ಎ ಆರ್ ರೆಹಮಾನ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು
ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಇಂದು ಬೆಳಿಗ್ಗೆ 07-30ರ ಸುಮಾರು ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕೇಳಿ ಬರುತ್ತಿರುವ ಸುದ್ದಿಗಳ ಪ್ರಕಾರ ಎ.ಆರ್.ರೆಹಮಾನ್ ಅವರಿಗೆ ಇಂದು ಬೆಳಿಗ್ಗೆ ಹಠಾತ್ತನೆ ಎದೆ ನೋವು ಕಾಣಿಸಿಕೊಂಡಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಸದ್ಯ ಎ.ಆರ್.ರೆಹಮಾನ್ ಅವರಿಗೆ ಇಸಿಜಿ ಸೇರಿದಂತೆ ಬೇರೆ ಬೇರೆ ಪರೀಕ್ಷೆಗಳನ್ನು ಮಾಡಲಾಗಿದೆ ಎನ್ನುವ ಮಾಹಿತಿ ಇದ್ದು, ಹೃದಯನಾಳದ ಕೆಲವೆಡೆ ಬ್ಲಾಕೇಜ್ ಇರುವುದು ಪರೀಕ್ಷೆಗಳಿಂದ ತಿಳಿದು ಬಂದಿದೆ ಎಂದು ಹೇಳಲಾಗುತ್ತಿದೆ. ಆಂಜಿಯೋಗ್ರಾಂ ಶಸ್ತ್ರ ಚಿಕಿತ್ಸೆಗೆ ಎ.ಆರ್.ರೆಹಮಾನ್ ಒಳಗಾಗಲಿದ್ದಾರೆ ಎನ್ನುವ ಮಾತು ಕೂಡ ಸದ್ಯ ಕೇಳಿ ಬರುತ್ತಿದ್ದು, ಆಸ್ಪತ್ರೆಗೆ ಎ.ಆರ್.ರೆಹಮಾನ್ ದಾಖಲಾದ ವಿಚಾರ ಕೇಳಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಇನ್ನು ಎ ಆರ್ ರೆಹಮಾನ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಎ ಆರ್ ರೆಹಮಾನ್ ಆಸ್ಪತ್ರೆಗೆ ದಾಖಲಾದ ವಿಚಾರ ತಿಳಿದ ತಕ್ಷಣವೇ ನಾನು ಆಸ್ಪತ್ರೆಗೆ ಕರೆ ಮಾಡಿದೆ, ವೈದ್ಯರ ಬಳಿ ಅವರ ಆರೋಗ್ಯದ ಕುರಿತು ವಿಚಾರಿಸಿದೆ, ವೈದ್ಯರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಶೀಘ್ರದಲ್ಲಿಯೇ ಎ.ಆರ್. ರೆಹಮಾನ್ ಮನೆಗೆ ಮರಳಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ.


Click it and Unblock the Notifications











