twitter
    For Quick Alerts
    ALLOW NOTIFICATIONS  
    For Daily Alerts

    ರಜಿನಿ '2.0'ಗೆ 4 ವರ್ಷ; ಮಿಶ್ರ ಪ್ರತಿಕ್ರಿಯೆ ಇದ್ದರೂ 664 ಕೋಟಿ ಗಳಿಸಿದ ಚಿತ್ರ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

    |
    4 years for Robo 2 point 0 Movie: Here is the movies world wide total collection details

    ನಿನ್ನೆಗೆ ನಾಲ್ಕು ವರ್ಷಗಳ ಹಿಂದೆ ಅಂದರೆ 2018ರ ನವೆಂಬರ್ 29ರಂದು ರಜಿನಿಕಾಂತ್, ಅಕ್ಷಯ್ ಕುಮಾರ್ ಹಾಗೂ ಆಮಿ ಜಾಕ್‌ಸನ್ ನಟನೆಯ ಚಿತ್ರ ರೊಬೊ 2.0 ತೆರೆಗೆ ಅಪ್ಪಳಿಸಿತ್ತು. ಈ ಹಿಂದೆ ಇದೇ ಮಾದರಿಯಲ್ಲಿ 'ಎಂದಿರನ್' ಚಿತ್ರ ಮಾಡಿ ಗೆದ್ದಿದ್ದ ನಿರ್ದೇಶಕ ಶಂಕರ್ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ್ದರು. ಇನ್ನು ಬಿಡುಗಡೆಗೂ ಮುನ್ನ ಟ್ರೈಲರ್ ಹಾಗೂ ಟೀಸರ್‌ಗಳಿಂದ ಪ್ರೇಕ್ಷಕರಲ್ಲಿ ಹುಚ್ಚೆಬ್ಬಿಸಿದ್ದ ಚಿತ್ರ ಬಿಡುಗಡೆಯಾದ ನಂತರ ಜನರ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು.

    ಹೌದು, ಸುಮಾರು 540 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿದ್ದ ರೊಬೊ 2.0 ಚಿತ್ರ ವೀಕ್ಷಿಸಿದ್ದ ಸಿನಿ ಪ್ರೇಕ್ಷಕ ಚಿತ್ರದ ಗ್ರಾಫಿಕ್ಸ್‌ಗೆ ಫಿದಾ ಆಗಿದ್ದನೇ ಹೊರತು ಚಿತ್ರಕತೆಯನ್ನು ಮೆಚ್ಚಿಕೊಳ್ಳಲಿಲ್ಲ. ಹೀಗಾಗಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಹೀಗಾಗಿ ಮೊದಲ ದಿನ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದ್ದ ರೊಬೊ 2.0 ನಂತರದ ದಿನಗಳಲ್ಲಿ ದೊಡ್ಡ ಗಳಿಕೆ ಮಾಡುವಲ್ಲಿ ವಿಫಲವಾಗಿತ್ತು. ಇನ್ನು ಚಿತ್ರದ ವಿಮರ್ಶೆ ಕಂಡ ಸಿನಿ ಪಂಡಿತರು ಚಿತ್ರ ತನ್ನ ಬಜೆಟ್ ಅನ್ನು ಕೂಡ ಗಳಿಸುವುದು ಕಷ್ಟ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

    ಆದರೆ ರಜಿನಿಕಾಂತ್ ಸ್ಟಾರ್‌ಡಂ ಚಿತ್ರವನ್ನು ಎತ್ತಿ ಹಿಡಿದಿತ್ತು. ಅಂತಿಮವಾಗಿ ಚಿತ್ರ ತನ್ನ ಬಜೆಟ್‌ಗಿಂತ ಹೆಚ್ಚು ಹಣ ಗಳಿಸುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ರೊಬೊ 2.0 ಚಿತ್ರ ವಿಶ್ವದಾದ್ಯಂತ 664 ಕೋಟಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಯಿತು. ಹಾಗಾದರೆ ರೊಬೊ 2.0 ಚಿತ್ರ ಯಾವ ಭಾಗಗಳಲ್ಲಿ ಎಷ್ಟು ಕಲೆಕ್ಷನ್ ಮಾಡಿತು ಎಂಬ ವಿವರ ಈ ಕೆಳಕಂಡಂತಿದೆ..

    ತಮಿಳು ನಾಡು: 114.90 ಕೋಟಿ ರೂಪಾಯಿಗಳು

    ಆಂಧ್ರ ಪ್ರದೇಶ ಹಾಗೂ ನಿಜಾಮ್ : 87.60 ಕೋಟಿ ರೂಪಾಯಿಗಳು

    ಕರ್ನಾಟಕ: 46.20 ಕೋಟಿ ರೂಪಾಯಿಗಳು

    ಕೇರಳ: 18.50 ಕೋಟಿ ರೂಪಾಯಿಗಳು

    ದೇಶದ ಉಳಿದ ರಾಜ್ಯಗಳಲ್ಲಿ: 239.50 ಕೋಟಿ ರೂಪಾಯಿಗಳು

    ವಿದೇಶ: 156.95 ಕೋಟಿ ರೂಪಾಯಿಗಳು

    ಒಟ್ಟು: 664.65 ಕೋಟಿ ರೂಪಾಯಿಗಳು

    English summary
    4 years for Robo 2 point 0 Movie: Here is the movie's world wide total collection details
    Wednesday, November 30, 2022, 6:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X