Don't Miss!
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ಈ ಭಾರತೀಯ ತಾನು ಎದುರಿಸಿದ 'ಅತ್ಯಂತ ಅಪಾಯಕಾರಿ ಬೌಲರ್' ಎಂದ ಜೋಸ್ ಬಟ್ಲರ್
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಿಚ್ಚನ ನಾಯಕಿಯ ವಿಚ್ಛೇದನದ ಬದುಕು ಮತ್ತು ಸಿನಿಮಾ ಪಯಣ
ಆಕೆಯದು ಸಹಜ ಸೌಂದರ್ಯ, ಆಕೆಯ ಸಣ್ಣ ನಗುವೊಂದು ಪಡ್ಡೆಗಳ ಹೃದಯವನ್ನೇ ಗೆದ್ದಿತ್ತು. ಇದನ್ನು ಗಮನಿಸಿದ್ದ ಖ್ಯಾತ ಮಲಯಾಳಂ ನಿರ್ದೇಶಕ ಲಾಲ್ ಜೋಸ್ 'ನೀಲತಮರ' ಚಿತ್ರದಲ್ಲಿ ಸಣ್ಣದೊಂದು ಪಾತ್ರ ಅವಳಿಗೆ ನೀಡಿದರು. ಚಿತ್ರ ಗೆದ್ದರು ಆಕೆಯನ್ನು ಮಾತ್ರ ಯಾರು ಗುರುತಿಸದೇ ಹೋದರು. ಹೀಗಾಗಿ ಮಲಯಾಳಂ ಚಿತ್ರರಂಗ ಬಿಟ್ಟು ತಮಿಳು ಸಿನಿಮಾರಂಗದಡಗೆ ಮುಖ ಮಾಡಿದಳು. ಸಣ್ಣ ಬಜೆಟಿನ 'ವಿಕಟಕವಿ' ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿದರು ಕೂಡ ಆ ಚಿತ್ರ ಬಿಡುಗಡೆಯ ಹೊತ್ತಿಗೆ ಮತ್ತೆ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಳು.
ಮೊದಲ ಚಿತ್ರ ಬಿಡುಗಡೆಗೆ ಮೊದಲೇ ನಾಲ್ಕು ಚಿತ್ರಗಳಿಗೆ ಸಹಿ ಮಾಡಿದ ಈಕೆ ಕಾಂಟ್ರವರ್ಸಿ ನಾಯಕಿಯಾಗಿ ಬೆಳಕಿಗೆ ಬಂದಳು. 2010 ರಲ್ಲಿ ತೆರೆಗೆ ಬಂದ 'ಸಿಂಧು ಸಮವಲಿ' ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿದಳು.
ಹೆಸರು
ಬದಲಿಸಿ
ಸೋಲು
ಕಂಡಿದ್ದ
'ಹೆಬ್ಬುಲಿ'
ನಟಿ:
ಯಾವುದು
ಆ
ಹೆಸರು?
ಈ ಚಿತ್ರ ತನ್ನ ಗಂಡನ ತಂದೆ ಅಂದರೆ ಮಾವನ ಜೊತೆಗೆ ಅಕ್ರಮ ಸಂಬಂಧವನ್ನು ಹೊಂದಿರುವ ಕಥೆಯೊಂದಿಗೆ ಹೆಣೆಯಲಾಗಿತ್ತು. ಚಿತ್ರ ಭಾರಿ ವಿವಾದಕ್ಕೆ ಕಾರಣವಾಗಿತ್ತು. ನಂತರ ಬಂದ ಪ್ರಭು ಸೋಲೋಮನ್ ನಿರ್ದೇಶನದ 'ಮೈನಾ' ಚಿತ್ರ ಈಕೆಯ ಸಿನಿಮಾ ಪಯಣದ ದಿಕ್ಕು ಬದಲಾಯಿಸಿತ್ತು. ಈ ಚಿತ್ರ ಬಿಡುಗಡೆ ಆಗಿದ್ದೆ, ಆಕೆ ತಮಿಳು ಪ್ರೇಕ್ಷಕರ ಮನಗೆದ್ದಳು. ಈಕೆಯೇ ಮಲಯಾಳಿ ಕುಟ್ಟಿ, ತಮಿಳು ಪ್ರೇಕ್ಷಕರ ಮನಗೆದ್ದ ಅಮಲಪೌಲ್. ನಂತರ ಬಂದ ನಾಡೋಡಿಗಳ್, ದೇವಿ ತಿರುಮಗಲ್ ಈಕೆಗೆ ದೊಡ್ಡ ಹೆಸರನ್ನು ತಂದುಕೊಟ್ಟ ಚಿತ್ರಗಳು.

