾಕಿಲ್ಲ. ಸದ್ಯದಲ್ಲಿಯೇ ಚೆನ್ನೈಗೆ ಹೋಗಿ ಫೈನಲ್ ಮಾಡಿಕೊಂಡು ಬರುವೆ" ಎಂದಿದ್ದಾರೆ ರಮ್ಯಾ. (ಒನ್ ಇಂಡಿಯಾ ಕನ್ನಡ)

  English summary
  Actress Ramya acts in the movie of Tamil Director Vetri Maran. Simbu is the Hero of that movie and Leader fame Rana Daggubati also in the movie. After Polladhavan, Ramya is acting another movie of director Vetri Maran.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X