ರಜನಿ ಭೇಟಿಯಾಗಲು ಚೆನ್ನೈನಿಂದ ಉತ್ತರಾಖಂಡಕ್ಕೆ 55 ದಿನಗಳ ಕಾಲ ನಡೆದ ಅಭಿಮಾನಿ!

ರಜನಿಕಾಂತ್ ಅಭಿನಯದ ಜೈಲರ್ ಆಗಸ್ಟ್ 10 ರಂದು ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಗೆ ಒಂದು ದಿನ ಮುಂಚಿತವಾಗಿ ಆಗಸ್ಟ್ 9 ರಂದು ರಜನಿಕಾಂತ್ ಹಿಮಾಲಯಕ್ಕೆ ತೆರಳಿದ್ದರು. ಅವರ ಪ್ರವಾಸವನ್ನು ಒಂದು ವಾರದ ಸುದೀರ್ಘ ಆಧ್ಯಾತ್ಮಿಕ ಪ್ರಯಾಣವಾಗಿ ಪ್ಲ್ಯಾನ್ ಮಾಡಲಾಗಿದೆ.

ಈ ಆಧ್ಯಾತ್ಮಿಕ ಪ್ರಯಾಣದಲ್ಲಿ ರಿಷಿಕೇಶ, ಬದರಿನಾಥ್, ದ್ವಾರಕಾ ಮತ್ತು ಬಾಬಾಜಿ ಗುಹೆಯಂತಹ ಸ್ಥಳಗಳಿಗೆ ಭೇಟಿ ನೀಡಲು ಅವರು ಯೋಜಿಸುತ್ತಿದ್ದಾರೆ. ಈ ಮೊದಲು ರಜನಿಕಾಂತ್ ಸ್ವಾಮಿ ದಯಾನಂದ ಸರಸ್ವತಿ ಆಶ್ರಮಕ್ಕೆ ತೆರಳಿ ಗುರುಗಳ ಆಶೀರ್ವಾದ ಪಡೆದಿದ್ದಾರೆ ಎಂದು ವರದಿಯಾಗಿದೆ.

chennai-to-uttarakhand-for-55-days-to-meet-rajinikanth

ಸ್ವಾಮಿ ದಯಾನಂದ ಸರಸ್ವತಿ ಆಶ್ರಮದಲ್ಲಿ ಆಧ್ಯಾತ್ಮಿಕ ಭಾಷಣಗಳನ್ನು ಆಲಿಸಿದ ರಜನಿಕಾಂತ್ ವಿಶೇಷ ಭಾಷಣವನ್ನೂ ಮಾಡಿದ್ದಾರೆ. ಇದೇ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಾದ ಬಳಿಕ ಬದರಿನಾಥ ದೇವಸ್ಥಾನಕ್ಕೆ ತೆರಳಿದ ಅವರಿಗೆ ಅಲ್ಲಿನ ಸಿಬ್ಬಂದಿಯಿಂದ ಆತ್ಮೀಯ ಸ್ವಾಗತ ದೊರೆತಿತ್ತು.

ವ್ಯಾಸ ಗುಹೆ, ಮಹಾವತಾರ್ ಬಾಬಾಜಿ ಧ್ಯಾನ ಮಾಡಿದ ಗುಹೆಯನ್ನು ತಲುಪಲು ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ರಜನಿಕಾಂತ್ ಚಾರಣ ಮಾಡಿದ್ದಾರೆ. ಅಲ್ಲಿ ಅವರು ಧ್ಯಾನಕ್ಕೆ ಕುಳಿತುಕೊಂಡಿದ್ದರು.

ಇನ್ನು, ರಜನಿಕಾಂತ್ ಅವರನ್ನು ಭೇಟಿಯಾಗಲು ಚೆನ್ನೈನಿಂದ ಸುಮಾರು 55 ದಿನಗಳ ಕಾಲ ನಡೆದುಕೊಂಡು ಉತ್ತರಾಖಂಡಕ್ಕೆ ಬಂದ ಯುವಕನನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಅಷ್ಟು ದೂರದಿಂದ ಬಂದ ಅಭಿಮಾನಿಗೆ ಆರ್ಥಿಕವಾಗಿಯೂ ಸಹಾಯ ಮಾಡಿದ್ದಾರೆ. ಚಳಿಯಲ್ಲಿ ಮರದ ಕೆಳಗೆ ಮಲಗಿದ್ದ ಅವರನ್ನು ರಜನಿಕಾಂತ್ ಸನ್ಯಾಸಿಗಳೊಂದಿಗೆ ಅವರ ಸ್ಥಳಕ್ಕೆ ಹೋಗಲು ಸಹಾಯ ಮಾಡಿದ್ದಾರೆ.