ಪ್ರೀತಿ-ಪ್ರೇಮ-ಮದುವೆ-ವಿಚ್ಛೇದನ
ಸಿನಿಮಾದಿಂದ ಸಿನಿಮಾಗೆ ಯಶಸ್ಸನ್ನು ಕಾಣುತ್ತಿದ್ದ ಅಮಲಾ ಪೌಲ್, ಹೀಗೆ ಯಶಸ್ಸಿನ ಉತ್ತುಂಗದಲ್ಲಿ ಇರಬೇಕಾದರೆ ಖ್ಯಾತ ತಮಿಳು ಚಲನಚಿತ್ರ ನಿರ್ದೇಶಕ A.L ವಿಜಯ್ ಜೊತೆ ಪ್ರೀತಿಯಲ್ಲಿ ಬಿದ್ದಳು. 2014 ರಲ್ಲಿ ಪ್ರೇಮ ವಿವಾಹವಾದ ಈ ಜೋಡಿ ಒಂದು ವರ್ಷದ ಜಗಳದ ನಂತರ ಬೇರೆಯಾಯಿತು. ಈ ಮದುವೆ ಸುತಾರಾಂ ವಿಜಯ್ ಅವರ ತಂದೆ ತಾಯಿಗೆ ಇಷ್ಟವಿರಲಿಲ್ಲ. ಸಿನಿಮಾ ನಟಿಯೊಬ್ಬರನ್ನು ಸೊಸೆಯಾಗಿ ಸ್ವೀಕರಿಸಲು ಅವರಿಗೆ ಒಲವಿರಲಿಲ್ಲ. ಆದರೂ 2014ರಲ್ಲಿ ಹಿರಿಯರ ಸಮ್ಮುಖದಲ್ಲಿ ಕ್ರೈಸ್ತ ಧರ್ಮಕ್ಕೆ ಸೇರಿದ ಅಮಲಪೌಲ್ ಅವರನ್ನು ಹಿಂದೂ ಧರ್ಮದ ಸಂಪ್ರದಾಯದಂತೆ ವಿಜಯ ಮದುವೆಯಾಗಿದ್ದರು. 2017 ರಲ್ಲಿ ಅವರು ಅಧಿಕೃತವಾಗಿ ವಿಚ್ಛೇದನ ಪಡೆದರು.

