ವಿಜಯ್‌ ಸೇತುಪತಿ ಮತ್ತು ತಂಡದ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಬಂಧನ

ಬೆಂಗಳೂರಿಗೆ ಆಗಮಿಸಿದ್ದ ತಮಿಳು ನಟ ವಿಜಯ್‌ ಸೇತುಪತಿ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆಗೆ ಯತ್ನಿಸಿದ್ದ. ನವೆಂಬರ್ 2 ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ತಮಿಳು ನಟ ವಿಜಯ್ ಸೇತುಪತಿ ಏರ್‌ರ್ಪೋರ್ಟ್‌ನಲ್ಲಿ ಬರುತ್ತಿದ್ದಾಗ ಅವರ ಗುಂಪಿನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ.

ಇದೇ ಹಲ್ಲೆ ಆರೋಪದಡಿ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬಳಿಕ ಬೆಂಗಳೂರು ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಲ್ಲೆ ಆರೋಪದಡಿ ಬಂಧಿತನಾಗಿರುವ ವ್ಯಕ್ತಿ ಕೇರಳ ಮೂಲದವನು. ಆದರೆ ಬೆಂಗಳೂರಿನಲ್ಲಿ ವಾಸವಿದ್ದಾನೆ ಎನ್ನಲಾಗಿದೆ. ಮಂಗಳವಾರ ರಾತ್ರಿ ಅಂದರೆ ನವೆಂಬರ್ 2ರಂದು ವಿಮಾನ ನಿಲ್ದಾಣದಲ್ಲಿ ಆ ವ್ಯಕ್ತಿ ವಿಜಯ್ ಸೇತುಪತಿ ಅವರ ಜೊತೆಗೆ ಸೆಲ್ಫಿ ಕೇಳಿದ್ದನಂತೆ. ಆದರೆ ಆತ ಕುಡಿದಿರೋದು ಗೊತ್ತಾಗಿ ವಿಜಯ್‌ ಫೋಟೊ ಕೊಡಲು ನಿರಾಕರಿಸಿದ್ದಾರೆ. ಆಗ ವಿಜಯ್ ಸೇತುಪತಿ ಸಹಾಯಕ ಆ ವ್ಯಕ್ತಿಯನ್ನು ತಳ್ಳಿ ಮುಂದೆ ಸಾಗಿದ್ದಾನೆ. ಇದೇ ಕಾರಣಕ್ಕೆ ಕೋಪಗೊಂಡ ಆ ವ್ಯಕ್ತಿ ವಿಜಯ್‌ ಸೇತು ಸಹಾಯಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

A Man Arrested For Assaulting Actor Vijay Sethupathi And Team

ಇನ್ನೂ ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಅಂದರೆ ಇಲ್ಲಿ ಹಲ್ಲೆ ನಡೆದಿರುವುದು ನಟ ವಿಜಯ್‌ ಸೇತುಪತಿಯ ಮೇಲೆ ಅಲ್ಲ. ಬದಲಿಗೆ ಆತನ ಸಹಾಯಕನ ಮೇಲೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ಆ ವ್ಯಕ್ತಿ ಸೇತುಪತಿಯ ಸಹಾಯಕನ ಮೇಲೆ ಹಲ್ಲೆ ಮುಂದಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಸೆಲ್ಫಿ ವಿಚಾರಕ್ಕೆ ಶುರುವಾದ ಗದ್ದಲ ಹಲ್ಲೆಯಲ್ಲಿ ಕೊನೆಯಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯ್‌ ಸೇತುಪತಿ ರಾಮನಗರ ಬಳಿಯ ಇನೋವೇಟಿವ್‌ ಫಿಲಂ ಸಿಟಿಯಲ್ಲಿ ಮಾಸ್ಟರ್‌ ಶೆಫ್‌ ರಿಯಾಲಿಟಿ ಶೋ ಚಿತ್ರೀಕರಣದಲ್ಲಿ ಭಾಗವಹಿಸಲು ಬರುತ್ತಿದ್ದರು. ಚಿತ್ರೀಕರಣದ ಬಳಿಕ ಪುನೀತ್‌ ರಾಜ್‌ಕುಮಾರ್‌ ನಿವಾಸಕ್ಕೆ ಭೇಟಿ ಮಾಡುವ ಯೋಜನೆಯಲ್ಲಿ ಇದ್ದರು. ಆದರೆ ಅಚಾನಕ್ಕಾಗಿ ಈ ಘಟನೆ ನಡೆದಿದೆ. ಅಷ್ಟಕ್ಕೂ ಯಾರೋ ಒಬ್ಬ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಬಂದು ನಟ ವಿಜಯ್‌ ಸೇತುಪತಿಯ ತಂಡದ ಮೇಲೆ ಯಾಕೆ ಹಲ್ಲೆ ಮಾಡುತ್ತಾನೆ ಎನ್ನುವ ಸಂದೇಹ ಇತ್ತು. ಈಗ ನಿಜ ಕಾರಣ ಬಯಲಿಗೆ ಬಂದಿದೆ. ಸೆಲ್ಫಿಯಿಂದಲೇ ಎಷ್ಟೆಲ್ಲಾ ಅನಾಹುತ ಆಗಿ ಹೋಗಿದೆ.