ಶನಿವಾರ, ರಜನಿಕಾಂತ್ ಬದರಿನಾಥ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದರು. ಅಲ್ಲಿ ಅವರಿಗೆ ಬದರಿನಾಥ್ - ಕೇದಾರನಾಥ ದೇವಾಲಯ ಸಮಿತಿಯ ಅಧಿಕಾರಿಗಳು ಆತ್ಮೀಯ ಸ್ವಾಗತವನ್ನು ನೀಡಿದರು. ಅವರನ್ನು ದೇವಸ್ಥಾನಕ್ಕೆ ಕರೆತರುವಾಗ ಸಮಿತಿಯ ಪದಾಧಿಕಾರಿಗಳು, ಹೊರಗಿನ ಭಕ್ತರು ಪರಸ್ಪರ ನೂಕುನುಗ್ಗಲು ನಡೆಸಿದರು ಎಂದು ಬಿಕೆಟಿಸಿ ವಕ್ತಾರರು ತಿಳಿಸಿದ್ದಾರೆ.

chennai-to-uttarakhand-for-55-days-to-meet-rajinikanth

ರಜನಿಕಾಂತ್ ದೇವಾಲಯದೊಳಗೆ ಪ್ರಾರ್ಥನೆ ಸಲ್ಲಿಸಿದ ನಂತರ, ಅರ್ಚಕರು ಅವರಿಗೆ ತುಳಸಿ ಎಲೆಗಳ ಮಾಲೆ ಮತ್ತು ಪ್ರಸಾದವನ್ನು ನೀಡಿದರು. ಎಜನಿಕಾಂತ್ ಬದರಿನಾಥದಲ್ಲಿ ಸ್ವರ್ಣ ಆರತಿಯಲ್ಲಿ ಪಾಲ್ಗೊಂಡರು ಮತ್ತು ದೇವಾಲಯದ ಪ್ರಧಾನ ಅರ್ಚಕ (ರಾವಲ್) ಈಶ್ವರಿ ಪ್ರಸಾದ್ ನಮ್ಮನೂದಿರಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದರು.

ರಜನಿಕಾಂತ್ ಅವರ ಜೈಲರ್ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಈ ಚಿತ್ರ ಕೇವಲ ಐದು ದಿನಗಳಲ್ಲಿ ವಿಶ್ವಾದ್ಯಂತ 350 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೇ ರಜನಿಕಾಂತ್ ಅವರ ಮೊದಲ ಚಿತ್ರ ಅಪೂರ್ವ ರಾಗಂ 49 ವರ್ಷಗಳ ಹಿಂದೆ ಆಗಸ್ಟ್ 15 ರಂದು ಬಿಡುಗಡೆಯಾಗಿತ್ತು.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಜೈಲರ್ ಅನ್ನು 225 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ನಟ ರಜನಿಕಾಂತ್ ತಮ್ಮ ನಾಯಕನ ಪಾತ್ರಕ್ಕಾಗಿ 110 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಅಂದರೆ ಚಿತ್ರದ ಒಟ್ಟು ಬಜೆಟ್‌ನ 48% ಅನ್ನು ರಜನಿಕಾಂತ್ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮೋಹನ್ ಲಾಲ್ 8 ಕೋಟಿ ರೂ., ಶಿವರಾಜ್ ಕುಮಾರ್ 4 ಕೋಟಿ ಮತ್ತು ಬಾಲಿವುಡ್‌ ನಟ ಜಾಕಿ ಶ್ರಾಫ್‌ 4 ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

More from Filmibeat

English summary
A fan walked Chennai to Uttarakhand for 55 days to meet Rajinikanth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X