Rajinikanth: ರಜನಿಕಾಂತ್ ವಿಗ್ರಹ ನಿರ್ಮಿಸಿ ದೇವಸ್ಥಾನ ಕಟ್ಟಿದ ಅಭಿಮಾನಿ, ಸೂಪರ್ ಸ್ಟಾರ್‌ಗೆ ನಿತ್ಯ ಪೂಜೆ!

ಅಭಿಮಾನಕ್ಕೆ ಎಲ್ಲೆ ಇಲ್ಲ ಎನ್ನುತ್ತಾರೆ. ತಮ್ಮ ನೆಚ್ಚಿನ ನಟ, ನಟಿಯರ ಮೇಲಿನ ಅಭಿಮಾನ ತೋರಿಸಲು ಫ್ಯಾನ್ಸ್ ಯಾವ ಹಂತಕ್ಕಾದರೂ ಹೋಗುತ್ತಾರೆ ಎಂಬುದಕ್ಕೆ ಹಲವು ನಿದರ್ಶನಕ್ಕೆ ಭಾರತೀಯ ಚಿತ್ರರಂಗ ಸಾಕ್ಷಿಯಾಗಿದೆ. ನಮ್ಮ ದಕ್ಷಿಣ ಭಾರತದಲ್ಲಿ ಸಿನಿಮಾ ನಟ, ನಟಿಯರ ಮೇಲೆ ಅತಿರೇಕ ಅನಿಸುವಷ್ಟು ಅಭಿಮಾನದ ಸುರಿಮಳೆ ಸುರಿಸಲಾಗುತ್ತದೆ. ಇದಕ್ಕೆ ಈಗ ಮತ್ತೊಂದು ಹೊಸ ವಿಷಯ ಸೇರ್ಪಡೆಯಾಗಿದೆ.

ನಟ, ಸೂಪರ್ ಸ್ಟಾರ್, ತಲೈವರ್ ಎಂದು ಬಿರುದುಗಳನ್ನು ಪಡೆದಿರುವ ರಜಿನಿಕಾಂತ್ ಅವರಿಗೆ ಅಭಿಮಾನಿಗಳ ಹೆಚ್ಚು. ಹಿರಿಯರಿಂದ ಹಿಡಿದು ಕಿರಿಯರವರೆಗೂ ಅವರಿಗೆ ಅಭಿಮಾನಿ ಬಳಗವಿದೆ. ದೇಶದಲ್ಲಿ ಅಷ್ಟೇ ಅಲ್ಲದೇ ವಿದೇಶದಲ್ಲೂ ರಜನಿಕಾಂತ್ ಅವರನ್ನು ಆರಾಧಿಸುವ ಅಭಿಮಾನಿಗಳಿದ್ದಾರೆ. ಇವರಲ್ಲಿ ತಮಿಳುನಾಡಿನ ಅಭಿಮಾನಿಯೊಬ್ಬರು ಸಕತ್ ಸುದ್ದಿಯಾಗುತ್ತಿದ್ದಾರೆ.

temple-for-superstar-rajinikanth

ರಜನಿಕಾಂತ್‌ಗೆ ದೇವಸ್ಥಾನ ಕಟ್ಟಿದ ಅಭಿಮಾನಿ!

ಇತ್ತೀಚೆಗೆ, ತಮಿಳುನಾಡಿನ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಅಭಿಮಾನಿಯೊಬ್ಬರು ದೇವಸ್ಥಾನ ಕಟ್ಟಿದ್ದಾರೆ. ಹೌದು, ಸೂಪರ್ ಸ್ಟಾರ್ ರಜನಿಕಾಂತ್ ಅವರ ಮೇಲಿಟ್ಟ ಪ್ರೇತಿಗೆ ಸಾಕ್ಷಿಯಾಗಿ ಅವರ ವಿಗ್ರಹ ನಿರ್ಮಿಸಿದ್ದಾರೆ. ಈಗ ಅದೇ ವಿಷಯ ತಮಿಳುನಾಡಿನಲ್ಲಿ ಭಾರಿ ಸುದ್ದಿಯಲ್ಲಿದ್ದು, ಇತರರ ಹುಬ್ಬೇರಿಸುವಂತೆ ಮಾಡಿದೆ.

