ಬಾಲಿವುಡ್ ತೆರೆಯ ಮೇಲೆ ತಮಿಳು ನಟ ಧನುಷ್
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ, 'ಕೊಲವೆರಿ ಡಿ' ಖ್ಯಾತಿಯ ತಮಿಳು ನಟ ಧನುಷ್ ಬಾಲಿವುಡ್ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. 'ತನು ವೆಡ್ಸ್ ಮನು' ಚಿತ್ರದ ಖ್ಯಾತ ನಿರ್ದೆಶಕ 'ಆನಂದ್ ಎಲ್ ರಾಯ್' ನಿರ್ದೆಶನದ ಮುಂದಿನ ಚಿತ್ರ 'ರಂಜನಾ'ದಲ್ಲಿ ನಾಯಕನಾಗಿ ಸಹಿ ಮಾಡುವ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದ್ದಾರೆ.
ಧನುಷ್ ಗೆ ಹಿಂದಿ ಚಿತ್ರರಂಗ ಪ್ರವೇಶಿಸುವ ಕನಸು ಬಹಳ ಹಿಂದಿನಿಂದಲೂ ಇತ್ತು. ಹೃತಿಕ್ ರೋಶನ್ ಚಿತ್ರವೊಂದನ್ನು ನಿರ್ದೇಶಿಸಲಿರುವುದಾಗಿ ಈಗಾಗಲೇ ಧನುಷ್ ಘೋಷಿಸಿದ್ದಾರೆ. ಈಗ ನಟನೆಗೂ ಅವಕಾಶ ದೊರೆತು ಕನಸು ನನಸಾಗಿದೆ. ಅದು ಕೊಲವೆರಿ ಹಾಡಿನ ಖ್ಯಾತಿಯ ನಂತರ ಕೈಗೂಡಿದೆ. ಧನುಷ್ ಈಗ ಫುಲ್ ಖುಷ್.
"ರಾಯ್ ಅವರ ಚಿತ್ರಕಥೆ ಮಾಮೂಲಿ ಚಿತ್ರಗಳಿಗಿಂತ ಭಿನ್ನವಾಗಿರುತ್ತದೆ. ಅವರ ಚಿತ್ರದಲ್ಲಿ ನಟಿಸಲಿರುವುದು ನನ್ನ ಭಾಗ್ಯ. ಕಳೆದ ಆರು ತಿಂಗಳಿನಿಂದ ಈ ಅವಕಾಶಕ್ಕಾಗಿ ಕಾಯುತ್ತಿದ್ದೆ. ಹಿಂದಿ ಭಾಷೆಯಲ್ಲಿ ಹಿಡಿತ ಸಾಧಿಸಲು ಇದೀಗ ಹಿಂದಿ ಕಲಿಯುತ್ತಿದ್ದೇನೆ" ಎಂದಿದ್ದಾರೆ 'ಅದು ಕಾಲಂ' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಟ ಧನುಷ್. (ಒನ್ ಇಂಡಿಯಾ ಕನ್ನಡ)


Click it and Unblock the Notifications











