ಕಥೆ ಕೇಳಿದ ಕಮಲ್ ಹಾಸನ್ ಈ ಸ್ಕ್ರಿಪ್ಟ್ ಗೆ 'ಅವರೇ' ಬೆಸ್ಟ್ ಎಂದು ಸೂಚಿಸಿದ್ದು ಯಾರನ್ನ?

ಸೂಪರ್ ಸ್ಟಾರ್ ಕಮಲ್ ಹಾಸನ್ ಇಂಡಿಯನ್ 2 ಸಿನಿಮಾ ಮಾಡ್ತಿದ್ದಾರೆ. ಶಂಕರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಹೆಚ್ಚಿನ ನಿರೀಕ್ಷೆ ಇದೆ. ಈ ಸಿನಿಮಾ ಬಳಿಕ ಯುವ ನಿರ್ದೇಶಕನೊಬ್ಬನ ಚಿತ್ರದಲ್ಲಿ ಕಮಲ್ ಹಾಸನ್ ನಟಿಸಬೇಕಿತ್ತು.

ಪೂರ್ತಿ ಕಥೆ ಕೇಳಿದ ಕಮಲ್ ಹಾಸನ್ ಸ್ಕ್ರಿಪ್ಟ್ ಇಷ್ಟ ಪಟ್ಟರು. ಆದರೆ, ಈ ಸಿನಿಮಾ ನಾನು ಮಾಡಿದ್ರೆ ಚೆನ್ನಾಗಿರಲಿಲ್ಲ, ಆ ನಟನ ಜೊತೆ ಮಾಡುವ ಚೆನ್ನಾಗಿ ಬರುತ್ತೆ ಎಂದು ಸಲಹೆ ನೀಡಿ ಸಿನಿಮಾ ಕೈಬಿಟ್ಟರಂತೆ.

ಹಾಗಿದ್ರೆ, ಕಮಲ್ ಹಾಸನ್ ಸೂಚಿಸಿದ ಆ ನಟ ಯಾರು? ಯಾವುದು ಆ ಚಿತ್ರ? ಮುಂದೆ ಓದಿ...

ರಜನಿ ಕಡೆ ಬೆರಳು ಮಾಡಿದ ಕಮಲ್!

ರಜನಿ ಕಡೆ ಬೆರಳು ಮಾಡಿದ ಕಮಲ್!

ಲೋಕೇಶ್ ಕನಕರಾಜ್ ಎಂಬ ನಿರ್ದೇಶಕ ಕಮಲ್ ಹಾಸನ್ ಅವರನ್ನು ಗಮನದಲ್ಲಿಟ್ಟುಕೊಂಡು ಒಂದೊಳ್ಳೆ ಕಥೆ ಮಾಡಿದ್ದಾರೆ. ಈ ಕಥೆಯನ್ನು ಕಮಲ್ ಗೂ ವಿವರಿಸಿದ್ದಾರೆ. ಪೂರ್ತಿ ಕಥೆ ಕೇಳಿದ ಕಮಲ್ ಹಾಸನ್ ಚಿತ್ರದ ಬಗ್ಗೆ ಥ್ರಿಲ್ ಆಗಿದ್ದಾರೆ. ಆದರೆ, ಈ ಸ್ಕ್ರಿಪ್ಟ್ ನಾನು ಮಾಡುವುದಕ್ಕಿಂತೆ ರಜನಿಕಾಂತ್ ಮಾಡಿದ್ರೆ ಉತ್ತಮ ಎಂದು ಅಭಿಪ್ರಾಯ ಪಟ್ಟು ನಿರ್ದೇಶಕನಿಗೆ ಸಲಹೆ ನೀಡಿ ಕಳುಹಿಸಿದರಂತೆ.

ರಜನಿಗೂ ಕಥೆ ಕೇಳಿದ್ದಾರಂತೆ!

ರಜನಿಗೂ ಕಥೆ ಕೇಳಿದ್ದಾರಂತೆ!

ಕಮಲ್ ಹಾಸನ್ ನಂತರ ಈ ಕಥೆಯನ್ನು ರಜನಿಕಾಂತ್ ಅವರು ಕೇಳಿದ್ದಾರೆ ಎನ್ನಲಾಗಿದೆ. ಸ್ಕ್ರಿಪ್ಟ್ ವಿವರಣೆ ಕೇಳಿ ಪಾಸಿಟೀವ್ ಆಗಿ ಪ್ರತಿಕ್ರಿಯಿಸಿರುವ ತಲೈವಾ ಈ ಚಿತ್ರಕ್ಕೆ ಓಕೆ ಎನ್ನುವ ಸಾಧ್ಯತೆ ಇದೆ ಅಂತೆ. ಒಂದು ವೇಳೆ ಇದು ಪಕ್ಕಾ ಆದರೆ ಈ ಚಿತ್ರವನ್ನು ಕಮಲ್ ಹಾಸನ್ ಮಾಲೀಕತ್ವದ ರಾಜ್ ಕಮಲ್ ಬ್ಯಾನರ್ ನಿರ್ಮಿಸಲಿದೆಯಂತೆ.

ಅತಿಥಿ ಪಾತ್ರದಲ್ಲಿ ಕಮಲ್ ಹಾಸನ್!

ಅತಿಥಿ ಪಾತ್ರದಲ್ಲಿ ಕಮಲ್ ಹಾಸನ್!

ರಜನಿಕಾಂತ್ ಮತ್ತು ಲೋಕೇಶ್ ಕನಕರಾಜ್ ಕಾಂಬಿನೇಷನ್ ನಲ್ಲಿ ಸೆಟ್ಟೇರಲಿರುವ ಈ ಚಿತ್ರದಲ್ಲಿ ಕಮಲ್ ಹಾಸನ್ ಅತಿಥಿ ಪಾತ್ರ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಸುಮಾರು 35 ವರ್ಷದ ಬಳಿಕ ರಜನಿ ಮತ್ತು ಕಮಲ್ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ ಎಂಬ ವಿಷಯ ಸೌತ್ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದೆ.

ಬೇರೆ ಬೇರೆ ಸಿನಿಮಾದಲ್ಲಿ ನಟನೆ!

ಬೇರೆ ಬೇರೆ ಸಿನಿಮಾದಲ್ಲಿ ನಟನೆ!

ಸದ್ಯ ಶಿವ ನಿರ್ದೇಶನದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನದಲ್ಲಿ ಕಮಲ್ ಹಾಸನ್ 'ಇಂಡಿಯನ್ 2' ಮಾಡ್ತಿದ್ದಾರೆ. ಲೋಕೇಶ್ ಕನಕರಾಜ್ ಅವರು ವಿಜಯ್ ಗೆ 'ಮಾಸ್ಟರ್' ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಇದೆಲ್ಲವೂ ಆದ್ಮೇಲೆ ಸೂಪರ್ ಸ್ಟಾರ್ ಹೊಸ ಚಿತ್ರ ಸೆಟ್ಟೇರಬಹುದು.

More from Filmibeat

English summary
Superstar Kamal hassan reject the story of lokesh kanagaraj. now, this story going to on screen with thalaiva.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X