A Man Arrested For Assaulting Actor Vijay Sethupathi And Team

ಅಷ್ಟಕ್ಕೂ ವಿಜಯ್‌ ಸೇತುಪತಿ ಕೂಡ ಸುಮ್ಮನೆ ಸೆಲ್ಫಿ ನಿರಾಕರಿಸಿಲ್ಲ. ಬದಲಿಗೆ ಆ ವ್ಯಕ್ತಿ ಕುಡಿದ ಮತ್ತಿನಲ್ಲಿ ಇದ್ದ ಕಾರಣ ಸೆಲ್ಫಿ ಕೊಡದೆ ಮುಂದೆ ಸಾಗಿದ್ದಾರೆ. ಆದರೆ ಅದಕ್ಕಿಂತ ಹೆಚ್ಚಾಗಿ ವಿಜಯ್‌ ಸೇತುಪತಿಯ ಸಹಾಯಕ ಆ ವ್ಯಕ್ತಿಯ ದೂಡಿದ್ದೇ ಆತನ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಹಾಗಾಗಿಯೇ ಅದೇ ಜಿದ್ದಿಗೆ ಏರ್ಪೋರ್ಟ್‌ನಲ್ಲಿ ಆ ವ್ಯಕ್ತಿ ವಿಜಯ್‌ ಸೇತುಪತಿ ಸಹಾಯಕನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಇದು ಸದ್ಯಕ್ಕೆ ಹರಿದಾಡುತ್ತಾ ಇರುವ ಸುದ್ದಿ.ಈ ಘಟನೆ ತಮಿಳು ನಾಡಿನಲ್ಲಿ ಸಂಚನ ಸೃಷ್ಟಿಸಿತ್ತು ಆದರೆ ಈ ಆ ವ್ಯಕ್ತಿ ಖಾಕಿ ಬಲೆ ಬಿದ್ದಿದ್ದಾನೆ. ಪೊಲೀಸ್‌ ತನಿಖೆಯ ಬಳಿಕ ಮತ್ತಷ್ಟು ವಿಚಾರಗಳು ಹೊರ ಬರಲಿವೆ.

ಇನ್ನು ನವೆಂಬರ್ 3ರಂದು ವಿಜಯ್‌ ಸೇತುಪತಿ ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿಗೆ ಮಾಲಾರ್ಪಣೆ ಮಾಡಿ ಕೈ ಮುಗಿದು ಬಂದಿದ್ದಾರೆ. ಇದೇ ವೇಳೆ ಮಾತನಾಡಿದ ಅವರು "ಅಪ್ಪು ಅಗಲಿಕೆಯಿಂದ ಕುಟುಂಬ ಮತ್ತು ಕರುನಾಡಿನ ಜನಕ್ಕೆ ಎಷ್ಟು ನೋವಾಗಿದೆ ಎನ್ನುವುದನ್ನು ನಾನು ಊಹಿಸಬಲ್ಲೆ. ಹೀಗೆ ಆಗ ಬಾರದಿತ್ತು' ಎಂದಿದ್ದಾರೆ.

More from Filmibeat

English summary
Bengaluru Police Arrested A Man For Assaulting Actor Vijay Sethupathi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X