ತಲೈವಿ ಚಿತ್ರದ ನಿರ್ದೇಶಕನಿಗೆ ಎರಡನೇ ಮದುವೆ
ವಿಚ್ಛೇದನ ಪಡೆದ ನಂತರ ಅಮಲಪೌಲ್ ಗೆ ತನ್ನ ಮಾಜಿ ಗಂಡನ ಒತ್ತಡದ ಕಾರಣಗಳಿಂದ ಸಿನಿಮಾರಂಗದಲ್ಲಿ ಬಹುತೇಕ ನಿರ್ದೇಶಕರು ಅವಕಾಶಗಳನ್ನು ಕೊಡುವುದು ನಿಲ್ಲಿಸಿ ಬಿಟ್ಟಿದ್ದರು. ಆದರೆ ಇವರಿಬ್ಬರ ನಡುವಿನ ವ್ಯವಹಾರ ಒಂದು ಹಂತಕ್ಕೆ ಬಂದು ನಿಂತ ಮೇಲೆ ಅಮಲಪೌಲ್ ಮತ್ತೆ ಸಿನಿಮಾರಂಗದಲ್ಲಿ ಸಕ್ರಿಯರಾದಳು. ಈ ನಡುವೆ ನಿರ್ದೇಶಕ A L ವಿಜಯ್ ಮಹತ್ವಾಕಾಂಕ್ಷಿ ಯೋಜನೆ ದಿವಂಗತ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಾಧಾರಿತ ಬಯೋಪಿಕ್ 'ತಲೈವಿ'ನಿರ್ದೇಶನಕ್ಕೆ ಕೈಹಾಕಿದ್ದು ಮತ್ತೆ ಕಂಬ್ಯಾಕ್ ಮಾಡುವ ಉತ್ಸಾಹದಲ್ಲಿದ್ದಾರೆ. ವಿಜಯ್ ಎರಡನೇ ಮದುವೆಯಾಗಿದ್ದು. ಡಾಕ್ಟರ್ ಐಶ್ವರ್ಯಾ ಅವರೊಂದಿಗೆ
ಸರಳವಾಗಿ ಹಿರಿಯರ ಸಮ್ಮುಖದಲ್ಲಿ ಎರಡನೇ ಮದುವೆಯಾಗಿದ್ದು ಪ್ರಸ್ತುತ ವಿಜಯ್ ಇತ್ತೀಚೆಗಷ್ಟೇ ಒಂದು ಮಗುವಿನ ತಂದೆಯಾಗಿದ್ದಾರೆ.
ಹಳೆ
ಬಾಯ್ಫ್ರೆಂಡ್
ವಿರುದ್ಧ
ಕೋರ್ಟ್
ಮೆಟ್ಟಿಲೇರಿದ
ನಟಿ
ಅಮಲಾ
ಪೌಲ್

ಅಮಲ ಪೌಲ್ ಅರೆಸ್ಟ್
2018ರಲ್ಲಿ ಟ್ಯಾಕ್ಸ್ ಅವಾಯ್ಡ್ ಮಾಡುವ ದೃಷ್ಟಿಯಿಂದ ತನ್ನ ಲೆಕ್ಸುರಿ ಕಾರನ್ನು ಫೇಕ್ ಡಾಕ್ಯೂಮೆಂಟ್ ಸೃಷ್ಟಿಸಿ ಪುದುಚೇರಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸಿದ್ದರು. ಈ ವಿಷಯದಲ್ಲಿ ಅವರನ್ನು ಅರೆಸ್ಟ್ ಕೂಡ ಮಾಡಲಾಗಿತ್ತು ಆದರೆ ನಂತರ ನಾಯಲಯದ ವ್ಯಾಪ್ತಿಯ ವಿಷಯದಲ್ಲಿ ಉಂಟಾದ ಗೊಂದಲದಿಂದ ಕೇಸನ್ನ ಕೈಬಿಡಲಾಯಿತು.

ಕಿಚ್ಚನ ನಾಯಕಿ
ತಮಿಳಿನ ಖ್ಯಾತ ನಟರಾದ ಧನುಷ್, ವಿಜಯ್, ವಿಕ್ರಂ ಅಂತಹ ನಟರ ಜೊತೆ ಸೈ ಎನಿಸಿಕೊಂಡಿದ್ದ ಈಕೆ ಕನ್ನಡದಲ್ಲಿ ಕೂಡ ನಟಿಸಿದ್ದಾಳೆ. ಕಿಚ್ಚ ಸುದೀಪ್ ಅವರ 'ಹೆಬ್ಬುಲಿ' ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿದ್ದಳು. ಪ್ರಸ್ತುತ ತೆಲುಗು ಚಿತ್ರ 'ಕುಡಿಎಡ ಮೈತೆ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ.