5 ವರ್ಷದ ಬಾಲಕನ ಜೊತೆ 'ಮೋನಿಕಾ' ಹಾಡಿಗೆ ಹೆಜ್ಜೆ ಹಾಕಲು ಪೂಜಾ ಹೆಗ್ಡೆ ಸುಸ್ತು, ವಿಡಿಯೋ ವೈರಲ್
'ಕೂಲಿ' ಚಿತ್ರದ 'ಮೋನಿಕಾ' ಸಾಂಗ್ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಇವತ್ತಿಗೂ ಯಾವುದೇ ಪಾರ್ಟಿ, ಈವೆಂಟ್‌ಗಳಲ್ಲಿ 'ಮೋನಿಕಾ' ಎಂದು ಮೈ ಕುಣಿಸುವವರಿಗೆ ಲೆಕ್ಕವಿಲ್ಲ. ಅನಿರುದ್ಧ್ ರವಿಚಂದರ್ ಸಂಗೀತದಲ್ಲಿ ಆ ಸಾಂಗ್ ಮಾಡಿದ ಮ್ಯಾಜಿಕ್ ಅಂಥಾದ್ದು. ಇನ್ನು ಪೂಜಾ ಹೆಗ್ಡೆ ಡ್ಯಾನ್ಸ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ.
ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಸಿನಿಮಾ ಕಳೆದ ವರ್ಷ ತೆರೆಕಂಡು ಹಿಟ್ ಆಗಿತ್ತು. ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಅಷ್ಟಾಗಿ ಗೆಲ್ಲಲಿಲ್ಲ. ಆದರೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಅನಿರುದ್ದ್ ಮ್ಯೂಸಿಕ್ ಚಿತ್ರದ ಪ್ಲಸ್ ಪಾಯಿಂಟ್ ಆಗಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಮೋನಿಕಾ ಸಾಂಗ್ ಬಂದು ಹೈಪ್ ಕ್ರಿಯೇಟ್ ಮಾಡಿದ್ದು ಸುಳ್ಳಲ್ಲ.

ಬಂದರಿನಲ್ಲಿ ನೂರಾರು ಡ್ಯಾನ್ಸರ್ಸ್ ಜೊತೆ ಪೂಜಾ ಹೆಗ್ಡೆ ಜೊತೆ ಮಲಯಾಳಂ ನಟ ಸೌಬಿನ್ ಶಾಹಿರ್ ಕುಣಿದು ರಂಗೇರಿಸಿದ್ದರು. ಅಬಾಲವೃದ್ಧರಾಗಿ ಎಲ್ಲರೂ ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಇದೀಗ 5 ವರ್ಷದ ಬಾಲಕನೊಬ್ಬ ಮೋನಿಕಾ ಎಂದು ಕುಣಿದಿರುವ ವೀಡಿಯೋ ಸಖತ್ ವೈರಲ್ ಆಗ್ತಿದೆ. ಆತನ ಸರಿಸಮಕ್ಕೆ ಡ್ಯಾನ್ಸ್ ಮಾಡಲು ಸಾಧ್ಯವಾಗದೇ ಪೂಜಾ ಹೆಗ್ಡೆ ಕೂಡ ಸುಸ್ತಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ.
ಯೂಟ್ಯೂಬ್‌ನಲ್ಲಿ 'ಮೋನಿಕಾ' ಸಾಂಗ್ ಕೋಟಿ ಕೋಟಿ ವೀವ್ಸ್, ಲೈಕ್ಸ್ ಗಿಟ್ಟಿಸಿತ್ತು. ಇನ್ನು ಸೋಶಿಯಲ್ ಮೀಡಿಯಾ ರೀಲ್ಸ್ ರೂಪದಲ್ಲಿ ಸಖತ್ ಸದ್ದು ಮಾಡಿತ್ತು. ಕಾರ್ಯಕ್ರಮವೊಂದರಲ್ಲಿ ಚಿಕ್ಕ ಬಾಲಕನ ಜೊತೆ ಪೂಜಾ ಹೆಗ್ಡೆ ಹೆಜ್ಜೆ ಹಾಕಲು ಮುಂದಾಗಿದ್ದಾರೆ. ಆದರೆ ಆತನ ಡ್ಯಾನ್ಸ್ ಮೂವ್ಸ್ ನೋಡಿ ಆಕೆ ಸೈಲೆಂಟ್ ಆಗಿಬಿಟ್ಟಿದ್ದಾರೆ.
