ಪಾತ್ರಕ್ಕಾಗಿ ಪಲ್ಲಂಗ; ತೆಲುಗಿನಲ್ಲಿ ಏನಿಲ್ಲ ಆದ್ರೆ ಆ ಇಂಡಸ್ಟ್ರಿಯ ನಟ ತುಂಬಾ ಕಿರುಕುಳ ಕೊಟ್ಟಿದ್ದ ಎಂದ ನಿತ್ಯಾ ಮೆನೆನ್!

ಪಾತ್ರಕ್ಕಾಗಿ ಪಲ್ಲಂಗ ಅಂದ್ರೆ ಸಿನಿಮಾ ಮಂದಿಯ ಭಾಷೆಯಲ್ಲಿ ಕಾಸ್ಟಿಂಗ್ ಕೌಚ್. ಈ ಕಾಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಸಾಕಷ್ಟು ನಟಿಯರು ಹಾಗೂ ನಟರೂ ಸಹ ಮಾತನಾಡಿದ್ದಾರೆ. ಭಾರತದ ಬಹುತೇಕ ಎಲ್ಲಾ ಚಿತ್ರರಂಗಗಳಲ್ಲಿಯೂ ಸಹ 2017 - 18ರ ಸಮಯದಲ್ಲಿ ಈ ಕಾಸ್ಟಿಂಗ್ ಕೌಚ್ ಬಗ್ಗೆ ನಟಿಯರು ತುಟಿ ಬಿಚ್ಚಿದ್ದ ಸಾಕಷ್ಟು ಉದಾಹರಣೆಗಳಿವೆ.

ಕೆಲ ನಟಿಯರ ಆರೋಪ ದೊಡ್ಡ ಮಟ್ಟದ ವಿವಾದಗಳನ್ನೂ ಹುಟ್ಟುಹಾಕಿವೆ. ಕೆಲವರು ತಮಗೆ ಯಾರಿಂದ ಕಾಸ್ಟಿಂಗ್ ಕೌಚ್‌ನ ಕೆಟ್ಟ ಅನುಭವವಾಯಿತು ಎಂಬುದನ್ನು ನೇರವಾಗಿ ಹೇಳಿಕೊಂಡರೆ, ಬಹುತೇಕರು ಯಾರಿಂದ ಕಿರುಕುಳವಾಯಿತು ಎಂಬುದನ್ನು ಹೇಳದೇ, ಹೆಸರನ್ನು ತೆಗೆದುಕೊಳ್ಳದೇ ತಾವು ಅನುಭವಿಸಿದ್ದ ಕಷ್ಟದ ದಿನಗಳನ್ನು ಬಿಚ್ಚಿಟ್ಟಿದ್ದರು.

A tamil hero harrased me a lot during shoot; Nitya Menons shocking comment on casting couch

ಈ ಪೈಕಿ ಹಲವು ಆರೋಪಗಳು ಕೆಲ ದಿನಗಳ ಚರ್ಚೆಗಷ್ಟೇ ಸೀಮಿತವಾದರೆ, ಇನ್ನೂ ಕೆಲ ಆರೋಪಗಳು ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಸಹ ಹತ್ತಿವೆ. ಹೌದು, ಉದಾಹರಣೆಗೆ ನಮ್ಮದೇ ಚಿತ್ರರಂಗದ ನಟಿ ಶೃತಿ ಹರಿಹರನ್ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಇದೇ ಆರೋಪವನ್ನು ಮಾಡಿದ್ದು.

ಹೀಗೆ ಶೃತಿ ಹರಿಹರನ್ ಮಾತ್ರವಲ್ಲದೇ ಹಲವಾರು ಖ್ಯಾತ ನಟಿಯರೂ ಸಹ ಈ ಕುರಿತು ಮಾತನಾಡಿ ಕಾಸ್ಟಿಂಗ್ ಕೌಚ್ ಇದೆ ಎಂಬ ಹೇಳಿಕೆಗಳನ್ನು ನೀಡಿದ್ದು, ಬಳಿಕ ಈ ಒಂದು ಆಂದೋಲನ ನಿಧಾನವಾಗಿ ಮರೆ ಆಗಿತ್ತು. ಆದರೆ ಕೆಲವೊಂದು ಸಂದರ್ಶನಗಳಲ್ಲಿ ಕೆಲ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಆಗಾಗ ಮಾತನಾಡಿದ್ದಾರೆ. ಈ ಸಾಲಿಗೆ ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯಾ ಮೆನನ್ ಸಹ ಸೇರಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಿತ್ಯಾ ಮೆನನ್ "ಕಾಮಾಂಧರು ಎಲ್ಲಾ ಕ್ಷೇತ್ರಗಳಲ್ಲಿಯೂ ಇದ್ದಾರೆ. ಟಾಲಿವುಡ್ ಚಿತ್ರರಂಗದಲ್ಲಿ ಅಂತಹ ಸಂದರ್ಭ ಎದುರಾಗಿಲ್ಲ. ಆದರೆ ತಮಿಳಿನಲ್ಲಿ ಮಾತ್ರ ಒಂದು ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತುಂಬಾ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಕೊಂಡಿದ್ದೆ. ಒಬ್ಬ ಹೀರೊ ನನಗೆ ಸಿಕ್ಕಾಪಟ್ಟೆ ಕಿರುಕುಳ ನೀಡಿದ್ದ. ಅಸಭ್ಯವಾಗಿ ಸ್ಪರ್ಶಿಸಿ ಹುಚ್ಚನಂತೆ ವರ್ತಿಸುತ್ತಿದ್ದ" ಎಂದು ನಿತ್ಯಾ ಮೆನನ್ ಹೇಳಿಕೊಂಡಿದ್ದಾರೆ.

