twitter
    For Quick Alerts
    ALLOW NOTIFICATIONS  
    For Daily Alerts

    ವಿಜಯ್ ರಿಜೆಕ್ಟ್ ಮಾಡಿದ್ದ 6 ಚಿತ್ರಗಳೂ ಸೂಪರ್ ಹಿಟ್ ಆಯ್ತು

    |

    ತಮಿಳು ನಟ ವಿಜಯ್ ಅಭಿನಯದ ಹಲವು ಚಿತ್ರಗಳು ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಅನೇಕ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಬರೆದಿದೆ. ಅತಿ ಹೆಚ್ಚು ಗಳಿಕೆಗಳನ್ನು ಕಂಡಿವೆ. ಅನೇಕ ಅವಾರ್ಡ್‌ಗಳನ್ನು ಪಡೆದುಕೊಂಡಿದೆ. ಪ್ರಸ್ತುತ, ತಮಿಳು ಇಂಡಸ್ಟ್ರಿಯ ನಂಬರ್ 1 ನಟ ಯಾರು ಎಂದು ಹುಡುಕಿದರೆ ವಿಜಯ್ ಹೆಸರು ಮೊದಲು ಕೇಳಿಬರುತ್ತದೆ.

    ವಿಜಯ್ ಅವರು ಅನೇಕ ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದಾರೆ. ಬ್ಯುಸಿ ಶೆಡ್ಯೂಲ್, ಕಥೆ ಇಷ್ಟವಾಗದೆ, ಸಮಯವಕಾಶ ಇಲ್ಲದೇ ಹೀಗೆ ಇತರೆ ಕಾರಣಗಳಿಂದ ಕೆಲವು ಮುಖ್ಯ ಚಿತ್ರಗಳನ್ನು ಕೈ ಬಿಟ್ಟಿದ್ದಾರೆ. ಹೀಗೆ, ವಿಜಯ್ ಅವರು ಮಾಡಲ್ಲ ಎಂದು ಹಿಂದೆ ಸರಿದ ಚಿತ್ರಗಳು ತಮಿಳು ಇಂಡಸ್ಟ್ರಿಯಲ್ಲಿ ಅತಿ ದೊಡ್ಡ ಯಶಸ್ಸು ಕಂಡಿದೆ. ಅಂತಹ ಆರು ಸೂಪರ್ ಹಿಟ್ ಚಿತ್ರಗಳನ್ನು ಇಲ್ಲಿ ಹೆಸರಿಸಲಾಗಿದೆ. ಮುಂದೆ ಓದಿ...

    ಖ್ಯಾತ ನಿರ್ದೇಶಕನ ಚಿತ್ರದಲ್ಲಿ ವಿಜಯ್ ಮತ್ತು ಜೂ ಎನ್ ಟಿ ಆರ್? ಮಲ್ಟಿ ಸ್ಟಾರರ್ ಚಿತ್ರಕ್ಕೆ ಭರ್ಜರಿ ತಯಾರಿಖ್ಯಾತ ನಿರ್ದೇಶಕನ ಚಿತ್ರದಲ್ಲಿ ವಿಜಯ್ ಮತ್ತು ಜೂ ಎನ್ ಟಿ ಆರ್? ಮಲ್ಟಿ ಸ್ಟಾರರ್ ಚಿತ್ರಕ್ಕೆ ಭರ್ಜರಿ ತಯಾರಿ

    ವಿಶಾಲ್ ನಟನೆಯ 'ಸಂಡೈಕೋಳಿ'

    ವಿಶಾಲ್ ನಟನೆಯ 'ಸಂಡೈಕೋಳಿ'

    ವಿಶಾಲ್ ನಟಿಸಿದ್ದ 'ಸಂಡೈಕೋಳಿ' ಸಿನಿಮಾ ದೊಡ್ಡ ಸಕ್ಸಸ್ ಕಂಡಿತ್ತು. ಅಷ್ಟೇ ಅಲ್ಲದೇ ಬೇರೆ ಭಾಷೆಗಳಲ್ಲಿ ರೀಮೇಕ್ ಸಹ ಆಗಿದೆ. ಮೊದಲು ಈ ಚಿತ್ರಕ್ಕೆ ಸೂರ್ಯ ಅವರನ್ನು ಸಂಪರ್ಕಿಸಲಾಗಿತ್ತು. ಆಮೇಲೆ ವಿಜಯ್ ಅವರ ಬಳಿಯೂ ಕೇಳಲಾಯಿತು. ಇಬ್ಬರು ಆಗಲ್ಲ ಅಂದ್ಮೇಲೆ ವಿಶಾಲ್ ಕೈಗೆತ್ತಿಕೊಂಡರು. ಲಿಂಗಸ್ವಾಮಿ ನಿರ್ದೇಶಿಸಿದ್ದ ಈ ಚಿತ್ರದ ಸೆಕೆಂಡ್ ಹಾಫ್‌ನಲ್ಲಿ ತಂದೆ ಪಾತ್ರಕ್ಕೆ ಹೆಚ್ಚು ಮಹತ್ವವಿದ್ದ ಕಾರಣ ಸ್ಟಾರ್ ನಟರು ರಿಜೆಕ್ಟ್ ಮಾಡಿದರು ಎಂದು ಹೇಳಲಾಗಿದೆ.

