For Quick Alerts
  ALLOW NOTIFICATIONS  
  For Daily Alerts

  ತಮಿಳುನಟ ಸಿದ್ಧಾರ್ಥ್, ರಮ್ಯಾಗೆ 'ಪ್ಯಾರ್ಗೆ ಆಗ್ಬಿಟ್ಟೈತೆ'

  |

  ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಅಭಿಮಾನಿಗಳಿಗೆ ಬರವಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ರಮ್ಯಾ ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇದೀಗ ಹೊಸ ವಿಷಯವೆಂದರೆ ರಮ್ಯಾಗೆ ಕನ್ನಡ ಹಾಡೊಂದನ್ನು ಎಷ್ಟು ಸಲ ಬೇಕಾದರೂ ಹಾಡುವುದಾಗಿ ತಮಿಳು ನಟನೊಬ್ಬ ಅಭಿಮಾನದಿಂದ ಹೇಳಿಕೊಂಡಿರುವುದು.

  ತಮಿಳು ನಟ ಸಿದ್ಧಾರ್ಥ್ ಕನ್ನಡದ ಇತ್ತೀಚಿನ ಸೆನ್ಸೇಷನಲ್ ಹಾಡು 'ಪ್ಯಾರ್ಗೆ ಆಗ್ಬಿಟ್ಟೈತೆ...'ಹಾಡನ್ನು ಬಹಳ ಮೆಚ್ಚಿಕೊಂಡಿದ್ದಾರಂತೆ. ರಮ್ಯಾ ಹಾಗೂ ಸಿದ್ಧಾರ್ಥ್ ಇತ್ತೀಚಿಗೆ ಭೇಟಿಯಾದಾಗ ಈ ಹಾಡನ್ನು ಅವರು ರಮ್ಯಾ ಮುಂದೆ ಚೆನ್ನಾಗಿ ಹಾಡಿದ್ದಾರಂತೆ. ಅದರ ವಿಡಿಯೋ ಕೂಡ ಇದೆ ಎಂದು ರಮ್ಯಾ ತಿಳಿಸಿದ್ದಾರೆ. ಇದೊಂದೇ ಸಲವಲ್ಲ, ನಿನಗಾಗಿ ಈ ಹಾಡನ್ನು ನಾನು ಯಾವಾಗ ಬೇಕಾದರೂ ಹಾಡ್ತೇನೆ ಎಂದಿದ್ದಾರಂತೆ ಸ್ವತಃ ಸಿದ್ಧಾರ್ಥ್.

  ಅಂದ ಹಾಗೆ, ಸಿದ್ದಾರ್ಥ್ ಮತ್ತು ರಮ್ಯಾ ತಮಿಳು ನಿರ್ದೇಶಕ ವೇಟ್ರಿಮಾರನ್ ಮುಂದಿನ ಚಿತ್ರವೊಂದರಲ್ಲಿ ಜೋಡಿಯಾಗುವ ಸಾಧ್ಯತೆಗಳಿವೆ. 'ವಡಾ ಚೆನ್ನೈ' ಹೆಸರಿನ ಚಿತ್ರದಲ್ಲಿ ನಟಿಸಲಿದ್ದೇನೆ ಅಂತ ಕೆಲವು ದಿನಗಳ ಹಿಂದೆ ರಮ್ಯಾ ಹೇಳಿದ್ದರು. ಆ ಚಿತ್ರದಲ್ಲಿ ಸಿದ್ಧಾರ್ಥ್ ಕೂಡ ನಟಿಸಲಿರುವುದು ಖಾತ್ರಿಯಾಗಿದೆ. ಅಧಿಕೃತ ಮಾಹಿತಿ ಸದ್ಯದಲ್ಲೇ ಬರಲಿದೆಯಂತೆ. ಒಟ್ಟಿನಲ್ಲಿ ತಮಿಳಿನ ಕೊಲವೆರಿ ಹಾಡಿನಂತೆ ಕನ್ನಡದ ಹಾಡೂ ಕೂಡ ಜಾದೂ ಮಾಡಿದೆ. (ಒನ್ ಇಂಡಿಯಾ ಕನ್ನಡ)

  English summary
  Tamil Actor Siddhath Narayan sung Kannada Song Pyarge Agbittaite to actress Ramya. He told that he can sing it anytime for Ramya. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X