ಹೀಗೆ ತಮಿಳು ಚಿತ್ರವೊಂದರ ಸಂದರ್ಭದಲ್ಲಿ ತಾವು ಎದುರಿಸಿದ್ದ ಕಷ್ಟದ ಅನುಭವವನ್ನು ಹಂಚಿಕೊಂಡಿರುವ ನಿತ್ಯಾ ಮೆನನ್ ಆ ಚಿತ್ರ ಯಾವುದು ಹಾಗೂ ಆ ಹೀರೊ ಯಾರು ಎಂಬುದನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಹೆಸರನ್ನು ತೆಗೆದುಕೊಳ್ಳದೇ ನಿತ್ಯಾ ಮೆನನ್ ಆರೋಪ ಮಾಡಿದ್ದಾರೆ.

ಇನ್ನು ನಿತ್ಯಾ ಮೆನನ್ ಮೂಲತಃ ಮಲಯಾಳಂ ನಟಿಯಾದರೂ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದು ಕನ್ನಡದ ಚಿತ್ರದ ಮೂಲಕವೇ. 2006ರಲ್ಲಿ ಬಿಡುಗಡೆಗೊಂಡಿದ್ದ '7 ಓ ಕ್ಲಾಕ್' ಎಂಬ ಸಿನಿಮಾದ ಮೂಲಕ ನಿತ್ಯಾ ಮೆನನ್ ನಟಿಯಾಗಿ ಕೆರಿಯರ್ ಆರಂಭಿಸಿದರು. ಬಳಿಕ 2008ರಲ್ಲಿ ಬಿಡುಗಡೆಗೊಂಡ ಮೋಹನ್ ಲಾಲ್ ನಟನೆಯ ಆಕಾಶ ಗೋಪುರಂ ಎಂಬ ಮಲಯಾಳಂ ಚಿತ್ರದಲ್ಲಿ ನಟಿಸಿದ ನಿತ್ಯಾ ಮೆನನ್ ಮಲಯಾಳಂ ಚಿತ್ರರಂಗ ಪ್ರವೇಶಿಸಿದ್ರು.

ಹೀಗೆ ಕನ್ನಡ ಹಾಗೂ ಮಲಯಾಳಂ ಚಿತ್ರಗಳಲ್ಲಿ ಆರಂಭದಲ್ಲಿ ಹೆಚ್ಚಾಗಿ ನಟಿಸಿದ್ದ ನಿತ್ಯಾ ಮೆನನ್ ಬಳಿಕ ತೆಲುಗು ಹಾಗೂ ತಮಿಳಿನಲ್ಲಿಯೂ ನಟಿಸಿ ಅಪಾರವಾದ ಅಭಿಮಾನಿಗಳನ್ನು ಸಂಪಾದಿಸಿದರು. ಸುಮಾರು ಹತ್ತಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿರುವ ನಿತ್ಯಾ ಮೆನನ್ ಧನುಷ್, ಸೂರ್ಯ ಹಾಗೂ ರಾಘವ ಲಾರೆನ್ಸ್ ರೀತಿಯ ಸ್ಟಾರ್ ನಟರ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಆದರೆ ಈ ಚಿತ್ರಗಳ ಪೈಕಿ ಯಾವ ಚಿತ್ರದ ಬಗ್ಗೆ ನಿತ್ಯಾ ಮೆನನ್ ಹೇಳಿಕೆ ನೀಡಿದ್ರು ಎಂಬುದು ಮಾತ್ರ ನಿಗೂಢ..

More from Filmibeat

English summary
A tamil hero harrased me a lot during shoot; Nitya Menen's shocking comment on casting couch. Read On.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X