ಚಿಗರೆ ಕಂಗಳ ಐಂದ್ರಿತಾ ರೇ ತಮಿಳು ಚಿತ್ರದ ಕನಸು ಭಗ್ನ

By Rajendra

ಕನ್ನಡ ಚಿತ್ರರಂಗದಲ್ಲಿ ಹೆಸರು, ಹಣ ಮಾಡಿದ ಮೇಲೆ ಚಿಗರೆ ಕಂಗಳ ಚೆಲುವೆ ಐಂದ್ರಿತಾ ರೇ ತಮಿಳು ಚಿತ್ರರಂಗದ ಬಾಗಿಲನ್ನು ಮೆಲ್ಲಗೆ ತಟ್ಟಿದ್ದರು. ಆದರೆ ಪ್ರಥಮ ಪ್ರಯತ್ನದಲ್ಲೆ ಆಕೆಯ ಕನಸು ನುಚ್ಚು ನೂರಾಗಿದೆ. ನಕುಲ್ ಮುಖ್ಯಭೂಮಿಕೆಯಲ್ಲಿರುವ ತಮಿಳು ಚಿತ್ರದ ಮೂಲಕ ಇನ್ನೇನು ಐಂದ್ರಿತಾ ಪದಾರ್ಪಣೆ ಮೂರೇ ಗೇಣು ಅಂತರದಲ್ಲಿತ್ತು.

ಆದರೆ ಚಿತ್ರದ ನಿರ್ದೇಶಕ ಜಾನ್ ಮಹೇಂದ್ರನ್ ಸ್ಪಷ್ಟವಾದ ಕಾರಣ ನೀಡದೆ ತಮ್ಮ ಚಿತ್ರದಿಂದ ಐಂದ್ರಿತಾರನ್ನು ಕೈಬಿಟ್ಟಿದ್ದಾರೆ. ಫೋಟೋ ಶೂಟ್ ಹಾಗೂ ಕೆಲದಿನಗಳ ಚಿತ್ರೀಕರಣವೂ ನಡೆಸಿದ್ದರು ಜಾನ್. ಬಳಿಕ ಏನಾಯಿತೋ ಏನೋ "ತಮ್ಮ ಚಿತ್ರಕ್ಕೆ ಐಂದ್ರಿತಾ ನಾಲಾಯಕ್ ಹಾಗೂ ಪರಿಣಾಮಕಾರಿಯಾಗಿಲ್ಲ " ಎಂದು ಕಾರಣ ನೀಡಿ ಆಕೆಗೆ ಗೇಟ್ ಪಾಸ್ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಐಂದ್ರಿತಾ, "ಜಾನ್ ಅವರು ದಕ್ಷ ನಿರ್ದೇಶಕ ಅನ್ನಿಸಿಕೊಳ್ಳುವುದಿಲ್ಲ. ಅವರಿಗೆ ಡೇಟ್ಸ್ ಕೊಟ್ಟಿದ್ದೆ. ಕೆಲದಿನಗಳ ಚಿತ್ರೀಕರಣವೂ ನಡೆದಿತ್ತ್ತು. ನಿಮ್ಮ ಕೆಲಸ ಹಿಡಿಸಿದೆ ಎಂದು ಸಂದೇಶವನ್ನೂ ರವಾನಿಸಿದ್ದರು. ಕನ್ನಡದಲ್ಲಿ 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾನು ಅಭಿನಯಿಸಿದ್ದೇನೆ. ಜಾನ್ ಅವರು ಕೇವಲ ಒಂದೇ ಒಂದು ಚಿತ್ರವನ್ನು ನಿರ್ದೇಶಿಸಿದ್ದಾರೆ. ಅದೂ ಫ್ಲಾಪ್ ಸಿನಿಮಾ" ಎಂದು ತಮ್ಮ ಸಿಟ್ಟನ್ನು ತೋಡಿಕೊಂಡಿದ್ದಾರೆ.

More from Filmibeat

English summary
After shooting for few days, Kannada actress Aindrita Ray has opted out of film with Nakul directed by John Mahendran. John who did a photo shoot and also shot the film for a few days has found her to be "unsuitable and unimpressive for the role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X