ತಮಿಳುನಾಡಿನಲ್ಲಿ ನಟ, ನಟಿಯರಿಗೆ ದೇವಸ್ಥಾನ ಕಟ್ಟುವುದು ಹೊಸ ವಿಷಯವಲ್ಲ. ಈ ಹಿಂದೆಯೂ ಅಭಿಮಾನಿಗಳು ನಾಯಕಿಯರನ್ನು ಪೂಜಿಸುವುದನ್ನು ನೋಡಿದ್ದೇವೆ. ತಮಿಳುನಾಡಿನಲ್ಲಿ ಈ ಸಂಪ್ರದಾಯ ತುಸು ಹೆಚ್ಚಾಗಿಯೇ ಇದೆ. 'ರಣಧೀರ'ನ ನಾಯಕಿ ಖುಷ್ಬೂ, ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ಆಂಧ್ರಪ್ರದೇಶದಲ್ಲಿ ನಟ ಸಮಂತಾ ರುತ್ ಪ್ರಭು ಅವರ ಅಭಿಮಾನಿಗಳು ತಮ್ಮ ನಟಿಯರಿಗಾಗಿ ದೇವಸ್ಥಾನ ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ.

250 ಕೆ.ಜಿ. ತೂಕದ ರಜನಿಕಾಂತ್ ಪ್ರತಿಮೆ ನಿರ್ಮಾಣ

ಈ ಹಿಂದೆ ಸೂಪರ್ ಸ್ಟಾರ್ ಅಭಿಮಾನಿಗಳು ನಟನ ಹೆಸರಲ್ಲಿ ಗುಡಿಸಲು ಕಟ್ಟಿಕೊಂಡಿದ್ದರು. ಆದರೆ ಈ ಬಾರಿ ಮತ್ತೊಬ್ಬ ಅಭಿಮಾನಿ ಮಧುರೈ ಮೂಲದ ಕಾರ್ತಿಕ್ ಎಲ್ಲರಿಗಿಂತ ಭಿನ್ನವಾಗಿ ಯೋಚಿಸಿದ್ದಾರೆ. ರಜನಿಕಾಂತ್ ಅವರ ವಿಗ್ರಹ ಮಾಡಿದ್ದು, ದೇವಸ್ಥಾನ ಕಟ್ಟಿಸಿದ್ದಾರೆ. ದೇವಸ್ಥಾನದಲ್ಲಿ 250 ಕೆ.ಜಿ ತೂಕದ ರಜನಿಕಾಂತ್ ಪ್ರತಿಮೆಯನ್ನು ಇರಿಸಲಾಗಿದೆ. ಪ್ರತಿಮೆಯ ಕೆಳಗೆ, ತನ್ನ ಹೆತ್ತವರ ಫೋಟೋ ಮತ್ತು ಗಣೇಶನ ಫೋಟೋವನ್ನು ಕೂಡ ಇಡಲಾಗಿದೆ.

temple-for-superstar-rajinikanth

ಇನ್ನು ದೇವಸ್ಥಾನ, ಪ್ರತಿಮೆ ಮತ್ತು ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರತಿ ದಿನ ರಜನಿಕಾಂತ್‌ಗೆ ಪೂಜೆ ಸಲ್ಲಿಸಿ, ಪ್ರತಿಮೆಗೆ ಅಭಿಷೇಕ ಮಾಡುತ್ತಾರೆ. ಕಾರ್ತಿಕ್ 'ರಜನಿಕಾಂತ್' ದೇವರ ಭಕ್ತನಾಗಿದ್ದಾನೆ. ಇವರಿಗೆ ಅವರ ಮನೆಯವರು ಸಾಥ್ ನೀಡಿದ್ದಾರೆ. ಕಾರ್ತಿಕ್ ಅವರ ರಜನಿಕಾಂತ್ ದೇವಸ್ಥಾನ ಮತ್ತು ಪೂಜೆಗಳ ಬಗ್ಗೆ ತಮಿಳು ಮಾಧ್ಯಮಗಲು ಸಾಲು ಸಾಲು ವರದಿ ಮಾಡುತ್ತಿವೆ. ಇವರಿಗೆ ಅವರ ಮನೆಯವರು ಸಾಥ್ ನೀಡಿದ್ದಾರೆ.

ತಲೈವರ್ 170

ಜೈಲರ್ ಸಿನಿಮಾ ಯಶಸ್ಸಿನ ಬಳಿಕ ನಟ ರಜನಿಕಾಂತ್ ಅವರು ತಮ್ಮ ಮುಂಬರುವ 'ತಲೈವರ್ 170' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೂಡ ಸಿನಿಮಾದಲ್ಲಿದ್ದು, ಮುಂಬೈನಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ. ತಲೈವರ್ 170' ಚಿತ್ರವನ್ನು 'ಜೈ ಭೀಮ್' ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ತಾರಾಗಣದಲ್ಲಿ ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ದುಶಾರ ವಿಜಯನ್, ರಕ್ಷಣ್ ಮತ್ತು ಜಿಎಂ ಸೌಂದರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಸಿನಿಮಾಗೆ ಅನಿರುದ್ಧ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ. ತಲೈವರ್ 170 ಬೇಸಿಗೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

More from Filmibeat

English summary
Fan built a temple for superstar Rajinikanth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X