    'ಆಟೋಗ್ರಾಫ್' ಸಿನಿಮಾ

    'ಆಟೋಗ್ರಾಫ್' ಸಿನಿಮಾ

    2004ರಲ್ಲಿ ತೆರೆಕಂಡ 'ಆಟೋಗ್ರಾಫ್' ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಮೆಗಾ ಹಿಟ್ ಆಯಿತು. ತೆಲುಗು, ಕನ್ನಡ ಹೀಗೆ ಬೇರೆ ಭಾಷೆಯಲ್ಲೂ ಈ ಚಿತ್ರ ರಿಮೇಡ್ ಆಗಿದೆ. ಈ ಚಿತ್ರಕ್ಕೆ ಮೂರು ರಾಷ್ಟ್ರ ಪ್ರಶಸ್ತಿ ಲಭಿಸಿದೆ. ನಿರ್ದೇಶಕ ಚರಣ್ ತಮಿಳು ಹಲವು ಸ್ಟಾರ್ ನಟರಿಗೆ ಈ ಸ್ಕಿಪ್ಟ್ ವಿವರಿಸಿದ್ದರು. ನಟ ವಿಜಯ್ ಅವರ ಬಳಿಯೂ ಈ ಕಥೆ ಹೋಗಿತ್ತು. ಆದರೆ, ಅವರು ಒಪ್ಪಿಕೊಳ್ಳದ ಕಾರಣ ನಿರ್ದೇಶಕ ಚರಣ್ ಅವರೇ ನಾಯಕನಟನಾಗಿ ಅಭಿನಯಿಸಿ ಯಶಸ್ಸು ಕಂಡರು.

    ಕೊರೊನಾ ಸಂಕಷ್ಟದಲ್ಲಿ ವಿಜಯ್ ಅಭಿಮಾನಿಗಳ ಅನುಕರಣೀಯ ಸೇವೆಕೊರೊನಾ ಸಂಕಷ್ಟದಲ್ಲಿ ವಿಜಯ್ ಅಭಿಮಾನಿಗಳ ಅನುಕರಣೀಯ ಸೇವೆ

    ಆರ್ ಮಾಧವನ್ ನಟಿಸಿದ್ದ 'ರನ್'

    ಆರ್ ಮಾಧವನ್ ನಟಿಸಿದ್ದ 'ರನ್'

    ಆರ್ ಮಾಧವನ್ ಮತ್ತು ಮೀರಾ ಜಾಸ್ಮಿನ್ ನಟಿಸಿದ್ದ 'ರನ್' ಸಿನಿಮಾ ತಮಿಳಿನ ಹಿಟ್ ಚಿತ್ರ. ಈ ಚಿತ್ರದ ಸ್ಕ್ರಿಪ್ಟ್ ಸಹ ಮೊದಲು ನಟ ವಿಜಯ್ ಅವರ ಬಳಿ ಹೋಗಿತ್ತು. ಆದರೆ, ಕಾರಣಾಂತರಗಳಿಂದ ವಿಜಯ್ ಈ ಚಿತ್ರ ಒಪ್ಪಿಕೊಂಡಿಲ್ಲ. ಆರ್ ಮಾಧವನ್ ಅವರಿಗೆ ಈ ಸಿನಿಮಾ ಒಳ್ಳೆಯ ಬ್ರೇಕ್ ಕೊಡ್ತು.

    ಧನುಶ್ ನಟನೆಯ 'ಅನೆಗನ್'

    ಧನುಶ್ ನಟನೆಯ 'ಅನೆಗನ್'

