For Quick Alerts
  ALLOW NOTIFICATIONS  
  For Daily Alerts

  ನೀವು ಸಿಂಗಲ್ ಅಥವಾ ಕಮಿಟೆಡ್? ಎಂದ ಅಭಿಮಾನಿಗೆ ನಟಿ ಕೀರ್ತಿ ಸುರೇಶ್ ಹೇಳಿದ್ದೇನು?

  |

  ದಕ್ಷಿಣ ಭಾರತೀಯ ಚಿತ್ರಪ್ರಿಯರ ನೆಚ್ಚಿನ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಸದ್ಯ ಮಿಸ್ ಇಂಡಿಯಾ ಸಿನಿಮಾ ರಿಲೀಸ್ ಆದ ಸಂತಸದಲ್ಲಿದ್ದಾರೆ. ಈ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಿದೆ. ಈ ಮೂಲಕ ಕೀರ್ತಿ ಅಭಿನಯದ ಎರಡನೇ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಂಪಾದನೆ ಮಾಡಿರುವ ಕೀರ್ತಿ ಇತ್ತೀಚಿಗೆ ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಸಂವಾದ ಹಮ್ಮಿಕೊಂಡಿದ್ದರು.

  #AskKeerthy ಪ್ರಶ್ನೋತ್ತರ ಸಂವಾದದಲ್ಲಿ ಕೀರ್ತಿ, ಅಭಿಮಾನಿಗಳ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅಭಿಮಾನಿಗಳು ಕೀರ್ತಿಗೆ ತರಹೇವಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ಕೆಲವು ಇಂಟರೆಸ್ಟಿಂಗ್ ಆಯ್ದ ಪ್ರಶ್ನೆಗಳಿಗೆ ಕೀರ್ತಿ ಉತ್ತರ ನೀಡಿದ್ದಾರೆ. ಅಭಿಮಾನಿಗಳ ಕೆಲವು ಪ್ರಶ್ನೆಗಳಿಗೆ ಕೀರ್ತಿ ಕೊಟ್ಟಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

  ನೆಚ್ಚಿನ ಕ್ರಿಕೆಟ್ ಆಟಗಾರ ಯಾರು ಎಂದು ಬಹಿರಂಗ ಪಡಿಸಿದ ನಟಿ ಕೀರ್ತಿ ಸುರೇಶ್

  ಅಂದ್ಹಾಗೆ ಅಭಿಮಾನಿಯೊಬ್ಬ ಕೀರ್ತಿ ಸುರೇಶ್ ಗೆ, ನೀವು ಸಿಂಗಲ್ ಅಥವಾ ಕಮಿಟೆಡ್? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೀರ್ತಿ ಬುದ್ಧಿವಂತಿಕೆಯ ಉತ್ತರ ನೀಡಿದ್ದಾರೆ. 'ನಾನು ಕೆಲಸದಲ್ಲಿ ಕಮಿಟ್ ಆಗಿದ್ದೀನಿ' ಎಂದು ಹೇಳುವ ಮೂಲಕ ರಿಲೇಶನ್ ಶಿಪ್ ಸ್ಟೇಟಸ್ ಬಗ್ಗೆ ಕೇಳುತ್ತಿರುವವರ ಬಾಯಿ ಮುಚ್ಚಿಸಿದ್ದಾರೆ.

  ಅಂದ್ಹಾಗೆ ಕಳೆದ ಕೆಲವು ತಿಂಗಳ ಹಿಂದೆ ಕೀರ್ತಿ ಸುರೇಶ್ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಉದ್ಯಮಿ ಜೊತೆ ಹಸೆಮಣೆ ಏರುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಸುದ್ದಿಯನ್ನು ನಟಿ ಕೀರ್ತಿ ಸುರೇಶ್ ತಳ್ಳಿಹಾಕುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದರು.

  ಮಹಾನಟಿ ಕೀರ್ತಿ ಸುರೇಶ್ ಆಸೆ ಕೇಳಿ ಕನ್ನಡಾಭಿಮಾನಿಗಳು ಫುಲ್ ಹ್ಯಾಪಿ | Filmibeat Kannada

  ಕೀರ್ತಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅಣ್ಣಾತೆ, ಗುಡ್ ಲಕ್ ಸಖಿ, ಮರಕ್ಕರ್, ರಂಗ್ ದೆ, ಸರ್ಕಾರು ವಾರಿ ಪಾಟ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕೀರ್ತಿ ನಟಿಸುತ್ತಿದ್ದಾರೆ. ಮಹೇಶ್ ಬಾಬು ಜೊತೆ ಮೊದಲ ಬಾರಿಗೆ ನಟಿಸುತ್ತಿರುವ ಕೀರ್ತಿ ಸುರೇಶ್ ಜನವರಿಯಿಂದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ.

  English summary
  A fan Asked Keerthy Suresh about her relationship Status. Keerthy quirky response to fan question.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X