twitter
    For Quick Alerts
    ALLOW NOTIFICATIONS  
    For Daily Alerts

    ಎ.ಆರ್.ರೆಹಮಾನ್‌ ಗೆ ಸಂಕಷ್ಟ: ಮದ್ರಾಸ್ ಹೈಕೋರ್ಟ್‌ನಿಂದ ನೊಟೀಸ್

    |

    ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ ಗೆ ಸಂಕಷ್ಟ ಎದುರಾಗಿದೆ. ಮದ್ರಾಸ್ ಹೈಕೋರ್ಟ್ ಎ.ಆರ್.ರೆಹಮಾನ್‌ ಗೆ ನೊಟೀಸ್ ಜಾರಿ ಮಾಡಿದೆ.

    ತೆರಿಗೆ ಪಾವತಿಸುವಲ್ಲಿ ಎ.ಆರ್.ರೆಹಮಾನ್ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆಯು ಮಡ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ನೊಟೀಸ್ ನೀಡಿದೆ.

    ಎ.ಆರ್.ರೆಹಮಾನ್ ತಮ್ಮ ಆದಾಯದ ಮೂರು ಕೋಟಿ ರೂಪಾಯಿ ಹಣವನ್ನು ತೆರಿಗೆಯಿಂದ ಉಳಿಸಿಕೊಳ್ಳಲು ತಮ್ಮದೇ ಎ.ಆರ್.ರೆಹಮಾನ್ ಫೌಂಡೇಶನ್‌ ಗೆ ಹಣವನ್ನು ತೊಡಗಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಆರೋಪಿಸಿದೆ.

    ಲಿಬ್ರಾ ಮೊಬೈಲ್ಸ್‌ನಿಂದ 3.75 ಕೋಟಿ ಆದಾಯ

    ಲಿಬ್ರಾ ಮೊಬೈಲ್ಸ್‌ನಿಂದ 3.75 ಕೋಟಿ ಆದಾಯ

    2011-12ನೇ ಹಣಕಾಸು ವರ್ಷದಲ್ಲಿ ಎ.ಆರ್.ರೆಹಮಾನ್, ಇಂಗ್ಲೆಂಡ್ ಮೂಲಕ ಲಿಬ್ರಾ ಮೊಬೈಲ್ಸ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅದರಿಂದ 3.75 ಕೋಟಿ ಹಣ ಪಡೆದಿದ್ದಾರೆ.

    ತಮ್ಮ ಖಾತೆಗೆ ಜಮಾ ಮಾಡಿಕೊಳ್ಳದ ರೆಹಮಾನ್

    ತಮ್ಮ ಖಾತೆಗೆ ಜಮಾ ಮಾಡಿಕೊಳ್ಳದ ರೆಹಮಾನ್

    ಆದರೆ ಆ 3.75 ಕೋಟಿ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಕೊಳ್ಳುವ ಬದಲಿಗೆ ನೇರವಾಗಿ ಎ.ಆರ್.ರೆಹಮಾನ್ ಫೌಂಡೇಶನ್‌ಗೆ ನೀಡುವಂತೆ ಎ.ಆರ್.ರೆಹಮಾನ್ ಸೂಚಿಸಿದ್ದಾರೆ. ಹಾಗೆಯೇ ಲಿಬ್ರಾ ಮೊಬೈಲ್ಸ್ ಸಂಸ್ಥೆಯು ಹಣವನ್ನು ನೇರವಾಗಿ ಫೌಂಡೇಶನ್‌ಗೆ ನೀಡಿದೆ.

    ಆದಾಯ ತೆರಿಗೆ ತಪ್ಪಿಸಲು ತಂತ್ರ

    ಆದಾಯ ತೆರಿಗೆ ತಪ್ಪಿಸಲು ತಂತ್ರ

    ತಮ್ಮ ಆದಾಯದ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಲು ಹೀಗೆ ನೇರವಾಗಿ ಫೌಂಡೇಶನ್‌ಗೆ ಹೂಡಿಕೆ ಮಾಡಿದ್ದಾರೆ ಎಂದು ಆದಾಯ ತೆರಿಗೆ ಅಧಿಕಾರಿ ಟಿ.ಆರ್.ಸೆಂಥಿಲ್ ಕುಮಾರ್ ಆರೋಪಿಸಿದ್ದು, ಇಲಾಖೆಯ ವತಿಯಿಂದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

    Recommended Video

    Music Composer AR Rehmanಗು ಕೋರ್ಟ್ Notice | Oneindia Kannada
    ಸ್ವಂತ ಆದಾಯವನ್ನು ನೇರವಾಗಿ ಫೌಂಡೇಶನ್‌ಗೆ ತೊಡಗಿಸುವಂತಿಲ್ಲ

    ಸ್ವಂತ ಆದಾಯವನ್ನು ನೇರವಾಗಿ ಫೌಂಡೇಶನ್‌ಗೆ ತೊಡಗಿಸುವಂತಿಲ್ಲ

    ನಿಯಮದಂತೆ, ಯಾವುದೇ ಆದಾಯವನ್ನು ಮೊದಲು ವ್ಯಕ್ತಿ ಪಡೆದು ಅದಕ್ಕೆ ಸೂಕ್ತ ತೆರಿಗೆ ಪಾವತಿಸಿದ ಬಳಿಕವಷ್ಟೆ ಆ ಹಣವನ್ನು ಬೇರೆ ಎನ್‌ಜಿಓ, ಫೌಂಡೇಶನ್‌ಗಳಲ್ಲಿ ತೊಡಗಿಸಬೇಕಾಗಿರುತ್ತದೆ. ಟ್ರಸ್ಟ್ ಅಥವಾ ಫೌಂಡೇಶನ್‌ಗಳಿಗೆ ಇತರರ ಆದಾಯದ ಹಣವನ್ನು ನೇರವಾಗಿ ತೊಡಗಿಸುವಂತಿಲ್ಲ, ಇದು ಅಪರಾಧವಾಗಿದೆ ಎಂದಿದ್ದಾರೆ ಟಿ.ಆರ್.ಸೆಂಥಿಲ್.

    English summary
    Music composer AR Rahman receives notice from Bombay high court on allegations of Income Tax fraud.
    Friday, September 11, 2020, 21:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X