    ಧನುಶ್ ನಟನೆಯಲ್ಲಿ ಮೂಡಿ ಬಂದಿದ್ದ 'ಅನೆಗನ್' ಚಿತ್ರಕ್ಕೆ ಕೆವಿ ಆನಂದ್ ನಿರ್ದೇಶನ ಮಾಡಿದ್ದರು. ಆರಂಭದಲ್ಲಿ ವಿಜಯ್ ಅವರೊಂದಿಗೆ ಈ ಚಿತ್ರ ಮಾಡಲು ಕೆವಿ ಆನಂದ್ ನಿರ್ಧರಿಸಿದ್ದರು. ಆ ಸಂದರ್ಭದಲ್ಲಿ ಕತ್ತಿ ಮತ್ತು ಜಿಲ್ಲಾ ಚಿತ್ರಗಳಿಗೆ ಕಾಲ್‌ಶೀಟ್ ಕೊಟ್ಟಿದ್ದರು. ಬಳಿಕ, ಅನೆಗನ್ ಸ್ಕ್ರಿಪ್ಟ್ ಕೇಳಿ ಇಷ್ಟಪಟ್ಟಿದ್ದ ವಿಜಯ್, ಈ ಚಿತ್ರಕ್ಕೆ ಧನುಶ್ ಸೂಕ್ತ ಎಂದು ಸಲಹೆ ಕೊಟ್ಟಿದ್ದರು. ವಿಜಯ್ ನೀಡಿದ ಸಲಹೆ ಮೆರೆಗೆ ಕೆವಿ ಆನಂದ್ ಈ ಚಿತ್ರವನ್ನು ರಜನಿಕಾಂತ್ ಅಳಿಯನ ಜೊತೆ ಮಾಡಿ ಯಶಸ್ಸು ಕಂಡರು.

    'ಸಿಂಗಂ' ಸರಣಿ

    'ಸಿಂಗಂ' ಸರಣಿ

    ನಿರ್ದೇಶಕ ಹರಿ ಅವರು 'ಸಿಂಗಂ' ಸ್ಕ್ರಿಪ್ಟ್ ಮಾಡಿದಾಗ ಮೊದಲು ವಿಜಯ್ ಅವರನ್ನು ನಾಯಕನನ್ನಾಗಿಸಲು ಚಿಂತಿಸಿದ್ದರು. ಆದರೆ, ಇತರೆ ಕಾರಣಗಳಿಂದ ಅದು ಕೈಗೂಡಲಿಲ್ಲ. ಆಮೇಲೆ ಸೂರ್ಯ ಅವರ ಜೊತೆ ಸಿಂಗಂ ಆರಂಭವಾಯಿತು. 'ಸಿಂಗಂ' ಸರಣಿ ಚಿತ್ರಗಳು ಬಂದವು. ಸೂರ್ಯ ಅವರಿಗೆ ಒಳ್ಳೆಯ ಬ್ರೇಕ್ ಕೊಡ್ತು.

    Recommended Video

    ಟ್ವಿಟ್ಟರ್ ನಲ್ಲಿ ಜಗ್ಗೇಶ್ ಬಳಿ ಸಹಾಯಕ್ಕಾಗಿ ಬೇಡಿಕೊಂಡ ರೆಹಮಾನ್
    ಅರ್ಜುನ್ ಸರ್ಜಾ 'ಮೊದಲ್ವನ್'

    ಅರ್ಜುನ್ ಸರ್ಜಾ 'ಮೊದಲ್ವನ್'

    ಅರ್ಜುನ್ ಸರ್ಜಾ ನಟಿಸಿದ್ದ 'ಮೊದಲ್ವನ್' ಸಿನಿಮಾ ತಮಿಳು ಇಂಡಸ್ಟ್ರಿಯಲ್ಲಿ ದೊಡ್ಡ ಹಿಟ್ ಆಯ್ತು. ಶಂಕರ್ ನಿರ್ದೇಶಿಸಿದ್ದ ಈ ಪೊಲಿಟಿಕಲ್ ಥ್ರಿಲ್ಲರ್ ಕಥೆ ಸರ್ಜಾಗೆ ಒಳ್ಳೆಯ ಖ್ಯಾತಿ ತಂದುಕೊಡ್ತು. ಮೊದಲು ಈ ಚಿತ್ರದ ಅವಕಾಶ ಹೋಗಿದ್ದು ರಜನಿಕಾಂತ್ ಅವರಿಗೆ. ತಲೈವಾ ಬ್ಯುಸಿಯಿದ್ದ ಕಾರಣ ಮಾಡಿಲ್ಲ. ಆಮೇಲೆ ವಿಜಯ್ ಬಳಿ ಬಂತು. ಪೊಲಿಟಿಕಲ್ ಕಥೆ ಮಾಡಲು ವಿಜಯ್ ಒಪ್ಪಲಿಲ್ಲ. ಕೊನೆಗೆ ಸರ್ಜಾ ಕೈಗೆ ಈ ಪ್ರಾಜೆಕ್ಟ್ ಸಿಕ್ತು. ಬ್ಲಾಕ್ ಬಸ್ಟರ್ ಆಯಿತು.

    English summary
    6 Blockbuster Movies Which is Rejected By Vijay.
    Wednesday, May 12, 2021, 12:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X