ಸ್ಯಾಂಡಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ 'ಮೋನಿಕಾ' ಸಾಂಗ್ ಸಖತ್ ಸದ್ದು ಮಾಡಿತ್ತು. ಪೂಜಾಗಿಂತ ಸೌಬಿನ್ ಶಾಹಿರ್ ಸ್ಟೆಪ್ಸ್ ನೋಡುಗರ ಗಮನ ಸೆಳೆದಿತ್ತು. ಸದ್ಯ ಪುಟ್ಟ ಬಾಲಕ ಡ್ಯಾನ್ಸ್, ಗ್ರೇಸ್, ಎನರ್ಜಿ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಪೂಜಾ ಹೆಗ್ಡೆ ಅಭಿಮಾನಿಗಳು ಈ ವೀಡಿಯೋ ವೈರಲ್ ಮಾಡುತ್ತಿದ್ದಾರೆ.
ಡ್ಯಾನ್ಸ್ ನಂಬರ್ಸ್ ಕಟ್ಟಿಕೊಡುವುದರಲ್ಲಿ ಅನಿರುದ್ಧ್ ಸಿದ್ಧಹಸ್ತರು. ಈ ಹಿಂದೆ 'ಜೈಲರ್' ಚಿತ್ರದಲ್ಲಿ 'ಕಾವಲಯ್ಯ' ಎನ್ನುವ ಬಿಂದಾಸ್ ಸಾಂಗ್ ಕಂಪೋಸ್ ಮಾಡಿದ್ದರು. ತಮನ್ನಾ ಬಾಟಿಯಾ ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದ್ದರು. ಅದೇ ರೀತಿ 'ಕೂಲಿ' ಚಿತ್ರದ 'ಮೋನಿಕಾ' ಸಾಂಗ್ ಕೂಡ ಕ್ಲಿಕ್ ಆಗಿತ್ತು. ಯೂಟ್ಯೂಬ್‌ನಲ್ಲಿ ಮಾತ್ರ ಈ ಸಾಂಗ್ 30 ಕೋಟಿಗೂ ಅಧಿಕ ವೀವ್ಸ್ ಗಿಟ್ಟಿಸಿದೆ. 'ಜೈಲರ್- 2', 'ಜನ ನಾಯಗನ್' ಹೀಗೆ ಕೆಲ ಸಿನಿಮಾಗಳು ಅನಿರುದ್ಧ್ ಕೈಯಲ್ಲಿವೆ. 'ಟಾಕ್ಸಿಕ್' ಚಿತ್ರಕ್ಕೂ ಅನಿರುದ್ಧ್ ಹೆಸರು ಕೇಳಿಬಂದಿತ್ತು. ಬಳಿಕ ಅದು ಸುಳ್ಳಾಗಿತ್ತು.
ಪೂಜಾ ಹೆಗ್ಡೆ ನಟಿಸಿದ ಸಿನಿಮಾಗಳು ಇಷ್ಟು ಸದ್ದು ಮಾಡಿತ್ತೋ ಇಲ್ಲವೋ ಗೊತ್ತಿಲ್ಲ. 'ಮೋನಿಕಾ' ಸಾಂಗ್ ಆಕೆಗೆ ಒಳ್ಳೆ ಕ್ರೇಜ್ ಸೃಷ್ಟಿಸಿಬಿಟ್ಟಿದೆ. 'ರಂಗಸ್ಥಳಂ' ಚಿತ್ರದ ಸ್ಪೆಷಲ್ ಸಾಂಗ್‌ಗೆ ಕೂಡ ಆಕೆ ಹೆಜ್ಜೆ ಹಾಕಿದ್ದರು. ಸದ್ಯ 'ಜನ ನಾಯಗನ್' ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಲೋಕೇಶ್ ಕನಕರಾಜ್ 'ಕೂಲಿ' ಚಿತ್ರದ ಮೂಲಕ ಆ ಮ್ಯಾಜಿಕ್ ರೀ-ಕ್ರಿಯೇಟ್ ಮಾಡುವಲ್ಲಿ ಸಂಪೂರ್ಣವಾಗಿ ಯಶಸ್ವಿ ಆಗಲಿಲ್ಲ. ನಾಗಾರ್ಜುನಾ, ಉಪೇಂದ್ರ ಹಾಗೂ ಆಮೀರ್ ಖಾನ್ ಕೂಡ ಚಿತ್ರದಲ್ಲಿ ನಟಿಸಿದ್ದರು. ಕನ್ನಡ ನಟಿ ರಚಿತಾ ರಾಮ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗಿತ್ತು.


Click it and Unblock the Notifications











